nannakanasu-chiguru
ನನಗೆ ಬರೆಯೋದಿಕ್ಕೆ ಸ್ಪೂರ್ತಿ ತಂದು ಕೊಟ್ಟ ನನ್ನ ಅತ್ಮೀಯ ಗೆಳೆಯರಾದ ಅಮರ ಮತ್ತೆ ವಿಜಯ್ ಗೆ ನನ್ನ ಹೃತ್ಪೋರ್ವಕ ವಂದನೆಗಳು. ನಿಮ್ಮೆಲ್ಲರ ಹಾರೈಕೆ ನನ್ನೊಂದಿಗಿರಲಿ... ನಮಸ್ಕಾರ, ನನ್ನ ಎಲ್ಲಾ ಸ್ನೇಹಿತರಿಗೂ.... ನಾನಿಲ್ಲಿ ಬರೆದಿರುವುದೆಲ್ಲಾ ನನ್ನ ಮನಸ್ಸಿನ ಭಾವನೆಗಳು, ಮನದ ಮಾತುಗಳು. ಮೊದ ಮೊದಲು ಕವನದ ಕಡೆಗೆ ಇದ್ದ ಒಲವು ಇತ್ತಿಚೆಗೆ ಕಡಿಮೆಯಾಗಿದೆ. ನನ್ನದೇ ಒಂದು ಪುಟ್ಟ ಬ್ಲಾಗ್ ಇದೆ. ಮನಸ್ಸಿಗೆ ತೋಚಿದ್ದನ್ನ ನಾನಿಲ್ಲಿ ವ್ಯಕ್ತಪಡಿಸ್ತಾ ಇದ್ದೇನೆ. ಇಲ್ಲಿ ಬರೆದಿರೊದ್ರಲ್ಲಿ ಬಹಳಷ್ಟು ತಪ್ಪುಗಳಿವೆ. ನನ್ನ ಓದುಗರು ಅದನ್ನ ನನಗೆ ತಿದ್ದಿ ಹೇಳಬೇಕು. ಯಾರೂಕೂಡಾ ಹುಟ್ಟಿದ ತಕ್ಷಣ ಎಲ್ಲಾದನ್ನೂ ಕಲಿಯೋದಿಲ್ಲ. ನಡಿಯೋಕಾಲು ಎಡವೋದು ಸಹಜತಾನೆ ??? ನಿಮ್ಮ ಪ್ರೀತಿಯ ತಿದ್ದುಪಡಿಗೆ ನಾನು ಚಿರರುಣಿ...
ನನ್ನ ಗೆಳತಿ-೨
ಸದಾ ನಗು ನಗುತ್ತಿದ್ದ ನನ್ನ ಗೆಳತಿ ಅಂದು ಬೇಸರದಿಂದ ಮಾತನಾಡುತ್ತಿದ್ದಳು. ಅವಳ ಕಣ್ಣೀರು ಧರೆಗಿಳಿಯುತ್ತಿದ್ದವು. ನಾನು ಅವಳನ್ನು ಕಂಡಿಲ್ಲದಿದ್ದರೂ ನಾನವಳ ಏದುರಿನಲ್ಲೇ ನಿಂತು ಅವಳನ್ನ ಸಾಧಾನಿಸುತ್ತಿರುವಂತೆ ಅನಿಸುತ್ತುತ್ತು.
ನಾನವಳನ್ನ ಕರೆಯುತ್ತಿದ್ದದ್ದೇ ಹಸನ್ಮುಖಿ ಅಂತ. ಆದರೆ ಅಂದು ಅವಳ ಮಂದಹಾಸ, ಲವಲವಿಕೆ ಎಲ್ಲಾ ಮಾಯವಾಗಿತ್ತು. ನೊಂದ ಮನಸ್ಸಿಗೆ ಸಮಾಧಾನ ಹೇಳುವ ಕಲೆಯೂ ನನಗೆ ಕರಗತವಾಗಿರಲಿಲ್ಲ, ಆದರೂ ನನ್ನ ಕೈಲಾದ ಪ್ರಯತ್ನ ಮಾಡೇ ಬಿಡಬೇಕೆಂದುಕೊಂಡೆ. ತನ್ನಲ್ಲಿರುವ ದುಃಖವನ್ನ ಯಾರಾದರೂ ಏತಕ್ಕಾಗಿ ಹಂಚಿಕೊಳ್ಳುತ್ತಾರೆ ? ಸ್ವಲ್ಪವಾದರೂ ಸಮಾಧಾನದ ಮಾತುಗಳನ್ನು ಕೇಳುವುದಕ್ಕಾಗಿ ತಾನೇ ?
ಅಂದು ನಾನು ಕೂಡಾ ನೊಂದಿದ್ದೆ. ನನ್ನ ಅಪ್ಪನ ಅಗಲಿಕೆ ಅಂದು ನನ್ನನ್ನು ಬಹಳವಾಗೇ ಕಾಡುತ್ತಿತ್ತು. ಆದರೂ ಯಾವುದನ್ನೂ ಅವಳಿಗೆ ತಿಳಿಯದಹಾಗೆ ಅವಳನ್ನು ಮಾತನಾಡಿಸಿದ್ದೆ. ಕಾರಣವಿಲ್ಲದೇ ಆಕೆಯ ಪ್ರೇಮಿ ಆಕೆಯನ್ನು ಮರೆತುಬಿಡು ಎಂದದ್ದೇ ಆಕೆಯ ದುಃಖಕ್ಕೆ ಕಾರಣವಾಗಿತ್ತು. ಇನ್ನೂ ಒಬ್ಬರನ್ನೊಬ್ಬರು ಭೇಟಿಕೂಡಾ ಮಾಡಿರಲಿಲ್ಲ, ಕೇವಲ ಆರ್ಕುಟ್ಟಿನ ಮೂಲಕ ಬೆಳೆದ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಆ ಯುವಪ್ರೇಮಿಗಳು ಮುಂದಿನ ದಿನಗಳ ಕನಸನ್ನು ಹೆಣೆಯತೊಡಗಿದ್ದರು. ಇದ್ದಕ್ಕಿದ್ದಂತೆ ಆತನಿಗೆ ಏನಾಯಿತೋ !!! ಅವಳಿಂದ ದೂರ ಹೋಗಲು ಪ್ರಯತ್ನಿಸುತ್ತಿದ್ದ. ಕಾರಣ ಏನೆಂದು ತಿಳಿಯದು... ನಾನಾದರೂ ಕೇಳೋಣವೆಂದರೆ ನಾನು ಅವರಿಬ್ಬರ ಮಧ್ಯ ಮೂರನೆಯವನಾಗುತ್ತೇನೆ, ಅದೂ ಅಲ್ಲದೇ ನಾನು ಆತನಿಗೆ ಅಪರಿಚಿತ.
ಇನ್ನು ನಾನು ಹೋಗಿ ಸಂಧಾನಕಾರ್ಯಕ್ಕೆ ಕೈ ಹಾಕಿದರೆ ಮೊದಲೇ ಕಾರಣವಿಲ್ಲದೇ ದೂರ ಹೊಗಲೆತ್ನಿಸುತ್ತಿದ್ದ ಆತನಿಗೆ ಮತ್ತೊಂದು ಕಾರಣ ಕೊಟ್ಟಂತಾಗುತ್ತದೆಂದು ನಾನು ಆಕೆಗೆ ನನಗೆ ತಿಳಿದಮಟ್ಟಿಗೆ ಧೈರ್ಯ ಹೇಳಿದೆ. ಆದರೂ ಬಿಕ್ಕುತ್ತಲೇ ಆಕೆ ತನ್ನನ್ನು ತಾನು ಸಮಾಧಾನಪಡಿಸಲೆತ್ನಿಸಿದ ಯತ್ನಗಳೆಲ್ಲವೂ ವಿಫಲವಾಯಿತು. ಐದುನಿಮಿಷಗಳ ಮೌನದ ನಂತನ ನಾನು ಮಾತನಾಡಿದೆ. "ನೋಡು, ನೀನು ಏನೂ ತಪ್ಪು ಮಾಡಿಲ್ಲ ಅಂತ ನಿನ್ಗೆ ಗೊತ್ತಲ್ವ ? ಮತ್ತೆ ನಿನ್ನ ಅವ್ನು ಸುಮ್ ಸುಮ್ನೆ ದೂರ ಹೋಗು ಅಂತಾ ಇದಾನೆ ಅಂದ್ರೆ ಅದು ನಿನ್ನ ಒಳ್ಳೇದಕ್ಕೇ ಅಂದ್ಕೊ, ಒಂದುವೇಳೆ ಮದುವೆ ಎಲ್ಲಾ ಆಗಿ ಹೀಗೆ ಮಾಡಿದ್ರೆ ನಿನ್ ಗತಿ ಏನಾಗೋದು ಅಂತ ಯೋಚ್ನೆ ಮಾಡು. ನಿನ್ನ ಅಷ್ಟು ಇಷ್ಟಾಪಡ್ತಾ ಇದ್ದ ಹುಡುಗ ಈ ರೀತಿ ಇದ್ದಕ್ಕಿದ್ದಹಾಗೆ ದೂರಾ ಹೋಗು ಅಂತಾ ಇದಾನೆ ಅಂದ್ರೆ ಏನೋ ಪ್ರಬಲವಾದ ಕಾರಣ ಇರ್ಲೇಬೇಕು, ನಿನ್ನ ಒಳಿತಿಗಾಗಿ ಹೀಗೆ ಮಾಡ್ತಾ ಇರ್ಬಹುದು. ಧೈರ್ಯ ತಂದ್ಕೊ.... ಸಮಾಧಾನ ಮಾಡ್ಕೊ, ನೀನು ಹೀಗೆಲ್ಲಾ ಅಳ್ತಾ ಕೂತ್ರೆ ಮನೆನಲ್ಲಿ ನಿನ್ನ ಸಾಕಿ ಬೆಳೆಸಿದ ಅಪ್ಪ, ಅಮ್ಮ ಕೂಡಾ ನೊಂದ್ಕೊತಾರೆ, ಅವ್ರಿಗೆ ನೋವು ಕೊಡ್ಬೇಡಾ... ನಿನ್ನ ಅವ್ರೆಲ್ಲಾ ತುಂಬಾ ಪ್ರೀತಿ ಮಾಡ್ತಾರೆ ಅಲ್ವಾ" ನಾನು ನನಗೆ ತೋಚಿದ್ದ ರೀತಿ ಅವಳಿಗೆ ಸಮಾಧಾನ ಮಾಡತೊಡಗಿದೆ.
ನಂತರ ನಾನು ನನ್ನದೇ ಮಾತಿನ ಶೈಲಿಯಿಂದ ಆಕೆಯ ಮೊಗದಲ್ಲಿ ತುಸು ಮಂದಹಾಸ ಬರಿಸಿದೆ. ಏನೋ ಒಂದುರೀತಿಯ ಸಮಾಧಾನ !!! ![]()
ತೀರಾ ವೇದನೆಗೊಳಗಾದ ಮನಸ್ಸಿಗೆ ಒಬ್ಬ ಸ್ನೇಹಿತನಾಗಿ ನಾ ಆಡಿದ ಆ ನಾಲ್ಕು ಮಾತುಗಳು ಬಹುಶಃ ಆಕೆಯ ಗಾಯಗಳಿಗೆ ಲೇಪನವನ್ನ ಹಚ್ಚಿತೇನೋ ಎಂಬ ಅನಿಸಿಕೆ ನನ್ನದು.

- pachhu2002 ರವರ ಬ್ಲಾಗ್
- Login or register to post comments
- 211 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನನ್ನ ಗೆಳತಿ-೨
ಪಚ್ಚು ರವರೆ,
ಈ ನಿಮ್ಮ ಗೆಳತ ತನ್ನ ಪ್ರಿಯಕರನನ್ನು ಆರ್ಕುಟ್ ನಲ್ಲಿ ಭೇಟಿಮಾಡಿದ್ದಳೆ ? ಸರಿಹೋಯ್ತು ಕಥೆ.
ಅಲ್ಲೇ ಎಡವಟ್ಟಾದದ್ದು ನೋಡಿ.
ಆರ್ಕುಟ್ ನಂತಹ ತಾಣಗಳಲ್ಲಿ ಹುಟ್ಟುವ ಪ್ರೀತಿ ಅರ್ಥ ಘಂಟೆಯೂ ನಿಲ್ಲೋದಿಲ್ಲ. ಅದು ಒಂದು ರೀತಿ ಬಿರುಗಾಳಿಯಲ್ಲಿ ಬಣ್ನದ ಕನಸಿನ ಗಾಳಿ ಪಟವನ್ನು ಹಾರಿಸುವ ಪ್ರಯತ್ನ. ಯಾವತ್ತು ಯಶಸ್ಸು ಕಾಣದು.
ಪ್ರೀತಿ ಹುಟ್ಟಬೇಕೆಂದರೆ ಅಸಾದಾರಣ ಮನಸು ಹೇಗೆ ಬೇಕು,ಹಾಗೆ ಅಸಾದಾರಣ ರೀತಿಗಳಲ್ಲಿ ಪ್ರೀತಿ ಹುಟ್ಟಬೇಕು.
ಒಬ್ಬರನ್ನೊಬ್ಬರು ಕಣ್ಣಿನಲ್ಲಿ ನೋಡಿದ್ದರು ಉಗುರಿನಲ್ಲಿ ತೀಡಿ ಈ ಪ್ರೀತಿ ದುಬೈ ಚಿನ್ನವೊ ಇಲ್ಲ ತಗಡೋ ಅನ್ನುವುದನ್ನು ಓರೆ ಹಚ್ಚಿ ತಿಳಿಯಬೇಕು.
ಪ್ರೀತಿ ಹುಟ್ಟುವ ಮಾರ್ಗ ಇದಲ್ಲ, ಬಿಡಿ....!!
-ಯುವಪ್ರೇಮಿ
ಉ: ನನ್ನ ಗೆಳತಿ-೨
ಯುವಪ್ರೇಮಿಗಳೇ,
ಬಹುಶಃ ನೀವು ಅಂದುಕೊಂಡಂತೆ ಇದು ತಪ್ಪಲ್ಲ, ಕಾರಣ ನನ್ನ ಮತ್ತಿಬ್ಬರು ಸ್ನೇಹಿತರು ಆರ್ಕುಟ್ಟಿನಮೂಲಕ ಪ್ರೀತಿಮಾಡಿ ಈಗ ಸಂತಸದಿಂದ ಸತಿ-ಪತಿಗಳಾಗಿದ್ದಾರೆ. ಆ ಹುಡುಗ ಏಕೆ ದೂರ ಹೋದ ಅನ್ನುವುದು ಇನ್ನೂ ಪ್ರಶ್ನೆಯಾಗೇ ಉಳಿದಿದೆ. ಆರ್ಕುಟ್ಟಿನಲ್ಲಿ ಬರುವವರೆಲ್ಲಾ ಕೇವಲ ಪ್ರೀತಿಯ ನಾಟಕವಾಡಿ ಸಂತಸ ಪಡುವವರಲ್ಲ ಎನ್ನುವುದು ನನ್ನ ಭಾವನೆ. ಪ್ರೀತಿ ಹುಟ್ಟಲು ಕೇವಲ ಒಂದು ಮಾದುರ್ಯತುಂಬಿದ ದ್ವನಿ, ಮಧುರ ಮನಸ್ಸು ಇದ್ದರೆ ಸಾಕಲ್ಲವೇ ??? ನೀವು ಹೇಳಿದಂತೆ ಆರ್ಕುಟ್ ಪ್ರೀತಿಗಾಗಿ ಮೀಸಲಿರುವ ಜಾಗವಲ್ಲ, ಇಲ್ಲಿ ಸ್ನೇಹಕ್ಕೆ ಮಹತ್ವ ಹೆಚ್ಚು, ಆದರೆ ಸ್ನೇಹ ಪ್ರೀತಿ ಏಕಾಗಬಾರದು ??? ಆದರೆ ಸ್ನೇಹಿತರ ಆಯ್ಕೆಮಾಡುವಾಗ ನಾವು ಜೋಪಾನವಾಗಿ ನಂಬಿಕಸ್ತರನ್ನು ಆಯ್ಕೆಮಾಡಬೇಕೆನ್ನುವುದು ಸತ್ಯ.
ವಂದನೆಗಳೊಂದಿಗೆ,
ಪ್ರಶಾಂತ ಜಿ ಉರಾಳ (ಪಚ್ಚು)
ಉ: ನನ್ನ ಗೆಳತಿ-೨
ನಂಬಿಕಸ್ತರನ್ನು ಆಯ್ಕೆ ಮಾಡುವುದು ಹೇಗೆ? ನಂಬದೆ ಎದುರಿನ ವ್ಯಕ್ತಿ ಅದಕ್ಕೆ ಅರ್ಹನಲ್ಲ ಅಥವಾ ಅರ್ಹಳಲ್ಲ ಅಂತ ಗೊತ್ತಾಗುವುದು ಹೇಗೆ? ಮೋಸ ಮಾಡುವುವವರ ಮುಖದಲ್ಲಿ ಅವರ ಮನಸು ಕಾಣುವುದಿಲ್ಲವಲ್ಲ! ನಂಬಿದರೆ ತಾನೆ ಮೋಸ ಹೋಗುವುದು?ಹಾಗಂತ ಅಪನಂಬಿಕೆಯಿಂದ ಬಾಳಲಾದೀತೆ? ಯಾರೇ ಆಗಲಿ ನಂಬಿಕೆ ಊಳಿಸಿಕೊಳ್ಳುವುದು ಮುಖ್ಯ. ನಿಮ್ಮ ಗೆಳತಿಗೆ ಆದಷ್ಟು ಒಂದಲ್ಲ ಒಂದು ಕೆಲಸದಲ್ಲಿ,ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬ್ಯೂಸಿಯಾಗಿರಲು ಪ್ರೋತ್ಸಾಹಿಸಿ. ಹೇಳಿದಷ್ಟು ಸುಲಭವಲ್ಲ ಮಾಡುವುದು ಅನ್ನೋದು ನನಗೂ ಗೊತ್ತು. ಆದರೆ ಸ್ವಲ್ಪ ಕಾಲದ ನಂತರ ಅವರಲ್ಲಿ ಸ್ವಲ್ಪನಾದ್ರೂ ಚೇತರಿಕೆ ಕಂಡು ಬಂದೀತು. ಆಕೆಗೆ ಒಳ್ಳೆಯದಾಗಲಿ.
ಉ: ನನ್ನ ಗೆಳತಿ-೨
ಪ್ರೀತಿ ಅನ್ನೋದು ಆರ್ಕುಟ್ ಆದರೂ ಸರಿ, ಈರ್ಕುಟ್ ಆದ್ರು ಸರಿ, ಪ್ರೀತಿ ಹುಟ್ಟುವುದು ಮಾತ್ರ ಮುಖ್ಯ.
ಆದ್ರೆ ಹೀಗೆ ಹುಟ್ಟಿದ ಪ್ರೀತಿಗೆ ಆರ್ಕುಟ್ ನಂತಹ ಸ್ತಳಗಳೇ ಮೂಲ ಹಂದರವಾಗಬಾರದು.
ಸ್ನೇಹ, ವಿಶ್ವಾಸ ಬೇಕಿದ್ರೆ ಆರ್ಕುಟ್ ನಲ್ಲಿ ಹುಟ್ಟಲಿ, ಪರವಿಲ್ಲ. ಆದರೆ ಅದು ಪ್ರೀತಿಗೆ ತಿರುಗುವಾಗ ಆರ್ಕುಟ್ ಅನ್ನುವ ಮುಖ ಕವಚವನ್ನು ಈ ಇಬ್ಬರು ಪ್ರೇಮಿಗಳು ಕಳಚಿ ಒಬ್ಬರನ್ನೊಬ್ಬ ಮುಖಾ ಮುಖಿ ಬೇಟಿ ಮಾಡಿ ಮುನ್ನಡೆಯುವುದು ಒಳಿತು.
ಈಗಿನಂತೆ ಆರ್ಕುಟ್ ನಂತಹ ಜಾಲಗಳು ವ್ಯಾವಹಾರಿಕ ಧೃಷ್ಟಿಯಿಂದಲೇ ಹುಟ್ಟಿ ಬೆಳಿದಿದೆ ಎಂಬುದು ಎಲ್ಲರ ಕಣ್ಣಿಗೆ ನಾಟುವಂತೆ ಕಾಣ್ತಾಯಿದೆ. ಆದ ಕಾರಣ ನಮ್ಮ ಪ್ರೀತಿ ವ್ಯಾವಹಾರಿಕ ಜಾಲದಲ್ಲಿ ನರಳುವುದನ್ನು ತಡೆಯುವುದು ಒಳಿತು.
-ಯುವಪ್ರೇಮಿ