June 1, 2010 - 10:09am
ಪ್ರೀತಿಯ ಅಪ್ಪ,
ಪ್ರತಿಯೊಂದು ಕ್ಷಣ ನೀನು ನನ್ನ ಜೊತೆ ಇದ್ದೆ ಅನ್ನೋ ಭರವಸೆ ಯೊಂದಿದ್ದರೆ ಇಡಿ ಜಗತ್ತನ್ನೇ ಜಯಿಸುವ ತಾಕತ್ತಿದೆ,
ನಿನ್ನ ಬಿಟ್ಟು ಈ ಜೀವನದಲ್ಲಿ ಬೇರೆ ಯಾರ ಮುಂದೆ ಏನಕ್ಕೂ ಕೈ ಚಾಚದವಳು ನಾನು.
ನನಗೇನು ಬೇಕಾದರೂ ಕ್ಷಣದಲ್ಲೇ ಪೂರ್ತಿ ಮಾಡಿದೆ. ನಾನು ಏನೇ ಕೇಳಿದರು ಎಂದು ಇಲ್ಲಾ ಅಂತ ಹೇಳಲಿಲ್ಲ,
ಮನೆಯಲ್ಲಿ ಯಾರಿಗೆನಾದರೂ ಬೇಕಾದರೂ ಅಮ್ಮನಿಗೆ ಹೇಳಿ ನಿನ್ನಿಂದ ತೆಗೆದುಕೊಳ್ಳುತಿದ್ರು ನನಗೆ ಮಾತ್ರ ಎಂದು ಹಾಗನಿಸಲಿಲ್ಲ.
ನನಗೆ ನೀನೆ ಯಾವಾಗಲು ಈಜಿ ರೀಚೆಬಲ್. ಅಮ್ಮನಿಗೆ ಹೇಳಿ ನಿನ್ನ ಹತ್ರ ಪಡೆದರೆ ಪ್ರೋಸೆಸ್ ಡಿಲೇ ಅಂತ ನನ್ನ ಅನಿಸಿಕೆ.
ನಿನೆಷ್ಟೇ ಟೆನ್ಶನ್ನಲ್ಲಿದ್ರು, ನನ್ನ ನೋಡಿ ನಿನ್ನ ಕಣ್ಣಲ್ಲಿ ಮಿನುಗೋ ಮಿಂಚು ಆಹಾ!! ಅದೇ ನಿನ್ನ ಬದುಕಲ್ಲಿ ನನಗಿರೋ ಇಂಪೋರ್ಟ್ಅನ್ಸ್.
ಮೊನ್ನೆ ಮೊನ್ನೆ ನಿನ್ನ ಬೆನ್ನ ಮೇಲೆ ಉಪ್ಪಿನ ಚೀಲ ಆದಾಗ ಅಣ್ಣ ನೋಡಿ ಸಿಟ್ಟಿನ ಮುಖ ನೋಡಿದಾಗ ನನಗೆ ಇನ್ನಷ್ಟು ಹಿಗ್ಗು.
ಲೇ ಪುಟ್ಟ ಹಂಗೆಲ್ಲಾ ಆಡಬೇಡವೇ, ನೀ ಹಿಂಗೆ ಆಡೋದನ್ನ ನೋಡಿದ್ರೆ ನಿಂಗ್ಯಾರೆ ಮದ್ವೆ ಆಗ್ತಾರೆ ಅಂತ ಅಣ್ಣ ನನ್ನ ಕಿವಿ ಹಿಂಡಿದಾಗ ನೀನೆ ಅಲ್ವೇ ಅವನ ಬೆನ್ನ ಮೇಲೆ ಗುದ್ದಿ, ನನ್ನ ತಲೆ ಮೇಲೆ ಕೈಯಾಡಿಸಿ, ನನ್ನ ಪುಟ್ಟ ಇನ್ನು ಭಾಳ ಚಿಕ್ಕವಳು ಕಣೋ, ಈ ಮನೆ ಲಕ್ಷ್ಮಿ, ಇಷ್ಟ ಬೇಗ ಅವಳ ಮದ್ವೇನಾ??
ಸಾಧ್ಯನೇ ಇಲ್ಲಾ ಇನ್ನು ಎರಡು ವರ್ಷ ನನ್ನ ಜೊತೇನೆ ಇರ್ತಾಳೆ ಪುಟ್ಟಿ ಎನಂತಿಯೇ? ಅಂತ ಅಮ್ಮ ನ ಮುಖ ನೋಡಿದಾಗ,
ಅಮ್ಮ ಹೊಟ್ಟೆಕಿಚ್ಚಿನಿಂದ, ಹೌದುದು, ಅವ್ಳು ಚಿಕ್ಕವಳು ನೀವು ಚಿಕ್ಕವರು, ಹೀಗೆ ಇರಿ ಆಟಾ ಆಡ್ತಾ ಅಂದಾಗ ನಾನು ನೀನು ನಕ್ಕಿದ್ದೆ ನಕ್ಕಿದ್ದು.
ನಿನಗೆ ನೆನಪಿದೆಯಲ್ಲ, ಆವತ್ತು ನನಗೆ ನಿನಗೆ ಉಟಕ್ಕೆ ಕೊಟ್ಟಿರಲಿಲ್ಲ ಅಮ್ಮ, ನೀನು ನಾವಿಬ್ರು ಉಟಕ್ಕೆ ಹೋಟಲ್ಗೆ ಹೋಗೋಣ ಅಂದಾಗ, ನಾನೇ ಬೇಡಾ ಡ್ಯಾಡ್, ಮಮ್ಮಿ ಕೊಡಲಿಲ್ಲ ಅಂದ್ರೇನು ನನಗೇನು ಮಾಡೋಕ್ ಬರಲ್ವಾ ಅಂತ ಅಡುಗೆ ಮನೆ ಹೊಕ್ಕು ಮೈಯಲ್ಲೇ ಹಿಟ್ಟಿನಭಿಷೇಕ ಮಾಡಿಸ್ಕೊಂದಾಗ ಅಮ್ಮ ನೀನು ಅಣ್ಣ ನಕ್ಕಿದ್ದೆ ನಕ್ಕಿದ್ದು.
ನನ್ನನ್ನ ನನ್ನ ಜೀವನದಲ್ಲೇ ಯಾರು ಮಾಡದಷ್ಟು ಪ್ರೀತಿಯನ್ನ ನೀನು ಮಾಡಿದ್ದೀಯಾ, ನನ್ನ ಚೋಇಸ್ ಏನು ಅಂತ ನನಗಿಂತ ಚೆನ್ನಾಗಿ ನೀನೆ ಅರ್ಥ ಮಾಡ್ಕೊಂಡಿದ್ದಿಯ, ನನಗೊಂದು ಡ್ರೆಸ್ ಬೇಕಾದ್ರೆ ಹತ್ತಾರು ಅಂಗಡಿ ಸುತ್ತಿಸಿದೊನು ನೀನು, ನನಗೇನು ಇಷ್ಟ ಅಂತ ನನಗಿಂತ ನಿನಗೆ ಅಲ್ವ ಚೆನ್ನಾಗಿ ಗೊತ್ತಿರೋದು,
ಓದು ಮುಗಿದ ಮೇಲೆ ಮುಂದೇನು ಮಾಡ್ಬೇಕು ಅಂತ ನಿರ್ಧಾರ ಮಾಡೋಕ್ ಆಗಿರಲಿಲ್ಲ ನನಗೆ, ಆವಾಗ ನೀನೆ ಅಲ್ವ ಸ್ವಲ್ಪ ಹೊರಗಿನ ಪ್ರಪಂಚ ನೋಡಿಬಾ ಅಂತ ಕಳ್ಸಿದ್ದು. ಅವಾಗ್ಲೇ ಅಲ್ವ ನಾನು ಬೆಂಗಳೂರಿಗೆ ಬಂದದ್ದು.
ನನ್ನ ಜೀವನದಲ್ಲಿ ಈ ನಿನ್ನ ಪುಟ್ಟಿ ಬಗ್ಗೆ ನಾನೇ ಯೋಚಿಸದಷ್ಟು ನೀನು ಯೋಚಿಸಿದ್ದಿಯ, ನನಗ್ಯಾವುದು ಸಿಕ್ರೆ ನಾನು ಖುಷಿಯಾಗಿರ್ತಿನೆ ಅಂತ ನಿನಗೆ ಚೆನ್ನಾಗಿ ಗೊತ್ತಿದೆಯಲ್ಲ ಡ್ಯಾಡ್.
ಸಣ್ಣ ಸಣ್ಣ ವಿಷಯಗಳಲ್ಲಿ ನಿನ್ನ ನಿರ್ಧಾರ ಕೇಳೋ ನನಗೆ, ಇನ್ನು ನನ್ನ ಜೀವನದ ಅತಿ ಮುಖ್ಯ ನಿರ್ಧಾರ ನಾನು ಒಂಟಿಯಾಗಿಯೇ ತೆಗೆದುಕೊಳ್ಳೋಕೆ ಸಾಧ್ಯನ ನೀನು ಹೇಳು ಅಪ್ಪ? ಇವತ್ತಿನವರೆಗೂ ನನಗೆ ಯಾರಾದ್ರು ಪ್ರೀತಿ ಅಂದ್ರೆ ಏನು ಅಂತ ಕೇಳಿದ್ರೆ, ಭಾವನೆ ಮತ್ತು ವಿಶ್ವಾಸನೇ ಪ್ರೀತಿ ಅಂತ ಹೇಳ್ತಿದ್ದೆ, ಅದನ್ನ ನಿನ್ನಿಂದಾನೆ ತಾನೇ ಕಲಿತದ್ದು.
ನೀನೇನೆ ಮಾಡಿದ್ರು ನನ್ನ ಒಳ್ಳೆಯದಕೊಸ್ಕರ ಮಾಡ್ತಿಯ ಅಂತ ನನಗ್ಯಾರು ಸರ್ಟಿಫಿಕೆಟ್ ಕೊಡೋದು ಬೇಡ, ಮತ್ತೆ ನನ್ನ ಬಗ್ಗೆ ಯಾವುದೇ ನಿರ್ಧಾರ ಮಾಡೋದಿದ್ರು ನನಗೆ ಕೇಳಬೇಡ. ನಿನ್ನ ಪುಟ್ಟಳಿಗೆ ತನಗೆ ಯಾವುದು ಒಳ್ಳೇದು ಅನ್ನೋ ಅರಿಯೋವಷ್ಟು ಜವಾಬ್ದಾರಿ ಇನ್ನು ಬಂದಿಲ್ಲ, ಬಂದಿದ್ರು ನಿನ್ನ ನಿರ್ಧಾರ ಕಿಂತ ಚೆನ್ನಾಗಿರಲ್ಲ ಅಂತ ನನಗೆ ಮೊದ್ಲೇ ಗೊತ್ತು. ಅದಕ್ಕೆ ಡ್ಯಾಡ ಪ್ಲೀಜ್, ನಿನ್ನೆ ಕೇಳಿದ ಪ್ರಶ್ನೆ ಇನ್ನೆಂದು ಕೇಳಬೇಡ ಅಪ್ಪ.....
-ಅಶ್ವಿನಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಅಪ್ಪನಿಗೊಂದು ಪತ್ರ
ಚೆನ್ನಾಗಿದೆ ಅಶ್ವಿನಿ, ನಿಮ್ಮ ಮತ್ತು ನಿಮ್ಮಪ್ಪನ ಬಾಂಧವ್ಯ ಹೀಗೆ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಉ: ಅಪ್ಪನಿಗೊಂದು ಪತ್ರ
ಧನ್ಯವಾದಗಳುರೀ ಸಂತೋಷ
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ನಿಜ ಅಶ್ವಿನಿ, ಸಾಮಾನ್ಯವಾಗಿ ತಂದೆಗೆ ಮಗಳ ಮೇಲೆ ತಾಯಿಗೆ ಮಗನ ಮೇಲೆ ಪ್ರೀತಿ ಹೆಚ್ಚು ಎಂದು ಹೇಳುತ್ತಾರೆ. ಮಗಳು ಮದುವೆ ನಂತರ ಇನ್ನೊಂದು ಮನೆ ಬೆಳಗಲು ಹೋಗುವವಳು ಎಂಬ ಭಾವನಾತ್ಮಕ ಅಂಶವೂ ಪ್ರೀತಿ ಹೆಚ್ಚಿಸುತ್ತದೆಯೆಂದು ಕಾಣುತ್ತದೆ.
ಉ: ಅಪ್ಪನಿಗೊಂದು ಪತ್ರ
ಇರಬಹುದುರೀ, ಮನೆಯಲ್ಲಿ ಎಲ್ಲರಿಗಿಂತ ಚಿಕ್ಕವಳು ಅಂತ ಸ್ವಲ್ಪ ಪ್ರೀತಿ ಜಾಸ್ತಿರೀ
ಪ್ರತಿಕ್ರಿಯೆಗೆ ಧನ್ಯವಾದಗಳುರೀ.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ನನ್ನ ಮಗಳು ನನ್ನ ಮುಂದೆ ನಿಂತು ಮಾತಾಡುತಿರುವಂತಾಯ್ತು.
ಚೆನ್ನಾಗಿ ಬರೆದಿದ್ದೀರಿ.
:)
ಉ: ಅಪ್ಪನಿಗೊಂದು ಪತ್ರ
ಏನ್ರೀ ಸರ್,
ಮಗಳು ಮಾತಾಡಿದಂತಾಯ್ತು ಅಂತ ಹೇಳ್ತಿರೀ, ಮತ್ತೊಂದು ಕಡೆ ರೀ ಹಚ್ತಿರೀ,
ನಿಮ್ಮಗಳಾಗಿದ್ರೆ ಹೇಗೆ ಬರಿತಿದ್ದಿರೋ ಹಾಗೆ ಬರೆದರೆ ತುಂಬಾ ಸಂತೋಷ ವಾಗುತಿತ್ತು.
ಪ್ರತಿಕ್ರಿಯೆಗೆ ಧನ್ಯವಾದಗಳು
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ಸಂಪದಿಗರಿರುವ ಸಂಪದದಂಗಳವಿದು ಸಾರ್ವಜನಿಕ ವೇದಿಕೆ
ಇಲ್ಲಿ ನಾನು ಯಾರಿಗೂ ಮಾಡುವುದಿಲ್ಲ ಏಕವಚನದ ಬಳಕೆ
ಮುಖತಾ ಭೇಟಿಯಾದ ನಂತರವಷ್ಟೇ ಅನ್ಯ ಭಾವನೆಗಳಿಗಾಸ್ಪದ
ಅಲ್ಲೀತನಕ ಸಂಬಂಧ ಕಲ್ಪಿಸಿ ಮಾತನಾಡಿದರೆ ಅದು ಹಾಸ್ಯಾಸ್ಪದ
ಮಗಳು ನಿಂತು ಮಾತನಾಡಿದಂತಾಯ್ತು ಅಂದೆ ಅಷ್ಟೇ
ಮಾತನಾಡಿದವರಿಗಲ್ಲ, ಮಾತುಗಳಿಗೆ ಪ್ರತಿಕ್ರಿಯೆ ಇಷ್ಟೇ
ಬೇಸರಿಸಿಕೊಳ್ಳಬೇಡಿ.
:)
ಉ: ಅಪ್ಪನಿಗೊಂದು ಪತ್ರ
ಸಂಬಂಧ ಬೆಳೆಸೋ ಮಾತೆಲ್ಲಿ ಬಂತು ಇಲ್ಲಿ,
ನಾನಂದದ್ದು ನನಗೆ ರೀ ಹಚ್ಚಿ ಕರಿಬೇಡ ಅಂತ ಅಷ್ಟೇ.
ದೊಡ್ಡವರು ಚಿಕ್ಕವರಿಗೆ ರೀ ಹಚ್ಚಿ ಕರೆದರೆ ಚಿಕ್ಕವರ ಆಯಸ್ಸು ಕಮ್ಮಿಯಾಗುತ್ತಂತೆ. ಅದಕ್ಕೆ ಹೇಳ್ದೆ.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ರೀ ಹಚ್ಚಿ ಕರೆದಿಲ್ಲ.
ಬರೆದಿದ್ದೀರಿ ಅಂದೆ ಅಷ್ಟೆ.
ಅದಕ್ಕಿಂತ ಭಿನ್ನವಾದ ಬಳಕೆ ನನಗೆ ಗೊತ್ತಿಲ್ಲ.
"ಬರೆದಿರುವೆ" ಅಂತ ಅನ್ನಲಾಗದು ನನ್ನಿಂದ, ಕ್ಷಮಿಸಿ.
ನನಗಂತೂ ನೀವು ನೀವೇ. ನೀವು ನೀನಾಗಲಾರಿರಿ.
ಉ: ಅಪ್ಪನಿಗೊಂದು ಪತ್ರ
ಈ ಮಾತುಗಳಲ್ಲಿ ನಾನು "ರೀ" ಹಚ್ಚಿ ಕರೆದಿಲ್ಲ:
"ನನ್ನ ಮಗಳು ನನ್ನ ಮುಂದೆ ನಿಂತು ಮಾತಾಡುತಿರುವಂತಾಯ್ತು.
ಚೆನ್ನಾಗಿ ಬರೆದಿದ್ದೀರಿ."
ಅದೇ ಮಾತುಗಳನ್ನು ನಾನು "ರೀ" ಹಚ್ಚಿ ಬರೆದರೆ ಹೀಗಿರುತ್ತೆ:
"ನನ್ನ ಮಗಳು ನನ್ನ ಮುಂದೆ ನಿಂತು ಮಾತಾಡುತಿರುವಂತಾಯ್ತು. ಚೆನ್ನಾಗಿ ಬರೆದಿದ್ದೀರಿರೀ".
ಮಾಡದ ತಪ್ಪನ್ನು ಮಾಡಿದ್ದೀರಿ ಅಂದರೆ, ತಲೆಯೊಳಗೆ ಹುಳಬಿಟ್ಟುಕೊಂಡಂತಾಗುತ್ತದೆ.
ಹಾಗಾಗಿ ಹುಳವನ್ನು ಹೊರಹಾಕುತ್ತಿದ್ದೇನೆ ಇಲ್ಲಿ.
:)
ಉ: ಅಪ್ಪನಿಗೊಂದು ಪತ್ರ
ನನ್ನಿಂದ ನಡೆದ ಅಚಾತುರ್ಯ, ದಯವಿಟ್ಟು ಕ್ಷಮಿಸಿ.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
:)
ಉ: ಅಪ್ಪನಿಗೊಂದು ಪತ್ರ
ಚೆನ್ನಾಗಿ ಬರೆದಿದ್ದೀಯಾ ಕಣಮ್ಮಾ.
ಚೆನ್ನಾಗಿ ಬರೆದಿದ್ದಿಯಾ ಕಣೆ.
ಉ: ಅಪ್ಪನಿಗೊಂದು ಪತ್ರ
ರಾಜಿ ನಿವಾದ್ರೆ,
ಚೆನ್ನಾಗಿ ಬರೆದಿದ್ದಿಯಾ ಕಣೆ. ಅಂದ್ರೆ ನಡೆಯುತ್ತೆರೀ.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ನನ್ನ ಪ್ರತಿಕ್ರಿಯೆಗೆ ಇದೆಂತದು ನಿಮ್ಮ ಪ್ರತಿಕ್ರಿಯೆ ಮಾರಾಯ್ರೆ?
ಉ: ಅಪ್ಪನಿಗೊಂದು ಪತ್ರ
ನೀವು ನನ್ನ ಮಗಳ ನೆನಪಾಯ್ತು ಅಂದಿದ್ದೀರಾ, ಪಾಪ ಆ ಹುಡುಗಿ ಅಷ್ಟೊಂದು ಆಸೆ ಪಡುತ್ತೆ. ಅದಕ್ಕೆ ನಿಮ್ಮ ಪರವಾಗಿ.......
ಹೊಯ್ ಸರಿಯಿಲ್ಲವಾ....ಸುರೇಶ್
ಉ: ಅಪ್ಪನಿಗೊಂದು ಪತ್ರ
ಹೋಯ್...ಹಾಗಾ...?
ಹಾಗಾದ್ರೆ ಸರಿ ಉಂಟು ಮಾರಾಯ್ರೆ...!
:)
ಉ: ಅಪ್ಪನಿಗೊಂದು ಪತ್ರ
>>ಪಾಪ ಆ ಹುಡುಗಿ ಅಷ್ಟೊಂದು ಆಸೆ ಪಡುತ್ತೆ.
ನಾನಂದದ್ದು ನನಗೆ ರೀ ಹಚ್ಚಿ ಕರಿಬೇಡ ಅಂತ ಅಷ್ಟೇ.
ದೊಡ್ಡವರು ಚಿಕ್ಕವರಿಗೆ ರೀ ಹಚ್ಚಿ ಕರೆದರೆ ಚಿಕ್ಕವರ ಆಯಸ್ಸು ಕಮ್ಮಿಯಾಗುತ್ತಂತೆ. ಅದಕ್ಕೆ ಹೇಳ್ದೆ.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
>>ದೊಡ್ಡವರು ಚಿಕ್ಕವರಿಗೆ ರೀ ಹಚ್ಚಿ ಕರೆದರೆ ಚಿಕ್ಕವರ ಆಯಸ್ಸು ಕಮ್ಮಿಯಾಗುತ್ತಂತೆ. ಅದಕ್ಕೆ ಹೇಳ್ದೆ.
ನಂಗಿದು ಗೊತ್ತಿರಲಿಲ್ಲ ಹೊಸ ವಿಷ್ಯ ;)
ಅಂದ ಹಾಗೆ ನಿಮ್ಮ ಪತ್ರ ಓದಿ ಖುಷಿಯಾಯ್ತು... ನಾನು ನಮ್ಮಪ್ಪನಿಗೆ ಬರೆದ್ರೂ ಬಹುಪಾಲು ಹೀಗೆ ಇರುತ್ತೆ ಅನಿಸುತ್ತೆ :)
ಉ: ಅಪ್ಪನಿಗೊಂದು ಪತ್ರ
>>ನಂಗಿದು ಗೊತ್ತಿರಲಿಲ್ಲ ಹೊಸ ವಿಷ್ಯ
ನಮ್ಮ ಕಡೆ ಹಾಗೆ ಹೇಳ್ತಾರೆ.
ಪ್ರತಿಕ್ರಿಯೆಗೆ ಧನ್ಯವಾದಗಳು.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ತಂದೆ ತಾಯಿಗೆ ಎಷ್ಟು ಹೊಗಳಿದರು ಸಾಲದು ಕಣ್ರಿ
ಚೆನ್ನಾಗಿದೆ, ಇದೇ ತರಹ ತಾಯಿಯ ಬಗ್ಗೆ ಕೂಡ ಬರೆಯಿರಿ.
ಧನ್ಯವಾದಗಳೊಂದಿಗೆ,
ಸಿದ್ದರಾಮ ಏನ್. ಕೋರಪಳ್ಳಿ
ಉ: ಅಪ್ಪನಿಗೊಂದು ಪತ್ರ
ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ,
ಖಂಡಿತವಾಗಿಯೂ ಬರೆಯುವೆ.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ಆತ್ಮೀಯ
ಬರಹ ತು೦ಬಾ ಹಿಡಿಸ್ತು ಎ೦ದೋ ನಾನು ಬರೆದ ಪತ್ರ ನೆನಪಿಗೆ ಬ೦ತು
http://ananyaspandan...
<<ನಿನ್ನ ಪುಟ್ಟಳಿಗೆ ತನಗೆ ಯಾವುದು ಒಳ್ಳೇದು ಅನ್ನೋ ಅರಿಯೋವಷ್ಟು ಜವಾಬ್ದಾರಿ ಇನ್ನು ಬಂದಿಲ್ಲ, ಬಂದಿದ್ರು ನಿನ್ನ ನಿರ್ಧಾರ ಕಿಂತ ಚೆನ್ನಾಗಿರಲ್ಲ ಅಂತ ನನಗೆ ಮೊದ್ಲೇ ಗೊತ್ತು>>
ಪುಟ್ಟಿ ಯು ಆರ್ ಗ್ರೇಟ್ ಮಕ್ಕಳು ತ೦ದೆಯನ್ನ ವಿರೋಧಿಸಿದ್ರೇನೆ ನಾವು ಬೆಳೆದಿದ್ದೀವಿ’ ಅ೦ತ ತೋರಿಸಿಕೊಟ್ಟ೦ತೆ ಆಗುತ್ತೆ ಅ೦ತ ತಿಳ್ಕೊ೦ಡಿದಾರೆ ಈಗಿನವ್ರು.ಅವ್ರ ಮಧ್ಯೆ ನೀವು ಭಿನ್ನ. ಹೀಗೇ ಇರಿ
ನಿಮ್ಮವ
ಹರಿ
ಉ: ಅಪ್ಪನಿಗೊಂದು ಪತ್ರ
ಪ್ರತಿಕ್ರಿಯೆಗೆ ಧನ್ಯವಾದಗಳುರೀ ಹರಿ,
ಬೇರೆಯವರು ಮಾಡ್ತಾರಂತ ನಾವು ಮಾಡೋಕ್ ಹೋದ್ರೆ ನಮ್ಮತನವನ್ನು ಕಳೆದುಕೊಳ್ಳುತ್ತೇವೆ. ಆವಾಗ ನಾವು ಹಿಂಬಾಲಿಸುವ ಕುರಿ ತರಹ ಬಾವಿಯಲ್ಲಿ ಬಿಳುತ್ತೇವೆ ಹೊರತು ನಮ್ಮ ಬೆಲೆ ಉಳಿಸಿಕೊಳ್ಳೋದಿಲ್ಲ ಅಲ್ವೇನ್ರೀ?
ನಿಮ್ ತಂದೆ ಬಗ್ಗೆ ಬರೆದ ಲೇಖನ ಹಿಡಿಸ್ತು.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ಅಶ್ವಿನಿ ನಿಮ್ಮ ಪತ್ರ ತು೦ಬಾ ಚೆನ್ನಾಗಿತ್ತು........ಅಪ್ಪನ ಪ್ರಿತಿ ಅನುಭವಿಸಿ ಗೊತ್ತೇ ಇಲ್ಲ.......ತು೦ಬಾ ಚಿಕ್ಕವಳಿದ್ದಾಗ ನಮ್ಮಿ೦ದ ದೂರ ಹೋಗಿಬಿಟ್ರು.....ಅಪ್ಪನ ತು೦ಬಾ ಮಿಸ್ ಮಾಡ್ಕೊ೦ಡು ಬಿಟ್ಟೆ..........ಚೆನ್ನಾಗಿದೆ ಅಶ್ವಿನಿ...........
ಉ: ಅಪ್ಪನಿಗೊಂದು ಪತ್ರ
ಕ್ಷಮಿಸಿ ಪವಿತ್ರ,
ನಿಮ್ಮ ಮನಸ್ಸು ನೋಯಿಸಿಬಿಟ್ಟೆ.
-ಅಶ್ವಿನಿ
ಉ: ಅಪ್ಪನಿಗೊಂದು ಪತ್ರ
ಇಲ್ಲರಿ ಅಶ್ವಿನಿ........ಅಪ್ಪನ ಪ್ರಿತಿ ಹೀಗಿರುತ್ತೆ ಅ೦ತ ಮನಸಲ್ಲೇ ಅನುಭವಿಸಿಬಿಟ್ಟೆ...........ಅದಕ್ಕೆ ಹಾಗೆ ಹೆಳಿದ್ದೆ........ಚೆನ್ನಾಗಿದೆ.......ನೋಯಿಸಿಲ್ಲ ಅಶ್ವಿನಿ......ಖುಶಿಯಾಯಿತು....:) :) :) :) ನೋಡಿ ಅಶ್ವಿನಿ ಎಷ್ಟು ಖುಶಿಯಾಗಿದೆ.......
ಉ: ಅಪ್ಪನಿಗೊಂದು ಪತ್ರ
ಬರೆದು ಧನ್ಯಳಾದೆ. ಧನ್ಯವಾದಗಳು ಪವಿತ್ರ,
-ಅಶ್ವಿನಿ