ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ರಿಲಯನ್ಸ್‌ನಲ್ಲಿ ಕನ್ನಡ

ನಿನ್ನೆ ನನ್ನ ರಿಲಯನ್ಸ್ ಫೋನಿಗೆ ಒಂದು ಸಂದೇಶ ಬಂತು. ಅದನ್ನು ತೆರದು ನೋಡಿದಾಗ ಆಶ್ವರ್ಯವಾಯಿತು. ಅದು ಅಚ್ಚ ಕನ್ನಡದಲ್ಲಿತ್ತು. ಚಿತ್ರ ನೋಡಿ.


ರಿಲಯನ್ಸಿನಲ್ಲಿ ಕನ್ನಡ

ಈಗಾಗಲೇ ಹಚ್ ಕಂಪೆನಿಯವರ ಕನ್ನಡ ವಿರೋಧಿ ನೀತಿ ಬಗ್ಗೆ ಚರ್ಚೆ ನಡೆದುದು ಎಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ರಿಲಯನ್ಸ್‌ನವರು ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನಬಹುದು. ಹಾಗೆಂದು ಹೇಳಿ ನಾನು ರಿಲಯನ್ಸ್ ಪರ ಇದ್ದೇನೆ ಎಂದು ತಿಳಿದುಕೊಳ್ಳಬೇಡಿ. ಅವರ ಸೇವೆ ಬಗ್ಗೆ ನನಗೆ ಹಲವು ಅಸಮಾಧಾನಗಳಿವೆ. ಅವುಗಳ ಬಗ್ಗೆ ಈಗ ಬೇಡ. ಇನ್ನೂ ಒಂದು ವಿಷಯ. ರಿಲಯನ್ಸ್ ಅವರ ಗ್ರಾಹಕ ಸೇವಾ ಕೇಂದ್ರಕ್ಕೆ ಫೋನ್ ಮಾಡಿ ಕನ್ನಡ ಭಾಷೆಯನ್ನು ಆಯ್ಕೆ ಮಾಡಿ ಕೇಳಿ. ಅಪ್ಪಟ ಸ್ಪಷ್ಟ ಕನ್ನಡದಲ್ಲಿ ಮಾತನಾಡುತ್ತಾರೆ!

ಆದರೆ ಈಗ ಬಂದಿರುವ ಕನ್ನಡದ ಸಂದೇಶ ಬಗ್ಗೆ ಪೂರ್ತಿ ಸಮಾಧಾನ ಇಲ್ಲ. ಅವರು ಕಳುಹಿಸಿದ ಸಂದೇಶ ಚಿತ್ರ ರೂಪದಲ್ಲಿದೆ. ಅದು ಕನ್ನಡದ ಪಠ್ಯ (text) ಅಲ್ಲ. ಯುನಿಕೋಡ್ ಅಂತು ಇಲ್ಲವೇ ಇಲ್ಲ. ಅವರು ಹಿಂದಿ ಭಾಷೆಯಲ್ಲಿ ಸಂದೇಶ ಕಳುಹಿಸುವ (ಪಠ್ಯ ರೂಪದಲ್ಲಿ) ಸವಲತ್ತು ನೀಡಿದ್ದಾರೆ. ಆದರೆ ಅದು ಯುನಿಕೋಡ್ ವಿಧಾನದಲ್ಲಿ ಇಲ್ಲ. ರಿಲಯನ್ಸ್ ಫೋನಿನಿಂದ ಕಳುಹಿಸಿದ ಹಿಂದಿ ಸಂದೇಶ ನೋಕಿಯಾ ಫೋನಿನಲ್ಲಿ ಓದಲಾಗುವುದಿಲ್ಲ. ಇಪ್ಪತ್ತು ವರ್ಷ ಹಿಂದೆ ಗಣಕಗಳಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸುವಾಗ ಮಾಡಿದ ತಪ್ಪನ್ನೇ ಈಗ ಫೋನುಗಳಲ್ಲಿ ಮಾಡುತ್ತಿದ್ದಾರೆ.

ಇತಿಹಾಸದಿಂದ ಪಾಠ ಕಲಿಯದವರು ಅದನ್ನೇ ಪುನರಾವರ್ತಿಸುವ ತಪ್ಪನ್ನು ಮಾಡುತ್ತಾರೆ.

ಸಿಗೋಣ,
ಪವನಜ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

Re: ರಿಲಯನ್ಸ್‌ನಲ್ಲಿ ಕನ್ನಡ

hpn's picture

ಇತಿಹಾಸದಿಂದ ಪಾಠ ಕಲಿಯದವರು ಅದನ್ನೇ ಪುನರಾವರ್ತಿಸುವ ತಪ್ಪನ್ನು ಮಾಡುತ್ತಾರೆ.

ಈಗಲೂ‌ ಸಮಯ ಕೆಟ್ಟಿಲ್ಲ. ಮೊಬೈಲ್ ಫೋನ್ ಕಂಪೆನಿಗಳು ಆದಷ್ಟು ಬೇಗ ಅರಿತುಕೊಂಡು ಮೊಬೈಲಿನಲ್ಲಿ ಯುನಿಕೋಡ್ ತರಲಿ ಎಂದು ಆಶಿಸೋಣ. :)

--

"ಹೊಸ ಚಿಗುರು, ಹಳೆ ಬೇರು"

ಸಲಹೆ ಕೊಡಬೇಕು

tvsrinivas41's picture

ಎಷ್ಟೇ ಆಗಲಿ ರಿಲಯನ್ಸ್ ನವರದ್ದು ವ್ಯಾಪಾರೀ ಮನೋಬುದ್ಧಿ. ಕನ್ನಡದ ಬಳಕೆಯಿಂದ ಅವರಿಗೆ ಇನ್ನೂ ಹೆಚ್ಚಿನ ವ್ಯಾಪಾರ ಆಗುವುದು ಎಂಬುದೇ ಉದ್ದೇಶ. ಈ ಅವಕಾಶವನ್ನು ನಾವು ಉಪಯೋಗಿಸಿಕೊಂಡು ಅವರಿಗೆ ಸಲಹೆ ಕೊಡಬಹುದಲ್ಲವೇ?

ಪವನಜ ಸಾರ್, ಹೇಗಿದ್ದರೂ ಈ ವಿಷಯದಲ್ಲಿ ನೀವು ನಿಷ್ಣಾತರು. ಅವರಿಗೆ ಸಲಹೆ ಕೊಡುವ ಮಾರ್ಗದಲ್ಲಿ ಅವರೊಂದಿಗೆ ಸಂಪರ್ಕಿಸಬಹುಲ್ಲವೇ?

---
ತವಿಶ್ರೀನಿವಾಸ

ಸಂಪರ್ಕಿಸಿದ್ದೆ

pavanaja's picture

ಶ್ರೀನಿವಾಸ್ ಅವರೆ,

ನಾನು ಎರಡು ವರ್ಷಗಳ ಹಿಂದೆಯೇ, ಅಂದರೆ ರಿಲಯನ್ಸ್‌ನವರು ಫೋನ್ ಪ್ರಾರಂಭ ಮಾಡಿದಾಗ, ಅವರನ್ನು ಸಂಪರ್ಕಿಸಿದ್ದೆ. ಎರಡು ಸುತ್ತು ಫೋನಿನಲ್ಲೆ (ಮುಂಬಯಿಗೆ) ಮಾತುಕತೆ ನಡೆಸಿದೆವು. ನಂತರ ವಿವರವಾಗಿ ಇಮೈಲ್ ಮಾಡಿದೆ. ಅಲ್ಲಿಗೆ ಅದರ ಕತೆ ಮುಗಿಯಿತು.

ಸಿಗೋಣ,
ಪವನಜ
-----------
Think globally, Act locally

ಮರಳಿ ಯತ್ನವ ಮಾಡು - maraLi yatnava mADu

nuDikannaDa's picture

ರಿಲಯನ್ಸ್ ಅವರು ಕನ್ನಡ ಸಂದೇಶ ಕಳಿಸುವುದು ಕೇಳಿ
ಸಂತೋಷವಾಯ್ತು. ಆದರೆ ಅದು ಚಿತ್ರ, ಅಕ್ಶರಗಳಲ್ಲವೆಂದು ತಿಳಿದು
ಖೇದವಾಯ್ತು.

ಪವನಜರೆ ಬೇಸರಿಸದಿರಿ.
ನೀವು ಆಗಾಗ್ಗೆ ರಿಲಯನ್ಸ್ ಗೆ ನಿಮ್ಮ ಸಲಹೆ ಕೊಡಿ.
ಮರಳಿ ಯತ್ನವ ಮಾಡೋಣ. ನೀವು ಹಿಂದೆ ಕಳಿಸಿದ
ವಿ-ಅಂಚೆಯನ್ನೇ ಮತ್ತೆ ಕಳುಹಿಸಿ. ಹೆಚ್ಚು ಸಮಯ
ಪೋಲು ಮಾಡಬೇಡಿ.

rilayans avaru kannaDa saMdEsha kaLisuvudu kELi
saMtOShavAytu. aadare
adu chitra, aksharagaLallaveMdu tiLidu
KEdavAytu.

pavanajare bEsarisadiri.
nIvu aagAgge rilayans ge nimma salahe koDi.
maraLi yatnava mADONa. nIvu hiMde kaLisida
vi-aMcheyannE matte kaLuhisi. hecchu samaya
pOlu mADabEDi.