ಅರಿತೆನೆಂದರಿತವನು ಶ್ರೇಷ್ಠ! ಅವನ ಹಿಂಬಾಲಿಸು.
ಅರಿತೆನೆಂದರಿಯದವ ಸುಪ್ತ! ಅವನ ಮೇಲೆಬ್ಬಿಸು.
ಅರಿಯೆನೆಂದರಿತವನು ಮುಗ್ಧ! ಅವನಿಗೆ ಕಲಿಸು.
ಅರಿಯೆನೆಂದರಿಯದವ ಮೂರ್ಖ! ಮೊದಲವನ ದೂರಕೆ ಸರಿಸು.

— ಚೀನಾದ 'ಕನ್‍ಫ್ಯೂಶಿಯನಿಸಂ' ನ ನುಡಿಗಟ್ಟು.

ಸಂಪದ ಆರ್ಕೈವಿನಿಂದ

ಲೇಖಕರು

poornimas's picture

ಪೂರ್ಣ ಹೆಸರು
ಪೂರ್ಣಿಮ

ಮಾಗಡಿ ಕೆಂಪೇಗೌಡ ಮತ್ತು ನಿಧಿ - ಮಾಹಿತಿ ಬೇಕಾಗಿದೆ

ನನ್ನ ಗೆಳೆಯರೊಬ್ಬರಿಗೆ ಕೆಂಪೇಗೌಡನ ಬಗ್ಗೆ ಸ್ವಲ್ಪ ಮಾಹಿತಿ ಬೇಕಾಗಿದೆ. ಸಂಪದ ಸೂಕ್ತ ಸ್ಥಳವೆಂದು ಇಲ್ಲಿ ಬರೆಯುತ್ತಿದ್ದೇನೆ.


ಘಟನೆ/ಕಥೆಯ ಸಾರಾಂಶ ಇದು - ಅವರ ತಲೆಮಾರಿನ ಹಿರಿಯರ ಮನೆಯಲ್ಲಿ (ನೆಲಮಂಗಲ ಬಳಿ ಮೋಟಗಾನಹಳ್ಳಿ) ಕೆಂಪೇಗೌಡ ಎನ್ನುವವರು ಕೆಲಸಕ್ಕೆ ಇದ್ದರು. ಹೊಲದಲ್ಲಿ ನಿಧಿ ದೊರೆಯಿತು. "ನಿಧಿ ನನ್ನದು" - "ಇಲ್ಲಾ ನನ್ನದು" ಎನ್ನುವ ಕಲಹದ ಬದಲು "ಇದು ನಿಮಗೆ ಸೇರಿದ್ದು" - "ಇಲ್ಲಾ ಇದು ನಿಮ್ಮದೇ" ಎನ್ನುವ ಮಾತು ಕೇಳಿತು. ಇಬ್ಬರ ಹೃದಯ ಸಂಪನ್ನತೆಯೂ ದೊಡ್ಡದು!


ನಾನು ಬಹಳ ಹಿಂದೆ ಇದೇ ರೀತಿಯ ಘಟನೆಯ ಕುರಿತು ಎಲ್ಲೋ ಓದಿದ್ದೆ. ಆದರೆ ವ್ಯಕ್ತಿ,ವಿವರಗಳು ಮತ್ತು ಪುಸ್ತಕದ ನೆನಪಿಲ್ಲ.


ಮಾಗಡಿ ಕೆಂಪೇಗೌಡನ ಬಗೆಗಿನ ಪುಸ್ತಕ/ಐತಿಹ್ಯ/ಕಥೆಗಳಲ್ಲಿ ಈ ಕುರಿತ ಮಾಹಿತಿ ಯಾರಿಗಾದರೂ ತಿಳಿದಿದೆಯೇ? ತಿಳಿದವರು ಪುಸ್ತಕದ ವಿವರಗಳನ್ನು ತಿಳಿಸಲು ಸಾಧ್ಯವೇ? ಮುಂಚಿತವಾಗಿ ಧನ್ಯವಾದಗಳು.


 

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮಾಗಡಿ ಕೆಂಪೇಗೌಡ ಮತ್ತು ನಿಧಿ - ಮಾಹಿತಿ ಬೇಕಾಗಿದೆ

thesalimath's picture

ಕೆಂಪೇಗೌಡರ ಬಗೆಗಿನ ಈತಿಹ್ಯದಲ್ಲಿ ಈ ರೀತಿ ಇರುವುದು ಕಾಣೆ.
ನಾನು ಒದಿದ್ದು "ವಾರಪತ್ರಿಕೆ" ಎಂಬ weekly ನಲ್ಲಿ ನಾನು ಒಂದನೆಯ ತರಗತಿಯಲ್ಲಿದ್ದಾಗ. ಅದು ಅಲೆಕ್ಸಾಂಡರ್‍ ಭಾರತಕ್ಕೆ ದಂಡೆತ್ತಿ ಬಂದಾಗ ನಡೆಯುವ ಘಟನೆ!