19
June
2013

ಸೊಳ್ಳೆ

January 15, 2009 - 9:43pm
palachandra
ಸೊಳ್ಳೆ
  • ಕೀಟಗಳ ಪ್ರಭೇದಕ್ಕೆ ಸೇರಿದ ಸೊಳ್ಳೆಯ ಉದ್ದ ಸಾಮಾನ್ಯವಾಗಿ ೧೬ ಮಿ.ಮಿ.ಗಿಂತ ಕಡಿಮೆ ಹಾಗೂ ಇದರ ತೂಕ ೨.೫ ಮಿ.ಗ್ರಾಂ.ವರೆಗಿದೆ.
  • ಇದು ನಿರಂತರವಾಗಿ ೧ ರಿಂದ ೪ ಗಂಟೆಯವರೆಗೆ ಹಾರಬಲ್ಲದ್ದಾಗಿದ್ದು, ಗಂಟೆಗೆ ೧ರಿಂದ ೨ ಕಿ.ಮೀ.ನಂತೆ, ಒಂದೇ ಬಾರಿಗೆ ೧೦ಕಿ.ಮೀ.ವರೆಗೆ ಕ್ರಮಿಸಬಲ್ಲದು.
  • ಬೆಳಿಗ್ಗಿನ ಸಮಯದಲ್ಲಿ ತಂಪಾದ ಸ್ಥಳಗಳಲ್ಲಿ ವಿಶ್ರಮಿಸುವ ಇವುಗಳು, ಸಂಜೆಯ ನಂತರ ಮತ್ತು ರಾತ್ರಿಯ ವೇಳೆ ತಮ್ಮ ಆಹಾರ ಅರಸಿ ಹೊರಡುತ್ತವೆ.
  • ಹೆಣ್ಣು ಮತ್ತು ಗಂಡು ಸೊಳ್ಳೆಗಳೆರಡೂ ಮಕರಂದ ಅಥವಾ ಗಿಡದ ರಸ ಹೀರಿ ಬದುಕುವುದಾದರೂ, ಹೆಣ್ಣು ಸೊಳ್ಳೆ ಪ್ರಾಣಿಗಳ ರಕ್ತ ಕುಡಿಯುವುದೂ ಅಲ್ಲದೇ, ಕೆಲವು ಮಾರಣಾಂತಿಕ ಕಾಯಿಲೆ ಹರಡುವುದೂ ಉಂಟು.
  • ಹೆಣ್ಣು ಸೊಳ್ಳೆಗೆ ಅದರ ಅಂಡಾಣು(ಮೊಟ್ಟೆ) ಬೆಳೆಯಲು ಹೆಚ್ಚಿನ ಪ್ರೋಟೀನ್ ಮತ್ತು ಕಬ್ಬಿಣದ ಸತ್ವದ ಅವಶ್ಯಕತೆಯಿರುವುದರಿಂದ , ಇತರ ಪ್ರಾಣಿಗಳ ಮೇಲೆ ಈ ಅವಲಂಭನೆ.
  • ಇದರ ಜೊಲ್ಲು ರಕ್ತ ಹೆಪ್ಪುಗಟ್ಟವುದನ್ನು ತಡೆದು, ಲೀಲಾಜಾಲವಾಗಿ ರಕ್ತ ಹೀರಲು ಸಹಾಯ ಮಾಡುತ್ತದೆ.
  • ಕೆಲವು ಬಗೆಯ ಸೊಳ್ಳೆ(Toxorhynchites) ಪ್ರಾಣಿಗಳ ರಕ್ತ ಹೀರದೆ, ಇತರ ಸೊಳ್ಳೆಗಳ ಲಾರ್ವಾವನ್ನು ಕಬಳಿಸುತ್ತವೆ. ಇಂತಹ ಸೊಳ್ಳೆಗಳನ್ನ, ಸೊಳ್ಳೆ ನಿಯಂತ್ರಣಕ್ಕೆ ಬಳಸಿ ಯಶಸ್ಸು ಕಂಡಿದ್ದಾರೆ.
  • ಡ್ರಾಗನ್ ಫ್ಲೈಯ ಆಹಾರ ಕೂಡ ಸೊಳ್ಳೆಯ ಲಾರ್ವಾ ಆಗಿದ್ದು, ಸೊಳ್ಳೆಯ ಸಂತತಿ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಮಾಹಿತಿ: ವಿಕಿಪೀಡಿಯಾ ಚಿತ್ರಕೃಪೆ: ಪಾಲ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by anil.ramesh on
ಚಿತ್ರ ಚೆನ್ನಾಗಿದೆ.. ಮಾಹಿತಿ ಉಪಯುಕ್ತವಾಗಿದೆ.. -ಅನಿಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ನನ್ನಿ ಅನಿಲ್ -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ನಿಮ್ಮ ಚಿತ್ರ ನೋಡಿ ಖುಷಿ ಆಯಿತು. ತುಂಬ ನುರಿತ ಕಲೆ ನಿಮ್ಮದು. ಐದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಮಲೇರಿಯ ನಿಯಂತ್ರಣದ ಸಾಕ್ಷ್ಯ ಚಿತ್ರವೊಂದನ್ನು ನಾನು ನಿರ್ಮಾಣ ಮಾಡಿದ್ದೆ. ಅದರಲ್ಲಿ ಸೊಳ್ಳೆ ಪ್ಯೂಪದಿಂದ ಹೊರಬರುವುದನ್ನು ನಾವು ಸೆರೆ ಹಿಡಿಯಲು ಯತ್ನಿಸಿ ಸಫಲರಾಗಿದ್ದೆವು. ಈ ಕೊಂಡಿಯಲ್ಲಿ ಸೊಳ್ಳೆಯ ಹಲವು ಪ್ರಬೇಧಗಳ ಚಿತ್ರಗಳಿವೆ. http://www.arbovirus...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಎಂಟಾರ್ಲಿ ನಲವತ್ತೆಂಟು, ಇನ್ನೂ ೪೭ ಪ್ರಭೇದದ ಚಿತ್ರಾ ತೆಗೀಬೇಕು. ಕೊಂಡಿಗೆ ನನ್ನಿ ಗುರು ಬಾಳಿಗರೇ. -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಅಂದರೆ ನೀವು ಈಗಾಗಲೇ ೭ ಪ್ರಬೇಧದ ಚಿತ್ರ ತೆಗೆದಿದ್ದಿರಿ. ದಯವಿಟ್ಟು ತೋರಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ನಾನು ಒಂದೇ ತೆಗೆದದ್ದು, ಅದು ಲೆಕ್ಕದಲ್ಲಾದ ತಪ್ಪು.. ೪೮-೧=೪೭ ಆಗ್ಬೇಕಿತ್ತು, ಸರಿಪಡಿಸಿದ್ದೀನಿ. -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
>>ಐದು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಮಲೇರಿಯ ನಿಯಂತ್ರಣದ ಸಾಕ್ಷ್ಯ ಚಿತ್ರವೊಂದನ್ನು ನಾನು ನಿರ್ಮಾಣ ಮಾಡಿದ್ದೆ. ಅದರಲ್ಲಿ ಸೊಳ್ಳೆ ಪ್ಯೂಪದಿಂದ ಹೊರಬರುವುದನ್ನು ನಾವು ಸೆರೆ ಹಿಡಿಯಲು ಯತ್ನಿಸಿ ಸಫಲರಾಗಿದ್ದೆವು ಸೂಪರ್, ನಾವು ನೋಡಬಹುದಾ ಅದನ್ನ? -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gurubaliga on
ಖಂಡಿತ. ಬೇಗನೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ನನ್ನಿ, ಕಾಯ್ತಿನಿ :) -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಡ್ರಾಗನ್ ಪ್ಲೈ ಸೊಳ್ಳೆನೇ ಹಿಡಿದಿರೋದು ನೋಡಿದ್ದೆ, ಫೋಟೋ ತೆಗೆಯೋಣ ಅಂತ ಹತ್ರ ಹೋದ್ರೆ ಹಾರೇ ಹೋಯ್ತು.. -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by cherambane on
ಸೊಳ್ಳೆ! ಸಕ್ಕತ್ ಚಿತ್ರ ಬಶೀರ್ ಕೊಡಗು, ದುಬೈ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಧನ್ಯವಾದ ಬಶೀರ್ -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hamsanandi on
ಬಹಳ ಚೆನ್ನಾಗಿದೆ! ಅಂದಹಾಗೆ ತೂಕ ೧.೫ ’ಮಿಲಿಗ್ರಾಂ’ ಅನ್ನೋ ಮಾಹಿತಿ ಸರಿಯೇ? -ಹಂಸಾನಂದಿ ಹರಿದಾಸ ಸಂಪದ:- http://haridasa.in/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ನನ್ನಿ ಹಂಸಾನಂದಿಯವರೇ, ಅದು ೨.೫ ಮಿ.ಗ್ರಾಂ. ವರೆಗೆ ಎಂದಾಗಬೇಕಿತ್ತು, ಸರಿಪಡಿಸಿದ್ದೇನೆ. -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by keshava_prasad on
ಮಲಗೋ ಹೊತ್ತಲ್ಲಿ ಸರಿಯಾಗಿ ಸೊಳ್ಳೆ ಬಿಡ್ತೀರಲ್ರೀ :-) ಚಿತ್ರ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
:) -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ಪಾಲಚಂದ್ರ, ಬಲಗೈಯಲ್ಲಿ ಕಂಪ್ಯೂಟರ್ ಕೀ ಕುಟ್ಟುತ್ತ, ಎಡಕೈಯಲ್ಲಿ ಸೊಳ್ಳೆ ಹೊಡೆಯುತ್ತಿದ್ದೆ. ನಿಮ್ಮ ಈ ಸೊಳ್ಳೆಯನ್ನು ಹೊಡೆಯುವುದಾ ಬಿಡುವುದಾ..? ಚಿತ್ರ ಬಹಳ ಚೆನ್ನಾಗಿದೆ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಗಣೇಶರೆ, ಸ್ತ್ರೀ ಹತ್ಯೆ ಮಹಾ ಪಾಪ! -- PaLa
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by uniquesupri on
ನೂರು ಹಿಟ್ಸ್ ಬಿದ್ದರೂ ಬದುಕಿಯೇ ಇದೆಯಲ್ಲ ಸರ್ ನಿಮ್ಮ ಸೊಳ್ಳೆ! :) _______________________ ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು. http://ontihakki.wor... http://kalaravapatri... http://ekshana.wordp... http://oshohaadu.wor...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on
ವಾಹ್, ಸೂಪರ್. :) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಸಂಪದದಲ್ಲಿ ಕೀಟಗಳ ಕಾಟ ಅತಿಯಾಯಿತು ಪಾಲಚಂದ್ರರೇ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಹ್ಹೆ ಹ್ಹೆ, ನನ್ನ ಕ್ಲೋಸ್-ಅಪ್ ಲೆನ್ಸ್ ಹಾಳಾಗುವರ್ಗು ಈ ಕಾಟ ಇದೆ ಅನ್ಸುತ್ತೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಪಾಲಚಂದ್ರರೆ, ನಿಮ್ಮ ಸೊಳ್ಳೆ ನಮ್ಮಲ್ಲಿ ಮಾಯ. ಚಿತ್ರಪುಟಕ್ಕೆ ಹಾಕಿ ನಮಗೂ ನೋಡೋ ಭಾಗ್ಯ ಕರುಣಿಸಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ನಂದಕುಮಾರ್, ಬದ್ಲಾಯಿಸಿದೀನಿ. ನಿಮ್ಮಾಫೀಸಲ್ಲೂ ಫ್ಲಿಕರ್ ಬ್ಲಾಕ್?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಧನ್ಯವಾದ. ಚೆನ್ನಾಗಿದೆ ನೀವು ತೆಗೆದ ಚಿತ್ರ. ಅಂದಹಾಗೆ ಈ ಚಿತ್ರ ತೆಗೆಯಲಿಕ್ಕೆ macro mode ಮತ್ತು ಕಡಿಮೆ apperture ಉಪಯೋಗಿಸಿದ್ದೀರ? ನಮ್ಮ ಆಫೀಸ್ ಅಲ್ಲಿ ಎಲ್ಲ ಬ್ಲಾಕ್. gmail, yahoo, flickr, picasa, free software etc... ಒಂದು ವಿಧದಲ್ಲಿ ಒಳ್ಳೆಯದೇ ಪಾಲಚಂದ್ರರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಮಾಕ್ರೋ ಮೋಡ್ ಅಲ್ಲ, ನಾನು ಸಾಮಾನ್ಯವಾಗಿ ಅಪಾರ್ಚರ್ ಪ್ರಿಯಾರಿಟಿ ಬಳಸ್ತೀನಿ. ಇಲ್ಲಿ ಅಪಾರ್ಚರ್ ಜಾಸ್ತಿ ಇದೆ(ಕಡಿಮೆ ಸಂಖ್ಯೆ, ಓಪನಿಂಗ್ ದೊಡ್ಡದು), ನಾನಿಲ್ಲಿ ಬಳಸಿದ್ದು ೪.೫, ISO 200, set ಮಾಡಿದಾಗ ಸಿಕ್ಕಿದ shutter speed ೧/೧೨೫ ಸೆಕೆಂಡ್. ಆದ್ರೂ ಈ ಚಿತ್ರದಲ್ಲಿ ಕಾಲಿನ ಎಲ್ಲಾ ಭಾಗ ಶಾರ್ಪ್ ಆಗಿ ಬಂದಿಲ್ಲ, ಅಪಾರ್ಚರ್ ಕಡಿಮೆ ಮಾಡಿ (೮.೦ವರೆಗೂ) ನೋಡಬಹುದಿತ್ತು, ಆದ್ರೆ ಬೆಳಕು ಕಮ್ಮಿ ಇತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
[quote]ಇಲ್ಲಿ ಅಪಾರ್ಚರ್ ಜಾಸ್ತಿ ಇದೆ(ಕಡಿಮೆ ಸಂಖ್ಯೆ, ಓಪನಿಂಗ್ ದೊಡ್ಡದು)[/quote] ಅಂದರೆ ಬೆಳಕು ಜಾಸ್ತಿ ಸಿಗುತ್ತದೆಯೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಹೂ, ಬೆಳಕು ಜಾಸ್ತಿ, ಡೆಪ್ತ್ ಆಫ್ ಫೀಲ್ಡ್ ಕಡಿಮೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಮಾಹಿತಿಗಾಗಿ ಧನ್ಯವಾದಗಳು. ಕುತೂಹಲದಿಂದ ಕೇಳಿದೆ ಪಾಲಚಂದ್ರರೆ. ನಿಮಗೆ torture ಅನ್ನಿಸುವುದಿಲ್ಲ ಅಂದುಕೊಳ್ಳುತ್ತೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಛೇ ಇಲ್ಲಪ್ಪ, ಕೆಲ್ಸ ಮಾಡ್ತಾ ಮಾಡ್ತಾ, ಪುರುಸೋತ್ತಾದಾಗಲೆಲ್ಲಾ ಅಥ್ವಾ ಉಲ್ಟಾ :), ನೋಡೋದ್ರಿಂದ "ಪ್ರತಿಕ್ರಿಯೆ" ಹಾಕೋಕೆ ಸ್ವಲ್ಪ ಲೇಟ್ ಆಯ್ತಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Seetharmorab on
ಸೊಳ್ಳೆ ಶಬ್ದ ಕೆಳಿದರೆ ಕೊಪಬರತ್ತೆ ಅನ್ಥಾದ್ರಲ್ಲಿ ಚಿತ್ರ ಯೆನು ಚೆನ್ನಾಗಿದೆರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by palachandra on
ಸೀತಾಅವರೇ, ಜಾಸ್ತಿ ಕೋಪ ಒಳ್ಳೇದಲ್ಲ, ಸೊಳ್ಳೆ ಶಬ್ದ ಕೇಳಿ ಕೋಪ ಬಂದ್ರೆ, ಅದು ಸಾಯೋದಕ್ಕಿಂತ ನಮ್ಮ ಕೆನ್ನೆಗೆ ಏಟು ಬೀಳೋದೇ ಜಾಸ್ತಿ :) -- ಪಾಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ಚೆನ್ನಾಗಿದೆ ಸೊಳ್ಳೆ ಮತ್ತದರ ಮಾಹಿತಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.