ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › pallavi.dharwad ರವರ ಬ್ಲಾಗ್

ಜೀವ ಗಂಧ

ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...

ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!

June 17, 2008 - 4:56pm — pallavi.dharwad

ಮಾಧ್ಯಮ ಎತ್ತ ಹೋಗುತ್ತಿದೆ?

ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಹಲವಾರು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಪ್ರಶ್ನೆ ಮತ್ತೆ ಮತ್ತೆ ಉದ್ಭವವಾಗುತ್ತಲೇ ಇದೆ. ನಾಲ್ಕು ಗೋಡೆಗಳ ಬೆಚ್ಚನೆಯ ವಾತಾವರಣದಲ್ಲಿ ಏನೋ ಕಂಪನವಾಗುತ್ತದೆ. ಅದು ಪಕ್ಕದ ಮನೆಯವರಿಗೆ ಗೊತ್ತಾಗುವುದಕ್ಕೂ ಮುನ್ನ ಮಾಧ್ಯಮದ ಕಿವಿಗೆ ಬಿದ್ದಿರುತ್ತದೆ. ಇದ್ದಕ್ಕಿದ್ದಂತೆ ಕ್ಯಾಮೆರಾಗಳು, ಮೈಕ್‌ಗಳು, ಲೋಗೋಗಳು, ಪೆನ್‌, ಪ್ಯಾಡ್‌ಗಳು ಬಂದಿಳಿಯುತ್ತವೆ. ಅದುವರೆಗೆ ಜತನದಿಂದ ಕಾಪಾಡಿಕೊಂಡು ಬಂದಿದ್ದ ನಮ್ಮ ಖಾಸಗಿ ಬದುಕು ಮನೆಮನೆಗಳ ಟಿವಿಗಳಲ್ಲಿ, ಪತ್ರಿಕೆಗಳಲ್ಲಿ ಬೆತ್ತಲಾಗಿ ಬಿದ್ದುಬಿಡುತ್ತದೆ.

ಮಾಧ್ಯಮಕ್ಕೆ ಈ ಹಕ್ಕು ಕೊಟ್ಟವರು ಯಾರು? ಇನ್ನೊಬ್ಬರ ಖಾಸಗಿ ಬದುಕನ್ನು ಸಾರ್ವತ್ರಿಕಗೊಳಿಸುವ ಜರೂರತ್ತು ಏನಿದೆ?

ಇಲ್ಲಿ ನನಗೆ ಹಳೆಯ ಮಾತೊಂದು ನೆನಪಾಗುತ್ತದೆ: ’ಸಾರ್ವಜನಿಕ ವ್ಯಕ್ತಿಗೆ ಖಾಸಗಿ ಬದುಕು ಇರಲಾರದು’.

ಆದರೆ, ಖಾಸಗಿ ಎನ್ನುವ ಶಬ್ದ ಹುಟ್ಟಿದ್ದೇ ಸಾರ್ವಜನಿಕ ಶಬ್ದಕ್ಕೆ ಎದುರಾಗಿ. ಪ್ರತಿಯೊಬ್ಬ ವ್ಯಕ್ತಿಗೂ ಅವನದೇ ಆದ ಖಾಸಾ ಕ್ಷಣಗಳಿರುತ್ತವೆ. ಅವು ಹಾಗಿದ್ದರೇ ಚೆನ್ನ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗೆ ಖಾಸಗಿ ಬದುಕಿರಬಾರದೆ? ಗಂಡ-ಹೆಂಡತಿಯ ನಡುವೆ ಮುನಿಸಿನ ಕ್ಷಣಗಳು ಸಾವಿರ ಇರುತ್ತವೆ. ಅವು ಅವರವರ ನಡುವೆಯೇ ಬಗೆ ಹರಿಯಬೇಕು. ನಮ್ಮ ಮನೆಯಲ್ಲಿಯೂ ಸಂದರ್ಭ ಬಂದಾಗ ಅಪ್ಪ-ಅವ್ವ ಜಗಳ ಮಾಡುತ್ತಾರೆ. ಮುನಿಸಿಕೊಂಡು ದಿನಗಟ್ಟಲೇ ಮಾತು ಬಿಡುತ್ತಾರೆ. ಮತ್ತೆ ಅದೆಲ್ಲವನ್ನೂ ಮರೆತು ನಗುತ್ತಾರೆ. ಇದು ಎಲ್ಲ ಕುಟುಂಬಗಳಲ್ಲಿ ಇದ್ದದ್ದೇ. ಇದನ್ನು ಸಾರ್ವತ್ರಿಕ ಮಾಡುವ ಅನಿವಾರ್ಯತೆಯಾದರೂ ಏನಿದೆ?

ಮಾಧ್ಯಮ ಇಷ್ಟೊಂದು ನಿರ್ಭಾವುಕವಾಗಿದ್ದು ಏಕೆ? ಅಂಥ ಜರೂರತ್ತು ಏನಿದೆ? ಕೈಮುಗಿದು ಅಂಗಲಾಚುತ್ತಿದ್ದರೂ ಬಿಡದೇ ಅವರನ್ನು ಪ್ರಶ್ನಿಸುವ ಮೂಲಕ, ಅವರು ಆಗಲೇ ಅನುಭವಿಸುತ್ತಿರುವ ನೋವನ್ನು ಇನ್ನಷ್ಟು ಹೆಚ್ಚಿಸುವ ಹಕ್ಕು ಮಾಧ್ಯಮಕ್ಕೆ ಇಲ್ಲ. ಯಾರಿಗೂ ಆ ಹಕ್ಕಿಲ್ಲ. ಪ್ರತಿಯೊಬ್ಬರೂ ತಂತಮ್ಮ ವಿವೇಚನೆ ಬಳಸಿಕೊಂಡು ಸಂದರ್ಭವನ್ನು ನಿಭಾಯಿಸಬೇಕು. ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಇನ್ನೊಬ್ಬರ ಬದುಕನ್ನು ಬೀದಿಗೆಳೆಯುವುದು ಬೇಡ.

ಹಾವೇರಿ ಘಟನೆಯಾಗಿರಬಹುದು, ಧಾರವಾಡದ ಹಿಂಸಾಚಾರ ಆಗಿರಬಹುದು, ಉಡುಪಿ ಶಾಸಕರ ಪತ್ನಿ ಪದ್ಮಪ್ರಿಯ ಪ್ಕಕರಣವಾಗಿರಬಹುದು. ಮಾಧ್ಯಮ ಸಂಯಮ ವಹಿಸಬೇಕು. ಅಂಥ ಸುದ್ದಿಗಳನ್ನು ನೋಡದಿರುವ, ಪ್ರತಿಕ್ರಿಯೆ ನೀಡದಿರುವ, ಬಾಯಿ ಚಪ್ಪರಿಸದಿರುವ ಮಾನವೀಯತೆಯನ್ನು ನಾವು ಕೂಡ ತೋರಬೇಕು.

ಇಲ್ಲದಿದ್ದರೆ ನಮಗೆ ಖಾಸಗಿ ಜೀವನ ಎಂಬುದೇ ಉಳಿಯುವುದಿಲ್ಲ.

- ಪಲ್ಲವಿ ಎಸ್‌.

  • ಮಾಧ್ಯಮ
  • ವೈಯಕ್ತಿಕ
  • ಸಮಾಜ
  • ಹಕ್ಕು
~.~
  • pallavi.dharwad ರವರ ಬ್ಲಾಗ್
  • Login or register to post comments
  • 582 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 17, 2008 - 6:41pm — csomsekraiah

ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!

csomsekraiah's picture

ನೀತಿಗೆಟ್ಟ ದೃಶ್ಯ ಮಾಧ್ಯಮ , ನಡತೆಯರಿಯದ ರಾಜಕೀಯ , ಜನರ ಮಾನ ಮರ್ಯಾದೆಗಳನ್ನು ಹರಾಜಿಗಿಡಲು ತುದಿಗಾಲಲ್ಲಿ ನಿಂತಿರುವ ಟಿ.ವಿ ಚಾನಲ್ ಗಳು , ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ , ಜನರ ಬದುಕನ್ನು ಅಸಹನೀಯವಾಗಿಸುತ್ತಿರುವ ರೀತಿ ಅಸಹ್ಯ ಹುಟ್ಟಿಸುತ್ತಿದೆ . ರಾಜ್ಯದ ಗೃಹ ಮಂತ್ರಿಯೊಬ್ಬರಿಗೆ ದೃಶ್ಯ ಮಾಧ್ಯಮಗಳ ದಾಳಿಯಿಂದ ಜನರನ್ನು ರಕ್ಷಿಸಲು ಸುಳ್ಳು ಹೇಳಬೇಕಾದ ಸ್ಥಿತಿ ಇದೆಯೆಂದರೆ ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಬೇಕಾದ್ದು . ಪದ್ಮಪ್ರಿಯಾರನ್ನು ಕೊಲೆಮಾಡಿದ್ದರ ಸಿಂಹ ಪಾಲು ನಿಜಕ್ಕೂ ದೃಶ್ಯ ಮಾಧ್ಯಮಗಳದ್ದು .

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 18, 2008 - 6:12pm — pallavi.dharwad

ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!

pallavi.dharwad's picture

ಮಾಧ್ಯಮಗಳನ್ನು ನೇರವಾಗಿ ಹತೋಟಿಯಲ್ಲಿಡುವುದು ಕಷ್ಟ. ಜನರ ಅಭಿರುಚಿಯ ಮೇಲೆಯೇ ಅವು ಆಟವಾಡೋದು. ನಾವು ನಮ್ಮ ಹವ್ಯಾಸವನ್ನು ಬದಲಿಸಿಕೊಳ್ಳಬೇಕಿದೆ. ನಿಮಗೆ ನೆನಪಿರಬಹುದು: ಮೊದಮೊದಲು ಕ್ರೈಂ ಧಾರಾವಾಹಿಗಳು ಅದೆಷ್ಟು ಜನಪ್ರಿಯವಾಗಿದ್ದವು. ಬರಬರುತ್ತ ಜನಕ್ಕೆ ಅದು ಬೇಸರ ತರಿಸಿತು. ಈಗ ಅವು ತಮ್ಮ ವರ್ಚಸ್ಸು ಕಳೆದುಕೊಂಡಿವೆ. ಜನಕ್ಕೆ ಬೇಡವಾಗಿದ್ದನ್ನು ಮಾಧ್ಯಮಗಳು ಹೇಗೆ ಬಿಂಬಿಸುತ್ತವೆ?

ಆದ್ದರಿಂದ ಖಾಸಗಿ ಬದುಕಿಗೆ ಕೈ ಹಾಕಿದ ಸುದ್ದಿಗಳನ್ನು ಚಪ್ಪರಿಸುವ ಹವ್ಯಾಸವನ್ನು ನಾವು ತ್ಯಜಿಸಬೇಕು. ಆಗ ಮಾತ್ರ ನಿಜವಾದ ಬದಲಾವಣೆ ಪ್ರಾರಂಭವಾದೀತು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 17, 2008 - 9:16pm — lgnandan

ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!

lgnandan's picture

ಉಡುಪಿ ಶಾಸಕರ ವಿಷಯದಲ್ಲಂತು ಮಾಧ್ಯಮಗಳ ನಡವಳಿಕೆ ಅತಿ ಅನಿಸಿತು. ಎಲ್ಲಿಯ ತನಕ ಬೇರೆಯವರ ಖಾಸಗಿ ಜೀವನದ ಬಗ್ಗೆ ವಿಕಾರ ಕುತೂಹಲ ತೋರಿಸುವವರಿರುತಾರೋ ಅಲ್ಲಿಯವರೆಗೂ ಇಂತಹ ಸುದ್ದಿಗಳು ಬಿತ್ತರವಾಗುತಿರುತ್ತವೆ. ಆಗೇ ದೃಶ್ಯ ಮಾಧ್ಯಮದವರ ಸಾಮಾಜಿಕ ಜವಬ್ದಾರಿ ಕೂಡ ಬಹಳ ಹೆಚ್ಹು. ಅವರು ಅಭಿವ್ಯಕ್ತಿ ಸ್ವಾಂತತ್ರ್ಯವನ್ನು ಒಳ್ಳೆಯ ಕಾರಣಕ್ಕೆ ಬಳಸಿಕೊಳ್ಳಬೇಕು. ಈತೀಚಿಗೆ ಒಂದು ಖಾಸಗಿ ವಾಹಿನಿಯು ತನ್ನೆಲ್ಲ ಎಲೆ ಮೀರಿ ಇಂತಹ ಅನಾರೋಗ್ಯಕರ ಪ್ರಸಾರ ಕಾರ್ಯದಲ್ಲಿ ಮುಳುಗಿದೆ. ಸಮಾಜದಲ್ಲಿ ಅರೋಗ್ಯಕರ ವಾತವರಣ ಮೂಡಿಸಲು ಮಾಧ್ಯಮಗಳು ತಮ್ಮ ಜವಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಯಿಸಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 18, 2008 - 6:11pm — pallavi.dharwad

ಉ: ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!

pallavi.dharwad's picture

ಮಾಧ್ಯಮಗಳನ್ನು ನೇರವಾಗಿ ಹತೋಟಿಯಲ್ಲಿಡುವುದು ಕಷ್ಟ. ಜನರ ಅಭಿರುಚಿಯ ಮೇಲೆಯೇ ಅವು ಆಟವಾಡೋದು. ನಾವು ನಮ್ಮ ಹವ್ಯಾಸವನ್ನು ಬದಲಿಸಿಕೊಳ್ಳಬೇಕಿದೆ. ನಿಮಗೆ ನೆನಪಿರಬಹುದು: ಮೊದಮೊದಲು ಕ್ರೈಂ ಧಾರಾವಾಹಿಗಳು ಅದೆಷ್ಟು ಜನಪ್ರಿಯವಾಗಿದ್ದವು. ಬರಬರುತ್ತ ಜನಕ್ಕೆ ಅದು ಬೇಸರ ತರಿಸಿತು. ಈಗ ಅವು ತಮ್ಮ ವರ್ಚಸ್ಸು ಕಳೆದುಕೊಂಡಿವೆ. ಜನಕ್ಕೆ ಬೇಡವಾಗಿದ್ದನ್ನು ಮಾಧ್ಯಮಗಳು ಹೇಗೆ ಬಿಂಬಿಸುತ್ತವೆ?

ಆದ್ದರಿಂದ ಖಾಸಗಿ ಬದುಕಿಗೆ ಕೈ ಹಾಕಿದ ಸುದ್ದಿಗಳನ್ನು ಚಪ್ಪರಿಸುವ ಹವ್ಯಾಸವನ್ನು ನಾವು ತ್ಯಜಿಸಬೇಕು. ಆಗ ಮಾತ್ರ ನಿಜವಾದ ಬದಲಾವಣೆ ಪ್ರಾರಂಭವಾದೀತು.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಖಾಸಗಿ ಬದುಕಿನ ಹೊದಿಕೆ ಹಾಗೇ ಇರಲಿ ಬಿಡಿ!
  • ಗಣ್ಯರ ಖಾಸಗಿ ಬದುಕು ಸಾರ್ವಜನಿಕರ ಆಸ್ತಿಯೇ?
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
  • ಮನುಷ್ಯನ ಖಾಸಗಿ ಸಂಗತಿಗಳು.( ಚಿಂತನೆ)
Syndicate content

ಲೇಖಕರು

pallavi.dharwad's picture

ಪೂರ್ಣ ಹೆಸರು
ಪಲ್ಲವಿ ಎಸ್‌.

ಪರಿಚಯ

ಡಿಗ್ರಿ ಮುಗಿದಿದೆ. ಕೆಲಸದ ಗಾಣಕ್ಕೆ ಬೀಳಲು ಇಷ್ಟ ಇಲ್ಲ. ಆದ್ರೆ ಹಕ್ಕಿ ಹಾಡು, ಬೆಳ್ಳಂಬೆಳಿಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಶಾಲ್ಮಲಾ ಕಣಿವೆಯಲ್ಲಿ ಸುತ್ತು ಹಾಕೋದು ಇಷ್ಟ. ಲೈನ್‌ ಬಜಾರ್‌ನಲ್ಲಿ ಅಡ್ಡಾಡುತ್ತ ಜನರನ್ನು ನೋಡ್ತಾ ಇರೋದು ಇಷ್ಟ. ಒಂಟಿ ಅನ್ನಿಸಿದಾಗ ಇಂಟರ್‌ನೆಟ್‌, ಕಂಪನಿ ಇದ್ದಾಗ ಸೋಮೇಶ್ವರ ದೇವಸ್ಥಾನ, ಕೆಲಗೇರಿ ಕೆರೆ. ಓದೋಕೆ ಇಷ್ಟ. ಇತ್ತೀಚಿಗೆ, ಬರೆಯೋದೂ ಇಷ್ಟ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 93 ಅತಿಥಿಗಳು ಆನ್ಲೈನ್ ಇರುವರು.


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator