ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
ಕರ್ನಾಟಕ ಸರಕಾರದ ನೀತಿಯೇನೆಂದರೆ ಜಗತ್ತೆಲ್ಲ ಮುಂದೆ ಮುಂದೆ ಸಾಗುತ್ತಿರಲಿ, ನಾನೊಬ್ಬ ಮಾತ್ರ ಹಿಂದೆ ಹಿಂದೆ
ಹೋಗುತ್ತೇನೆ ಎಂಬಂತಿದೆ. ಈ ಮಾತನ್ನು ಈಗ ಹೇಳಲು ಕಾರಣವಿದೆ. ನಿನ್ನೆಯ (ಜೂನ್ ೩, ೨೦೦೮) ಕನ್ನಡ ಪ್ರಭ
ಪತ್ರಿಕೆಯಲ್ಲಿ ಸರಕಾರದ ಒಂದು ಚಿಕ್ಕ ಪ್ರಕಟಣೆ ಇದೆ. ಅದರ ಪ್ರಕಾರ ಸರಕಾರವು ದ್ವಿಭಾಷಾ ಅಕ್ಷರಶೈಲಿಯನ್ನು (bi-
lingual font) ರೂಪಿಸಿದ್ದು ಸದ್ಯದಲ್ಲೇ ಅದನ್ನು ಮಾನಕ (standard) ಎಂದು ಘೋಷಿಸಲಾಗುವುದು. ಇದರ ಬಗ್ಗೆ
ಯಾರದಾದರೂ ಸಲಹೆ ಆಕ್ಷೇಪಗಳಿದ್ದಲ್ಲಿ ಜೂನ್ ೨೧ರ ಒಳಗೆ ಸರಕಾರಕ್ಕೆ ಲಿಖಿತ ಮೂಲಕ (ಇ-ಮೈಲ್ ಮೂಲಕ
ಅಲ್ಲ) ತಿಳಿಸಬೇಕು. ಈ ಫಾಂಟಿನ ವಿವರ ಮತ್ತು ಸರಕಾರೀ ಪ್ರಕಟಣೆಯನ್ನು www.karnataka.gov.in
ತಾಣದಲ್ಲಿ ಓದಬಹುದು.
ಗಣಕಗಳಲ್ಲಿ ಫಾಂಟ್ ಆಧಾರಿತ ಕನ್ನಡ ಭಾಷೆಯ ಅಳವಡಿಕೆ ತುಂಬ ಹಿಂದಿನ ವಿಧಾನ. ಈ ಮೂಲಕ ಮಾಹಿತಿಯ
ಸಂಗ್ರಹಣೆ ಮಾಡಿದರೆ ಅದನ್ನು ಮಾಹಿತಿಯೆಂದು ಗಣಕವು ಪರಿಗಣಿಸುವುದಿಲ್ಲ. ಹೀಗೆ ಸಂಗ್ರಹಿಸಿಟ್ಟ ಮಾಹಿತಿಯಲ್ಲಿ
ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಅಥವಾ ಅಕಾರಾದಿಯಾಗಿ ವಿಂಗಡಿಸಲು ಆಗುವುದಿಲ್ಲ. ಈಗ
ಪ್ರಪಂಚವೇ ಯುನಿಕೋಡ್ ವಿಧಾನವನ್ನು ಬಳಸುತ್ತಿದೆ. ಎಲ್ಲ ಅಂತರಜಾಲ ತಾಣಗಳಲ್ಲಿ ಅದರಲ್ಲೂ ಮಖ್ಯವಾಗಿ
ಬ್ಲಾಗಿಂಗ್ ತಾಣಗಳಲ್ಲಿ ಯುನಿಕೋಡನ್ನೇ ಬಳಸುತ್ತಿದ್ದಾರೆ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು
ಅಕಾರಾದಿಯಾಗಿ ವಿಂಗಡಿಸಬಹುದು ಮಾತ್ರವಲ್ಲ ಮಾಹಿತಿಯನ್ನು ಹುಡಕಲೂ ಬಹುದು. ಇದನ್ನು ನೀವೆಲ್ಲರೂ
ಗಮನಿಸಿರಬಹುದು. ಉದಾಹರಣೆಗೆ ಗೂಗ್ಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಿ
ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬಹುದು. ಯುನಿಕೋಡ್ ವಿಧಾನವು ಫಾಂಟ್ ಸ್ವಾತಂತ್ರ್ಯವನ್ನು
ಹೊಂದಿದೆ. ಎಂದರೆ ಯುನಿಕೋಡ್ ವಿಧಾನದಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾವುದೇ ಓಪನ್‌ಟೈಪ್ ಫಾಂಟ್
ಬಳಸಿ ಓದಬಹುದು. ಕನ್ನಡ ಭಾಷೆಯಲ್ಲಿ ಡಾಟಾಬೇಸ್ ಪ್ರೋಗ್ರಾಮ್ಮಿಂಗ್ ಮಾಡಲು ಯುನಿಕೋಡ್ ಒಂದೇ ದಾರಿ.
ಯುನಿಕೋಡ್ ಬಳಸುವಾಗ ಯಾವುದೇ ಪಾಂಟ್ ಸ್ಟಾಂಡಾರ್ಡ್‌ನ ಅಗತ್ಯವಿಲ್ಲ.
ವಸ್ತುಸ್ಥಿತಿ ಹೀಗಿರುವಾಗ ಸರಕಾರವು ಯಾರದೋ ಪರಿಣತರಲ್ಲದವರ ಮಾತನ್ನು ನಂಬಿ ದಶಕಗಳ ಹಿಂದಿನ
ತಂತ್ರಜ್ಞಾನವನ್ನು ಈಗ ಮಾನಕ ಎಂದು ಘೋಷಿಸಲು ಹೊರಟಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ
ಕೊಡಲಿ ಪೆಟ್ಟೇ ಸರಿ. ಸರಾಕರದ ಈ ಬಾಲಿಶ ಕಾರ್ಯವನ್ನು ಈ ಹಂತದಲ್ಲೇ ಪ್ರತಿಭಟಿಸಿ ಅದನ್ನು ಅಲ್ಲಿಯೇ ನಿಲ್ಲಿಸುವುದು
ಅತೀ ಅಗತ್ಯ. ಈ ಬಗ್ಗೆ ಪ್ರತಿಭಟಿಸಲು ಇಚ್ಛಿಸುವವರು ಮೇಲೆ ಸೂಚಿಸಿದ ಅಂತರಜಾಲದಲ್ಲಿ ನೀಡಿರುವ ಪ್ರಕಟಣೆಯನ್ನು
ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನೀಡಿರುವ ವಿಳಾಸಕ್ಕೆ ನಿಮ್ಮ ಪ್ರತಿಭಟನೆಯ ಪತ್ರವನ್ನು ರವಾನಿಸಬೇಕಾಗಿ
ವಿನಂತಿ.
-ಪವನಜ

- pavanaja ರವರ ಬ್ಲಾಗ್
- Login or register to post comments
- 347 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
URL ತಪ್ಪಾಗಿದೆ.
ಬಹುಶಃ ಪವನಜರವರು ನೀಡ ಹೊರಟಿದ್ದು ಈ ಲಿಂಕು ಇರಬೇಕು:
http://www.karnataka.gov.in/
>> ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನೀಡಿರುವ ವಿಳಾಸಕ್ಕೆ
ವಿಳಾಸ ಕೆಳಗಿನಂತಿದೆ:
ಶ್ರೀ ಶಂಕರ್ ಹೆಚ್ ಎಸ್
ಸೀನಿಯರ್ ಪ್ರೋಗ್ರಾಮರ್, ಇ-ಆಡಳಿತ ಇಲಾಖೆ,
ಸಿ.ಆ.ಸು. ಇಲಾಖೆ (ಆಡಳಿತ ಸುಧಾರಣೆ)
ಕೊಠಡಿ ಸಂಖ್ಯೆ: 145ಎ, ಬಹುಮಹಡಿ ಕಟ್ಟಡ,
ಡಾ|| ಅಂಬೇಡ್ಕರ್ ರಸ್ತೆ, ಬೆಂಗಳೂರು - ೫೬೦೦೦೧
ದೂರವಾಣಿ 22032547
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
ತಿದ್ದಲಾಗಿದೆ.
-ಪವನಜ
-----------
Vishva Kannada
Think globally, Act locally
ಉ: ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
ಇಂಡಿಯನ್ ಗೋರ್‍ಮೆಂಟ್, ಗೋರ್‍ಮೆಂಟ್‍ಗಳೇ ಅಸ್ಟು.. ಯಾವಾಗಲೂ ಒಂದು ಹೆಜ್ಜೆ ಹಿಂದೆ.,..
ಥತ್...
-------------------------------------------------------------
ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.
ಉ: ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
ದಯವಿಟ್ಟು ಯಾವ ರೀತಿ ಪತ್ರ ಬರೆಯಬೇಕೆಂದು ಒಂದು ಡ್ರಾಫ್ಟ್ ಮಾಡಿಕೊಟ್ಟರೆ ನಮ್ಮಂತಹ ಕಂಪ್ಯೂಟರೇತರ ಜನರಿಗೆ ಸಹಾಯವಾಗುವುದು. ನಮಗೆ ತಾಂತ್ರಿಕವಾಗಿ ಏನೇನು ಕಾರಣ, ಸಮರ್ಥನೆ ಕೊಡುವುದೆಂದು ತಿಳಿಯುವುದಿಲ್ಲ. ಅಥವಾ ನೀವು ಮೇಲೆ ಬರೆದಿರುವ ಅಂಶಗಳನ್ನೇ ತೆಗೆದುಕೊಂಡು ಬರೆಯಬಹುದೋ?
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
ನನ್ನ ಪತ್ರ ಇಲ್ಲಿದೆ -
-----------
Vishva Kannada
Think globally, Act locally