"ಬೆಳಕನ್ನು ಗಮನಿಸು" ಇದು ಛಾಯಾಗ್ರಹಣದ ಮೊದಲ ಪಾಠ. ಬೆಳಕಿನ ಮೂಲ ಛಾಯಾಗ್ರಾಹಕನ ಹಿಂದೆ ಇರಬೇಕು, ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬೆಳಕಿಗೆ ಅಭಿಮುಖವಾಗಿ ಚಿತ್ರ ತೆಗೆಯುವುದು ಸಾಮನ್ಯ ಅಭ್ಯಾಸವಲ್ಲ. ಕೆಲವೊಂದು ಬಾರಿ ಸೂರ್ಯಾಸ್ಥಮಾನ, ಸೂರ್ಯೋದಯ ಮೊದಲಾದ ಹಿನ್ನೆಲೆಯನ್ನು ಬಳಸಿ, ಮುನ್ನೆಲೆಯಲ್ಲಿ ನಮ್ಮನ್ನಿರಿಸಿ ಚಿತ್ರ ತೆಗೆಯುವಾಗ ಸರಿಯಾದ ಬೆಳಕು ಬೀಳಲು ಫ್ಲಾಷ್ ಬಳಸುವುದು ಸಾಮಾನ್ಯ. ಇಲ್ಲಿ ಮುನ್ನೆಲೆಯ ವಿಷಯ ಸ್ಪಷ್ಟವಾಗಿ ಕಾಣಿಸಿ, ವರ್ಣಮಯ ಹಿನ್ನೆಲೆ ಬರೀ ಕತ್ತಲೆಯಂತೆ ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಫ್ಲಾಷ್ ಉಪಯೋಗಿಸದೆ, ಮುನ್ನೆಲೆಯನ್ನು ಅಂಡರ್ ಎಕ್ಸ್ಪೋಸ್ ಮಾಡಿ ವರ್ಣಮಯ ಹಿನ್ನೆಲೆಯನ್ನು ಸಂಯೋಜಿಸಬಹುದು. ಪಕ್ಕದ ಚಿತ್ರದಲ್ಲಿ ಮಂಟಪದ ಆಕಾರ ಮಾತ್ರ ಗುರುತಿಸುವಂತಿದ್ದು ಅದರ ವಿವರಗಳು ಕತ್ತಲೆಯಲ್ಲಿ ಕಾಣಿಸದಂತಿದೆ ಹಾಗೂ ಹಿನ್ನೆಲೆಯಲ್ಲಿ ಸೂರ್ಯಾಸ್ಥಮಾನದ ಬಣ್ಣ ಚಿತ್ರಿತವಾಗಿದೆ. ಈ ರೀತಿಯ ಚಿತ್ರಗಳೇ silhouettes.
silhouette ಚಿತ್ರ ತೆಗೆಯಲು ಕೆಲವೊಂದು ಸಲಹೆಗಳು:
ಪ್ರಕಾಶಮಾನವಾದ ಅಥವಾ ವರ್ಣಮಯ ಬೆಳಕಿನ ಮೂಲವು ವಿಷಯದ ಹಿಂದೆ ಇರಬೇಕು. ಇಲ್ಲಿ ವಿಷಯದ ಬಣ್ಣ, ವಿವರ ಚಿತ್ರಿಸುವ ಅವಕಾಶವಿರದಿದ್ದುದರಿಂದ, ಬರೀ ಆಕೃತಿಯಿಂದಲೇ ಅದನ್ನು ಗುರುತಿಸುವಂತಿರಬೇಕು.
ಫ್ಲಾಷ್ ಬಳಸಿ silhouette ಚಿತ್ರ ತೆಗೆಯುವುದು ಸಾಧ್ಯವಿಲ್ಲವಾದ್ದರಿಂದ, ಫ್ಲಾಷನ್ನು ಆಫ್ ಮಾಡಬೇಕು.
ಆಟೋ ಮೋಡ್ ಉಪಯೋಗಿಸುವವರಾದಲ್ಲಿ ವಿಷಯವನ್ನು ಬಿಟ್ಟು, ಹಿನ್ನೆಲೆಗೆ ಕ್ಯಾಮರಾ ಹಿಡಿದು, ಬಟನ್ನನ್ನು ಅರ್ಧ ಅಮುಕಿ ಹಾಗೆಯೇ ಹಿಡಿದುಕೊಳ್ಳಬೇಕು. ಈಗ ನಿಮ್ಮ ಕ್ಯಾಮಾರಾ ಕೇವಲ ಹಿನ್ನೆಲೆಯನ್ನು ಗಮನದಲ್ಲಿರಿಸಿಕೊಂಡು ಎಕ್ಸ್-ಪೋಜರ್ ಸೆಟ್ ಮಾಡಿಕೊಳ್ಳುತ್ತದೆ. ಈಗ (ಬಟನ್ನನ್ನು ಅರ್ಧ ಅಮುಕಿ ಹಿಡಿದುಕೊಂಡೇ) ಮತ್ತೆ ವಿಷಯವನ್ನು ಚಿತ್ರದೊಳಗೆ ಸೇರಿಸಿಕೊಂಡು ಮರು ಸಂಯೋಜಿಸಿ, ಕ್ಲಿಕ್ಕಿಸಿದರೆ silhouette ಚಿತ್ರ ಸಿಗುತ್ತದೆ. ಈ ವಿಧಾನದಿಂದ ಫೋಕಸ್ ಕೂಡಾ ಹಿನ್ನೆಲೆಗೇ ಆಗುವುದರಿಂದ ಮುನ್ನೆಲೆ ಅಸ್ಪಷ್ಟವಾಗಿ (ಶಾರ್ಪ್ನೆಸ್ ಕಡಿಮೆ) ಮೂಡಬಹುದು. ಆದ್ದರಿಂದ ಕಡಿಮೆ aperture ಉಪಯೋಗಿಸಿ ಹೆಚ್ಚಿನ ಡೆಪ್ತ್ ಪಡೆಯುವುದು ಸೂಕ್ತ.
ಅಟೋ ಮೋಡ್ ಮತ್ತು exposure compensation ಉಪಯೋಗಿಸಿ, ಇನ್ನೊಂದು ವಿಧಾನದಲ್ಲಿ ಕೂಡ ಈ ರೀತಿಯ ಚಿತ್ರ ತೆಗೆಯಬಹುದು. ವಿಷಯವನ್ನು ಇರಿಸಿಕೊಂಡೇ ಚಿತ್ರ ಸಂಯೋಜಿಸಿ, exposure compensation ನಿಂದ ಅಂಡರ್ ಎಕ್ಸ್-ಪೋಸ್ ಮಾಡಿ ಕ್ಲಿಕ್ಕಿಸಬಹುದು. ಈ ವಿಧಾನದಲ್ಲಿ ಮೇಲೆ ಹೇಳಿದ ಅಸ್ಪಷ್ಟದ ತೊಂದರೆ ಇರುವುದಿಲ್ಲ.
Manual Modeನಲ್ಲಿ shutter speed ಮತ್ತು aperture ನಾವೇ ಹೊಂದಿಸಿ, ಬೇಕಾದ ಬೆಳಕಿನ ಸಂಯೋಜನೆ ಪಡೆಯಬಹುದು.
ಇನ್ನಷ್ಟು ಉದಾಹರಣೆ:
ಮಂಜು ಮುಸುಕಿದಾಗ
ಶಿಲುಬೆ

ಕಡಲು

ಕಂಬಳಿ ಹುಳು


- palachandra ರವರ ಬ್ಲಾಗ್
- Login or register to post comments
- 343 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಉ: silhouette ಚಿತ್ರಗಳು
ಪಾಲ,
ಉಪಯುಕ್ತ ಮಾಹಿತಿಗೆ ನನ್ನಿ.
ಚಿತ್ರಗಳಂತೂ ಸೂಪರ್.
-ಅನಿಲ್.
ಉ: silhouette ಚಿತ್ರಗಳು
ತುಂಬಾ ಉಪಯೋಗವಾಯ್ತು,.. ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಸರಳವಾಗಿ ಬರೆಯುತ್ತೀರಿ
ಸಮಯವಾದಾಗ ಹಾಗೇ ಲೈಟ್ ಮೀಟರಿಂಗ್ ಬಗ್ಗೆನೂ ಬರೆಯುತ್ತೀರಾ?
ನಿಮ್ಮವನೇ,
ಅರವಿಂದ | Aravinda
http://aravindavk.in
ಉ: silhouette ಚಿತ್ರಗಳು
ಒಂದು ಪ್ರಶ್ನೆ,
ಅಂಡರ್ ಎಕ್ಸ್ಪೋಸ್ ಅಥವಾ ಓವರ್ ಎಕ್ಸ್ಪೋಸ್ ಯಾವಾಗ ಮಾಡ್ಬೇಕು ಅಂತ ಡಿಸೈಡ್ ಮಾಡೋದು ಹೆಂಗೆ?
ನಿಮ್ಮವನೇ,
ಅರವಿಂದ | Aravinda
http://aravindavk.in
ಉ: silhouette ಚಿತ್ರಗಳು
ಅರವಿಂದ್,
ಚಿತ್ರ ತೆಗೆದು, ಇನ್ನೊಬ್ಬರು ತೆಗೆದ ಚಿತ್ರ ನೋಡಿ, ನಿಮಗೇ ಗೊತ್ತಾಗತ್ತೆ. ನೀವು ತೆಗೀತಾ ಇರೋ ವಿಷಯ ಏನು, ಅದನ್ನ ಯಾವ ರೀತಿ ಸೆರೆ ಹಿಡಿದರೆ ಚೆನ್ನ. ಬರೀ ವಿಷಯ ಮಾತ್ರ ಸರಿಯಾಗಿ ಎಕ್ಸ್ಪೋಸ್ ಆದ್ರೆ ಸಾಕೆ, ಹಿನ್ನೆಲೆಯ ಬಗ್ಗೆ ಯೋಚಿಸಬೇಕೆ, ಇತ್ಯಾದಿ
ಇಲ್ಲಿ "ಅಂಡರ್ ಎಕ್ಸ್ಪೋಸ್" ವಿಷಯಕ್ಕೆ ಮಾತ್ರ, ಹಿನ್ನೆಲೆಗೆ ಸರಿಯಾದ ಎಕ್ಸ್ಪೋಸ್. ನಿಮ್ಮ ನಿಮ್ಮ ಮನೋಭಾವಕ್ಕೆ ತಕ್ಕಂತೆ..
ಮೀಟರಿಂಗ್ ಮೋಡ್, ಮೀಟರಿಂಗ್ ಬಗ್ಗೆ ನೆನಪಿಸಿದ್ದಕ್ಕೆ ಧನ್ಯವಾದ, ಇನ್ನೊಮ್ಮೆ ಬರೆಯುವೆ.
--
PaLa
ಉ: silhouette ಚಿತ್ರಗಳು
ಪಾಲಚಂದ್ರರೆ,
ಚಿತ್ರಗಳು ಸಕತ್
-ಸವಿತ
ಉ: silhouette ಚಿತ್ರಗಳು
ಹಿಂದಿನಬಾರಿ ಸಿಕ್ಕಾಗ ಹೇಳಿಕೊಟ್ಟ ಟ್ರಿಕ್ಕು. ಈಗ ಬರಹದ ರೂಪದಲ್ಲೇ ಇದೆ.
ಚಿತ್ರಗಳೂ ಸೂಪರ್
ಯಾವಾಗಲಾದರೂ manual mode ನಲ್ಲಿ ತೆಗೆಯಲು ಪ್ರಯತ್ನಿಸುತ್ತೀನಿ. ಈ ಬರಹಕ್ಕೆ ಧನ್ಯವಾದ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
ಉ: silhouette ಚಿತ್ರಗಳು
ಪಾಲಚಂದ್ರರೆ ಲೇಖನವೇನೋ ಚೆನ್ನಾಗಿದೆ ಆದರೆ ಚಿತ್ರಗಳು ನಮ್ಮಲ್ಲಿ ಬ್ಲಾಕ್ ಆಗಿವೆ
ಉ: silhouette ಚಿತ್ರಗಳು
ನಂದಕುಮಾರ್,
ಚಿತ್ರ ಸಂಪದಕ್ಕೇ ಅಪ್-ಲೋಡ್ ಮಾಡಿ, ಲೇಖನದಲ್ಲಿ ಕೊಂಡಿ ಬದಲಾಯಿಸಿದ್ದೇನೆ.
--
PaLa
ಉ: silhouette ಚಿತ್ರಗಳು
ಧನ್ಯವಾದಗಳು. ಎಲ್ಲ ಚಿತ್ರಗಳು ಚೆನ್ನಾಗಿವೆ ಪಾಲಚಂದ್ರರೆ.
ಅಂದ ಹಾಗೆ ಮಾಮೂಲಿ digiCam ಈ ತರ ಫೋಟೋ ತೆಗೆಯುವುದಕ್ಕೆ ಆಗುವದಿಲ್ಲ ಅನ್ನಿಸುತ್ತೆ. ಇದಕ್ಕೆ high-end ಕ್ಯಾಮೆರಗಳೇ ಬೇಕೇನೋ?
ಉ: silhouette ಚಿತ್ರಗಳು
ಹಾಗೇನಿಲ್ಲ, ಸೆಲ್ ಫೋನ್ ಕ್ಯಾಮರಾದಲ್ಲೂ ಕೂಡ ಈ ತರದ ಚಿತ್ರ ತೆಗಿಬಹುದು
--
PaLa
ಉ: silhouette ಚಿತ್ರಗಳು
ಹೌದಾ. ಪ್ರಯತ್ನಿಸಿ ನೋಡುವೆ.
ಉ: silhouette ಚಿತ್ರಗಳು
ಅನಿಲ್, ಅರವಿಂದ್, ಸವಿತಾ, ನಿಧಿ, ನಂದಕುಮಾರ್,
ಪ್ರತಿಕ್ರಿಯೆಗೆ ವಂದನೆಗಳು
--
PaLa