ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › Pradyumna Belavadi ರವರ ಬ್ಲಾಗ್

ಬುದ್ಧ ಮತ್ತು ಬೇಡ

February 27, 2007 - 12:42am — Pradyumna Belavadi

ಬಹಳ ಹಿಂದೆ ಓದಿದ ಈ ಬರಹ, ಬಹುಶಃ ’ಕಸ್ತೂರಿ’ ಪತ್ರಿಕೆಯಲ್ಲಿ ಬಂದಿತ್ತು ಅನ್ಸುತ್ತೆ. ಸುಮಾರು ೨೦-೨೫ ವರ್ಷಗಳ ಕೆಳಗೆ ಓದಿದ್ದು. Exact ಆಗಿ ಜ್ನಾಪಕ ಇಲ್ಲ. ಆದರೆ, ಹೆಚ್ಚುಕಮ್ಮಿ ಈ ರೀತಿ ಇತ್ತು.

ಒಮ್ಮೆ ಕಾಡೆಲ್ಲ ಅಲೆಯುತ್ತ, ಬುದ್ಧ ಬಾಯಾರಿ ಒಂದು ಸಂರಕ್ಷಿತ ಕೊಳದ ಬಳಿ ಬಂದು ಇನ್ನೇನು ನೀರು ಕುಡಿಯಲು ಹೋಗುತ್ತಾನೆ. ಅಷ್ಟರಲ್ಲಿ ಎಲ್ಲಿಂದಲೊ ಬಂದ ಅಶರೀರವಾಣಿ ಹೇಳುತ್ತೆ ’ತಾಳು, ನೀನೇನಾದರು ಈ ನೀರನ್ನು ಕುಡಿದು ಈ ಕೊಳವನ್ನು ಹಾಳು ಮಾಡಿದರೆ, ನೀನು ಕೂಡಲೇ ಸಾಯುತ್ತೀಯ, ಎಚ್ಚರಿಕೆ’

ಬುದ್ಧ ಅದನ್ನು ಕೇಳಿ ಕೊಳದಿಂದ ಹಿಂತೆಗೆದು, ಅಲ್ಲೆ ಕುಳಿತು ದಣಿವಾರಿಸಿಕೊಳ್ಳುತ್ತಾನೆ. ಸ್ವಲ್ಪ ಹೊತ್ತಿನಲ್ಲಿ ಒಬ್ಬ ಬೇಡ ಬಂದು, ಅದೇ ಕೊಳದಿಂದ ನೀರು ಕುಡಿದು, ಸ್ನಾನ ಮಾಡಿ, ತನ್ನ ಪ್ರಾಣಿಗಳನ್ನೂ ತೊಳೆಸಿ ಅಲ್ಲಿಂದ ತೆರಳುತ್ತಾನೆ. ಬುದ್ಧನಿಗೆ ಆಶ್ಚರ್ಯವಾಗಿ ಆ ಅಶರೀರವಾಣಿಯನ್ನು ಕೇಳುತ್ತಾನೆ ’ಅರೆ, ಈಗ ತಾನೆ ಆ ಬೇಡ ಬಂದು ಈ ಕೊಳವನ್ನು ಹೀಗೆ ಹಾಳುಗೆಡವಿದರೂ, ನೀನು ಯಾವ ಮಾತನಾಡದೆ ಅವನನ್ನು ಸುಮ್ಮನೆ ಬಿಟ್ಟೆಯಲ್ಲ? ಇದು ಯಾವ ರೀತಿಯ ನ್ಯಾಯ?’'

ಆಗ ಅಶರೀರವಾಣಿ ಉತ್ತರಿಸುತ್ತದೆ ’ಆ ಬೇಡ ಏನೂ ಅರಿಯದವ, ಅವನಿಗೆ ಈ ಕೊಳ ಸಂರಕ್ಷಿಸಲ್ಪಟ್ಟಿದ್ದು ಅಂತ ನಾ ಹೇಳಿದ್ದರೂ, ಅವನಿಗೆ ಅದೇನು ಅರ್ಥವಾಗುತ್ತಿರಲಿಲ್ಲ. ಹಾಗಾಗಿ, ನಾನು ಎಚ್ಚರಿಸಿದ್ದರೂ, ಅವನು ನೀರು ಕುಡಿಯುತ್ತಿದ್ದ. ಹೀಗೆ ಇಂಥವರೆನ್ನೆಲ್ಲಾ ನಾನು ಕೊಲ್ಲುತ್ತ ಬಂದರೆ, ಇಡೀ ಪ್ರಪಂಚವೇ ಬರಿದಾಗಬಹುದು. ನೀನು ತಿಳಿದವ, ಜ್ನಾನಿ, ಬುದ್ಧ. ನಿನ್ನಂಧವನು ಅಂಧ ಕೆಲಸವನ್ನು ಮಾಡಿದ್ದರೆ, ಅದು ಅಕ್ಷಮ್ಯವಾಗುತ್ತದೆ’. ಬುದ್ಧ ಈ ಮಾತು ಕೇಳಿ ನಾಚಿಕೆಪಡುತ್ತಾನೆ.

ಇದೊಂದು ವಿವರಣೆ ನನ್ನನ್ನು ಯಾವಾಗಲೂ ನೆನಪಾಗುತ್ತದೆ. ನಾನು ಜನ ರಸ್ತೆಯಲ್ಲಿ ಉಗುಳುವುದು, ಪಾರ್ಕಿನಲ್ಲಿ ಕಸವನ್ನು ಎಸೆಯುವುದು, ಕಸದ ತೊಟ್ಟಿಯ ಸುತ್ತಲೇ ಕಸ ಹಾಕುವುದಂಥಹುದನ್ನು ನೋಡಿದಾಗ, ಇದು ಇಂಥ ಜನರಿಗೇ ಅನ್ವಯವಾಗುವುದು ಅನ್ನಿಸುತ್ತದೆ. ಇವರೆಲ್ಲರನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತದೆ. ಹಾಗೆ ಮಾಡುವವರಲ್ಲಿ ಹೆಚ್ಚಿನವರು ಓದಿದವರ ಹಾಗೆ ಕಾಣ್ತಾರೆ. ಆದರೆ ಅವರ್ಯಾರೂ ತಿಳಿದವರ ಹಾಗಂತೂ ಕಾಣ್ಸೋದಿಲ್ಲ. ನನ್ನ ಗುರುಗಳು ಜಿ. ರಾಮಚಂದ್ರ ಅಂಥ, ಅವರು ಹೇಳ್ತಾ ಇರ್ತಿದ್ರು. ’ನೀನು ಬರೀ ಓದಿದ್ರೆ ಸಾಲ್ದಯ್ಯ, ಓದಿದವರಲ್ಲ ಬುದ್ದಿವಂತರು, ತಿಳಿದವರು ಆಗೋಲ್ಲ. ಹತ್ತು ತಿಳಿಗೇಡಿಯಾದ ವಿದ್ಯಾವಂತರಿಗಿಂತ, ಒಬ್ಬ ತಿಳಿವಳಿಕಯುಳ್ಳ ಹೆಬ್ಬೆಟ್ಟು ಎಷ್ಟೋ ವಾಸಿ!’ ಎಷ್ಟೊಂದು ನಿಜ. ಕೇವಲ ಶಿಕ್ಷೆಯಿಂದಲೇ ನಾವು ಜನರನ್ನು ದಾರಿಗೆ ತರಲು ಸಾಧ್ಯವೇ? ಯಾವಾಗ ನಾಗರೀಕರಾದ ನಾವು ಸುಸಂಸ್ಕೃತರಾಗುವುದು?

ಇನ್ನೊಂದು ಮಾತೂ ನಮ್ಮ ಗುರುಗಳು ಹೇಳ್ತಿದ್ರು ’Rules ಅನ್ನೋದು ನಿನಗೆ ಇಷ್ಟ ಇಲ್ದಲೇ ಇದ್ದಿದ್ರೆ, ಆ Rule ಅನ್ನು ಬದಲಾಯಿಸೋಕ್ಕೆ ಹೋರಾಡು. ಆ ನಿಯಮವನ್ನು ಮುರಿದು, ನಿನ್ನ ಅಸಮ್ಮತಿಯನ್ನು ತೋರಿಸೋಕೆ ಹೊರಟ್ರೆ, ಪ್ರಪಂಚವೇ ಒಂದು ದೊಂಬಿಯಾಗುತ್ತದೆ’

ಗೆಳೆಯರೇ, I think, ನಮಗೆ ಪ್ರತಿದಿನವೂ ಅನೇಕ ಬಾರಿ ಆ ಬುದ್ಧನ ಪರಿಸ್ಥಿತಿ ಎದುರಾಗುತ್ತದೆ. ನಮ್ಮ reaction  ಹೇಗಿರಬೇಕು. ಬುದ್ಧನ ಆ ಅಂತರಂಗದ ವಾಣಿ, ನಮ್ಮಲ್ಲೂ ಯಾಕೆ ಮೊಳಗೊಲ್ಲ? ನಾವು ಅಷ್ಟು ಅವಿವೇಕಿಗಳಾಗಿದ್ದೇವೆಯೆ? ನಮ್ಮ ಸುತ್ತಲಿನ ಪರಿಸರಕ್ಕೆ ಅಷ್ಟು Insenstive  ಆಗಿದ್ದೇವೆಯೇ? ಯೋಚಿಸಿ ನೋಡಿ, ಹೇಳಿ.

ಕೊನೆ ಹನಿ: ಇವತ್ತು ಒಬ್ಬ Customer ಮೀಟಿಂಗ್ ಇತ್ತು. ಒಬ್ಬರು ಹೇಳಿದ್ದರು, ’Prady (ನನ್ನ short name), ನಿನ್ನ Passion is infectious' ಅಂತ. ಆ ರೀತಿಯಾದ Passion  ಅನ್ನು ನನ್ನಲ್ಲಿ ಬೆಳೆಸಿದ ಆ ಗುರುವಿಗೆ ನನ್ನ ನಮನ.

ಮತ್ತೆ ನಾಳೆ ಸಿಗುವ.

ಪ್ರದ್ಯುಮ್ನ ಬೆಳವಾಡಿ.

Feb 11, 2007: 00:00 AM.

~.~
  • Pradyumna Belavadi ರವರ ಬ್ಲಾಗ್
  • Login or register to post comments
  • 421 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 27, 2007 - 3:46am — Shyam Kishore

ಅನಿಸಿಕೆ: ಬುದ್ಧ ಮತ್ತು ಬೇಡ : ಓದಿನಿಂದ ತಿಳಿವಳಿಕೆಯತ್ತ...

Shyam Kishore's picture

ಕಥೆಯ ಮೂಲ ಆಶಯ ಮೇಲ್ನೋಟಕ್ಕೆ ಸರಳವಾಗಿದ್ದರೂ ವಿಚಾರಪ್ರದವಾಗಿದೆ. ಆದರೆ ಸಮಾಜದಲ್ಲಿ ಬೇಡನ (ವೃತ್ತಿ ಅಥವಾ ಜಾತಿಸೂಚಕ ಅಲ್ಲ ಸ್ವಾಮಿ; ನಮ್ಮೆಲ್ಲರಲ್ಲೂ, ಪ್ರತಿಯೊಬ್ಬರಲ್ಲೂ ಯಾವುದಾದರೊಂದು ವಿಚಾರವಾಗಿ ಬೇಡನ ಪ್ರವೃತ್ತಿ ಇದ್ದೇ ಇರುತ್ತದೆ) ಮನೋಭಾವದವರನ್ನೂ ಹೇಗಾದರೂ ಎಚ್ಚರಿಸುವ ಮಾರ್ಗವೂ ಬೇಕಾಗುತ್ತದೆ ಅಲ್ಲವೇ? ಇಲ್ಲವಾದಲ್ಲಿ ಪ್ರತಿಯೊಬ್ಬರಲ್ಲಿಯೂ ಇರುವ "ಬೇಡನ (ಬೇಡದ!) ಮನೋಭಾವ" ಹಾಗೆಯೇ ಉಳಿಯುವ ಸಂಭವವೇ ಹೆಚ್ಚು.

ನೀವು ಬರೆದಿರುವ "...ಓದಿದೋರ ಹಾಗೆ ಕಾಣ್ತಾರೆ, ಆದರೆ ತಿಳಿದವರ ಹಾಗಂತೂ ಕಾಣ್ಸೋದಿಲ್ಲ..." ಮಾತು ಇಂದಿನ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತ. ಇದೇ ವಿಚಾರವಾಗಿ ಸಂಪದದಲ್ಲಿ ಹಿಂದೆ, ಶ್ಯಾಮ್ ಕಶ್ಯಪ್ ಅವರ ನಾಗರೀಕ ಜವಾಬ್ದಾರಿಗಳು ಅನ್ನುವ ಲೇಖನದಿಂದಾಗಿ ಒಂದಷ್ಟು ವಿಚಾರ ವಿನಿಮಯ ನಡೆದಿತ್ತು. ಆದಷ್ಟೂ ಬೇಗ ಓದಿನಿಂದ ತಿಳಿವಳಿಕೆಯತ್ತ ನಾವೆಲ್ಲರೂ ಸಾಗಬೇಕಾಗಿದೆ.

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬುದ್ಧ ಸ್ವೀಕರಿಸಲೊಪ್ಪದ ಉಡುಗೊರೆ!
  • ಹೊಸ ವರ್ಷದ ಹಳೆಯ ನೆನೆಪು
  • ಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆ
  • ನಗುವ ಬುದ್ಧ
  • ಮೊದಲ ಪ್ರೇಮಿಗೆ
Syndicate content

ಲೇಖಕರು

Pradyumna Belavadi's picture

ಪರಿಚಯ

ಕಲಿಯೋದೆ ಕೋಟಿ ಭಾಷೆ, ಆಡೋದೆ ಓಂದೇ ಭಾಷೆ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 56 ಅತಿಥಿಗಳು ಆನ್ಲೈನ್ ಇರುವರು.


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator