ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಆತ್ಮೀಯರೆ,
ಕನ್ನಡ ಪ್ರಭದ ಪತ್ರಿಕೆಯಲ್ಲಿ ನನ್ನ ಹೊಸ ಅಂಕಣ "ಗಣಕಿಂಡಿ" ಇಂದಿನಿಂದ ಪ್ರಾರಂಭವಾಗಿದೆ. ಅದರಲ್ಲಿ ಒಂದು ಜಾಲತಾಣ, ಉಪಯುಕ್ತ ಡೌನ್‌ಲೋಡ್, ಸ್ವಾರಸ್ಯಕರ ಸುದ್ದಿ, ಸಲಹೆ ಮತ್ತು ಜೋಕುಗಳಿವೆ. ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಅಂತರಜಾಲದಲ್ಲಿ ಓದುವವರಿಗೆ ಕೊಂಡಿಗಳು-
PDF ಆವೃತ್ತಿ - http://www.kannadaprabha.com/pdf/epaper.asp?pdfdate=5/18/2009
Text ಆವೃತ್ತಿ (MS IE only) - http://www.kannadaprabha.com/NewsItems.asp?ID=KPT20090517224815
ಸಿಗೋಣ,
ಪವನಜ
- pavanaja's blog
- Login or register to post comments
- 748 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಪವನಜರೇ,
ಗಣಕಿ೦ಡಿ ಚೆನ್ನಾಗಿದೆ. ಝೊಟೆರೊ ಕೊ೦ಡಿ www.Zetero.org ಬದಲಾಗಿ www.zotero.org ಎ೦ದಾಗಬೇಕು.
-amg
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಡಾ.ಪವನಜರೇ, ಅಂಕಣ ಚೆನ್ನಾಗಿದೆ .
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಧನ್ಯವಾದಗಳು. ಲೇಖನದ ವಿನ್ಯಾಸ ನಿಜಕ್ಕೂ ಚೆನ್ನಾಗಿದೆ. ಕನ್ನಡಪ್ರಭಕ್ಕೆ ಸತತವಾಗಿ ಪುಟವಿನ್ಯಾಸಕ್ಕೆ ಪ್ರಶಸ್ತಿ ಬರುತ್ತಿರುವುದು ಸುಮ್ಮನೆ ಅಲ್ಲ!
-ಪವನಜ
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಪವನಜರೇ, ಲೇಖನ ನನ್ನಂತಹ ಕಂಪ್ಯೂಟರ್ ಅಜ್ಞಾನಿಗಳಿಗೆ ಸಹಾಯಕವಾಗಿದೆ. ಮಾಹಿತಿಯುಕ್ತ ಲೇಖನ ನೀಡಿರುವುದಕ್ಕೆ ಧನ್ಯವಾದಗಳು.
ಕನ್ನಡ ಪ್ರಭದ ಪುಟವಿನ್ಯಾಸ
ಅವರಿಗೆ ಪ್ರಶಸ್ತಿ ಬರುತ್ತಿರುವುದು ಹೌದು.
ಅವರದೇ "ಸಖಿ" ಅನ್ತ ಒಂದು ಪಾಕ್ಷಿಕಪತ್ರಿಕೆ ಇದೆ, ಪುಟ ವಿನ್ಯಾಸದಲ್ಲಿ ಅದು ಇನ್ನೂ ಸಕ್ಕತ್.
ಪ್ರೀತಿಯಿಂದ
ಸಿ ಮರಿಜೋಸೆಫ್
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ನಾನು zotero ಎಂದೆ ನಮೂದಿಸಿದ್ದೆ. ನಾನು ಜಾಲತಾಣ ವಿಳಾಸಗಳನ್ನು ಎಂದಿಗೂ ಲೇಖನದಲ್ಲಿ ಬೆರಳಚ್ಚು ಮಾಡುವುದೇ ಇಲ್ಲ. ನೇರವಾಗಿ ಜಾಲತಾಣದಿಂದ Ctrl-C Ctrl-V ಮಾಡುತ್ತೇನೆ. ಆದುದರಿಂದ ತಪ್ಪುಗಳಾಗಲು ಸಾಧ್ಯವಿಲ್ಲ. ಕನ್ನಡಪ್ರಭದವರಿಗೆ ನಾನು ಯಾವ ತಂತ್ರಾಂಶ ಬಳಸಿ ಲೇಖನ ತಯಾರಿಸಿ ಕಳುಹಿಸಿದರೂ ಅದನ್ನು ಮತ್ತೆ ಬೆರಳಚ್ಚು ಮಾಡಬೇಕಾಗುತ್ತದೆ. ಯಾಕೆಂದರೆ ಅವರು ತಮ್ಮದೇ ಆದ ತಂತ್ರಜ್ಞಾನವನ್ನು ಬಳಸುತ್ತಾರೆ. ಅದರಲ್ಲಿ ಇತರೆ ತಂತ್ರಾಂಶಗಳಿಂದ import ಸವಲತ್ತು ಇಲ್ಲ.
-ಪವನಜ
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಡಾಕ್ಟರೇ, ನೀವೂ ಅಶೋಕ್ ಕುಮಾರೂ ಅಣ್ಣಾ ತಮ್ಮಂದಿರ ಹಾಗೇ ಕಾಣ್ತಿದೀರಲ್ಲಾ ???? :)
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಚಿತ್ರ ಬಿಡಿಸಿದ ಕೈ ಒಂದೇ ಇರಬೇಕು....(ಪಕ್ಕು) ಅಲ್ವೇ?
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಕರೆಕ್ಟು... ವ್ಯಂಗ್ಯಭಾವಚಿತ್ರ ರಚಿಸಿದವರು ಪ್ರಕಾಶ್ ಶೆಟ್ಟಿ.. ಹಾಗಾಗಿ ಹೋಲಿಕೆ ಬಂದಿರಬಹುದು :)
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
ಈ ಲೇಖನಗಳಿಗೆಂದೇ ಒಂದು ಬ್ಲಾಗ್ ತಾಣ ಮಾಡಿದ್ದೇನೆ. ಅದರ ವಿಳಾಸ - http://ganakindi.blogspot.com
ಉ: ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ
Ankan tumba chennagide. thanksfor information ofvarous websites.