January 4, 2011 - 10:18am
ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಮೌನ ರೋದನದಿ ಹಕ್ಕಿ ಮರವ ಸುತ್ತಿ ಸುತ್ತಿ ಬರುತಿದೆ
ಗೆಳೆಯ ಹಕ್ಕಿಯ ಗೂಡಲಿ ಹಾವು ನೆಲೆನಿಂತಾಗ
ಗಳೆಯನಾ ಜೊತೆ ಸೇರಿ ಮರವ ಸುತ್ತಿ ಬರುತಿದೆ
ತನ್ನ ಗೂಡ ಮರೆತಿದೆ
ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಮೌನ ರೋದನದಿ ಹಕ್ಕಿ ಮರವ ಸುತ್ತಿ ಸುತ್ತಿ ಬರುತಿದೆ
ಬೆಳಗಿನಲಿ ಬೆಕ್ಕಿನ ಹೊಂಚು
ಹಗಲಲ್ಲಿ ಗಿಡುಗನಾ ಸಂಚು
ರಾತ್ರಿಯಲಿ ಹಾವಿನ ಕಾಟವ
ಎದುರಿಸಿ ನಿಂತ ಹಕ್ಕಿ
ಮರದ ಒಡೆಯನೆ ಕೊಡಲಿ ಹಿಡಿದು ಬಂದಾಗ
ಎದುರಿಸುವ ಪರಿ ತಿಳಿಯದೆ ಹೆದರಿ ನಿಂತಿದೆ
ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದೆದೆ
ಮೌನ ರೋದನದಿ ಹಕ್ಕಿ ಮರವ ಸುತ್ತಿ ಸುತ್ತಿ ಬರುತಿದೆ
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಚಂದದ ಕವನ .ಬೇಸರವಾಯ್ತು ಹಕ್ಕಿಯ ಪಾಡು ಓದಿ ..
ವಂದನೆಗಳೊಂದಿಗೆ
ವಾಣಿ ಶೆಟ್ಟಿ
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಪ್ರತಿಕ್ರಿಯೆಗೆ ವಂದನೆಗಳು ವಾಣಿಯವರೆ
-ಪಾರ್ಥಸಾರಥಿ
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
:)
ಹೊಸತೊಂದು ಮರವನ್ನು
ಹೊಸತೊಂದು ನೆಲೆಯನ್ನು
ಹುಡುಕುತ್ತಾ, ಎಲೆ ಹಕ್ಕಿಯೇ,
ಹೊರಟುಬಿಡು, ಬರಿದೆ ಈ ಮರವ ಸುತ್ತದಲೇ...!
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ವಂದನೆಗಳು ಹೆಗ್ಡೆಯವರೆ
ಪ್ರತಿಕ್ರಿಯೆಗೆ ಹಾಗು ಹಕ್ಕಿಗೆ ನೀಡುತ್ತಿರುವ ಸಲಹೆಗೆ :)
-ಪಾರ್ಥಸಾರಥಿ
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ನೋಡಿದ್ದ ದೃಶ್ಯವೊಂದು ಕಣ್ಣ ಮುಂದೆ ಸುಳಿಯಿತು!
ಉ: ಹಕ್ಕಿ ಕಟ್ಟಿದ ಗೂಡು ಚದುರಿ ಬಿದ್ದಿದೆ
ಪ್ರತಿಕ್ರಿಯೆಗೆ ವಂದನೆಗಳು ಸಂತೋಷ್
-ಪಾರ್ಥಸಾರಥಿ