ನೆನಪುಗಳು
ಎಲ್ಲಿ ಹೋದಿರಿ ಅಂದಿನ ದಿನಗಳೆ ನೆನಪುಗಳನು ಬಿತ್ತಿ,
ಮನದಲಿ ಸವಿ ನೆನಪುಗಳನು ಬಿತ್ತಿ
ಹೊಂಗೆಯ ನೆರಳಲಿ ಗೋಲಿಯ ಆಡುತ ಕಾಲಕಳೆವ ಬನ್ನಿ
ಹುಣಿಸೆಯ ಕೊಂಬೆಗೆ ಹಗ್ಗವ ಕಟ್ಟಿ ಜೋಕಾಲೆಯಾಡುವ ಬನ್ನಿ
ಮೂಡಣ ಬಾನಲಿ ಸೂರ್ಯನ ಜೊತೆಗೆ ಮೇಲೇರುವ ಬನ್ನಿ
ತುಂಬಿದ ಕೆರೆಗೆ ಕಲ್ಲನು ಎಸೆಯುತ ಮುಸ್ಸಂಜೆ ಸವಿಯ ಬನ್ನಿ
ಚಂದಿರನಿಲ್ಲದ ಬಾನಂಗಳದಲ್ಲಿ ತಾರೆಗಳೆಣಿಸುವ ಬನ್ನಿ
ತಿಂಗಳ ಬೆಳಕಲಿ ಕೈತುತ್ತನು ತಿನ್ನುತ ಹರಟೆ ಹೊಡೆವ ಬನ್ನಿ
ತೋಟಕೆ ನುಗ್ಗಿ ಬಾವಿಗೆ ಧುಮುಕಿ ಈಜು ಕಲಿವ ಬನ್ನಿ
ಮಾವಿನ ಮರಕೆ ಕಲ್ಲನು ಹೊಡೆದು ಹಣ್ಣ ಕೆಡವ ಬನ್ನಿ
ಮನದ ನೆನಪುಗಳು ಮಾಸುವ ಮುನ್ನ
ದೇಹದ ಶಕ್ತಿ ಕುಂದುವ ಮುನ್ನ ಒಮ್ಮೆ ಮರಳಿ ಬನ್ನಿ
~ ಮಾಪ್ರಶಾಂತ

- pqrshanth ರವರ ಬ್ಲಾಗ್
- Login or register to post comments
- 596 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಚಿಕ್ಕಂದಿನ ನೆನಪು
ನಿಮ್ಮ ಸುಂದರ ಕವನದಿಂದ ನನ್ನ ಎಳೆತನದ ತುಂಟಾಟಗಳನ್ನೆಲ್ಲವನ್ನೂ ಮತ್ತೆ ನೆನಪಿಸಿದಿರಿ. ಈಗ ಮತ್ತೆ ಹಾಗೆ ಆಡಕ್ಕಾಗಲ್ವೇ? ಆಡಿದರೆ ನಗೆಪಾಟಲಾಗುವುದು.
ಕವನ ತುಂಬಾ ಚೆನ್ನಾಗಿದೆ.
ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net
ಮಧುರ
ಬದುಕ ಹಾದಿಯಲಿ ಮರಳಲೆ ಬೇಕು.ನೆನಪ ಪುಟಗಳು ಮತ್ತಷ್ಟು ಮತ್ತಷ್ಟು ಸುಂದರವಾಗಿರಲಿ.ಪ್ರತಿಕ್ಷಣವೂ ಇನ್ನೊಮ್ಮೆ ಬಯಸುವಂತಿರಲಿ.
ವಂದನೆಗಳು
ಶ್ರಿನಿ ಸರ್ ಮತ್ತು ಸಿಂಚನ,
ನಿಮ್ಮ commentsಗಳಿಗೆ ವಂದನೆಗಳು