ವಿಂಡೋಸ್‌ಗೆ ಕನ್ನಡದ ಹೊದಿಕೆ
ವಿಂಡೋಸ್ ಎಕ್ಸ್‌ಪಿ ಬಳಸುವವರಿಗೆ ಈಗ ಕನ್ನಡ LIP ಲಭ್ಯವಿದೆ. ವಿಂಡೋಸ್ ಎಕ್ಸ್‌ಪಿಯ ಸರ್ವಿಸ್ ಪ್ಯಾಕ್-2 ಇದ್ದವರು ಮಾತ್ರ ಇದನ್ನು ಅಂತರಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇನ್ನೂ ಒಂದು ನಿಯಮವಿದೆ. ಕಾನೂನುಬದ್ಧವಾಗಿ ವಿಂಡೋಸ್ ಎಕ್ಸ್‌ಪಿ ತಂತ್ರಾಂಶವುಳ್ಳವರು ಮಾತ್ರ ಇದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಕೆಲವು ಸ್ಕ್ರೀನ್‌ಶಾಟ್‌ಗಳನ್ನು ನನ್ನ ತಾಣದಲ್ಲಿ ನೋಡಬಹುದು.
ಸಿಗೋಣ,
ಪವನಜ

- pavanaja ರವರ ಬ್ಲಾಗ್
- Login or register to post comments
- 1520 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮುಚ್ಚು, ಓಡಿಸು!!
ಕನ್ನಡದಲ್ಲಿ ವಿಂಡೋಸ್ ಹೇಗಿದೆ ನೋಡೇ ಬಿಡೋಣ ಎಂದು ಡೌನ್ಲೋಡ್ ಮಾಡ ತೊಡಗಿದೆ. ಸ್ವಲ್ಪ ಸಮಯದ ನಂತರ ಎಷ್ಟು ಡೌನ್ಲೋಡ್ ಆಗಿದೆ ಎಂದು ನೋಡುವಾಗ ಬಹಳ ವಿಚಿತ್ರವಾದ ಪದಪುಂಜ ಕಣ್ಣಿಗೆ ಬಿತ್ತು. ಅದು ಹೀಗಿದೆ:
“ಎಡಕ್ಕೆ ಸಮಯ ಅಂದಾಜ 40 ಸೆಕೆಂಡ್ (5.56 MB ನ 6.12 MB ನಕಲುಮಾಡಿದ)”
ಅದರ screen shot ಕೂಡ ಲಗತ್ತಿಸಿದ್ದೇನೆ.
ಇದರ ಅರ್ಥವೇನಿರಬಹುದು ಎಂದು ತಲೆಕೆರೆದುಕೊಂಡೆ. ಬಹುಶಃ ಇದು “Estimated time left” ನ ಕನ್ನಡ ಅನುವಾದವಿರಬೇಕು !! Install ಮಾಡಿದ ಮೇಲೆ screen ಮೇಲಿರುವುದೆಲ್ಲ ‘ಕನ್ನಡ’ವಾಯಿತು. “ಪ್ರಾರಂಭ” ಎಂದು ಬರೆದಿದ್ದಲ್ಲಿ ಮೌಸ್ ಕ್ಲಿಕ್ಕಿಸಿದೆ. ‘ಮುಚ್ಚು’ ‘ಓಡಿಸು’ ಎಂದೆಲ್ಲ ಬರೆದಿದ್ದ ಮೆನುವೊಂದು ಪ್ರತ್ಯಕ್ಷವಾಯ್ತು !! ಭಯದಿಂದ ಅದನ್ನೆಲ್ಲ ಮುಚ್ಚಿ ಕಂಪ್ಯೂಟರ್ off ಮಾಡಿ ಓಡಿದೆ !!
ಮೈಕ್ರೋಸಾಫ್ಟ್
ಗೆ ಜಯವಾಗಲಿ !!Re: ಮುಚ್ಚು, ಓಡಿಸು!!
ನೀವು ಹೇಳಿದ ಮಾತುಗಳು ನಿಜ.
ಆದರೆ ಅಭ್ಯಾಸವಾದರೆ ಎಲ್ಲ ಸರಿಹೋಗುತ್ತದೆ.
ವಿಂಡೋ ಎಕ್ಸ್ ಪಿಯಲ್ಲಿ ಕನ್ನಡ
ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆಯಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಲು ಸಾಧ್ಯ.
ಲಿನಕ್ಸ್ ಹಾಗೂ ಮೈಕ್ರೋಸಾಪ್ಟ್ ಗಳ ಮಧ್ಯದ ಸ್ಪರ್ಧೆ ಕಂಪ್ಯೂಟರ್ ನಲ್ಲಿ ಕನ್ನಡ ಬಳಕೆಯ ಸಾಧ್ಯತೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ ಎಂದೇ ನನ್ನ ಅನಿಸಿಕೆ.
ಬಳಸದೆ ತಪ್ಪುಗಳಾಗಲು ಸಾಧ್ಯವಿಲ್ಲ ಅಲ್ಲವೆ?
ಎಡಕ್ಕೆ ?
ಸರಿಯಾದ ಅನುವಾದ ಮಾಡಿಲ್ಲವಲ್ಲ ?
left - ಇಲ್ಲಿ ಉಳಿದಿದೆ ಎನ್ನುವ ಬದಲು ಎಡಕ್ಕೆ ಎನ್ನುತ್ತಿದ್ದಾರೆ.
ಸಂಪದಿಗರು ಯಾರಾದರು Microsoft ನಲ್ಲಿ ಇದ್ದರೆ ಅವರ ಮೂಲಕ ನಾವು ಈ ಅನುವಾದಕ್ಕೆ ಸಹಾಯ ಮಾಡಬಹುದೇನೊ?
-ಸುಚರ
ಸಂಪದಿಗರಲ್ಲಿ ಮೈಕ್ರೋಸಾಫ್ಟ್ ನವರು
ಪವನಜರಿಗಿಂತ ಮೈಕ್ರೋಸಾಫ್ಟಿನವರು ಬೇಕೇ..
.
ಇವರು ಸಂಪದದಲ್ಲಿರುವುದು ನಮಗೆ ಒಳ್ಳೆಯದೇ. ನಾವು ಬಗ್ ಗಳನ್ನು ಫೈಲ್ ಮಾಡೋಣ. ಪವನಜರು ಈ ಹುಳುಗಳನ್ನು ಸಾಯಿಸುವುದರಲ್ಲಿ ನಮಗೆ ಸಹಾಯ ಮಾಡಬಹುದು.
ಅಂದ ಹಾಗೆ ಈ ಹುಳುಗಳು ಆ ಹುಳುಗಳಂತಾಗಿರದೆ ನಮ್ಮನ್ನೇ ಅಳಿಸುವ ಹುಳುಗಳಾಗಿವೆ. ನೋಡಿ ಈಗಾಗಲೇ ಪ್ರಶಾಂತ ಪಂಡಿತರನ್ನು ಭಯದಿಂದ ಎಲ್ಲಿಗೋ ಓಡಿಹೋಗುವಂತೆ ಮಾಡಿವೆ ಈ ಹುಳುಗಳು.
ಏನೇ ಆಗಲಿ ಪವನಜರ ಸಹಾಯವನ್ನು ನಿರೀಕ್ಷಿಸಬಹುದೇ?
Re: ಸಂಪದಿಗರಲ್ಲಿ ಮೈಕ್ರೋಸಾಫ್ಟ್ ನವರು
ಪವನಜರಿಗಿಂತ ಮೈಕ್ರೋಸಾಫ್ಟಿನವರು ಬೇಕೇ
ಏನೇ ಆಗಲಿ ಪವನಜರ ಸಹಾಯವನ್ನು ನಿರೀಕ್ಷಿಸಬಹುದೇ?
ದಯವಿಟ್ಟು ಈ ಪುಟ ನೋಡಿ. ಯಾರು ಈ ಮೈಕೇಲ್ ಕಪ್ಲಾನ್? ಉತ್ತರ ಇಲ್ಲಿದೆ. ನಾನು ಇನ್ನೇನೂ ಹೇಳುವ ಅಗತ್ಯವಿಲ್ಲ.
ಸಿಗೋಣ,
ಪವನಜ
Re: ಸಂಪದಿಗರಲ್ಲಿ ಮೈಕ್ರೋಸಾಫ್ಟ್ ನವರು
ಪವನಜರಿಗಿಂತ ಮೈಕ್ರೋಸಾಫ್ಟಿನವರು ಬೇಕೇ
ಏನೇ ಆಗಲಿ ಪವನಜರ ಸಹಾಯವನ್ನು ನಿರೀಕ್ಷಿಸಬಹುದೇ?
ದಯವಿಟ್ಟು ಈ ಪುಟ ನೋಡಿ. ಯಾರು ಈ ಮೈಕೇಲ್ ಕಪ್ಲಾನ್? ಉತ್ತರ ಇಲ್ಲಿದೆ. ನಾನು ಇನ್ನೇನೂ ಹೇಳುವ ಅಗತ್ಯವಿಲ್ಲ.
ಸಿಗೋಣ,
ಪವನಜ
ಮೈಕ್ರೋಸಾಫ್ಟ್ ನವರು ಪವನಜರ ಸಹಾಯದಿಂದಲೇ ಕನ್ನಡ ವಿಂಡೋಸ್ ತಯಾರು ಮಾಡಿದ್ದಾರೆ ಎಂದು ನಾನು ತಿಳಿದಿದ್ದೆ. ಅದು ಅಲ್ಲವೆಂದು ಈಗ ಅರಿವಾಯಿತು. ಈ ಕನ್ನಡ ವಿಂಡೋಸ್ ನಿಜವಾಗಿಯು ಬಗ್ ಪೂರಿತವಾಗಿದೆಯೇ? ಹಾಗಿದ್ದರೆ ನಾವು ಪ್ರತಿಭಟಿಸಲೇ ಬೇಕು. ಪವನಜರು ಕೊಟ್ಟ ಲಿಂಕ್‌ನಲ್ಲಿ ಮೈಕ್ರೊಸಾಫ್ಟ್ ನಲ್ಲಿ ಕೆಲಸಮಾಡುವ ಕಪ್ಲಾಕನ್ ಕೊಟ್ಟ ಉತ್ತರ ನಿಜಕ್ಕೂ ಧಿಮಾಕಿನದಾಗಿದೆ. ಇದಕ್ಕೆ ಎಲ್ಲಿ ಯಾರಿಗೆ ಪ್ರತಿಭಟಿಸಬೇಕು?
ಒಂದು ಬಹಿರಂಗ ಪತ್ರ ಬರೆಯೋಣ
ಪ್ರತಿಭಟಿಸಬೇಕು ಎಂದು ನಿರ್ಧರಿಸಿದರೆ ಪ್ರತಿಭಟಿಸಬಹುದು. ನಾವೆಲ್ಲಾ ಸೇರಿ ಒಂದು ಪಿಟಿಷನ್ ಸಿದ್ಧಪಡಿಸೋಣ. ಪಿಟಿಷನ್ ಆನ್ ಲೈನ್ ನಲ್ಲಿ ಇದನ್ನು ಮಾಡಬಹುದು. ಯಾರಾದರೊಬ್ಬರು ಪಿಟಿಷನ್ ಬರೆಯುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಕುರಿತಂತೆ ಎಲ್ಲಾ ಕನ್ನಡ ಪತ್ರಿಕೆಗಳಿಗೆ ಮಾಹಿತಿ ಒದಗಿಸೋಣ. ಪಿಟಿಷನ್ ಬರೆಯುವ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳಲೂ ಸಿದ್ಧ. ಆದರೆ ನನಗೆ ಈ ಎಲ್ಐಪಿ ಡೌನ್ ಲೋಡ್ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಉಳಿದವರು ಸಹಕರಿಸಬೇಕು.
ಇಸ್ಮಾಯಿಲ್.
Re: ಒಂದು ಬಹಿರಂಗ ಪತ್ರ ಬರೆಯೋಣ
ಇಸ್ಮಾಯಿಲ್.
ನಿಮ್ಮಲ್ಲಿ ಅಧಿಕೃತ ವಿಂಡೋಸ್ ಎಕ್ಸ್‌ಪಿ ಇದೆ ತಾನೆ? ಸರ್ವಿಸ್ ಪ್ಯಾಕ್-೨ ಇದೆ ತಾನೆ? ಇವೆರಡೂ ಇರಲೇಬೇಕು. ಡೌನ್‌ಲೋಡ್ ಪುಟದಲ್ಲಿ ಕೊಟ್ಟಿರುವ ಸಿಸ್ಟಂ ಅಗತ್ಯಗಳನ್ನು ಗಮನವಿಟ್ಟು ಓದಿ. ಬಹುಶಃ ನಿಮ್ಮಲ್ಲಿ ಸರ್ವಿಸ್ ಪ್ಯಾಕ್-೨ ಇಲ್ಲವೆಂದು ಕಾಣುತ್ತದೆ. ಅದನ್ನು windowsupdate.microsoft.com ತಾಣದಿಂದ ಇಳಿಸಿಕೊಳ್ಳಿ. ನಿಮಗೆ ನಿಮ್ಮ ಗಣಕಕ್ಕೆ ಯಜಮಾನನ ಹಕ್ಕುಗಳು (administrative previledges) ಇರತಕ್ಕದ್ದು.
ಸಿಗೋಣ,
ಪವನಜ
ಬಗ್‌ಗಳ ಪಟ್ಟಿ ಬರಲಿ
ನಿಮ್ಮ ಕಣ್ಣಿಗೆ ಬಿದ್ದ ದೋಷಗಳ ಪಟ್ಟಿಯನ್ನು ನನಗೆ ಕಳುಹಿಸಿ. ಪಟ್ಟಿ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ!
ಸಿಗೋಣ,
ಪವನಜ
-----------
Vishva Kannada
Think globally, Act locally
ಉ: ಎಡಕ್ಕೆ ? ಹೀಗಿರಬಹುದೇ.
ಒಂದು ಕಾರ್ಯಾಚರಣ ವ್ಯವಸ್ಥೆಯಲ್ಲಿನ ಎಲ್ಲಾ ಪದ/ವಾಕ್ಯಗಳನ್ನು ತರ್ಜುಮೆ ಮಾಡುವುದು ಸ್ವಲ್ಪ(??) ಕಷ್ಟವೇ ಸರಿ. ಹಾಗಾಗಿ ತರ್ಜುಮೆ ಮಾಡಲು ಯಾವುದೋ Tool ಬರ್ದಿದ್ದಾರೆ ಅನ್ನಿಸುತ್ತೆ.
ಈ ಕೆಳಗಿನ ವಾಕ್ಯ ಗಮನಿಸಿ.
Turn left,
Turn = ತಿರುಗಿ
left = ಎಡಕ್ಕೆ
ಆದ್ದರಿಂದ, Turn left = ಎಡಕ್ಕೆ ತಿರುಗಿ
ಗಮನಿಸಿ, ಎರಡನೆಯ ಇಂಗ್ಲೀಷ್ ಪದ ಕನ್ನಡದಲ್ಲಿ ಮೊದಲನೆಯದಾಗಿದೆ. ಈ ತಿರುಳನ್ನು ಇಟ್ಕೊಂಡು ಅವರು ತಮ್ಮ Algorithm ರೂಪಿಸಿರಬಹುದು.
ಅದರ ಪ್ರಕಾರ,
Estimated = ಅಂದಾಜು.
Time = ಸಮಯ
left = ಎಡಕ್ಕೆ.
ಆದರೆ ಇಲ್ಲಿ ಮತ್ತೊಂದು ಗಮನಿಸುವ ಅಂಶವೊಂದಿದೆ. ಇದನ್ನು ಯಾರಾದರು ಪೇಟೆಂಟ್ ಮಾಡಿದ್ದರೂ ಮಾಡಿರಬಹುದು. ಈ ಕಾಲದಲ್ಲಿ ಯಾವುದಕ್ಕೆ ಬೇಕಾದರೂ ಪೇಟೆಂಟ್ ಪಡೆದುಕೊಳ್ಳಬಹುದು ಯಾರೂ ಆಕ್ಷೇಪಣೆ ಸಲ್ಲಿಸದಿದ್ದರೆ.
left ಅನ್ನುವ ಪದಕ್ಕೆ ಎಷ್ಟೋ ಅರ್ಥವಿದೆ ಅಲ್ಲವೇ. ಎಡಕ್ಕೆ, ಬಿಟ್ಟುಹೋಗಿರುವ, ಉಳಿದುಕೊಂಡಿರುವ, ಹೋಗುವುದು ಇತ್ಯಾದಿ.
ಆದರೆ ಎಡಕ್ಕೆ ಅನ್ನುವ ನಾಮಪದ left ಬೇರೆ ಕ್ರಿಯಾಪದದ ಜೊತೆಗೆ ಬರುತ್ತದೆ. ನಾಮಪದ left ಅನ್ನು ಎಡಕ್ಕೆ ಎಂದು ಅನುವಾದ ಮಾಡಬಹುದು.
ಹಾಗಾಗಿ turn left ಎನ್ನುವ ಕಡೆ, turn ಈಗಾಗಲೆ ಕ್ರಿಯಾಪದವಾಗಿರುವುದರಿಂದ left ನಾಮಪದವಾಗಿರಬಹದು ಎಂದು ತೀರ್ಮಾನಿಸಿ ಅದನ್ನು ಎಡಕ್ಕೆ ತಿರುಗು ಎಂದು ಹೇಳಬಹುದು.
ಉಳಿದಿದೆ(ಇದು ಈಗಾಗಲೇ ಕ್ರಿಯಾಪದವಾಗಿದೆ) ಎನ್ನುವ left, ಬೇರೆ ಯಾವುದಾದರು ನಾಮಪದದ ಜೊತೆಗೆ ಬರುತ್ತದೆ.
ಉದಾ : He left = ಅವನು ಹೋದ.
ಈ ಸೂತ್ರ ತಪ್ಪಾಗಿರಲೂ ಬಹುದು ಅಥವಾ ಅಸಂಪೂರ್ಣವೂ ಆಗಿರಬಹುದು. ವೈಯಾಕರಣಿ ಭಾಗವಹಿಸಿದರೆ ಸ್ವಲ್ಪ ಸುಲಭವಾಗುವುದು.
Estimated time (ಇದು ಸ್ವಲ್ಪ ತರಲೆ ಪದ. Estimated ಕ್ರಿಯಾಪದ, time = ನಾಮಪದ, Estimated time = ನಾಮಪದ. ಆದ್ದರಿಂದ ಇಲ್ಲಿ left ಕ್ರಿಯಾಪದವೋ, ನಾಮಪದವೋ ಎಂದು ಆ Tool ಗೆ ಗೊತ್ತಾಗದೆ, random ಆಗಿ ತೀರ್ಮಾನಿಸಿ ಈ ನಿರ್ಣಯಕ್ಕೆ ಬಂದಿರಬಹುದೇ...????
ಎನೇ ಆದರೂ.......ಬಲ್ಲವರೇ ಹೇಳಬೇಕು. ಹರ ಹರಾ ಮೈಕ್ರೋಸಾಫ್ಟೇಶ್ವರಾ......
ಬಲ್ಲವನೇ ಬಲ್ಲ ಬೆಲ್ಲದ ಸವಿಯಾ..............