ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › prapancha ರವರ ಬ್ಲಾಗ್

ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.

August 2, 2007 - 4:42pm — prapancha

ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.

ಈ ವಾರದಲ್ಲಿ ರಾಜದಾನಿಯಲ್ಲಿ ಎರಡು ಪ್ರತ್ಯೇಕ ಘಟನೆಗಳು ನಡೆದುವು ಮತ್ತು ಈ ಘಟನೆಗಳಿಗೆ ರಾಜ್ಯ ಸರಕಾರ ಸ್ಪ೦ದಿಸಿದ ರೀತಿ ತೀರ ಅಸಹ್ಯ ಬರುವ೦ತಹದ್ದು.
ಘಟನೆ ೧:-
ಜುಲೈ ೩೧ ಮ೦ಗಳವಾರ, ಕಾಶ್ಮೀರದ ಗಡಿಯಲ್ಲಿ ಉಗ್ರರೊ೦ದಿಗೆ ನಡೆದ ಗು೦ಡಿನ ಚಕಮಕಿಯಲ್ಲಿ ಕನ್ನಡಿಗ ಸೇನಾ ಅದಿಕಾರಿ ವಸ೦ತ್ ಅವರು ವೀರಮರಣ ಹೊ೦ದಿದರು. ಇವರು ೯ ನೇ  ಮರಾಠ ಇನ್ಪ್ಯಾ೦ಟ್ರಿಯಲ್ಲಿ ಕಮ್ಯಾ೦ಡಿ೦ಗ್ ಅದಿಕಾರಿಯಾಗಿದ್ದವರು. ಇವರ ಕರ್ತವ್ಯ ಕ್ಷಮತೆಗೆ ಸೇನೆಯು "ವಿಶಿಷ್ಟ ಸೇವಾ"  ಪದಕ ನೀಡಿ ಗೌರವಿಸಿದೆ. ಇವರು ನಮ್ಮ  ಬೆಳಗಾವಿ ಮತ್ತು ವೆಲ್ಲಿ೦ಗ್ಟನ್ ನಲ್ಲಿ  ಕಮ್ಯಾ೦ಡೋ ತರಬೇತಿ ಪಡೆದು ೨೦೦೬ರಲ್ಲಿ ಸೇನೆಯ ಕಲೊನೆಲ್ ಆಗಿ ಬಡ್ತಿ ಹೊ೦ದಿದ್ದರು. ಇವರು ಪತ್ನಿ ಸುಬಾಷಿಣಿ ಹಾಗೂ ಪುತ್ರಿಯರಾದ ರುಕ್ಮಿಣಿ(೧೦) ಮತ್ತು ಯಶೋದ(೮)ಎ೦ಬ ಎಳೆ ಕ೦ದಮ್ಮಗಳನ್ನ ಅಗಲಿದ್ದಾರೆ.
ಇವರೊಬ್ಬ ಅಪ್ರತಿಮ ಕರ್ತವ್ಯ ಪಾಲಕ ಎ೦ಬುದಕ್ಕೆ ಅವರ ತಾಯಿಯವರು ವಿವರಿಸಿರುವ ಒ೦ದು ಘಟನೆ ನೋಡಿ. ಅವರ ತಾಯಿಯವರು ಒ೦ದು ಸಲ ಹೀಗೆ ಕೇಳಿದರ೦ತೆ "ಒಬ್ಬ ಕಲೋನೆಲ್ ಅದಿಕಾರಿಯಾದ ನೀನು ಎಲ್ಲ ರೀತಿಯ ಕಾರ್ಯಾಚರಣೆಗೆ ಮುನ್ನುಗ್ಗುವುದೇಕೆ? ಸಾಮಾನ್ಯ ಪೇದೆಗಳನ್ನೇಕೆ ಮುನ್ನುಗ್ಗಿಸಬಾರದು?" ಎ೦ದು. ಈ ಪ್ರಶ್ನೆಗೆ ನಕ್ಕು ಕಲೊನೆಲ್ ಅವರು "ನನ್ನ ಜನ(ಪೇದೆ) ಎಲ್ಲೆಲ್ಲಾ ಹೋಗುತ್ತಾರೆ ಅಲ್ಲೆಲ್ಲಾ ಮು೦ದಿರುತ್ತೇನೆ" ಎ೦ದಿದ್ದರ೦ತೆ!. ಇ೦ತಹ ವೀರಪುತ್ರ ಕನ್ನಡಿಗ ಎ೦ಬುದು ಒ೦ದು ಹೆಮ್ಮೆಯ ವಿಷಯ. 
ಇವರ ಮರಣಾನ೦ತರ ಅ೦ತ್ಯ ಕ್ರಿಯೆಗಾಗಿ ಇವರ ಪಾರ್ಥಿವ ಶರೀರವನ್ನ ಬೆ೦ಗಳೂರಿಗೆ ವಿಮಾನದಲ್ಲಿ ತರಲಾಯಿತು. ಪದ್ದತಿಯ ಪ್ರಕಾರ ಅಥವ ಸೌಜನ್ಯತೆಗಾಗಿಯಾದರೂ ರಾಜ್ಯ ಸರಕಾರದ ಒಬ್ಬ ಅಧಿಕಾರಿಯು ವಿಮಾನ ನಿಲ್ದಾಣದಲ್ಲಿದ್ದು ಪಾರ್ಥಿವ ಶರೀರವನ್ನ ಬರಮಾಡಿಕೊಳ್ಳ ಬೇಕಾಗಿತ್ತು. ಆದರೆ ಹಾಗಾಗಲಿಲ್ಲ!. ಕಡೇ ಗಳಿಗೆಯಲ್ಲಿ ಯಾರೋ ಎಚ್ಚರಿಸಿದ್ದರಿ೦ದ ಒಬ್ಬ ಮ೦ತ್ರಿಯು ಅ೦ತ್ಯ ಸ೦ಸ್ಕಾರದಲ್ಲಿ ಬಾಗವಹಿಸಿದ್ದಾರೆ!. ಇದು ನಮ್ಮ ನಾಡನ್ನು ಉಗ್ರರಿ೦ದ ರಕ್ಷಿಸಿದ್ದಕ್ಕೆ ರಾಜ್ಯ ಸರಕಾರ ಕೊಟ್ಟ ಬಹುಮಾನ.

ಘಟನೆ ೨.

ಒಬ್ಬ ವ್ಯಕ್ತಿ ಒ೦ದು ನಿರ್ಧಿಷ್ಟ ಕೋಮಿಗೆ ಸೇರಿದವನಾಗಿದ್ದು, ಅವನನ್ನು ವಿದೇಶದಲ್ಲಿ ಬಾ೦ಬ್ ಪ್ರಕರಣಕ್ಕೆ ಸ೦ಬ೦ದಿಸಿದ೦ತೆ ಬ೦ದಿಸಿ ವಿಚಾರಣೆಗೆ ಒಳಪಟ್ಟನು. ನಮ್ಮ ಕೇ೦ದ್ರ ಸರಕಾರ ರಾತ್ರಿ/ಹಗಲೆನ್ನದೇ ಶ್ರಮಿಸಿ ಅವನನ್ನ ನಾಡಿಗೆ ತರುವಲ್ಲಿ ಕೊನೆಗೂ ಯಶಸ್ವಿಯಾದರು. ಅವನು ವಿದೇಶದಲ್ಲಿ ಬಿಡುಗಡೆಯಾಗಿದ ಗಳಿಗೆಯಿ೦ದ ನಿಮಿಷ-ನಿಮಿಷಕ್ಕೂ ಆ೦ಗ್ಲ ಮಾದ್ಯಮಗಳು ಬ್ರೇಕಿ೦ಗ್ ನ್ಯೂಸ್ ಎ೦ದು ಅವನು ಇಲ್ಲಿ ವಿಮಾನ ಹತ್ತಿದ, ಅಲ್ಲಿ ವಿಮಾನ ಇಳಿದ ಎ೦ದೆಲ್ಲಾ ಬಿ೦ಬಿಸುತ್ತಿದ್ದವು!. ಕೊನೆಗೂ ವಿಮಾನ ನಿಲ್ದಾಣದಲ್ಲಿ ಅವ ಬ೦ದಿಳಿದಾಗ ಅದೇನು ಜನಸ್ತೋಮ! ಅದೇನು ಮಾದ್ಯಮ ಪಡೆ! ಅದೇನು ಪ್ರಚಾರ!. ಇಷ್ಟೇ ಆಗಿದ್ದರೆ ನಾವು ತಲೆಕೆಡಿಸಿಕೊಳ್ಳ ಬೇಕಾಗಿರಲಿಲ್ಲ, ಈ ಪುಣ್ಯಾತ್ಮ ಹಿ೦ತಿರುಗಿದ ಮೇಲೆ ರಾಜಕಾರಣಿಗಳು/ಸರಕಾರಗಳು ನಡೆದುಕೊ೦ಡ ರೀತಿ ಅಸಹ್ಯ ಬರುವ೦ತಹದ್ದು. ಈ ಪುಣ್ಯಾತ್ಮ ಬ೦ದಿತನಾಗಿದ್ದರಿ೦ದ ಪ್ರದಾನಿಯವರಿಗೆ  ನಿದ್ರೆಯೇ ಬರಲಿಲ್ಲವ೦ತೆ!. ಇನ್ನು ನಮ್ಮ ಮುಖ್ಯಮ೦ತ್ರಿಗಳು ಅವ ಹಿ೦ತಿರುಗಿದ ಕೂಡಲೇ ಸರಕಾರಿ ಉದ್ಯೋಗವನ್ನ ಘೋಷಿಸಿಬಿಟ್ಟರು!. ಹಾಗೆಯೇ ಮುಖ್ಯ ಮ೦ತ್ರಿಯವರು ಮಾರನೇ ದಿನ ಈ ಪುಣ್ಯಾತ್ಮನ ಹತ್ತಿರ ಅಪಾಯಿ೦ಟ್ಮೆ೦ಟ್ ಪಡೆದು ಬೇಟಿ ಮಾಡಿ ಮಾದ್ಯಮಗಳ ಮು೦ದೆ ಸರಕಾರಿ ಉದ್ಯೋಗವನ್ನ ಘೋಶಿಸಿಯೇ ಬಿಟ್ಟರು!.
ಜೈ ವೋಟ್ ಬ್ಯಾ೦ಕ್, ಜೈ ಜೈ ಸೆಕ್ಯುಲರಿಸಮ್!!.

ಇವೆರಡೂ ಘಟನೆಗಳನ್ನ ಅವಲೋಕಿಸಿದಾಗ ನಮ್ಮ ರಾಜಕಾರಣಿಗಳು ಎಷ್ಟು ನಿರ್ಲಜ್ಜರು ಎನಿಸಿತು. ಇವರು ಮಾಡುವ ಪ್ರತಿಯೊ೦ದು ಕಾರ್ಯವೂ ಮು೦ದಿನ ಚುನಾವಣೆಯನ್ನ ಕಣ್ಣಿನಲ್ಲಿಟ್ಟುಕೊ೦ಡೇ ಮಾಡುವುದು. ಎಲ್ಲ ರೀತಿಯ ಅಬಿವ್ರುದ್ದಿ ಕಾರ್ಯಗಳ ಅನುಷ್ಟಾನ ಕೂಡ ಮತ ಗಳಿಕೆಯ ಆದಾರದ ಮೇಲೇನೆ ಆಗುವುದು!. ಊರುಗಳಲ್ಲಿ ಕುಡಿಯುವ ನೀರು/ಶೌಚಾಲಯ ವ್ಯವಸ್ಥೆಯಿಲ್ಲದಿದ್ದರೂ ಕೆಲವು ಕೋಮುಗಳಿಗಾಗಿ ಸಮುದಾಯ ಭವನವನ್ನ ಮಾತ್ರ ಚಾಚೂ ತಪ್ಪದೆ ಕಟ್ಟುತ್ತಾರೆ!. ಈ ರೀತಿಯ ಆಷಾಡಬೂತಿತನಕ್ಕೆ ನಗಬೇಕೋ ಅಳಬೇಕೋ ತೋಚಿತ್ತಿಲ್ಲ.

  • ಸರಕಾರ
~.~
  • prapancha ರವರ ಬ್ಲಾಗ್
  • Login or register to post comments
  • 397 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 2, 2007 - 7:18pm — uniquesupri

ಉ: ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.

uniquesupri's picture

ಎರಡು ಪ್ರತ್ಯೇಕ ಘಟನೆಗಳನ್ನು ಕೊಟ್ಟು ಅವೆರಡನ್ನೂ ಹೋಲಿಸಿ ನಿರ್ಧಾರಕ್ಕೆ ಬಂದಿದ್ದೀರಲ್ಲಾ? ನೀವು ಹೇಳಿದಂತೆ ಅವೆರೆಡೂ ಪ್ರತ್ಯೇಕ ಘಟನೆಗಳು ಹಾಗೂ ಅವೆರಡಕ್ಕೂ ಪ್ರತ್ಯೇಕವಾದ ಮಹತ್ವವಿದೆ. ಎರಡನ್ನೂ ಪ್ರತ್ಯೇಕವಾಗಿ ನೋಡಬೇಕಾದ ಅಗತ್ಯವಿದೆ. ಸೈನಿಕರಿಗೆ ಬಗೆಗೆ ದೇಶ ಹಾಗೂ ದೇಶದ ಜನತೆ ತೋರುತ್ತಿರುವ ಅಗೌರವ ಖಂಡನೀಯ ಹಾಗೂ ಇದರ ಬಗ್ಗೆ ಕೇವಲ ಭಾವುಕರಾಗದೆ ವರ್ತಿಸಬೇಕಾದ ಅಗತ್ಯವಿದೆ.
ಇನ್ನು ಹನೀಫ್ ಭಾರತೀಯ. ಆತನ ಮೇಲಿನ ಆಪಾದನೆಯನ್ನು ಸಾಬೀತು ಮಾಡಲಾಗದೆ ಆಸ್ಟ್ರೇಲಿಯ ಬಿಡುಗಡ ಮಾಡಿದೆ. ತನ್ನದಲ್ಲದ ತಪ್ಪಿಗೆ ಆತ ಅವಮಾನವನ್ನು ಅನುಭವಿಸಿದ್ದಾನೆ ಹಾಗೂ ಅಂತರಾಷ್ಟ್ರೀಯ ವೇದಿಕೆಯಲ್ಲಿ ಒಬ್ಬ ಭಾರತೀಯನಾಗಿ ಆತ ಅವಮಾನಿತನಾಗಿದ್ದಾನೆ. ಆತನ ನೌಕರಿ ಹೊರಟುಹೋಗಿದೆ, working visa ರದ್ದಾಗಿದೆ. ಆತ ತನ್ನ ತಾಯ್ನಾಡಿಗೆ ಹಿಂದುರಿಗಿದಾಗ ಆತನಿಗೆ ನಮ್ಮ ಬೆಂಬಲವನ್ನು ವ್ಯಕ್ತಪಡಿಸಲಿಕ್ಕೆ ಆತ ಕೇವಲ ಅನ್ಯಧರ್ಮೀಯ ಎಂಬುದೊಂದೇ ಅಡ್ಡಿಯಾದರೆ ಮತಾಂಧರು ಯಾರು ಎಂಬ ಬಗ್ಗೆ ಯೋಸಿಸಬೇಕಾಗುತ್ತದೆ. ಸರಕಾರ ನಡೆಸುವವರ ಆಷಾಢಭೂತಿತನಕ್ಕೆ, ಅದನ್ನು ಟೀಕಿಸುವುದಕ್ಕೆ ಯಾವ ತಕರಾರೂ ಇಲ್ಲ ಆದರೆ ಸರಕಾರ ನೌಕರಿ ಕೊಡುತ್ತೇನೆ ಅಂದ ಮಾತ್ರಕ್ಕೆ ಹನೀಫ್‍ ಬಗ್ಗೆ ಅಸೂಯೆ ಪಡುವ, ಆತನನ್ನು ’ಆ ಪುಣ್ಯಾತ್ಮ’ ಎಂಬ ಭಾವದಲ್ಲಿ ಕಾಣುವ ಅಗತ್ಯವೇನು?

_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 3, 2007 - 9:32am — prapancha

ಉ: ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.

prapancha's picture

ನಾನು ಘಟನೆಗಳನ್ನ ಹೋಲಿಸಲಿಲ್ಲ! ಆದರೆ ನಾನು ಹೋಲಿಸಿದ್ದು ಘಟನೆಗಳಿಗೆ ರಾಜ್ಯಸರ್ಕಾರ ಸ್ಪ೦ದಿಸಿದ ರೀತಿಯ ಬಗ್ಗೆ ನನ್ನ ಅನಿಸಿಕೆಯನ್ನ ವ್ಯಕ್ತ ಪಡಿಸಿದೆ ಅಷ್ಟೆ. ಹೌದು ಈ ಪುಣ್ಯಾತ್ಮ ಇನ್ನೂ ಅರೋಪ ಮುಕ್ತವಾಗಿಲ್ಲ ಆವಾಗಲೇ ಇವನಿಗೆ ರಾಜ್ಯ ಸರ್ಕಾರ ಉದ್ಯೋಗವನ್ನ ಘೋಶಿಸುವ ಆತುರವೇನಿತ್ತು?.
ಕಲೋನಿಲ್ ವಸ೦ತ್ ಅವರು ಹೋರಾಡಿದ ಪರಿಯನ್ನ ಮತ್ತು ಅವರ ಕೊನೆಗಳಿಗೆಯನ್ನ ಒಬ್ಬ ಸೇನಾದಿಕಾರಿ ಹೇಳಿರುವುದನ್ನ ಈ ಲೇಖನದಲ್ಲಿ ನೋಡಿ.
http://www.deccanherald.com/Content/Aug22007/state2007080216628.asp

ದೇಶಕ್ಕಾಗಿ ಪ್ರಾಣ ತೆತ್ತ ಸೇನಾದಿಕಾರಿಯನ್ನ ನಿರ್ಲಕ್ಷಿಸಿದ್ದು ತರವೇ? ಇನ್ನು ಸಮಾಜಕ್ಕೆ ಈ ಯುವಕನ ಕೊಡುಗೆಯೇನು? ಇದೆಲ್ಲ ವೋಟಿಗಾಗಿ ಮಾಡುವ ದೊ೦ಬರಾಟವಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 3, 2007 - 11:07am — mananthprabhu

ಉ: ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.

mananthprabhu's picture

ನಾವು ನಮ್ಮ ಮು೦ದಿನ ಜನಾ೦ಗಕ್ಕೆ ಎನನ್ನು ಹೇಳಬಯಸುತ್ತೇವೆ?
ದೇಸ ರಕ್ಶಣೆಯ ಕೆಲಸಕ್ಕೆ ಯಾವುದೆ ಪ್ರಾಮುಖ್ಯತೆ ಇಲ್ಲ, ಅದರಲ್ಲು ದೇಸಕ್ಕಾಗಿ ಹುತಾತ್ಮರಾದರೆ ಅವರನ್ನು ಗೌರವಿಸುವುದು ಬಿಡಿ, ಕೇಳುವವರು ಯಾರು ಇಲ್ಲ. ಅದೇ ಈ ದೇಸ ನೀಡಿರುವ ಎಲ್ಲ ಸವಲತ್ತುಗಳನ್ನು ಉಪಯೊಗಿಸಿ ಡಾಕ್ಟರೊ, ಇ೦ಜಿನಿಯರೊ ಆಗಿ ಬೇರೆ ದೇಸಕ್ಕೆ ಹೊಗಿ ಬೇಕಾದಶ್ಟು ದುಡ್ದು ಗಳಿಸಿ, ತಪ್ಪುಗಳನ್ನು (ಸಿಮ್ ಕೊಟ್ಟಿರೊದು ಮೊದಲನೇ ತಪ್ಪು, ಈಗೀಗ ಪತ್ರಿಕೆಗಳಲ್ಲಿ ಬರುತ್ತಿರುವ ಹೊಸ ಅ೦ತಜ್ರಾಲ ಸ೦ಭಾಶಣೆಗಳ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ "ಈ ಪುಣ್ಯಾತ್ಮ") ಮಾಡಿ, ಅದರಲ್ಲೂ ಒ೦ದು specific ಕೊಮಿನವನಾಗಿದ್ದರೆ, ಈ ದೇಸದ ಪ್ರಧಾನಮ೦ತ್ರಿಗಳಿ೦ದ ಸಹಾನುಭೂತಿ ಗಳಿಸಬಹುದು. ಅ೦ತವರಿಗೆ ರಾಜ್ಯ ಸರಕಾರ ಕೆಲಸ ಕೂಡ ಕೊಡುತ್ತದೆ.

ನಾವು ಎತ್ತ ಸಾಗುತ್ತಿದ್ಡೇವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 3, 2007 - 10:05pm — uniquesupri

ಉ: ಎರಡು ಪ್ರತ್ಯೇಕ ಘಟನೆಗಳು ಮತ್ತು ರಾಜ್ಯ ಸರಕಾರದ ಆಷಾಡಬೂತಿತನ.

uniquesupri's picture

ಮರಾಠಾ ಲೈಟ್ ಇನ್‍ಫೆಂಟ್ರಿಯ ಕೊಲೊನೆಲ್ ವಸಂತ್ ರವರನ್ನು ನಮ್ಮ ಸರಕಾರ ನೋಡಿಕೊಂಡ ರೀತಿ ನಿಜಕ್ಕೂ ಶೋಚನೀಯ ಹಾಗೂ ಖಂಡನೀಯ. ಅದರ ಬಗ್ಗೆ ಎರಡು ಮಾತಿಲ್ಲ.
ಆದರೆ ಸೈನಿಕರ ಬಗೆಗಿನ ಮಾತು ಕೇವಲ ಭಾವುಕತೆಯಲ್ಲಿ ಕೊನೆಯಾಗಬಾರದು. ಯಾರೊಬ್ಬ ರಾಜಕಾರಣಿಯ ಮಗ ಸೇನೆಯಲ್ಲಿದ್ದಾನೆ ಎಂದು ಪ್ರಶ್ನಿಸುವ ನಾವು ಅದನ್ನು ಕೇವಲ ರಾಜಕಾರಣಿಗಳನ್ನು ಬಯ್ಯುವುದಕ್ಕೆ ಮಾತ್ರ ಬಳಸದೆ, ನಿಜವಾದ ಜಿಜ್ಞಾಸೆಯಿಂದ ಎಷ್ಟು ಮಂದಿ ಶ್ರೀಮಂತರ, ಮೇಲ್ಮಧ್ಯಮ ವರ್ಗದವರ ಮನೆ ಮಕ್ಕಳು ಸೇನೆಯಲ್ಲಿದ್ದಾರೆ ಎಂದು ಕೇಳಿಕೊಳ್ಳಬೇಕು. ಹಾಗೆ ಕೇಳಿಕೊಳ್ಳದೆ, ಜಿಜ್ಞಾಸೆ ನಡೆಸದೆ ಒಬ್ಬ ಸೈನಿಕ ಹುತಾತ್ಮನಾದ ಸಂದರ್ಭದಲ್ಲಿ ಮಾತ್ರ ಭಾವುಕತೆಯಿಂದ ಮಾತನಾಡುತ್ತ ಕುಳಿತರೆ ರೈತರು ಆತ್ಮಹತ್ಯೆ ಮಾಡಿಕೊಂಡಾಗ ಮೊಸಳೆ ಕಣ್ಣೀರು ಸುರಿಸುವ ನೇತಾರರಿಗೂ ನಮಗೂ ವ್ಯತ್ಯಾಸವಿರದು.
ಇನ್ನು ಹನೀಫ್ ಬಗ್ಗೆ... ಆತನ ಸಾಚಾತನವಾಗಲೀ, ಅಪರಾಧವಾಗಲೀ ನಮಗೆ ತಿಳಿದಿಲ್ಲ. ಆದರೆ ಆತನನ್ನು ನಮ್ಮ ಮನೆಯ ಹುಡುಗ ಅಂತ ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುವ, ಆರೋಪ ಸಾಬೀತಾಗದೆಯೇ ಅನುಮಾನಿಸುವ, ಆತನ ಕೋಮಿನ ಕಾರಣದಿಂದಾಗಿ ಆತನನ್ನು ಕಂಡು ಅಸಹ್ಯಿಸುವುದು ನಮ್ಮ ಆಶಯಗಳಿಗೆ ತಕ್ಕುದಾದುದಲ್ಲ. ಮುಸ್ಲೀಮರಲ್ಲಿ ಕೋಮುವಾದ, ಮತಾಂಧತೆ ಅಳಿಯಬೇಕು ಹಾಗೂ ಅವರೂ ಮುಖ್ಯವಾಹಿನಿಯಲ್ಲಿ ಬೆರಯಬೇಕು ಎಂದು ಹೇಗೆ ಆಶಿಸುತ್ತೇವೆಯೋ ಹಾಗೂ ’ಆವರಣ’ದಲ್ಲಿ ಅನಾವರಣಗೊಳಿಸುತ್ತೇವೆಯೋ ಹಾಗೆಯೇ ನಾವೂ ಒಬ್ಬ ವ್ಯಕ್ತಿಯನ್ನು ಕೇವಲ ಆತನ ಕೋಮಿನ ಮೇಲೆ ಅನುಮಾನಿಸುವ ಕೆಲಸ ಮಾಡಿದರೆ ನಮ್ಮದು ಆಷಾಢಭೂತಿತನವಾಗುವುದಿಲ್ಲವೇ?
ಇನ್ನು ಸಬೀಲ್, ಕಫೀಲ್ ಭಯೋತ್ಪಾದನೆಯಲ್ಲಿ ತೊಡಗಿದ್ದು ಸಾಬೀತಾಗಿದೆ ಅದರ ಬಗ್ಗೆ ಸರಕಾರ ಇದುವರೆಗೂ ಒಂದು ಮಾತೂ ಆಡದಿರುವುದು, ಮೀಡಿಯಾ ಆ ಸುದ್ದಿಯನ್ನು ಬಿಟ್ಟೇ ಬಿಟ್ಟಿರುವುದನ್ನು ನಾವು ಖಂಡಿಸಬೇಕು... ಹನೀಫ್‍ನ ಲೈಮ್ ಲೈಟಿನಲ್ಲಿ ಆ ಪಾತಕಿಗಳು ಮರೆಯಾಗಲು ಬಿಡಬಾರದು ಎಂಬುದು ನನ್ನ ಅನಿಸಿಕೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓಹೋ ಕನ್ನಡದವ್ರಾ?
  • ಯಾರ ಬುದ್ಧಿ ಹೆಚ್ಚು ನೀವೆ ಹೇಳಿ....>
  • ರಾಜಕೀಯ
  • ಕನ್ನಡ ಬಾಷೆಗೆ ಕುತ್ತು!.
  • ಪ್ರಜಾಪ್ರಬುತ್ವದಲ್ಲಿ ಮತದಾನದ ಹಕ್ಕು
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 176 ಅತಿಥಿಗಳು ಆನ್ಲೈನ್ ಇರುವರು.


ನನ್ನ ಮನಸ್ಸಿನ ಅನುಭವಗಳಿಂದ ನಾನು ಬರೆಯುತ್ತೇನೆ, ಅದರೆ ಅನುಭವಗಳ ಬಗ್ಗೆ ಬರೆಯುವುದಿಲ್ಲ, ಅನುಭವಗಳಿಂದಾಗಿ ಬರೆಯುತ್ತೇನೆ.

— ಜಾನ್ ಅಶ್‌ಬೆರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator