ಬೇಳೂರು ಸುದರ್ಶನರಿಗೆ ಅಭಿನಂದನೆಗಳು
ಸಂಪದದಲ್ಲಿ ಸದಸ್ಯರಾಗಿರುವ ಬೇಳೂರು ಸುದರ್ಶನರನ್ನು ಲಕ್ನೋದ ಪ್ರತಾಪ ನಾರಾಯಣ ಮಿಶ್ರಾ ಸ್ಮಾರಕ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಇಂದಿನ (ಸಪ್ಟೆಂಬರ್ 24, 2005) ಕನ್ನಡಪ್ರಭದಲ್ಲಿ ಸುದ್ದಿ ಬಂದಿದೆ. ಕನ್ನಡಪ್ರಭ ಪತ್ರಿಕೆಯ ಅಂತರಜಾಲ ತಾಣದ ಒಂದು ತೊಂದರೆಯೆಂದರೆ ನಾನು ಇಲ್ಲಿ ಕೊಟ್ಟಿರುವ ಲಿಂಕ್ಅನ್ನು ನೀವು ಈ ದಿನವೇ (24/9/05) ಕ್ಲಿಕ್ ಮಾಡಿ ಓದಬೇಕು. ನಾಳೆಗೆ ಅದು ದೊರೆಯಲಾರದು. ಬೇಳೂರು ಸುದರ್ಶನ ಅವರ ಬ್ಲಾಗ್ ಸೈಟ್ ಇಲ್ಲಿದೆ. ಬೇಳೂರು ಸುದರ್ಶನ ಅವರು ವಿಜಯ ಕರ್ನಾಟಕ ಪತ್ರಿಕೆಯ ಮ್ಯಾಗಝಿನ್ ವಿಭಾಗದ ಸಂಪಾದಕರಾಗಿದ್ದಾಗ ಅವರು ನನ್ನಿಂದ eಳೆ ಎಂಬ ಹೆಸರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಕಾಲಂ ಬರೆಸುತ್ತಿದ್ದರು. ಅದು ತುಂಬ ಜನಪ್ರಿಯವೂ ಆಗಿತ್ತು.
ಬೇಳೂರು ಸುದರ್ಶನ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಸಿಗೋಣ,
ಪವನಜ

- pavanaja ರವರ ಬ್ಲಾಗ್
- Login or register to post comments
- 996 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಮೊದಲೇ ತಿಳಿದಿತ್ತು!
ಈ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಲಕ್ನೌಗೆ ಹೋದಾಗ ನನಗೊಂದು ಹಿಂದುಸ್ತಾನಿ ಕೊಳಲು ಕೊಂಡು ತನ್ನಿ ಎಂದೂ ಅವರನ್ನ ಗೋಳು ಹೊಯ್ದುಕೊಂಡದ್ದಾಯ್ತು
ಎಂಥಕ್ಕೂ, ಇನ್ನೊಮ್ಮೆ ಅಭಿನಂದನೆಗಳು, ಬೇಳೂರು ಸುದರ್ಶನರಿಗೆ.
--
"ಹೊಸ ಚಿಗುರು, ಹಳೆ ಬೇರು"
ಇನ್ನೂ ಬರಲಿ
ಧನ್ಯವಾದಗಳು ಸುದರ್ಶನ್ ಅವರೇ. ಆ ಸರ್ವಶಕ್ತನು ನಿಮಗೆ ಇನ್ನೂ ಹೆಚ್ಚಿನ ಮಾನ ಸಮ್ಮಾನಗಳನ್ನು ಕೊಟ್ಟು ಕಾಪಾಡಲಿ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
ಬೇಳೂರು
ಬೇಳೂರು ಸುದರ್ಶನ ಅವರ ಚೀನೀ ಭಾಷೆಯ ಬಾಂಧವ್ಯ ಸಂಪದದಲ್ಲಿ ಕಂಡಾಗಲೇ "ತನ್ನ
ಕೆಲಸವನ್ನು ತುಂಬ ಹಚ್ಚಿಕೊಳ್ಳುವವರಿವರು" ಅಂತ ನಾನಂದುಕೊಂಡಿದ್ದೆ. ಬಂದಿರುವ ಪ್ರಶಸ್ತಿ
ಬಗ್ಗೆ ಅವರಿಗೆ ಅಭಿನಂದನೆಗಳು ಹಾಗೂ ಇದು ಅವರ ಉತ್ಸಾಹವನ್ನು ಇನ್ನಷ್ಟು ವೃದ್ಧಿಸಲಿ ಎಂಬುದೇ
ನಮ್ಮೆಲ್ಲರ ಆಶಯ
ಗೋಪೀನಾಥ ರಾವ್.