ಜೀವ ಗಂಧ
ಎಲ್ಲರ ಬಂಧಿಸುವ ಎಳೆ ಹುಡುಕುತ್ತಾ...
ಏಕೆ ಹೀಗೆ ಅನಿಸುತ್ತದೆಯೋ!
ಬೆಳ್ಳಂಬೆಳಿಗ್ಗೆ ವಾಕಿಂಗ್ ಹೋದಾಗ, ಸುತ್ತ ಮುತ್ತ ತುಂಬಿರುವ ಶಾಂತಿ, ನಿರಾಳತೆ, ಸೊಬಗನ್ನು ನೋಡಿ ನಿಮಗೆ ಏನು ಅನ್ನಿಸುತ್ತದೆ?
ಇದರ ಹಿಂದೆ ಯಾವುದೇ ಎಳೆ ಇದೆ. ಅದೇ ಇವೆಲ್ಲವನ್ನೂ ಬಂಧಿಸಿದೆ. ಒಂದಕ್ಕೆ ಇನ್ನೊಂದನ್ನು ಆಸರೆಯಾಗಿ ಮಾಡಿದೆ ಎಂದು ಅನಿಸುವುದಿಲ್ಲವಾ? ನಾನಂತೂ ಪ್ರತಿಯೊಂದು ಸೊಗಸಿನ ಹಿಂದೆ, ನೋವಿನ ಹಿಂದೆ ಇಂಥದೊಂದು ಎಳೆ ಹುಡುಕುತ್ತಲೇ ಡಿಗ್ರಿ ಮುಗಿಸಿದೆ. ಹಲವಾರು ಗೆಳತಿಯರೊಂದಿಗೆ ಈ ಬಗ್ಗೆ ಚರ್ಚಿಸಿ ಬೈಸಿಕೊಂಡೆ. ವಯಸ್ಸಿಗೆ ತಕ್ಕ ಹಾಕಿರಬೇಕು ಎಂದು ಬುದ್ಧಿ ಹೇಳಿಸಿಕೊಂಡೆ. ವಯಸ್ಸಿಗೆ ತಕ್ಕಂತೆ ಇರುವುದು ಅಂದರೆ ಏನು? ನಮ್ಮ ಯೋಚನೆಗಳನ್ನು ವಯಸ್ಸು ನಿರ್ಧರಿಸಬೇಕೆ ಅಥವಾ ನಮ್ಮ ನಮ್ಮ ವಿಚಾರಗಳೆ?
ಇಂತಹ ಪ್ರಶ್ನೆಗಳು ನಿಮ್ಮನ್ನೂ ಕಾಡಿವೆಯೆ? ಇವೆಲ್ಲ ಘಟನೆಗಳ ಹಿಂದೆ, ಪೋಣಿಸಿಟ್ಟಂತಹ ಬೆಳವಣಿಗೆಗಳ ಹಿಂದೆ ಯಾವುದೋ ಒಂದು ಶಕ್ತಿ ಇದೆ ಎಂದು ಅನಿಸುತ್ತಿಲ್ಲವೆ? ದೇವರೆನ್ನಿ, ಪ್ರಕೃತಿ ಎನ್ನಿ, ಅಥವಾ ಭೌತಶಾಸ್ತ್ರದ ನಿಯಮಗಳು ಎನ್ನಿ, ಒಂದು ವಿಶಿಷ್ಟ ಶಕ್ತಿ ಖಂಡಿತ ಇದೆ. ಅದನ್ನು ನೆನೆದರೆ ಅಚ್ಚರಿಯಾಗುತ್ತದೆ. ಅಲ್ಲವೆ?
ನನ್ನ ವಾದವನ್ನು ನೀವು ಖಂಡಿಸಬಹುದು. ಬೆಂಬಲಿಸಬಹುದು. ಒಂದು ಆರೋಗ್ಯಕರ ಚರ್ಚೆಗೆ ಕಾರಣವಾಗಬಹುದು. ಆದರೆ ನನ್ನ ಮನಸ್ಸು ಮಾತ್ರ ಆ ಎಳೆಯನ್ನೇ ಎಲ್ಲೆಡೆ ಕಾಣುತ್ತ ಹೊಸ ಅರ್ಥವನ್ನು ಕಂಡುಕೊಳ್ಳುತ್ತ ಇದೆ. ಅದೆಲ್ಲ ಹೋಗಲಿ, ಬಾಬು ಸಿಂಗ್ ಠಾಕೂರ್ ಪೇಢಾ ತಿಂದಾಗಾದರೂ ನಿಮಗೆ ಇಂತಹ ಅನುಭವ ಆಗಿರಲಿಲ್ಲವೆ? ಹೇಳಿ?
- ಪಲ್ಲವಿ ಎಸ್.

- pallavi.dharwad ರವರ ಬ್ಲಾಗ್
- Login or register to post comments
- 364 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಏಕೆ ಹೀಗೆ ಅನಿಸುತ್ತದೆಯೋ!
ನಿಜ ಪಲ್ಲವಿ ಅವರೇ ನಾವು ಪ್ರತಿಯೊ೦ದು ಅಚ್ಚರಿ, ರೋಮಾ೦ಚನಕಾರಿ ಅಥವಾ ಮನಸ್ಸಿಗೆ ಇಷ್ಟವಾಗುವ ಸ೦ಗತಿಗಳನ್ನು ಕ೦ಡಾಗ ಅವು ಯಾವುದೂ ಮೂಲಕ್ಕೆ ಜೋಡಿಸಿಕೊ೦ಡ೦ತೆ ಭಾಸವಾಗುತ್ತೆ.
ವಯಸ್ಸಿಗೆ ತಕ್ಕಂತೆ ಇರುವುದು ಅಂದರೆ ಏನು? ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ..ಏಕೆ೦ದರೆ ಆ ರೀತಿಯ ಆಲೋಚನೆಗಳು ನಮ್ಮನ್ನು ಭಾವ ಜೀವಿಗಳಾಗಲು ಬಿಡುವುದಿಲ್ಲ ..ಹಾಯಾಗಿ ಬೆಳ್ಳಂಬೆಳಿಗ್ಗೆ ವಾಕಿಂಗ್ ಎ೦ಜಾಯ್ ಮಾಡಿ
ಉ: ಏಕೆ ಹೀಗೆ ಅನಿಸುತ್ತದೆಯೋ!
ಇದು ತಲೆ ಕೆಡಿಸಿಕೊಂಡ ವಿಚಾರವಲ್ಲ ಹರೀಶ್. ಮನಸ್ಸಿಗೆ ಅನ್ನಿಸಿದ್ದು, ಅಷ್ಟೇ. ನೀವೇ ಹೇಳಿದಂತೆ, ಅಚ್ಚರಿ, ರೋಮಾಂಚನಕಾರಿ ಅಥವಾ ಮನಸ್ಸಿಗೆ ಇಷ್ಟವಾದ ಸಂಗತಿಗಳನ್ನು ಕಂಡಾಗ ಅವು ಯಾವುದೋ ಮೂಲಕ್ಕೆ ಜೋಡಿಸಿಕೊಂಡಂತೆ ಭಾಸವಾಗುತ್ತದೆ ಎಂದೇ ಅಲ್ಲವೆ? ನನಗೆ ಅನ್ನಿಸಿದ್ದೂ ಇಂಥದೇ ಇರಬೇಕಲ್ಲವೆ? ಇದರಲ್ಲಿ ತಲೆ ಕೆಡಿಸಿಕೊಳ್ಳುವಂಥದ್ದು ಏನೂ ಇಲ್ಲ. ಮನಸ್ಸು ಅರಳಿಸುವಂಥದ್ದು ಇದು.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...
ಉ: ಏಕೆ ಹೀಗೆ ಅನಿಸುತ್ತದೆಯೋ!
ಈ ಎಳೆ ಹುಡುಕುದೂ ಒಂದ್ ಥರ ಮಜಾ, ಆದ್ರ ಏನ್ ಮಾಡುದು ಅದರ ಬಗ್ಗೆ ವಿಚಾರ ಮಾಡ್ಕೋಂತ ಮಾಡ್ಕೋಂತ ಹೋದ್ರ ಬರೇ confusion ಅ! ನಾನೂ ಯಾವಾಗಲೂ ಅದರ ಬಗ್ಗೆನ ವಿಚಾರ ಮಾಡ್ಕೋಂತ ಇರ್ತಿದ್ದ್ಯ...ಆದ್ರ ಸ್ವಲ್ಪ difference ಏನ್ ಅಂತ ಅಂದ್ರ, ನಾನು ಮನುಷ್ಯ ಮತ್ತು ಇನ್ನೊಬ್ಬ ಮನುಷ್ಯ ಇವರ ನಡುವಿನ ಎಳೆ ಬಗ್ಗೆ ಜಾಸ್ತಿ ವಿಚಾರ ಮಾಡ್ತಿದ್ದ್ಯ. ಹುಡುಕ್ಕೊಂತ ಹೋದಾಗ ಒಳ್ಳೆ ಅನುಭವಾ ನೂ ಆಗ್ಯಾವು, ಆ ಎಲ್ಲ ಒಳ್ಳೆದನ್ನ ಮರಸು ಅಂಥ ಕೆಟ್ಟನೂ ಆಗ್ಯಾವು. ಎಳೆ ಕಡಕೊಂಡು ನಾ ಹೋಗೇ ಹೊಕ್ಕೆನಿ ಅನ್ನವ್ರಿಗೆ ತಡಿಯಾಕ್ ಬರುದಿಲ್ಲ.
ಆದ್ರ ಒಂದ್ ಮಾತ್ರ ಖರೆ, ಗಾಂಧಿ ಭವನದಿಂದ ನಮ್ಮ ಕಂಪ್ಯೂಟರ್ ಡಿಪಾರ್ಟ್ಮೆಂಟ್ ತನ ಆ ಹಸರ್ ನೋಡ್ಕೊಂತ, ದಾರ್ಯಾಗ ಆ ಅದ್ಭುತ K.U.D ಲೈಬ್ರರಿ ನೋಡ್ಕೊಂತ 2 ವರ್ಷ ಮಟ ದಿನಾ ಲೂ ಹೊಕ್ಕಿದ್ದೆ, ಡಿಪಾರ್ಟ್ಮೆಂಟ್ ಕಡೆನ ಅಜ್ಜನ ಕ್ಯಾಂಟೀನ್ ನ್ಯಾಗ ಮಸ್ತ್ ಗಿರ್ಮಿಟ್ ತಿನ್ಬೇಕಾದ್ರ ಒಂದ್ ಒಂದ್ ಸೇಲ್ ನಂಗ ಹಂಗಾ ಅನ್ನಿಸ್ತಿತ್ತು...ಏನೋ ಎಳೆ ಐತಿ ಅಂತ. ಯಾವ್ ಎಳೆ? ಎಲ್ಲೇ ಐತಿ? ಹೆಂಗ ಐತಿ? ಅನೂದು ಇನ್ನೂ ಸಿಕ್ಕಿಲ್ಲ...ಆದ್ರ ನಾ ಬರೆ ಆ ಗಿರ್ಮಿಟ್ ಸಂಭಂದ ಇನ್ನು ಅಲ್ಲೇ ಹೊಕ್ಕಿರತೆನಿ...ಹೊದಾಗ್ ಒಂದ್ ಸಲ again ತಲಿಯಾಗ್ ಅದಾ ವಿಚಾರ ಬರತಾವು. ಇವತ್ತ ನಿಮ್ಮ ಇ ಬ್ಲಾಗ್ ಓದಿ ಇವೆಲ್ಲ ನೆನಪಾತು. ನೆನಪಿಸಿ ಕೊಟ್ಟಿದ್ದಕ್ಕ ಥಾಂಕ್ಸ್.
ಉ: ಏಕೆ ಹೀಗೆ ಅನಿಸುತ್ತದೆಯೋ!
ನನ್ನ ಬರವಣಿಗೆ ನಿಮಗೆ ಹಳೆಯ ದಿನಗಳನ್ನು ನೆನಪಿಸಿತೇ? ಕೇಳಿ ಖುಷಿಯಾಯಿತು. ನೀವೂ ಬರೀರಿ. ಇಂಥ ಅನುಭವಗಳು ಕೊಡೋ ಸುಖಾನೇ ಬೇರೆ.
- ಪಲ್ಲವಿ. ಎಸ್.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...