ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › prakashaka ರವರ ಬ್ಲಾಗ್

'ಲವ್ ಲೆಟರ್ ' ರಾದ್ದಾಂತ!!

September 14, 2005 - 12:47pm — prakashaka

ಎಂದಿನಂತೆ ಬೆಳಿಗ್ಗೆ ಬೇಗ ಎದ್ದು ಹೊಲಗಳ ಮಧ್ಯೆದಿಂದ ಹಾದು ನದಿಯನ್ನು ಈಜಿಕೊಂಡು ಒದ್ದೆ ಬಟ್ಟೆಯನ್ನು ಪಂಪು ಶೆಡ್ಡಿನಲ್ಲಿಟ್ಟು. 'ಶ್ರೀದೇವಿ' ಬಸ್ಸನೇರಿ ಖಛೇರಿಗೆಂದು ಮೂಡಬಿದ್ರೆಗೆ ಹೊರಟೆ. ದಿನವೂ ಒಂದು ಸ್ಮೈಲ್ ಕೊಟ್ಟು ಟಿಕೆಟ್ ಕೊಡುವ ಕಂಡೆಕ್ಟರ್ ಟಿಕೆಟ್ ಕೊಟ್ಟು ಹಣ ಪಡೆದು ಕೊಂಡ.
ಬಸ್ಸು ಮುಂದೆ ಸಾಗುತ್ತಿದ್ದಂತೆ ಅಂಗಡಿಯಲ್ಲಿ ಪೇಪರ್ ಪಡಕೊಂಡು ಟೈಮ್ ಪಾಸಿಗಾಗಿ ಓದುತ್ತಾ ಇದ್ದೆ. ನನ್ನ ಒಂದು ಘಂಟೆಯ ಪ್ರಯಾಣದಲ್ಲಿ ಪೇಪರ್ ಬಿಟ್ಟರೆ ಬೇರೇನೂ ನನಗೆ ಕಾಣದು...
ಬೆಳಗ್ಗಿನ ಸಮಯವಾದ್ದರಿಂದ ಶಾಲಾ ಮಕ್ಕಳಿಂದ ಬಸ್ಸು ತುಂಬಿ ತುಳುಕುತ್ತಿತ್ತು.. ಮಕ್ಕಳು ಫುಟ್ ಬೋರ್ಡಿನಲ್ಲೂ ನೇತಾಡುತ್ತಿದ್ದರು.
'ಕಡಲ ಕೆರೆ' ಎಂಬ ಊರು ಬಂದಾಕ್ಷಣ ಬಸ್ಸು ನಿಂತಿತು. ಹೊರಗೆ ನೋಡಿದರೆ. ಹಲವಾರು ಯುವಕರು ಬಸ್ಸನ್ನು ಅಡ್ಡ ನಿಂತು ನಿಲ್ಲಿಸಿದ್ದಾರೆ.
ಪೆಟ್ರೋಲ್ ರೇಟು ಜಾಸ್ತಿಯಾಗಿದೆ.. ಬಸ್ಸಿನ ರೇಟು ಜಾಸ್ತಿಯಾದ್ದರಿಂದ ಇವರ ಸ್ಟ್ರೈಕೋ ಏನೋ ಎಂದು ತಿಳಿದು.. ಪೇಪರ್ನತ್ತ ಕಣ್ಣು ಹಾಯಿಸಿದೆ...
ಇತ್ತ ನಮ್ಮ ಕಂಡೆಕ್ಟರ್ ನೆರೆದ ಜನರತ್ತ ಸಾಗಿದ.. ಎಲ್ಲರೂ ಅವನನ್ನು ಸುತ್ತುವರಿದರು.. ನೋಡು ನೋಡುತ್ತಿದ್ದಂತೆಯೇ ಮಾತು ತಾರಕಕ್ಕೇರಿತು.. ನೆರೆದ ಜನರು ಕಂಡೆಕ್ಟರನನ್ನು ಹಿಗ್ಗಾ ಮುಗ್ಗಾ ಹೊಡೆಯಲಾರಂಭಿಸಿದರು.. ಇನ್ನೊಂದು ಮೂಲೆಯಲ್ಲಿ ಹುಡುಗಿಯೊಂದು ಈ ದೃಶ್ಯವನ್ನು ನೋಡುತ್ತಾ ನಿಂತಿತ್ತು..
೩-೪ ನಿಮಿಷದ ನಂತರ ಕಂಡೆಕ್ಟರ ನಮ್ಮ ಬಸ್ಸು ಹತ್ತಿದ. ಬಸ್ಸು ಚಲಿಸಿತು.
ಬಸ್ಸು ನಿಂತಾದ ನಂತರ ಡ್ರೈವರನಲ್ಲಿ ವಿಷಯವೇನೆಂದು ಕೇಳಿದೆ..
ಈ ಕಂಡೆಕ್ಟರ ಆ ಹುಡಿಗಿಗೆ ಪ್ರೇಮ ಪತ್ರವನ್ನು ಹಿಂದಿನ ದಿನ ಕೊಟ್ಟಿದ್ದನಂತೆ.. ಆ ಹುಡಿಗಿ ತನ್ನ ಅಣ್ಣನಲ್ಲಿ ಹೇಳಿ ಊರ ಯುವಕರನ್ನು ಸೇರಿಸಿ ಈ ಕಂಡಕ್ಟರನ್ನ್ನು ಹಳಿದು ಹೊಡೆದರಂತೆ...

ಈ ಸನ್ನಿವೇಶ ಯಾವುದೋ ಒಂದು ಸಿನಿಮೀಯ ದೃಶ್ಯದಂತ ಗೋಚರಿಸಿತ್ತು.

ಬಸ್ಸಿನೊಳಗಿಂದ ಕೆಲವು ಹುಡಿಗಿಯರು ಹೇಳುತ್ತಿದ್ದುದು ಕೇಳಿಸಿತು " ನಾಳೆಯಿಂದ ಈ ಬಸ್ಸಿನಲ್ಲಿ ನಾನು ಬರಲ್ಲಪ್ಪ"...

ಪ್ರಕಾಶ್ ಶೆಟ್ಟಿ ಉಳೆಪಾಡಿ
www.prakashaka.com

~.~
  • prakashaka ರವರ ಬ್ಲಾಗ್
  • Login or register to post comments
  • 797 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಲವ್ ಲೆಟರ್ ' ರಾದ್ದಾಂತ!!
  • ಇದು ಪದ್ಯವಲ್ಲ
  • ಮಂಪರಿನಲ್ಲಿ ಘಾಟಿ
  • ಕಿರುಮನೆ, ನಡುಮನೆ....
  • ರಸ್ತೆಗಿಂತ platform ಚೆಂದ
Syndicate content

ಲೇಖಕರು

prakashaka's picture

ಪರಿಚಯ

www.prakashaka.com ಅಂತರ್ಜಾಲ ತಾಣದ ಸಂಪಾದಕನಾಗಿರುವ ನಾನು, ಮೂಡಬಿದ್ರೆಯ ಕಾಲೇಜಿನಲ್ಲಿ ಗಣಕಯಂತ್ರ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.
ನನ್ನ ಸ್ವಂತ ಊರು, ಮಂಗಳೂರು ತಾಲೂಕಿನ ಉಳೆಪಾಡಿ ಎಂಬ ಚಿಕ್ಕ ಹಳ್ಳಿ.
ಅಂತರ್ಜಾಲದಲ್ಲಿ ಕನ್ನಡ ಪತಾಕೆಯು ಸದಾ ಹಾರುತ್ತಿರಬೇಕೆಂಬುದೇ ನನ್ನ ಆಸೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • mahesha
    ಉ: ನನ್ನ ಅನುನಾಯಿ
    July 24, 2008 - 7:51pm
  • rameshbalaganchi
    ಉ: ನನ್ನ ಅನುನಾಯಿ
    July 24, 2008 - 7:34pm
  • mahesha
    ಉ: ತೆರೆ, ತೆಱೆ
    July 24, 2008 - 7:32pm
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 6:41pm
  • madhava_hs
    ಉ: ಕುಮಾರವ್ಯಾಸ ಭಾರತ
    July 24, 2008 - 6:41pm
  • mahesha
    ಉ: ಸ್ತ್ರೀಸೌಂದರ್ಯ
    July 24, 2008 - 6:04pm
  • roshan_netla
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:38pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 5:28pm
  • vikashegde
    ಉ: ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
    July 24, 2008 - 5:27pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಹಂದಿ ಚಂದನದ ಸು
ಗಂಧವನು ಬಲ್ಲುದೆ?
ಒಂದನು ತಿಳಿಯಲರಿಯದ ಗುರುವಿಂಗೆ |
ನಿಂದೆಯೇ ಬಹುದು ಸರ್ವಜ್ಞ |

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator