A quick brown fox... -ಕನ್ನಡದಲ್ಲಿ
ಗಣಕ ಬಳಸುವವರೆಲ್ಲ ಒಮ್ಮೆಯಾದರೂ ಗಮನಿಸಿರಬಹುದಾದ ಒಂದು ವಾಕ್ಯವಿದೆ. ಅದು A quick brown fox jumps over the lazy dog. ಇದರಲ್ಲಿ ಇಂಗ್ಲಿಷ್ ಭಾಷೆಯ ಎಲ್ಲ ಅಕ್ಷರಗಳಿವೆ. ಅಂತಹುದೇ ವಾಕ್ಯ ಕನ್ನಡಕ್ಕೆ ಬೇಡವೇ? ಇಗೋ ಈಗ ಅದೂ ಸಿದ್ಧವಾಗಿದೆ. ಹೆಚ್ಚಿನೆ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ಸಿಗೋಣ,
ಪವನಜ

- pavanaja ರವರ ಬ್ಲಾಗ್
- Login or register to post comments
- 687 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

RSS:
ಪ್ರತಿಕ್ರಿಯೆಗಳು
ಅನಿಸಿಕೆ: A quick brown fox... -ಕನ್ನಡದಲ್ಲಿ
ಪವನಜರವರೆ,
ಈ ಪದ್ಯದ ಅರ್ಥವನ್ನೂ ಶ್ರೀ.ಗಣೇಶ್ ಅವರಿಂದ ಬರೆಯಿಸಿ ಪ್ರಕಟಿಸುತ್ತೀರಾ? ಅರ್ಥದ ಜತೆಗೆ ಓದುವುದು ಇನ್ನೂ ಚೆನ್ನಾಗಿರುತ್ತದೆ ಎನಿಸಿತು.
- ಶ್ಯಾಮ್ ಕಿಶೋರ್
ಹಳಗನ್ನಡದ ಱ ಮತ್ತು ೞ ಇರಲಿ
ಅದರಲ್ಲಿ ಹಳಗನ್ನಡದ ಱ ಮತ್ತು ೞ ಗಳು ಇದ್ದರೆ ಇನ್ನೂ ಚಂದ?
ಅಂದಹಾಗೆ ಮಹಾಪ್ರಾಣಗಳು, ಋ, ಷ, ಶ ಇರಲೇ ಬೇಕಾ? ಹಾಗದರೆ ಬರಿ ಕನ್ನಡದ ಪದಗಳಿಂದ ಅಂತಹ ಸಾಲು ಬರೆಯಲಾಗುದು.!!
ಪದಗಳ % ಕನ್ನಡದ್ದಕ್ಕಿಂತ ಸಂಸ್ಕೃತದ್ದೇ ಹೆಚ್ಚಿರುತ್ತದೆ.
ಆದರೂ.....
ಗಾಢಾಂಧಕಾರದೊಳು ನಟನ ಪಟು ಮೇಘ ಸಖಿ
ಸಞ್ಚಲಿಸೆ, ಬೆಳಕು ಝರಿಯಂತೆ ಹರಿದಾಡಿ ಮೂಡಿ
ಜೀವ ಭಙ್ಗಿಯ ಜಾಣ್ಮೆ ಕಥಿಸೆ ಕೌಶಲ ಕೇಳಿ
ಫಲವೊ ಛಲರಹಿತ ರಸನಿಷ್ಠೈಕ ಮೋದಕೃತಿಯೇ
ಇಲ್ಲಿ ಒಟ್ಟು ೨೧/20 ಪದಗಳಿವೆ.
ಅದರಲ್ಲಿ ಕನ್ನಡದ್ದು ಬಳಕು, ಹರಿದಾಡಿ, ಮೂಡಿ, ಜಾಣ್ಮೆ, ಕೇಳಿ = ಒಟ್ಟು ೫-5 ಅಂದರೆ 25%
, ಮೋದಕೃತಿ = ಒಟ್ಟು ೧೬-15 ಅಂದರೆ 75% 
ಸಂಸ್ಕೃತದ್ದು ಗಾಢಾಂದಕಾರ, ನಟ, ಪಟು, ಮೇಘ, ಸಖ, ಸಂಚಲಿಸು, ಝರಿ, ಜೀವ, ಭಂಗೆ, ಕಥಿಸು, ಕೌಶಲ, ಫಲ, ಛಲರಹಿತ, ರಸನಿಷ್ಠೈಕ
ಕನ್ನಡ : ಸಂಸ್ಕೃತ = 1 : 3, ಮೂರು ಸಂಸ್ಕೃತ ಪದಗಳಿಗೆ ಒಂದು ಕನ್ನಡ ಪದ.
ಇದು ಕನ್ನಡಕ್ಕಿಂತ ಸಂಸ್ಕೃತದ್ದು ಎಂದರೆ ಹೆಚ್ಚು ಒಳ್ಳೆಯದು.....
ಶ್ಯಾಮ್ ಅವರ ಕೋರಿಕೆಗೆ ಕೊರಲುಸೇರಿಸುವೆನು. ಇದು ಬರಿ ಕನ್ನಡ ಬರುವವರಿಗೆ ತಿಳಿಯದು, ಸಂಸ್ಕೃತದ ಜ್ಞಾನ ಅತಿಯವಶ್ಯಕ!!
=======================================
Re: ಹಳಗನ್ನಡದ ಱ ಮತ್ತು ೞ ಇರಲಿ
ಸ್ವಾಮೀ,
ಯಾಕೋ ಇದು ವಾದಕ್ಕೋಸ್ಕರ ಮಾಡುತ್ತಿರುವ ವಾದದಂತನಿಸುತ್ತಿದೆಯಲ್ಲವೇ? ಗಣೇಶರ ಪದ್ಯದಲ್ಲಿ ಸಂಸ್ಕ್ಟುತ ಪದಗಳು ಹೆಚ್ಚೇ ಇವೆ ಎಂದರೂ, ನಟ, ಜೀವ, ಪಟು,ಝರಿ, ಫಲ, ರಸ, ಛಲ ಇವುಗಳು ಸಾಧಾರಣ ಎಲ್ಲ ಕನ್ನಡಿಗರಿಗೂ ಅರ್ಥವಾಗುವ ಶಬ್ದಗಳು. ಇವನ್ನು ಬೇಡವೆನ್ನುವ ನೀವು ಱ ಮತ್ತು ೞ ಇರಲಿ ಎನ್ನುವುದು ನನಗೆ ಅರ್ಥವಾಗದ ವಾದ.
ಹನ್ನೊಂದು ಹನ್ನೆರಡನೆ ಶತಮಾನದಲ್ಲೇ ಈ ವರ್ಣಗಳನ್ನು ನಾವು ರ ಳ ಗಳನ್ನೇ ಸೇರಿಸಿಯಾಗಿತ್ತು. ಅವನ್ನು ಮತ್ತೆ ತರುವ ಉದ್ದೇಶವೇನು (ಎಷ್ಟೆಂದರೆ ವ್ಯಾಕರಣದ ಪುಸ್ತಕದಲ್ಲೇ ಇವನ್ನು ರಳ ಕುಳ ಕ್ಷಳ ಎಂದು ನಿರ್ದೇಶಿಸುವಷ್ಟು ಎಲ್ಲರೂ ಇವನ್ನು ಮರೆತಾಗಿತ್ತು.) ಎಂದು ವಿವರಿಸುತ್ತೀರಾ?
-ಹಂಸಾನಂದಿ

ಇರಲಿ ಅಂದೆನು, ಇರಲೇ ಬೇಕು ಅಂತ ಇಲ್ಲ.
"ಭಂಗೆ, ಕಥಿಸು, ರಸನಿಷ್ಠೈಕ,ಮೋದಕೃತಿ" ಇವು ಹೆಚ್ಚು ಕನ್ನಡಿಗರಿಗೆ ಗೊತ್ತಿಲ್ಲ, ಎಲ್ಲ ಕನ್ನಡದ ನಿಘಂಟಲ್ಲೂ ಸಿಗಲ್ಲ.
ಮಹಾಪ್ರಾಣಗಳು, ಋ, ಷ, ಶ ಇವು ಇರುವಾಗ ನಮ್ಮ ಕನ್ನಡದ್ದೇ ಆದ ಱ ಮತ್ತು ೞ ಗಳು ಇದ್ದುಕೊಳ್ಳಲಿ ಎಂದು ಅಷ್ಟೇ. ಱ ಮತ್ತು ೞ ಉಲಿಯಲು ಆಗದು ಎಂದು ಬಿಟ್ಟಿದ್ದು,. ಹಾಗೆ ನಮಗೆ ಋ ಮತ್ತ ಷ ಇವನ್ನು ಉಲಿಯಲು ಆಗದು.
ಕನ್ನಡದ ಪದ್ಯ ಅಂದ ಮೇಲೆ ಕನ್ನಡದ ಪದಗಳು ಹೆಚ್ಚಿರಬೇಕು ಅಂತ ಹಂಬಲ(ಆಗುವುದಾದರೆ, ಆಗಲೇ ಬೇಕು ಅಂತ ಒತ್ತಾಯವಿಲ್ಲ
).
.
.
.
.
ಪ್ರಶ್ನೆ ಅದಲ್ಲ.
"ಕನ್ನಡದಲ್ಲಿ ಎಲ್ಲ ಸುದ್ದಗೆಗಳು ಇರುವ ಸಾಲು" ಅಂದಾಗ ಅದರಲಿ ಕನ್ನಡದ ಪದಗಳಲ್ಲಿ ಇರದ soundಗಳು ಇರಬೇಕು ಅಂದರೆ, ಬರಿ ಕನ್ನಡ ಪದಗಳನ್ನು ಹಾಕಿಕೊಂಡು ಅಂತಹ ಸಾಲನ್ನು ಬರೆಲು ಆಗದು. ಅಷ್ಟೇ.
.
.
.
.
ಹನ್ನೊಂದು ಹನ್ನೆರಡನೆ ಶತಮಾನದಲ್ಲೇ ಈ ವರ್ಣಗಳನ್ನು ನಾವು ರ ಳ ಗಳನ್ನೇ ಸೇರಿಸಿಯಾಗಿತ್ತು. ಅವನ್ನು ಮತ್ತೆ ತರುವ ಉದ್ದೇಶವೇನು (ಎಷ್ಟೆಂದರೆ ವ್ಯಾಕರಣದ ಪುಸ್ತಕದಲ್ಲೇ ಇವನ್ನು ರಳ ಕುಳ ಕ್ಷಳ ಎಂದು ನಿರ್ದೇಶಿಸುವಷ್ಟು ಎಲ್ಲರೂ ಇವನ್ನು ಮರೆತಾಗಿತ್ತು.) ಎಂದು ವಿವರಿಸುತ್ತೀರಾ?
ತರುವುದೂ ಬಿಡುವುದೂ ಬೇರೆ ಮಾತು! ಬೇಕು ಅಂತ ಆದರೆ ತರಬೇಕು. ಮರೆತಿರುವುದನ್ನು ನನೆಸಿಕೊಳ್ಳುಬಹುದು. ನಮ್ಮ ಅಕ್ಕರಮಾಲೆಯಲ್ಲಿ ಮೊದಲೇ ಬೇಕಾದಷ್ಟು ಬೇಡವಾದವು ಇವೆ, ಪಾಪ ಇವೂ ಇರಲಿ ಅಂತ ನನ್ನ ಕನಿಕರ.
"ಮಾರು vs ಮಾಱು" ಎಳೆ ನೋಡಬಹುದು.
ಆದರೆ ಅವುಗಳ ನೆಸಿಸಿಟಿ ಇದೆ ಅಂತ ನನ್ನ ನಂಬಿಕೆ.
ಹಳಗನ್ನಡವನ್ನು ಓದಲು ಎನ್ನುವುದಕ್ಕಿಂತ, ಹೊಸಗನ್ನಡದ grammarನ ಹಲವು entityಗಳನ್ನು ಸರಿಯಾಗಿ ತಿಳಿಯಲು ಅವು ಬೇಕು.
"ಅರಿತು, ಕುಳಿತು, ಮರೆತು" ಗಳು "ಅರಿದು, ಕುಳಿದು, ಮರೆದು" ಏಕೆ ಆಗಲ್ಲ ?
ಹಾಗೆ
"ಹೊಳೆದು, ಬಿರಿದು, ಕರೆದು" ಇವು "ಹೊಳೆತು, ಬಿರಿತು, ಕರೆತು" ಏಕೆ ಆಗಲ್ಲ?
ಹೊಡೆದನು, ಕರೆದನು, ಕಳೆದನು, ಮೆರೆದನು, ....ಆದರೆ ಕುಳಿತನು, ಅರಿತನು, ಮರೆತನು ಏಕೆ?
ಹಳತು ಇದು ಹೇಗೆ ಸರಿ?
=======================================
Re: ಅನಿಸಿಕೆ: A quick brown fox... -ಕನ್ನಡದಲ್ಲಿ
ಅರ್ಥ ಸೇರಿಸಿದ್ದೇನೆ - ಈಗ ಓದಿ
ಸಿಗೋಣ,
ಪವನಜ
-----------
Vishva Kannada
Think globally, Act locally
Re: ಅನಿಸಿಕೆ: A quick brown fox... -ಕನ್ನಡದಲ್ಲಿ
pavanaja ಸಾರ್
ದಯವಿಟ್ಟು ಆಗೋದಾದರೆ ಒಸಿ simple ಕನ್ಡಡದಾಗೂ ಹಾಕಿ. ಇಂಗ್ಲೀಸಿನಲ್ಲಿರೋದು ತುಸು ಕಷ್ಟವಾಗಿ ಐತೆ. ಆ ಛಂದೋಬದ್ಧ ಸಾಲುಗಳ ಛಂದಸ್ಸಿನ ಮಾಹಿತಿ ನೀಡಿರಿ.
ಕಾಳಿದಾಸಯ್ಯನ ಮೇಘದೂತದ ಯಾವುದೋ ಶ್ಲೋಕದಂತೆ ಐತೆ ಅಲ್ವಾ?!!
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
Re: A quick brown fox... -ತಿಳಿಗನ್ನಡದಲ್ಲಿ
"ಬೆಳಕಿಲ್ಲದೇ ಕತ್ತಲೆ ತುಮ್‍ಬಿತ್ತು,
ಯಾಕೆನ್‍ದರೆ ಆಗಲೇ ಸಞ್‍ಜೆ ಮೀರಿತ್ತು,
ಎದೆ ಢವಗುಡುತ್ತಿತ್ತು, ಪಿಶಾಚಿಯ ವಿಷಯ
ನೆನಪಾಗುತಿತ್ತು, ಛಲ ಬಿಡದ ಹಟವಾದಿಯ ಹಙ್‍ಗೆ,
ವಿರೋಧಿಗಳ ಸೀಳಲು ಖಡ್‍ಘ ಝಳಪಿಸಿದೆ,
ಇದು ನನ್ನ ಅನುಭವದ ಕಥೆ"
Re: A quick brown fox... -ತಿಳಿಗನ್ನಡದಲ್ಲಿ
ಸಕ್ಕತ್ ಮಗಾ
ಚೆನ್ನಾಗಿದೆ. ಆದರೆ 'ಋ'ಪ್ರಿಯರು ಒಪ್ಪಲ್ಲವೇನೋ
. ಣ ಎಲ್ಲಿ?
ಖಡ್ಘ ಅಲ್ಲ ಖಡ್ಗ ಅಲ್ಲವಾ?
ಅದರೂ ನಾನು ಮಹಾಪ್ರಾಣಪ್ರಿಯನ್ನಲ್ಲ. ಅದಕ್ಕೆ ಅದು ನನಗೆ ಊನ ಅನ್ನಿಸಲ್ಲ.!!
very good, keep it up
ನಿಮ್ಮ ಎಳಕೆಗೆ ಭೇಷ್.
; ಎಳಸು => ಎಳಕೆ
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ
Re: A quick brown fox... -ತಿಳಿಗನ್ನಡದಲ್ಲಿ "ಕಠಿಣ" ಬಿಟ್ಟು ಹೋಗಿತ್ತು
"ಬೆಳಕಿಲ್ಲದೇ ಕತ್ತಲೆ ತುಮ್‍ಬಿತ್ತು,
ಯಾಕೆನ್‍ದರೆ ಆಗಲೇ ಸಞ್‍ಜೆ ಮೀರಿತ್ತು,
ಎದೆ ಢವಗುಡುತ್ತಿತ್ತು, ಪಿಶಾಚಿಯ ವಿಷಯ
ನೆನಪಾಗುತಿತ್ತು, ಛಲ ಬಿಡದ ಹಟವಾದಿಯ ಹಙ್‍ಗೆ,
ವಿರೋಧಿಗಳ ಸೀಳಲು ಖಡ್‍ಘ ಝಳಪಿಸಿದೆ,
ಇದು ನನ್ನ ಕಠಿಣ ಅನುಭವದ ಕಥೆ"
Re: A quick brown fox... -ತಿಳಿಗನ್ನಡದಲ್ಲಿ "ಕಠಿಣ" ಬಿಟ್ಟು ಹೋಗಿತ್ತು
ಈಗ ಬೊಂಬಾಟ್!
ಇಲ್ಲಿ ಱ ಇದೂ ಇದೆ.. ಮೀರು ಅದು 'ಮೀಱು'
ಸಂಗನ
( ತಮಾಸೆಗೆ!! )
ಖಡ್ಗ ವನ್ನು "ಹೞ ಖಡ್ಗ"( ಹಳೆಯ ಕತ್ತಿ ) ಮಾಡಿದರೆ ೞ ಕೂಡ ಸೇರುತ್ತೆ
ಖಡ್ಘ ಅಲ್ಲಪ್ಪ ಖಡ್ಗ.
ಸರಗಳಲ್ಲಿ 'ಐ ಔ ಅಂ ಅಃ' ಇವು ಇಲ್ಲವೆನ್ನಬಹುದು!!
====================================================
ದಿಟವು ಯಾವಾಗಲೂ ನಲಿವು ತರಲ್ಲ! ಹಾಗಂತ ದಿಟವನ್ನು ಅರಿಯದೇ ಇರುವುದು ಅರಿಯಮಿಕೆ