ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › pqrshanth ರವರ ಬ್ಲಾಗ್

ಕನ್ನಡದಲ್ಲಿ ಕಾರ್ಟೂನ್‍ಗಳು

March 3, 2006 - 3:47pm — pqrshanth

Englishನ ಕಾರ್ಟೂನಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಒಂದು ಪ್ರಯ್ತ್ನ. ಕೇಶವ ಮತ್ತು ನಾರಾಯಣಾರಾಗಿ - Calvin and Hobbes. ಸಾಂಬಶಿವನಾಗಿ - Dilbert ಗೋವಿಂದನಾಗಿ - Garfield ನಿಮ್ಮ ಮುಂದೆ ಬರುತ್ತಿದ್ದಾರೆ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ -- http://kannadacartoons.blogspot.com/

ಅರುಣ ಉವಾಚ --
ಕ್ಯಾಲ್ವಿನ್ ಮತ್ತು ಹಬ್ಬಸ್ ಎಷ್ಟೋ ಜನರ ಅಚ್ಚುಮೆಚ್ಚಿನ ಕಾರ್ಟೂನ್. ಇದನ್ನು ಕನ್ನಡಕ್ಕೆ ತರುವ ಒಂದು ಸಣ್ಣ ಪ್ರಯತ್ನ. ಈ ಪ್ರಯತ್ನದಲ್ಲಿ ಯಾವುದೇ ರೀತಿಯ ಆರ್ಥಿಕ ಲಾಭ ಪಡೆಯಲಾಗುತ್ತಿಲ್ಲ. ಇದನ್ನು ನಾನು ನನಗೆ C&H ಮೇಲೆ ಇರುವ ಅಭಿಮಾನಕ್ಕಾಗಿ ಮಾಡುತ್ತಿದ್ದೇನೆ.

ಸುಸಂಕೃತ ಉವಾಚ --
'Dilbert' ನಮ್ಮ ದೈನಂದಿನ ಯಾಂತ್ರಿಕ ಬದುಕಿನ ಒಂದು ಮುಖ್ಯ ಪಾತ್ರವೆನ್ನಬಹುದು.Dilbertನ ಪಾತ್ರದಲ್ಲಿ ನಮ್ಮೆಲ್ಲರನ್ನೂ ಒಂದಲ್ಲ ಒಂದು ಸನ್ನಿವೇಶದಲ್ಲಿ ಕಂಡುಕೊಳ್ಳಬಹುದು.ಮೂಲತಃ Scott Adamsನ ಮಾನಸಪುತ್ರ ಈತ.
ಅವನ ಕರಾಮತಿಗಳನ್ನು, ಅವನ ಕಛೇರಿಯಲ್ಲಿ ನಡೆಯುವ ದಿನನಿತ್ಯದ ರಾಮಾಯಣವನ್ನು ಯಥಾವತ್ತಾಗಿ Scott ದಿನವೂ ನಮಗೆಲ್ಲ ಉಣಬಡಿಸುತ್ತಾ ಬಂದಿದ್ದಾರೆ!ಅದನ್ನೇ ನಾನಿಲ್ಲಿ ಕನ್ನಡಕ್ಕೆ ತರ್ಜುಮೆ ಮಾಡುವ ಸಣ್ಣ ಪ್ರಯತ್ನ ಮಾಡಿದ್ದೇನೆ.

ಪ್ರಶಾಂತ ಉವಾಚ --
ಬೆಳಿಗ್ಗೆಯಿಂದ ಕೆಲಸದಲ್ಲಿ ಮುಳುಗಿದ್ದು ಮಧ್ಯೆ ಸ್ವಲ್ಪ ಹೊತ್ತು ಕಾರ್ಟೂನ್ಸ್ ಓದಿದ್ರೆ ಮನಸ್ಸು ಒಂಥರಾ ಉಲ್ಲಸಿತವಾಗುತ್ತದೆ. ಬಹಳ ವರ್ಷಗಳಿಂದ ನಾನು Calvin & Hobbes ಮತ್ತು Garfield ಕಾರ್ಟೂನ್ಸ್ ಗಳನ್ನು follow ಮಾಡಿಕೊಂಡುಬಂದಿದ್ದೆ. ಯಾವಾಗ ಅರುಣ Calvin & Hobbes ನ ಕನ್ನಡಕ್ಕೆ ಅನುವಾದಿಸಿದ್ದನ್ನು ನೋಡಿದೆನೋ ನನಗೂ Garfield ನನ್ನು ಗೋವಿಂದನನ್ನಾಗಿಸುವ ಅನ್ನಿಸಿತು. ಜೊತೆಗೆ ಸುಶೀಲನೂ Dilbert ಅನುವಾದ ಪ್ರಾರಂಭಿಸಿದ. ಅವರಿಬ್ಬರ ಜೊತೆಗೆ ಈಗ ಗೋವಿಂದನೂ ಕೈಜೋಡಿಸುತ್ತಿದ್ದಾನೆ.

~.~
  • pqrshanth ರವರ ಬ್ಲಾಗ್
  • Login or register to post comments
  • 747 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2006 - 6:32pm — ismail

ಮೆಚ್ಚುಗೆಗೆ ಅರ್ಹ

ismail's picture

ನಿಮ್ಮ ಪ್ರಯತ್ನ ಮೆಚ್ಚುಗೆಗೆ ಅರ್ಹ. ಆದರೆ ಹಾಬ್ಸ್‌ ನಾಣಿ ಆದದ್ದು ಮಾತ್ರ ಅಷ್ಟೇನೂ ಇಷ್ಟವಾಗಲಿಲ್ಲ. ನಾರಾಯಣ ಎಂಬ ಹೆಸರು ಹಾಬ್ಸ್‌ನ ವ್ಯಕ್ತಿತ್ವಕ್ಕೆ ಒಪ್ಪುವುದಿಲ್ಲ ಎಂಬುದು ನನ್ನ ಭಾವನೆ.
ಕನ್ನಡದಲ್ಲಿ ಕಾರ್ಟೂನ್‌ಗಳನ್ನು ಅನುವಾದಿಸುವುದಕ್ಕೆ ಒಂದು ಪರಂಪರೆಯೇ ಇದೆ. ಮಾಂಡ್ರೇಕ್‌, ಫ್ಯಾಂಟಮ್‌, ಮ್ಯಾಡಸ್ಟಿಬ್ಲೇಸ್‌, ಹೆನ್ರಿ ಮೊದಲಾದವರೆಲ್ಲಾ ಕನ್ನಡಕ್ಕೆ ಬಂದಿದ್ದಾರೆ. ಬಹಳ ಹಿಂದೆ ಫ್ಯಾಂಟಮ್‌ ಪಾತ್ರಕ್ಕೆ ಯಾರೋ ಒಬ್ಬರು ಭೂತಪ್ಪ ಎಂಬ ಹೆಸರು ಕೊಟ್ಟಿದ್ದರು. ಯಾವುದೋ ಒಂದು ಹಂತದಲ್ಲಿ ಭೂತಪ್ಪ ಮತ್ತೆ ಫ್ಯಾಂಟಮ್‌ ಆದ. ಈಗಲೂ ಫ್ಯಾಂಟಮ್‌ ಆಗಿಯೇ ಉಳಿದುಬಿಟ್ಟಿದ್ದಾನೆ.
ಪ್ರಜಾವಾಣಿಯಲ್ಲಿ `ಮೊದ್ದು ಮಣಿ' ಎಂಬ ಸ್ಟ್ರಿಪ್‌ ಬರುತ್ತಿತ್ತು. ಇದೂ ಕೂಡಾ ಮೂಲತಃ ಕನ್ನಡದ್ದಲ್ಲ. ಆ `ಮೊದ್ದುಮಣಿ' ಹೆಸರು ಮಾತ್ರ ಅವನಿಗೆ ಸರಿಯಾಗಿ ಒಪ್ಪುತ್ತಿತ್ತು. ಇದರಲ್ಲಿ ಸಂಭಾಷಣೆಗಳು ಇರುತ್ತಿರಲಿಲ್ಲ. ಆದರೆ ಒಂದು ಅಥವಾ ಎರಡು ಶಬ್ದದ ಶೀರ್ಷಿಕೆ ಇರುತ್ತಿತ್ತು. ಆ ಶೀರ್ಷಿಕೆಯನ್ನು ಬರೆಯುತ್ತಿದ್ದವರು ಖಂಡಿತವಾಗಿಯೂ ಜೀನಿಯಸ್‌.
ಮತ್ತೊಂದು ವಿಷಯವನ್ನೂ ಇಲ್ಲಿಯೇ ಹೇಳುವುದು ಸೂಕ್ತ ಅಂದು ಕೊಂಡಿದ್ದೇನೆ. ನಿಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ ಇರುವ ವಿಷಯದ ಕುರಿತು ಸಂಪದದಲ್ಲಿ ಬರೆಯುವಾದ ಸ್ವಲ್ಪ ಹೆಚ್ಚು ವಿವರಗಳನ್ನು ಕೊಡುವುದು ಉತ್ತುಮ ಎನಿಸುತ್ತದೆ. ನೀವು ಕಾರ್ಟೂನುಗಳನ್ನು ಕನ್ನಡಕ್ಕೆ ಅನುವಾದಿಸಲು ಹೊರಟದ್ದೇಕೆ. ಈ ಪ್ರಕ್ರಿಯೆಯಲ್ಲಿ ನೀವು ಎದುರಿಸಿದ ಸವಾಲುಗಳು ಹೀಗೆ... ಒಂದು ಸಾಲು ಬರೆದು ಲಿಂಕ್ ಕೊಡುವುದು spaming ತರಹ ಕಾಣಿಸುತ್ತದೆ. ನನ್ನ ಅಭಿಪ್ರಾಯ ಕಟುವಾಗಿದೆ ಎನಿಸಿದರೆ ಕ್ಷಮಿಸಿ.

ಇಸ್ಮಾಯಿಲ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 7:30pm — hpn

> ಇದೂ ಕೂಡಾ

hpn's picture

> ಇದೂ ಕೂಡಾ ಮೂಲತಃ ಕನ್ನಡದ್ದಲ್ಲ .... ಆ ಶೀರ್ಷಿಕೆಯನ್ನು ಬರೆಯುತ್ತಿದ್ದವರು ಖಂಡಿತವಾಗಿಯೂ ಜೀನಿಯಸ್‌.

ಆ ಜೀನಿಯಸ್ ಹೆಸರು ಕಾರ್ಲ್ ಆಂಡರ್ಸನ್. ಇಂದ್ರಜಾಲ ಕಾಮಿಕ್ಸನ್ನ ಇಂಗ್ಲಿಷಿನಲ್ಲೂ‌ ಓದುತ್ತಿದ್ದೆಯಾದ್ದರಿಂದ ಇದರ ಆಂಗ್ಲ ಹೆಸರು ಗೊತ್ತು. ಇಂಗ್ಲಿಷಿನಲ್ಲಿ ಇದರ ಹೆಸರು 'ಹೆನ್ರಿ'. ಈಗ ಕಿಂಗ್ ಫೀಚರ್ಸ್ ಕಾಮಿಕ್ಸ್ ಇದನ್ನ ವಿತರಿಸುತ್ತಿದೆ.

ಕನ್ನಡದಲ್ಲಿ ಕಾರ್ಟೂನ್‌ಗಳನ್ನು ಅನುವಾದಿಸುವುದಕ್ಕೆ ಒಂದು ಪರಂಪರೆಯೇ ಇದೆ. ಮಾಂಡ್ರೇಕ್‌, ಫ್ಯಾಂಟಮ್‌, ಮ್ಯಾಡಸ್ಟಿಬ್ಲೇಸ್‌, ಹೆನ್ರಿ ಮೊದಲಾದವರೆಲ್ಲಾ ಕನ್ನಡಕ್ಕೆ ಬಂದಿದ್ದಾರೆ.

ಮಾಂಡ್ರೇಕ್, ಫ್ಯಾಂಟಮ್ ಕನ್ನಡದಲ್ಲಿ ಬರುತ್ತಿದ್ದಾಗ ಎಷ್ಟು ಚೆನ್ನಾಗಿರುತ್ತಿತ್ತು ಅಂದ್ರೆ ನಮಗೆ ಅದು ಕನ್ನಡದಲ್ಲೇ ಮೊದಲು ಬಂದಿತ್ತೇನೋ ಅಂತ ಸಣ್ಣವರಿದ್ದಾಗ ಅನ್ನಿಸುತ್ತಿತ್ತು.

ನಾವೆಲ್ಲ ಸಾಕಷ್ಟು ಓದಿರುವ asterix ಮತ್ತು tintin ಕಾಮಿಕ್ಸ್ ಗಳನ್ನೇ ತಗೊಳ್ಳಿ... ಅವು ಮೂಲತಃ ಇಂಗ್ಲಿಷಿನಲ್ಲಿ ಬರೆದದ್ದವೇ ಅಲ್ಲ! asterix adventures ಪುಸ್ತಕಗಳನ್ನು ಅನುವಾದ ಮಾಡಿದ ಬ್ರಿಟಿಷ್ ದಂಪತಿಗಳು ಅನುವಾದ ಮಾಡಿದ ಬಗೆ, ಅದರ ಅನುಭವದ ಬಗ್ಗೆ ಒಂದು ಪುಸ್ತಕವನ್ನೇ ಹೊರತಂದಿದ್ದಾರೆ. ಓದಲೇಬೇಕಾದಂತ ಪುಸ್ತಕವದು. ಅವರು ಪುಸ್ತಕಗಳಲ್ಲಿ ಅನುವಾದದ ಕ್ವಾಲಿಟಿ ಕಾಯ್ದುಕೊಳ್ಳೋದಕ್ಕೆ (ಫ್ರೆಂಚ್ ನಲ್ಲಿದ್ದ ಜೋಕುಗಳನ್ನೂ, ಬೈಗುಳಗಳನ್ನೂ ಅನುವಾದದಲ್ಲಿ ತಪ್ಪದಂತೆ) ಬಳಸಿದ 'ಗಾಲಿಷ್ ಸ್ವಿಯರ್ ವರ್ಡ್ಸ್' ಮತ್ತು ಹಲವು ಪ್ರಯೋಗಗಳು ಅಪೂರ್ವವಾದವುಗಳು.

> ಒಂದು ಸಾಲು ಬರೆದು ಲಿಂಕ್ ಕೊಡುವುದು spaming ತರಹ ಕಾಣಿಸುತ್ತದೆ

ಹೌದು Smiling ಇತ್ತೀಚೆಗೆ ಇಂತದ್ದು, ಬರೇ ಲಿಂಕ್ ಕೊಟ್ಟು ಚಿಕ್ಕ ಪೋಸ್ಟ್ ಸೇರಿಸುವುದು ಸಾಕಷ್ಟು ಆಗಿಬಿಟ್ಟಿದೆಯಲ್ಲ! ಸಂಪದದ ಬ್ಲಾಗುಗಳನ್ನು ಎಲ್ಲರೂ ಸೀರಿಯಸ್ ಆಗಿ ತಗೊಳ್ಳೋ ಹಾಗೆ ಏನು ಮಾಡಬಹುದು? ಓದುತ್ತಿರುವವರು ಸಲಹೆಗಳಿದ್ದರೆ ತಪ್ಪದೇ ತಿಳಿಸಿ.

ಪ್ರಶಾಂತ್ ರವರು ಬೇಜಾರು ಮಾಡಿಕೊಳ್ಳಬಾರದು. ನಿಮ್ಮ ಪ್ರಯತ್ನ ಇತರರಿಗೆ ತಿಳಿಸುವ ಸನ್ನಾಹ ಅರ್ಥವಾಗತ್ತೆ. ಆದರೆ ಆ ಕಾರ್ಯಕ್ಕೆ ಕಾಮೆಂಟ್ ಹಾಕುವಾಗ ನಿಮ್ಮ signature ಬಳಸಿ. ಪ್ರತ್ಯೇಕ ಪೋಸ್ಟು ಅದರಷ್ಟು ಪರಿಣಾಮಕಾರಿಯೂ ಅಲ್ಲ, ಚೆನ್ನಾಗಿಯೂ ಇರೋದಿಲ್ಲ. ಹಾಗೆ ಪ್ರತ್ಯೇಕ ಪೋಸ್ಟೇ ಬೇಕು ಅಂತ ಅನ್ಸಿದ್ರೆ "ಅಂತರಜಾಲದ ಕನ್ನಡ ಪುಟಗಳು" ಫಾರಮ್ ನಲ್ಲಿ ಹಾಕಿ.

ಪ್ಲಾನೆಟ್ಟಿನಲ್ಲಿರೋದ್ರಿಂದ ಆಗಲೇ ಸಾಕಷ್ಟು ಟ್ರಾಫಿಕ್ ಅಲ್ಲಿಗೆ ಬರಲು ಪ್ರಾರಂಭವಾಗಿದೆ, ಹಾಗೂ‌ ಸಾಕಷ್ಟು ಜನರಿಗೆ ಹೊಸತಾಗಿ ಪರಿಚಯವಾಗಿದೆ ಎಂದು ನಂಬುತ್ತೇನೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 10:32pm — ismail

ಒಂದು ಸಣ್ಣ ತಿದ್ದುಪಡಿ

ismail's picture

ನಾನು ಪ್ರಸ್ತಾಪಿಸಿರುವ ಮೊದ್ದುಮಣಿಯ ಕರ್ತೃ ಕಾರ್ಲ್ ಆಂಡರ್ಸನ್ ಆಗಿರುವ ಸಾಧ್ಯತೆ ಕಡಿಮೆ. ಪ್ರಜಾವಾಣಿಯನ್ನು ಎಂಬತ್ತರ ದಶಕದಲ್ಲಿ ಓದುತ್ತಿದ್ದವರಿಗೆ ಮೊದ್ದುಮಣಿ ಸ್ಟ್ರಿಪ್ ನೆನಪಿರುತ್ತೆ. ನೀವು ಅಂದಕೊಂಡ ಹಾಗೆ ಅದು ಹೆನ್ರಿ ಸ್ಟ್ರಿಪ್ ಅಲ್ಲ. ನನಗೂ ಅದರ ಸೃಷ್ಟಿಕರ್ತ ಯಾರು ಎಂಬುದು ಗೊತ್ತಿಲ್ಲ. ಅದನ್ನು ನೋಡುತ್ತಿದ್ದ ದಿನಗಳಲ್ಲಿ ನಮಗೆ ಕಾರ್ಟೂನ್ ಸ್ಟ್ರಿಪ್ ನೋಡುವುದು ಮುಖ್ಯವಾಗಿತ್ತೇ ಹೊರತು ಇತರ ವಿವರಗಳಲ್ಲ. ಆ ಕಾಲದಲ್ಲಿ ಮಟ್ಕಾ ಆಡುವವರು ಕೂಡಾ ಮೊದ್ದುಮಣಿಯ ಮೂಗು, ಕೈ, ಕಾಲುಗಳನ್ನೆಲ್ಲಾ ನೋಡಿ ನಂಬರ್ ನಿರ್ಧರಿಸುತ್ತಿದ್ದರು. ಈ ಮೊದ್ದುಮಣಿಯ ಸೃಷ್ಟಿಕರ್ತ ಯಾರು ಎಂಬುದು ಓಎಲ್ಎನ್ ಗೆ ಗೊತ್ತಿರಬಹುದೇ. ಟಿ.ವಿ.ಶ್ರೀನಿವಾಸ್ ಕೂಡಾ ಈ ವಿಷಯದಲ್ಲಿ ನಮಗೆ ಸಹಕರಿಸಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 3:04pm — pqrshanth

ಧನ್ಯವಾದಗಳು

pqrshanth's picture

ನಿಮ್ಮೆಲ್ಲರ ಅನಿಸಿಕೆಗಳಿಗೆ ಧನ್ಯವಾದಗಳು. ಈ ರೀತಿ ಕನ್ನಡಾನುವಾದ ಪ್ರಾರಂಭವಾಗುವುದಕ್ಕೆ ಮೂವರ ಅನಿಸಿಕೆಗಳನ್ನು ಇದೇ ಪುಟಾದಲ್ಲಿ ಸೇರಿಸಿದ್ದೇನೆ.

@ಹರಿ - ಅಂತರಜಾಲದ ಕನ್ನಡ ಪುಟಗಳ ಬಗ್ಗೆ ನನಗೆ ತಿಳಿದಿರಲಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 7:16pm — karthik

ಮಜವಾಗಿದೆ

karthik's picture

ಮಜವಾಗಿದೆ ಸಾರ್!.
ಕೀಪ್ ಇಟ್ ಅಪ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಕ್ಕೆ ಡಬ್ಬಿಂಗ್ ಬೇಕೆ, ಬೇಡವೆ?
  • ಕನ್ನಡಕ್ಕೆ ಒಂದು ಲಿನಕ್ಸ್
  • ಮಾತಿನಲ್ಲಿ ಹುರುಳು
  • ಗೂಗಲ್ ನಲ್ಲಿ ಬ್ಲಾಗ್ ಹುಡುಕಾಟ
  • ಕನ್ನಡಕ್ಕೆ ಅನುವಾದ-೨
Syndicate content

ಲೇಖಕರು

pqrshanth's picture

ಪೂರ್ಣ ಹೆಸರು
ಪ್ರಶಾಂತ್ ಎಂ.

ಪರಿಚಯ

ಗಣಕ ತಂತ್ರಜ್ಞ, ಓದುಗ, ಛಾಯಾಚಿತ್ರಗ್ರಾಹಕ, ಪಯಣಿಗ...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 38 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator