ಕನ್ನಡಿಗರು ಯಾವಾಗಲೂ ಹಿಂಬಾಲಕರಲ್ಲ
ಗೂಗಲ್ ಅರ್ಥ್ ಬಗ್ಗೆ ನನ್ನ ಲೇಖನ ಎರಡು ವಾರಗಳ ಹಿಂದಿನ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಸಂಪದ ಓದುಗರಲ್ಲಿ ಹಲವರು ಅದನ್ನು ಓದಿದ್ದೀರಾ ಮತ್ತು ಮೆಚ್ಚಿಕೊಂಡಿದ್ದೀರಾ. ಈಗ ನಾನು ಹೇಳ ಹೊರಟಿರುವುದು ಆ ಲೇಖನದ ಬಗ್ಗೆ ಅಲ್ಲ. ಸಾಮಾನ್ಯವಾಗಿ ಕನ್ನಡ ಪತ್ರಿಕೆಗಳು (ಕನ್ನಡಿಗರು ಕೂಡ) ಹಿಂಬಾಲಕರಾಗಿರುವುದೇ ಹೆಚ್ಚು. ವಿಜ್ಞಾನ ತಂತ್ರಜ್ಞಾನದ ಲೇಖನಗಳ ವಿಷಯದಲ್ಲಂತೂ ಇದು ಇನ್ನೂ ಹೆಚ್ಚು. ಅದು ಹೇಗೆಂದರೆ ಒಂದು ಹೊಸ ವಿಷಯದ ಬಗ್ಗೆ ಇಂಗ್ಲೀಶಿನ ಎಲ್ಲ ಪತ್ರಿಕೆಗಳಲ್ಲಿ ಲೇಖನ ಬಂದ ನಂತರವೇ ಕನ್ನಡ ಪತ್ರಿಕೆಗಳಲ್ಲಿ ಲೇಖನ ಬರುವುದು. ಆದರೆ ಗೂಗಲ್ ಅರ್ಥ್ ವಿಷಯದಲ್ಲಿ ಇದು ತಿರುವುಮುರುವಾಗಿದೆ. ಇಂದಿನ (೨೧/೯/೨೦೦೫) ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಗೂಗಲ್ ಅರ್ಥ್ ಬಗ್ಗೆ ಚಿಕ್ಕದಾಗಿ ಒಂದು ಲೇಖನ ಬಂದಿದೆ. ಅಂದರೆ ಅವರು ಕನ್ನಡ ಪತ್ರಿಕೆಗಿಂತ ಎರಡು ವಾರ ಹಿಂದೆ ಇದ್ದಾರೆ ಎಂದಾಯಿತು. ಇದು ಹೆಮ್ಮೆಯ ವಿಷಯವಲ್ಲವೇ? ಏನಂತೀರಾ?
ಸಿಗೋಣ,
ಪವನಜ

- pavanaja ರವರ ಬ್ಲಾಗ್
- Login or register to post comments
- 1016 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಓಹೋ
ಓಹೋ, ಡೆಕ್ಕನ್ ಹೆರಾಲ್ಡಿನಲ್ಲಿ ಬಂದಿದೆಯೋ? ಎಲ್ಲಿ, ಲಿಂಕ್ ಕೊಡಿ ಓದೋಣ!
ಇನ್ನು ನೀವು ಪ್ರಸ್ತಾಪಿಸಿರುವ ವಿಷಯಕ್ಕೆ ಬಂದರೆ, ನಿಮಗೇನೋ ಪತ್ರಿಕೆಯವರ ಪರಿಚಯ, ಅವರಿಗೂ ನಿಮ್ಮ ಪರಿಚಯ. ನೀವು ಹೊಸ ತಂತ್ರಜ್ಞಾನದ ಬಗ್ಗೆ ಬರೆಯುತ್ತೀರಿ, ಆದ್ದರಿಂದ ಅವರಿಗೂ ಹಾಕಲು, ಪ್ರಕಟಿಸಲು ಸುಲಭವಾಯ್ತು. ಬರೆದು ಕೊಡುವವರೇ ಇಲ್ಲದಾಗ ಅವರೇನು ಹಾಕುವರು? ಕೆಲವೊಮ್ಮೆ ನಮ್ಮ ಕನ್ನಡ ಮಾಧ್ಯಮಗಳು ಬರೆದುಕೊಟ್ಟು ಕಳುಹಿಸಿದರೂ ಎಂಟರ್ಟೇಯ್ನ್ ಮಾಡೋದಿಲ್ಲ. ಏನು ಕಥೆಯೋ ತಿಳಿಯದು (ನನಗಾದ ಅನುಭವದಿಂದ).
--
"ಹೊಸ ಚಿಗುರು, ಹಳೆ ಬೇರು"
ಕನ್ನಡ ಪತ್ರಿಕೆಯೂ ಹಿಂದೆ
ಗೂಗಲ್ ಆರ್ಥ್ ಬಗ್ಗೆ 'ದಿ ಹಿಂದೂ' ನಲ್ಲಿ ಸುಮಾರು ಒಂದು ತಿಂಗಳ ಹಿಂದೆಯೇ ಬಂದಿತ್ತು.
ಕೊನೇ ಪುಟದಲ್ಲಿ ರಾಷ್ಟ್ರಪತಿ ಭವನದ ಚಿತ್ರ ಕೂಡ ಪ್ರಕಟವಾಗಿತ್ತು.
ಹಿಂದೂ ಪತ್ರಿಕೆಯವರಿಗೆ ವಿಜ್ಞಾನದ ವಿಷಯಗಳ ಬಗ್ಗೆ ವಿಶೇಷ ಕಾಳಜಿ.
ನನ್ನದೊಂದು ಕಹಿ ಅನುಭವ ಹೇಳಲೆ?
ನಾನು ಒಂದೂವರೆ ವರ್ಷದ ಹಿಂದೆ ಒಂದು ಅಂತರಜಾಲ ಆಧಾರಿತ, ತಂತ್ರಾಂಶ ಕುರಿತ ಲೇಖನ ಬರೆದು ವಿಜಯ ಕರ್ನಾಟಕಕ್ಕೆ ಕಳಿಸಿದೆ. ಅರ್ಥವೇ ಆಗಲ್ಲ ಎಂದು ವಾಪಸಾಯ್ತು. ತರಂಗಕ್ಕೆ ಕಳಿಸಿದೆ. ಅಲ್ಲಿಂದಲೂ ಮರಳಿತು. ಆಮೇಲೆ ಅದನ್ನು ಸುಧಾಗೆ ಕೊಟ್ಟೆ. ಅಲ್ಲಿನ ಸಂಪಾದಕರು (ಈಗ ಇರುವ ನಾಗೇಶ್ ಹೆಗಡೆ ಅಲ್ಲ ಮಾರಾಯ್ರೆ!) ಒಮ್ಮೆ ನನ್ನನ್ನು ಕಚೇರಿಗೆ ಕರೆದು ಎಲ್ಲ ವಿಚಾರಿಸಿದರು. ಆಮೇಲೆ ಅಲ್ಲಿಂದಲೂ ವಾಪಸಾಯಿತು. ನನ್ನ ಮಟ್ಟಿಗೆ ಅದು ಒಳ್ಳೆಯ ಕುತೂಹಲಕರ ಮಾಹಿತಿಯಾಗಿತ್ತು. ಅದರ ಸಂಶೋಧಕನ ಸಂದರ್ಶನವೂ ಅದರಲ್ಲಿತ್ತು. ಕನ್ನಡದ ಮಟ್ಟಿಗೇನು, ಒಟ್ಟಾರೆ ತಾಜಾ ಮಾಹಿತಿಯೇ.
ಈಗಲೂ ಅದು ತಾಜಾ ಆಗೇ ಉಳಿದಿದೆ. ಯಾಕಂದ್ರೆ ಅದು ಗೂಗಲ್ ಅರ್ಥ್ ನಷ್ಟು ಜನಪ್ರಿಯವಲ್ಲದಿದ್ದರೂ ನವೀನ ವಿಷಯ. ಬೇರಾವ ಪತ್ರಿಕೆಯಲ್ಲೂ ಈ ವಿಷಯ ಬಂದಂತೆ ನನಗೆ ಕಂಡಿಲ್ಲ.
ಯಾಕೆ ವಿಷಯ ಹೇಳಲ್ಲ ಅಂದ್ರೆ, ಅದನ್ನು ಮುದ್ರಣ ಮಾಧ್ಯಮದಲ್ಲಿ ಪ್ರಕಟಿಸಿಯೇ ಬಿಡಬೇಕೆಂಬ ಆಸೆ. ಪವನಜರೆ, ನಿಮಗೆ ಅದರ ಪ್ರತಿಯನ್ನು ಕಳಿಸ್ತಾ ಇದೇನೆ. ಒಳ್ಳೆ ಲೇಖನ ಬರೆದ ನೀವೇ ನನ್ನ ಲೇಖನವನ್ನು ಪರಾಮರ್ಶಿಸಿ. ನಿಮಗೂ ಈ ಲೇಖನ ಹೊಸತು, ಒಳ್ಳೆಯದು ಎಂದೆನಿಸಿದರೆ, ತಿಳಿಸಿ. ಕಟುವಿಮರ್ಶೆ ಸ್ವಾಗತಾರ್ಹ!!
ಇಲ್ಲೇ ಪ್ರಕಟಿಸಿ
ನೀವು ಸಂಪದದಲ್ಲೇ ಏಕೆ ಪ್ರಕಟಿಸಬಾರದು. ನಿಮ್ಮ ಬ್ಲಾಗ್ ನಲ್ಲೇ ಹಾಕಿ ಮಾರಾಯರೆ. ಎಲ್ಲರಿಗೂ ಲಭ್ಯವಾಗುವುದು. ಮುದ್ರಣ ಆವೃತ್ತಿಯಲ್ಲೇ ನಿಮ್ಮ ಲೇಖನ ಪ್ರಕಟಿಸಬೇಕೆಂಬ ನಿಮ್ಮ ಆಸೆಯ ಬಗ್ಗೆ ಏನೂ ಹೇಳಲಾರೆ.
ಅಲ್ಲಿ ಇಲ್ಲಿ ಯಾಕೆ
ಅಲ್ಲಿ ಇಲ್ಲಿ ಯಾಕೆ ಸಾರ್. ನಿಮ್ಮ ಬ್ಲಾಗ್‍ನಲ್ಲೂ ಹಾಕಿ, ಸಂಪದದ ಮುಖಪುಟದಲ್ಲೂ ಇರಿಸಿ. ನಿಮ್ಮ ಲೇಖನಗಳೆಲ್ಲವೂ ಬಹಳ ಚೆನ್ನಾಗಿರುತ್ತವೆ. ನಾನಂತೂ ಓದಲು ಕಾಯ್ತಿದ್ದೀನಿ.
ಒಂದು ವಿಷಯ ಹೇಳಲೇ? ಸಂಪದ ಇರುವುದೇ ನಮ್ಮೆಲ್ಲರಿಗಾಗಿ. ನಾವೆಲ್ಲರಿರುವುದೇ ಸಂಪದಕ್ಕಾಗಿ. ತಕ್ಷಣ ಏರಿಸಿ ಸಾರ್.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
ಯಾಕೆ ಅಂದ್ರೆ
ಯಾಕೆ ಅಂದ್ರೆ ಅಂತರಜಾಲದ ವಿಷಯ ಮುದ್ರಣ ಮಾಧ್ಯಮದಲ್ಲಿ ಪ್ರಕಟವಾಗಬೇಕು, ಇದು ಕೊಡುಕೊಳ್ಳುವಿಕೆಯ ಹಾದಿಯಲ್ಲಿ ಸಾಗಬೇಕು ಅಂತ. ಇಷ್ಟಾಗಿಯೂ ನನಗೆ ಈಗ ಇಲ್ಲೇ ಪ್ರಕಟಿಸಬೇಕು ಅನ್ನಿಸಿದೆ. ಇಂದು ಸಂಜೆ ನೋಡಿ.
ಕೊಂಡು ಓದುವ ಹವ್ಯಾಸ
ಅಂತರಜಾಲದಲ್ಲಿಯೂ ಬೇಕಿದ್ದಲ್ಲಿ ಕೊಂಡುಕೊಳ್ಳುವ ಹವ್ಯಾಸ, ಹಣ ನೀಡಿ ಓದುವ ಹವ್ಯಾಸ ಬೆಳೆಸಬಹುದು. ಆದರದಕ್ಕೆ ಬಹುವಾಗಿ ಒಳ್ಳೆಯ ಕ್ವಾಲಿಟಿ ಲೇಖನಗಳು ಬೇಕಾಗಬಹುದು, ರೆಗ್ಯುಲರ್ ಆಗಿ ಬರೆಯುವವರ ಒಂದು ತಂಡ ಬೇಕಾಗಬಹುದು. ಅಷ್ಟೇನೂ ಆರ್ಥಿಕ ಪರಿಸ್ಥಿತಿ ಚೆನ್ನಾಗಿರದ ನಮ್ಮ ಲೇಖಕ ವೃಂದದ ಹಲವರಿಗೆ ಉಪಯೋಗವಾಗುವುದು ಎಂಬುದಾದರೆ ಅವರುಗಳಿಗೆ ಒಂದಷ್ಟು ಹಣ ಕಲ್ಪಿಸುವಂತಹ ಪುಟವೊಂದನ್ನೂ ಬೇಕಾದರೆ ಸಂಪದಕ್ಕೆ ಸೇರಿಸಲು ನಾನು ರೆಡಿ. ಅದನ್ನು ಪ್ರೋತ್ಸಾಹಿಸುವುದಕ್ಕೆ ನಾನೂ ಸೇರಿದಂತೆ ಇಲ್ಲಿರುವ ಹಲವರು ಮುಂದೆ ಬರುವುದು ಖಂಡಿತ..
ಅಲ್ಲದೇ ನಮ್ಮ ಭಾರತೀಯರಲ್ಲಿ 'ಡೊನೇಶನ್' ಅಥವಾ 'ದೇಣಿಗೆ' ಪದ್ಧತಿ ಹೊಸತು. ನಾನು ಬರೆದಿಟ್ಟ ಹೋಪ್ಲೆಸ್ ವರ್ಡ್ ಪ್ರೆಸ್ ಥೀಮಿಗೇ ಸರಿ ಸುಮಾರು ಈಗ ಸಂಪದಕ್ಕೆ ಬಂದಿರುವಷ್ಟು ದೇಣಿಗೆ ಬಂದಿದೆಯೆಂದರೆ ನಂಬುತ್ತೀರ?
ದಿಸ್ ಇಸ್ 'ವೆಸ್ಟ್' ಫಾರ್ ಯೂ.
ಇನ್ನು ಸಂಪದ ಬೆಳೆಯುತ್ತಿರುವ ರೀತಿ ನೋಡಿದರೆ ಖಂಡಿತ ನಾವುಗಳು ಬರಿಯ ದೇಣಿಗೆಯನ್ನೇ ಆಧರಿಸಿ ಬಹಳಷ್ಟು ದಿನ ನಡೆಯೋದು ಕಷ್ಟವೆನಿಸುತ್ತಿದೆ. ಮುಂಬರುವ ಕೆಲವು ತಿಂಗಳುಗಳು ಏನೂ ಚಿಂತೆಯಿಲ್ಲದಿದ್ದರೂ, ಮತ್ತೇನಾದರೂ ಹಣದ ಮೂಲವನ್ನು ಮುಂದೆ ಆಧರಿಸಲೇಬೇಕಾಗಬಹುದು.
- ಹೆಚ್ ಪಿ
--
"ಹೊಸ ಚಿಗುರು, ಹಳೆ ಬೇರು"
ಒಳ್ಳೆಯ ಪ್ರಗತಿ
ಜಗತ್ತಿನಾದ್ಯಂತ ಇ-ಪತ್ರಿಕೆಗಳನ್ನು ನೋಡಲು ಚಂದಾವನ್ನು ನೀಡಬೇಕು. ನಮ್ಮ ದೇಶದಲ್ಲಿ ಮಾತ್ರವೇ ಪುಕ್ಕಟೆ ಊಟ ಸಿಗುತ್ತಿರುವುದು. ನಮ್ಮಲ್ಲೂ ಚಂದಾ ಕೊಟ್ಟು ಓದುವಂತಿದ್ದರೆ, ಒಳ್ಳೆಯ ಲೇಖಕರಿಗೆ ಪ್ರೋತ್ಸಾಹವನ್ನೂ ನೀಡಿದಂತೆ ಆಗುವುದು ಮತ್ತು ಪುಕ್ಕಟೆ ಓದುಗರಿಗೆ ಸೀರಿಯಸ್‍ನೆಸ್ ಬರುವುದು. ಈ ರೀತಿ ಮಾಡುವುದು ಪ್ರಗತಿಯ ಕೆಲಸ ಎಂದು ನಾನೆಣಿಸಿರುವೆ. ಈ ದಿಸೆಯಲ್ಲಿ ನಾಡಿಗರ ಚಿಂತನೆಯನ್ನು ನಾನು ಅನುಮೋದಿಸುವೆ.
ನೀವೇನಂತೀರಾ ಸಾರ್.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
ಇನ್ನೂ ಬಹಳ ಸಿದ್ಧತೆ ಬೇಕು
ಈ ಪತ್ರಿಕೆಯಂತೆ ಸಂಪದ ರೂಪುಗೊಳ್ಳುವುದು ಒಳ್ಳೆಯದೇ. ಅದಕ್ಕೆ ಚಂದಾದಾರು ಆಗುತ್ತಾರೆಂದರೆ ಅದಕ್ಕಿಂತ ಸಂತೋಷದ ಅಚ್ಚರಿ ಬೇರೆ ಇಲ್ಲ. ಹಾಗಾಗುವುದು ಖಂಡಿತ ಸ್ವಾಗತಾರ್ಹ. ಅದಕ್ಕೆ ಮುನ್ನ ಸಂಪದದ ತಿರುಳು ಇನ್ನಷ್ಟು ಉಪಯುಕ್ತವೂ ಸದೃಢವೂ ಆಗಬೇಕು. ಬರೆಯುವವರು ಹೆಚ್ಚಬೇಕು, ಬರವಣಿಗೆಯ ವೈವಿಧ್ಯವೂ ಹೆಚ್ಚಬೇಕು. ಬೇಗನೆ ಹಾಗೆ ಆಗಲಿ ಎಂದು ಹಾರೈಕೆ. ಬೇರೆ ಎಲ್ಲೂ ದೊರೆಯದ್ದು ಸಂಪದದಲ್ಲಿ ಸಿಗುತ್ತದೆ ಅನ್ನುವಂಥ ಐಡೆಂಟಿಟಿ ಸಂಪದಕ್ಕೆ ಬರಬೇಕು.
ನಿಜವಾದ ಮಾತು
ಆದರೂ ಸಂಪದವನ್ನು ಈ-ಪೇಪರ್ ತರಹ ಮಾಡಿದರೆ ಅದರ ಉದ್ದೇಶವೇ ಬದಿಗೊತ್ತಿದಂತೆ. "ಹೆಚ್ಚು ಕನ್ನಡಿಗರು ಕನ್ನಡದಲ್ಲಿ ಬರೆಯಬೇಕು" ಎಂಬುದು ಉದ್ದೇಶ. ಆದ್ದರಿಂದ ಸಂಪದವನ್ನು ಸಂಪೂರ್ಣ ಈ-ಪೇಪರ್ ಮಾಡುವ ಉದ್ದೇಶವಿಲ್ಲ. ಬೇಕಿದ್ದಲ್ಲಿ (ಲೇಖಕರಿಗೆ ಸಹಾಯವಾಗುವುದು ಎಂದಾದರೆ ಮಾತ್ರ) ಯಾವುದಾದರೂ *ಒಂದು ಪುಟ ಮಾತ್ರ* "ಕೊಂಡು" ಓದುವಂತೆ ಮಾಡಬಹುದು.
--
"ಹೊಸ ಚಿಗುರು, ಹಳೆ ಬೇರು"