ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › pavanaja ರವರ ಬ್ಲಾಗ್

ದ್ವಿಭಾಷಾ ಫಾಂಟ್ ಬಗ್ಗೆ ಕರ್ನಾಟಕ ಸರಕಾರಕ್ಕೆ ನನ್ನ ಪತ್ರ

June 14, 2008 - 5:20pm — pavanaja

ಕರ್ನಾಟಕ ಸರಕಾರವು ದ್ವಿಭಾಷಾ ಫಾಂಟ್ (bilingual font) ಗೆ ಸಂಕೇತಗಳನ್ನು ನಿಗದಿಪಡಿಸಲು ಹೊರಟಿದ್ದು ನಿಮಗೆ ತಿಳಿದಿರಬಹುದು. ಅದರ ಬಗ್ಗೆ ಓದಲು ನೋಡಿ - http://sampada.net/blog/hpn/04/06/2008/9121 ಮತ್ತು http://sampada.net/blog/pavanaja/04/06/2008/9119. ಸರಕಾರಕ್ಕೆ ನಾನು ಬರೆದ ಪತ್ರ ಇಲ್ಲಿದೆ -

ಇವರಿಗೆ,
ಶ್ರೀಯುತ ಹೆಚ್.ಎಸ್. ಶಂಕರ್ ರವರಿಗೆ
ಸೀನಿಯರ್ ಪ್ರೋಗ್ರಾಮರ್, ಇ-ಆಡಳಿತ ಇಲಾಖೆ,
ಸಿ.ಆ.ಸು.ಇಲಾಖೆ (ಆಡಳಿತ ಸುಧಾರಣೆ)
ಕೊಠಡಿ ಸಂಖ್ಯೆ ೧೪೫ಎ, ಬಹುಮಹಡಿ ಕಟ್ಟಡ,
ಡಾ|| ಅಂಬೇಡ್ಕರ್ ರಸ್ತೆ, ಬೆಂಗಳೂರು-೫೬೦೦೦೧.

ಮಾನ್ಯರೆ,

ವಿಷಯ :ಕನ್ನಡದ ದ್ವಿಭಾಷಾ ಅಕ್ಷರ ರೂಪಗಳಿಗೆ ಬಳಸಬೇಕಾದ ಸಂಕೇತಗಳನ್ನು ನಿಗದಿಪಡಿಸುವ ಕುರಿತು.
ಉಲ್ಲೇಖ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆಡಳಿತ ಕನ್ನಡಕ್ಕೆ ಸಂಬಂಧಿಸಿದ ಅಧೀನ ಕಾರ್ಯದರ್ಶಿಯವರ ಪತ್ರ ಸಂಖ್ಯೆ ಕಸಂವಾಪ್ರ ೧೧ ಕೆಓಎಲ್ ೨೦೦೮, ದಿ. ೧೯-೦೫-೨೦೦೮

ಮೇಲೆ ಉಲ್ಲೇಖಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನನ್ನ ಅಭಿಪ್ರಾಯಗಳು ಈ ಕೆಳಗಿನಂತಿವೆ.

೧. ಮೇಲೆ ಉಲ್ಲೇಖಿಸಿದ ಸರಕಾರೀ ಘೋಷಣೆಯಲ್ಲಿ ಈಗ ಈ ದ್ವಿಭಾಷಾ ಅಕ್ಷರರೂಪಗಳ (ಫಾಂಟ್) ಸಂಕೇತಗಳನ್ನು ನಿಗದಿಪಡಿಸುವುದು ಏಕೆ, ಇದರಿಂದ ಯಾವ ಸಮಸ್ಯೆಯ ಪರಿಹಾರ ಆಗುತ್ತದೆ ಎಂಬ ವಿವರಗಳು ಇಲ್ಲ. ದ್ವಿಭಾಷ ಸಂಕೇತಗಳ ನಿಗದೀಕರಣ ಯಾವ ಉದ್ದೇಶಕ್ಕೋಸ್ಕರ ಮಾಡುತ್ತಿರುವುದು ಎಂಬುದನ್ನು ಸ್ಪಷ್ಟೀಕರಿಸಿದರೆ ತುಂಬ ಒಳ್ಳೆಯದಿತ್ತು. ಉದ್ದೇಶವನ್ನು ಸ್ಪಷ್ಟೀಕರಿಸಿದರೆ ಆ ಸಮಸ್ಯೆಗೆ ಪರಿಣತರಿಂದ ಸರಿಯಾದ ಪರಿಹಾರ ಸಿಗುವ ಸಾಧ್ಯತೆಗಳಿವೆ.

೨. ಗಣಕಗಳಲ್ಲಿ ಫಾಂಟ್ ಆಧಾರಿತ ಕನ್ನಡ ಭಾಷೆಯ ಅಳವಡಿಕೆ ತುಂಬ ಹಿಂದಿನ ವಿಧಾನ. ಕರ್ನಾಟಕ ಸರಕಾರದ “ನುಡಿ” ತಂತ್ರಾಂಶವೂ ಈ ವಿಧಾನದಲ್ಲಿ ಕೆಲಸ ಮಾಡುತ್ತದೆ. ಈ ಮೂಲಕ ಮಾಹಿತಿಯ ಸಂಗ್ರಹಣೆ ಮಾಡಿದರೆ ಅದನ್ನು ಮಾಹಿತಿಯೆಂದು ಗಣಕವು ಪರಿಗಣಿಸುವುದಿಲ್ಲ. ಹೀಗೆ ಸಂಗ್ರಹಿಸಿಟ್ಟ ಮಾಹಿತಿಯಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹುಡುಕಲು ಅಥವಾ ಅಕಾರಾದಿಯಾಗಿ ವಿಂಗಡಿಸಲು ಆಗುವುದಿಲ್ಲ. ಈಗ ಪ್ರಪಂಚವೇ ಯುನಿಕೋಡ್ ವಿಧಾನವನ್ನು ಬಳಸುತ್ತಿದೆ. ಎಲ್ಲ ಅಂತರಜಾಲ ತಾಣಗಳಲ್ಲಿ ಅದರಲ್ಲೂ ಮಖ್ಯವಾಗಿ ಬ್ಲಾಗಿಂಗ್ ತಾಣಗಳಲ್ಲಿ ಯುನಿಕೋಡನ್ನೇ ಬಳಸುತ್ತಿದ್ದಾರೆ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಅಕಾರಾದಿಯಾಗಿ ವಿಂಗಡಿಸಬಹುದು ಮಾತ್ರವಲ್ಲ ಮಾಹಿತಿಯನ್ನು ಹುಡುಕಲೂ ಬಹುದು. ಉದಾಹರಣೆಗೆ ಗೂಗ್ಲ್‌ನಲ್ಲಿ ಕನ್ನಡ ಭಾಷೆಯಲ್ಲಿ ಯುನಿಕೋಡ್ ವಿಧಾನದಲ್ಲಿ ಬೆರಳಚ್ಚು ಮಾಡಿ ನಿಮಗೆ ಬೇಕಾದ ಮಾಹಿತಿಯನ್ನು ಹುಡುಕಿ ತೆಗೆಯಬಹುದು. ಯುನಿಕೋಡ್ ವಿಧಾನವು ಫಾಂಟ್ ಸ್ವಾತಂತ್ರ್ಯವನ್ನು ಹೊಂದಿದೆ. ಎಂದರೆ ಯುನಿಕೋಡ್ ವಿಧಾನದಲ್ಲಿ ಶೇಖರಿಸಿಟ್ಟ ಮಾಹಿತಿಯನ್ನು ಯಾವುದೇ ಓಪನ್‌ಟೈಪ್ ಫಾಂಟ್ ಬಳಸಿ ಓದಬಹುದು. ಕನ್ನಡ ಭಾಷೆಯಲ್ಲಿ ಡಾಟಾಬೇಸ್ ಪ್ರೋಗ್ರಾಮ್ಮಿಂಗ್ ಮಾಡಲು ಯುನಿಕೋಡ್ ಒಂದೇ ದಾರಿ. ಯುನಿಕೋಡ್ ಬಳಸುವಾಗ ಯಾವುದೇ ಪಾಂಟ್ ಸ್ಟಾಂಡಾರ್ಡ್‌ನ ಅಗತ್ಯವಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಸರಕಾರವು ದಶಕಗಳ ಹಿಂದಿನ ತಂತ್ರಜ್ಞಾನವನ್ನು ಈಗ ಮಾನಕ ಎಂದು ಘೋಷಿಸಲು ಹೊರಟಿದೆ. ಇದು ಕನ್ನಡ ಭಾಷೆಯ ಬೆಳವಣಿಗೆಗೆ ದೊಡ್ಡ ಕೊಡಲಿ ಪೆಟ್ಟೇ ಸರಿ.

೩. ಕನ್ನಡದಲ್ಲಿ ಈಗಾಗಲೇ ಹಲವು ಫಾಂಟ್ ಆಧಾರಿತ ತಂತ್ರಾಂಶಗಳು ಅಸ್ಥಿತ್ವದಲ್ಲಿವೆ. ಒಂದು ತಂತ್ರಾಂಶದಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ಇನ್ನೊಂದು ತಂತ್ರಾಂಶದಲ್ಲಿ ತೆರೆಯಲು ಆಗುತ್ತಿಲ್ಲ. ಹೀಗಿರುವಾಗ ಸರಕಾರವು ಇನ್ನೊಂದು ಅಕ್ಷರರೂಪಕ್ಕೆ ಸಂಕೇತಗಳನ್ನು ನಿಗದಿಪಡಿಸಹೊರಟಿರುವುದು ಮತ್ತಷ್ಟು ಗೊಂದಲಕ್ಕೆ ಕಾರಣವಾಗುತ್ತದೆ.

೪. ಸರಕಾರದ ಹಲವು ವಿಭಾಗಗಳಲ್ಲಿ ಈಗಾಗಲೆ ಫಾಂಟ್ ಆಧಾರಿತ “ನುಡಿ” ತಂತ್ರಾಂಶವನ್ನು ಬಳಸಿ ತುಂಬ ಮಾಹಿತಿ, ಕಡತ, ಪತ್ರಗಳನ್ನು ತಯಾರಿಸಿ ಸಂಗ್ರಹಿಸಲಾಗಿದೆ. ಇವುಗಳನ್ನೆಲ್ಲ ದತ್ತಸಂಚಯ (ಡಾಟಾಬೇಸ್) ಮಾಡಿ ಅದರಲ್ಲಿರುವ ಮಾಹಿತಿಯನ್ನು ಹುಡುಕುವುದು, ಅಕರಾದಿಯಾಗಿ ವಿಂಗಡಿಸುವುದು, ಇತ್ಯಾದಿ ಮಾಡಬೇಕಾದರೆ ಅವನ್ನೆಲ್ಲ ಮೊದಲು ಯುನಿಕೋಡ್‌ಗೆ ಬದಲಿಸಬೇಕಾಗುತ್ತದೆ. ಇದು ದೊಡ್ಡ ಕಾರ್ಯ. ಇದಕ್ಕೆ ತುಂಬ ಶಕ್ತಿ ಮತ್ತು ಹಣ ವ್ಯಯವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಇನ್ನೊಂದು ಫಾಂಟ್ ಆಧಾರಿತ ತಂತ್ರಾಂಶ ಮತ್ತು ಮಾಹಿತಿ ಸಂಗ್ರಹಕ್ಕೆ ಎಡೆ ಮಾಡಿಕೊಡುವುದು ಸರಕಾರದ ಅಂದರೆ ಕರ್ನಾಟಕದ ಜನತೆಯ ಸಂಪನ್ಮೂಲದ ದರ್ವ್ಯಯವೇ ಸರಿ. ಇದು ಕೂಡದು.

೫. ಸರಕಾರದಲ್ಲಿ ಈಗಾಲೆ ಏಕ ಭಾಷೆಯ ಅಕ್ಷರರೂಪದಲ್ಲಿ (ಫಾಂಟ್) ಮಾಹಿತಿ ಸಂಗ್ರಹಣೆಯ ಕಾರ್ಯ ನಡೆಯುತ್ತಿದೆ. ಇನ್ನೊಂದು ದ್ವಿಭಾಷೆಯ ಅಕ್ಷರರೂಪವನ್ನು ತಯಾರಿಸಿದರೆ ಅದರಲ್ಲೂ ಮಾಹಿತಿ ಸಂಗ್ರಹ ಆಗತೊಡಗುತ್ತದೆ. ಮುಂದೆ ಏಕ ಭಾಷೆ ಮತ್ತು ದ್ವಿಭಾಷೆಯ ಅಕ್ಷರರೂಪಗಳಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಒಂದು ಸಂಕೇತದಿಂದ ಇನ್ನೊಂದಕ್ಕೆ ಬದಲಿಸಲು ಹಾಗೂ ಇವೆರಡರಿಂದ ಯುನಿಕೋಡ್‌ಗೆ ಬದಲಿಸಲು ಮತ್ತೆ ಸರಕಾರದ ಎಂದರೆ ಜನತೆಯ ಸಂಪನ್ಮೂಲದ ದುರ್ವ್ಯಯ ಆಗುತ್ತದೆ. ಇದು ಕೂಡದು.

ಈ ಎಲ್ಲ ವಿವರಣೆಗಳ ಹಿನ್ನೆಲೆಯಲ್ಲಿ ಈ ದ್ವಿಭಾಷ ಅಕ್ಷರರೂಪ ಸಂಕೇತೀಕರಣವನ್ನು ಕೈಬಿಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ. ಇದರ ಜೊತೆಗೆಯೇ ಈ ಹಿಂದೆ ಏಕಭಾಷೆಯ ಅಕ್ಷರರೂಪದ ಸಂಕೇತೀಕರಣ ನಡೆದಿದ್ದರೂ ಆಸ್ಕಿಯ ಸಂಕೇತೀಕರಣ ಈಗ ಅಪ್ರಸ್ತುತವಾಗಿರುವುದರಿಂದ ಇನ್ನು ಮುಂದೆ ಕನ್ನಡ ಭಾಷೆಯ ಎಲ್ಲ ಗಣಕೀಕರಣಕ್ಕೆ ಯುನಿಕೋಡನ್ನೇ ಮಾನಕ ಎಂದು ಸರಕಾರವು ಘೋಷಿಸಬೇಕಾಗಿ ವಿನಂತಿಸುತ್ತಿದ್ದೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

(ಯು. ಬಿ. ಪವನಜ)

  • ಮಾಹಿತಿ ತಂತ್ರಜ್ಞಾನ
  • ಯುನಿಕೋಡ್
~.~
  • pavanaja ರವರ ಬ್ಲಾಗ್
  • Login or register to post comments
  • 256 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲರೂ ಮುಂದೆ, ನಾನೊಬ್ಬ ಹಿಂದೆ
  • ಕನ್ನಡ ಯುನಿಕೋಡ್ ಫಾಂಟ್
  • ಕನ್ನಡ ಯುನಿಕೋಡ್ ನ ಸಮಸ್ಯೆಯ ಬಗ್ಗೆ
  • ವಿಂಡೋಸ್ XP ಫೈರ್‍ಫಾಕ್ಸ್‌ನಲ್ಲಿ ಫಾಂಟ್ ಬದಲಾಗಿದೆ
  • ಲಿನಕ್ಸಾಯಣ - ೧೨ - ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?
Syndicate content

ಲೇಖಕರು

pavanaja's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 99 ಅತಿಥಿಗಳು ಆನ್ಲೈನ್ ಇರುವರು.


ನಾವು ಸಮಯವನ್ನು ಉಪಕರಣವನ್ನಾಗಿ ಬಳಸಿಕೊಳ್ಳಬೇಕು, ಊರುಗೋಲಾಗಿ ಅಲ್ಲ.

— ಜಾನ್ ಕೆನಡಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator