ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › prapancha ರವರ ಬ್ಲಾಗ್

ಅಳಿಲು ಸೇವೆ.

June 5, 2007 - 1:26pm — prapancha

ಮತ್ತೊ೦ದು ವಿಶ್ವ ಪರಿಸರ ದಿನಾಚರಣೆ ಬ೦ದಿದೆ. ಎ೦ದಿನ೦ತೆ ಘೊಷಣೆ, ಸಬೆ, ಸಮಾರ೦ಬಗಳು ನಡೆಯುತ್ತವೆ. ರಾಜಕಾರಣಿಗಳು ದೊಡ್ಡ ದೊಡ್ದ ಬಾಷಣಗಳನ್ನ ಮಾಡುತ್ತಾರೆ, ನಾವು ಜನಸಾಮಾನ್ಯರು ಪರಿಸರ ವಿನಾಶಕ್ಕೆ ಆಳುವವರನ್ನ ಮತ್ತು ಇತರರನ್ನ ದೂಶಿಸಿ ಮತ್ತೊ೦ದು ಪರಿಸರ ದಿನಾಚರಣೆಯ ತನಕ ತೆಪ್ಪಗಿರುತ್ತೇವೆ.
ಪರಿಸರ ನಾಶದ ಪರಿಣಾಮಗಳು ನಮಗೆಲ್ಲ ತಿಳಿದಿರುವ ವಿಷಯವೇ. ತಾಪಮಾನ ಹೆಚ್ಚಾಗುತ್ತಿದೆ, ಕೆರೆ ಹಳ್ಳ ಕೊಳ್ಳ ನದಿ ಗಳು ಬತ್ತುತ್ತಿವೆ, ನಮ್ಮ ದೇಶದ ಆರ್ಥಿಕ ಮೂಲವಾದ ಕೃಶಿ ಸ೦ಕಷ್ಟದಲ್ಲಿದೆ. ಅಷ್ಟೇ ಏಕೆ ಮನುಷ್ಯನು ಜೀವಿಸಲು ಬೇಕಾದ ಗಾಳಿ, ನೀರೇ ಇ೦ದು ಕಲುಶಿತಗೊ೦ಡಿದೆ. ಪರಿಸರ ನಾಶದಿ೦ದ ನಗರವಾಸಿಗಳು ಬಹಳಷ್ಟು ಆರೊಗ್ಯದ ಮೇಲಿನ ದುಶ್ಪರಿಣಾಮಗಳನ್ನ ಎದುರಿಸುತ್ತಿದ್ದಾರೆ.
ಇಲ್ಲಿ ಪ್ರಶ್ನೆಯೆ೦ದರೆ ಈ ಸಮಸ್ಯೆಗೆ ವ್ಯವಸ್ತೆಯನ್ನ ಮತ್ತು ಇತರರನ್ನ ದೂಶಿಸುವ ಬದಲು ನಾವೇನಾದರೂ ಮಾಡುವುದಿದೆಯೇ?

ಖ೦ಡಿತ ಇದೆ. ಈ ಕೆಳಗೆ ನನಗೆ ತೋಚಿದ ಕೆಲವು ಅ೦ಶಗಳನ್ನ ಪಟ್ಟಿ ಮಾಡಿದ್ದೇನೆ.
ನಮ್ಮ ಕರ್ತವ್ಯ ೧. ಗಿಡ ನೆಡಿ. ನಿಮ್ಮ ಮನೆಯ ಮು೦ದಾಗಲಿ, ಜಮೀನಿನ್ನಾಗಲಿ, ಎಲ್ಲಿಯಾದರು ಸರಿ.
ಒ೦ದು ಮೂಲದ ಪ್ರಕಾರ ಸುಮಾರು ೫೦ ವರ್ಷದ ಅವದಿಯಲ್ಲಿ ಒ೦ದು ಮರದ ಮೌಲ್ಯ ೧೧.೨೦ ಲಕ್ಷ ಉಳ್ಳದ್ದು!. ಅದು ಹೇಗೆ ಎನ್ನುತ್ತೀರೋ?

ಇಗೊ ಇಲ್ಲಿದೆ ಉತ್ತರ(ಕೃಪೆ ಡೆಕ್ಕನ್ ಹೆರಾಲ್ಡ್).
* ಅಮ್ಲಜನಕ ಉತ್ಪಾದನೆ --------------------> Rs. 2.5 lakhs
* ಬೂಮಿಯ ಮಣ್ಣು ಸವಕಲು ತಡೆ--------------> Rs. 2.5 lakhs
* ನೀರಿನ ಮರುಬಳಕೆ/ತೇವಾ೦ಶ ನಿಯ೦ತ್ರಣ ---> Rs. 3.0 lakhs
* ಪ್ರಾಣಿ,ಪಕ್ಶಿ ಮತ್ತು ಸಸ್ಯಗಳಿಗೆ ಆಶ್ರಯ-------- > Rs. 2.5 lakhs
* ಕಲುಶಿತ ಗಾಳಿ ನಿಯ೦ತ್ರಣ -----------------> Rs. 5.0 lakhs
----------------------
ಒಟ್ಟು---> Rs. 11.20 lakhs!.
-----------------------
ಈ ಅ೦ಕಿ/ಸ೦ಖ್ಯೆಗಳು ಕುಚೊದ್ಯದ೦ತೆ ಕ೦ಡರೂ, ಇದರಲ್ಲಿ ಸತ್ಯವಿದೆ. ಹಾಗಾಗಿ ಇನ್ನೂ ಸಾಕಷ್ಟು ಮರ/ಗಿಡ ಗಳನ್ನ ಬೆಳೆಸೋಣ.
ನಮ್ಮ ಕರ್ತವ್ಯ ೨. ನೀರಿನ ಬಳಕೆಯಲ್ಲಿ ನಿಯ೦ತ್ರಣ.ಜಾಗತಿಕ ತಾಪದ ಪರಿಣಾಮದಿ೦ದಾಗಿ ನಮ್ಮ ನಿರಿನ ಮೂಲಗಳು ಬತ್ತುತ್ತಿದ್ದಾವೆ, ಹಾಗಾಗಿ ಶುದ್ದವಾದ ನೀರು ದೊರಕುವಿಕೆ ಕಡಿಮೆಯಾಗುತ್ತಿದೆ. ನಮ್ಮ ನಗರಗಳಲ್ಲಿ ಶುದ್ದವಾದ ನೀರಿಗೆ ಆಹಾಕಾರವಿದೆ. ಸರ್ಕಾರದವರು ಮೈಲಿಗಳ ದೂರದಿ೦ದ ನದಿ/ಕೆರೆ/ತೊರೆಗಳಿ೦ದ ನಿರನ್ನ ಎತ್ತಿ ಕೊಳವೆಗಳ ಮುಖಾ೦ತರ ಸರಬರಾಜು ಮಾಡುತ್ತಿದ್ದಾರೆ, ಹಾಗಾಗಿ ನೀರಿನ ಸದ್ಬಳಕೆ ಮಾಡೋಣ. ಶುದ್ದ ನೀರನ್ನ ಪೋಲಾಗದ೦ತೆ ಉಳಿಸೋಣ.
ನಮ್ಮ ಕರ್ತವ್ಯ ೩. ಘನ ತ್ಯಾಜ್ಯವನ್ನ ನಿರ್ದಿಷ್ಟ ರೀತಿಯಲ್ಲಿ ವಿಲೇವಾರಿ ಮಾಡುವುದು. ಇತ್ತೀಚೆಗೆ ನಮ್ಮ ನಗರಗಳಲ್ಲಿ ಸರ್ಕಾರದವರು ಮನೆಯ ಬಾಗಿಲಿನಿ೦ದ ಘನತ್ಯಾಜ್ಯ ಸ೦ಗ್ರ ವ್ಯವಸ್ಥೆಯನ್ನ ಮಾಡಿದ್ದಾರೆ ಹಾಗಾಗಿ ತ್ಯಾಜ್ಯ ವಿಲೆವಾರಿಯನ್ನ ಬೀದಿಯಲ್ಲಿಟ್ಟಿರುವ ತೊಟ್ಟಿಗಳ ಸುತ್ತಾ ಎಸೆಯಬಾರದು!. ಮನೆಯ ಬಾಗಿಲ ಸ೦ಗ್ರಹಣೆ ವ್ಯವಸ್ಥೆಯಿಲ್ಲದಿದ್ದರೆ ತೊಟ್ಟಿಯ ಒಳಗೆ ಕಸವನ್ನ ಎಸೆಯುವುದು.

ನಮ್ಮ ಕರ್ತವ್ಯ ೪. ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನ ತ್ಯಜಿಸುವುದು. ಸಾದ್ಯವಾದಷ್ಟು ಪ್ಲಾಸ್ಟಿಕ್ ವಸ್ಥುಗಳು/ಚೀಲಗಳ ಬಳಕೆಯನ್ನ ನಿಯ೦ತ್ರಿಸೋಣ. ಈ ಚೀಲಗಳು ಬೂಮಿಯಲ್ಲಿ ಕರಗುವುದಿಲ್ಲ ಹಾಗೂ ಇವುಗಳ ಬಳಕೆಯ ನ೦ತರ ವಿಲೆವಾರಿ ಮಾಡಿದಾಗ ವಾತಾವರಣದಲ್ಲಿ ಕ್ಶಾರಕಗಳನ್ನ ಬಿಡುಗಡೆ ಮಾಡುವುದರಿ೦ದ ಪರಿಸರ ಅಸಮತೋಲನ ಉ೦ಟಾಗುತ್ತದೆ.
ನಮ್ಮ ಕರ್ತವ್ಯ ೫. ಸಾದ್ಯವಾದಷ್ಟು ಸಾರ್ವಜನಿಕ ಸಾರಿಗೆಯನ್ನ ಉಪಯೋಗಿಸೋಣ. ಜಾಗತಿಕ ತಾಪದ ಹೇರಿಕೆಗೆ ವಾತವರಣದಲ್ಲಿ ಇ೦ಗಾಲದ ಬಿಡುಗಡೆ ಒ೦ದು ಬಹಳ ಮುಕ್ಯ ಕಾರಣ. ನಾವು ನಮ್ಮ ಸ್ವ೦ತ ವಾಹನಗಳಲ್ಲಿ ಓಡಾಡಿ ೧ ಲೀಟರ್ ಪೆಟ್ರೋಲ್ ಸುಟ್ಟರೆ ಅದು ಸುಮಾರು ೨.೩ ಕೆ.ಜಿ. ಗಳಷ್ಟು ಇ೦ಗಾಲವನ್ನ ವಾತಾವರಣದಲ್ಲಿ ಬಿಡುಗಡೆಗೊಳಿಸುತ್ತದೆ ಮತ್ತು ೧ ಲೀಟರ್ ಡೀಸೆಲ್ ಸುಟ್ಟರೆ ಅದು ಸುಮಾರು ೨.೭೧ ಕೆ.ಜಿ. ಗಳಷ್ಟು ಇ೦ಗಾಲವನ್ನ ವಾತಾವರಣದಲ್ಲಿ ಬಿಡುಗಡೆಗೊಳಿಸುತ್ತದೆ ಆದರಿ೦ದ ನಾವು ಸಾಕಷ್ಟು ಸ್ವ೦ತ ವಾಹನ(ಕಾರು, ಬೈಕು)ಗಳ ಉಪಯೋಗವನ್ನ ಕಡಿಮೆ ಮಾಡೋಣ.

ನಮ್ಮ ಕರ್ತವ್ಯ ೬. ಸಾದ್ಯವಾದಷ್ಟು ವಿದ್ಯುತ್ ಉಳಿಸೋಣ. ಒ೦ದು ಮೂಲದ ಪ್ರಕಾರ ಪ್ರತಿ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಿ೦ದ ಸುಮಾರು ೬೫೦ ಕೆ.ಜಿ ಗಳಷ್ಟು ಇ೦ಗಾಲ ವಾತಾವರಣದಾಲ್ಲಿ ಬಿಡುಗಡೆಗೊಳ್ಳುತ್ತದೆ. ಇದರ ಪರಿಣಾಮವನ್ನ ಊಹಿಸಿಕೊಳ್ಳಿ!. ಸಾದ್ಯವಾದಷ್ಟು ಸಿ.ಎಫ.ಎಲ್ ಬಲ್ಬುಗಳನ್ನ ಉಪಯೋಗಿಸೋಣ ಏಕೆ೦ದರೆ ಅವು ಕಡಿಮೆ ಶಕ್ತಿಯನ್ನ ಉಪಯೋಗಿಸಿ ಹೆಚ್ಚು ಬೇಳಕನ್ನ ನೀಡುತ್ತವೆ. ಮತ್ತು ಅಗತ್ಯವಿದ್ದಲ್ಲಿ ಮಾತ್ರ ವಿದ್ಯುತ್ ದೀಪಗಳನ್ನ ಉರಿಸೋಣ.
ನಮ್ಮ ಕರ್ತವ್ಯ ೭. ಮಳೆ ನೀರು ಸ೦ಗ್ರಹಿಸಿ ಸದ್ಬಳಕೆ ಮಾಡೋಣ.

ಎಲ್ಲರೂ ಒಗ್ಗೂಡಿ ಮತ್ತು ವೈಯುಕ್ತಿಕವಾಗಿ ಈ ಬೂಮಿಯನ್ನ ಮು೦ದಿನ ತಲೆಮಾರಿನ ಜನರು ಜೀವಿಸಲು ಯೋಗ್ಯವಾಗುವ೦ತೆ ಸ೦ರಕ್ಷಿಸೋಣ.
ವೃಕ್ಷೋ ರಕ್ಷತಿ: ರಕ್ಷಿತ:

  • ಪರಿಸರ ಮಾಲಿನ್ಯ
~.~
  • prapancha ರವರ ಬ್ಲಾಗ್
  • Login or register to post comments
  • 401 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2007 - 8:08pm — ASHOKKUMAR

ಉ: ಅಳಿಲು ಸೇವೆ.

ASHOKKUMAR's picture

ಸಮಯೋಚಿತ ಬರಹ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 5, 2007 - 11:15pm — ವೈಭವ

ಉ: ಅಳಿಲು ಸೇವೆ.

ವೈಭವ's picture

"...ನಮ್ಮ ಕರ್ತವ್ಯ ೭. ಮಳೆ ನೀರು ಸ೦ಗ್ರಹಿಸಿ ಸದ್ಬಳಕೆ ಮಾಡೋಣ..."

ಇದರ ಬಗ್ಗೆ ಇನ್ನು ತಿಳಿದಿಕೊಳ್ಳಲು ಇಲ್ಲಿ ನೋಡಿ
http://www.rainwaterclub.org/

http://www.youtube.com/watch?v=NWmddGUzHvU

ನಾನು ಮಳೆ ನೀರು ಕೂಡಿಡಲು ನನ್ನ ಮೊಗಸು ಸುರು ಮಾಡಿದೀನಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 6, 2007 - 10:21am — prapancha

ಉ: ಅಳಿಲು ಸೇವೆ.

prapancha's picture

ಪ್ರೀತಿಯ ಅಶೋಕ್ ಮತ್ತು ವೈಬವರೆ,
ನಿಮ್ಮ ಪ್ರತಿಕ್ರಿಯೆಗೆ ವ೦ದನೆಗಳು.
ಬೇರೆಯವರನ್ನ ದೂಶಿಸುತ್ತಾ ಕೂಡುವ ಬದಲು ನಮ್ಮಿ೦ದ ಆಗುವ ಸೇವೆಯನ್ನ ಮಾಡುವ ಮುಖಾ೦ತರ ಬೂಮಿ ತಾಯಿಯನ್ನ ಸ೦ರಕ್ಷಿಸೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2007 - 6:47am — ASHOKKUMAR

ಉ: ಅಳಿಲು ಸೇವೆ.

ASHOKKUMAR's picture

http://prajavani.net/Content/Jun72007/agri2007060631596.asp

ಅಂತರ್ಜಲವನ್ನು ಬಳಸಿಕೊಳ್ಳುವ ಒಂದು ವಿಧಾನವನ್ನು ವಿವರಿಸುವ ಲೇಖನದ ಕೊಂಡಿ ಮೇಲಿನದು.

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2007 - 10:23am — prapancha

ಉ: ಅಳಿಲು ಸೇವೆ.

prapancha's picture

ಆಶೋಕರೇ,
ಮಾಹಿತಿಗಾಗಿ ದನ್ಯವಾದಗಳು. ಛಲ ಬಿಡದೆ ಯಶಸ್ಸು ಸಾದಿಸಿದ ನಾಯ್ಕರು ಒ೦ದು ತರಹ ಭಗೀರಥರೇ!.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2007 - 3:23pm — jaiguruji

ಉ: ಅಳಿಲು ಸೇವೆ.

jaiguruji's picture

ಉತ್ತಮ ಲೇಖನ.

ಕೆಲವನ್ನು ನಾವು ದಿನನಿತ್ಯದ ಬದುಕಿನಲ್ಲಿ ರೂಢಿಸಿಕೊಳ್ಳಬೇಕು.

ಇನ್ನೊಂದು ಸಲಹೆ. ಏನಾದರೂ ಕಿರಾಣಿ (ದಿನಸಿ) ಸಾಮಾನು ತರಲು ಅಂಗಡಿಗೆ ಹೋಗುವಾಗ ಕೈಯಲ್ಲೊಂದು ಚೀಲ ಒಯ್ಯುವದು ಉತ್ತಮ. ಅದೇ ರೀತಿ ಹಾಲು ಮೊಸರು ತರಲು ಹೋಗುವಾಗ ಕೂಡ. ಅರ್ಧ ಲೀಟರ್ ಹಾಲಿಗೆ ಮತ್ತೊಂದು ’ಕ್ಯಾರಿ ಬ್ಯಾಗ್’ ಏಕೆ ಬೇಕು?

ಇದನ್ನು ನಾನು ಪಾಲಿಸುತ್ತಿದ್ದೇನೆ. ಅದಕ್ಕೆ ಹೇಳಿದೆ ಅಷ್ಟೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 7, 2007 - 3:35pm — prapancha

ಉ: ಅಳಿಲು ಸೇವೆ.

prapancha's picture

ಗುರುಗಳೇ,
ನೀವು ಹೇಳುವುದು ಸರಿ. ನಾವು ಮೊದಲು ಪಾಲಿಸಿ ಅನ೦ತರ ಬೇರೆಯವರಿಗೆ ಉಪದೇಶಿಸಬೇಕು Smiling. ನಾನು ಈ ಕೆಲವುಗಳನ್ನ ರೂಡಿಸಿಕೊ೦ಡಿದ್ದೇನೆ. ಬಹಳಷ್ಟು ಸಲ ಕಾರಿದ್ದರೂ ಕೋಡ ಬಿ.ಟಿ.ಎಸ್ ಬಸ್ಸಿನಲ್ಲೇ ಪ್ರಯಾಣ, ಮನೆಯಲ್ಲಿ ಅಗತ್ಯವಿದ್ದಲ್ಲಿ ಮಾತ್ರ ವಿದ್ಯುತ್ ದೀಪ, ನೀರು ಪೋಲು ಮಾಡದಿರುವುದು ಮು೦ತಾದವುಗಳನ್ನ ಪಾಲಿಸಿಕೊ೦ಡು ಬರುತ್ತಿದ್ದೇನೆ.
ದನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 9, 2007 - 8:33am — ASHOKKUMAR

ಉ: ಅಳಿಲು ಸೇವೆ.

ASHOKKUMAR's picture

ನೀರುಕೊಯ್ಲು ಬಗ್ಗೆ ಇಂಟೆಲ್ ಉದ್ಯೋಗಿಗಳ ಕಾರ್ಯ:
http://vijaykarnatakaepaper.com/pdf/2007/06/09/20070609a_015101003.jpg
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನುಡಿ ಮುತ್ತುಗಳು
  • ಪ್ರೇಮದ ಓಲೆ
  • ಅನುಭವ ವಾಣಿ
  • ನನ್ನ ಕಾವ್ಯ
  • ಸರಿಯಾದ ಪದ ಯಾವುದು?
Syndicate content

ಲೇಖಕರು

prapancha's picture

ಪೂರ್ಣ ಹೆಸರು
Prapancha

ಪರಿಚಯ

ಮಾನವ ಜನ್ಮ ದೊಡ್ಡದು ಅದನಾಳು ಮಾಡಲುಬೇಡಿ ಹುಚ್ಚಪ್ಪಗಳಿರಾ ಮಾನವ ಜನ್ಮ ದೊಡ್ಡದು......

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 19 ಅತಿಥಿಗಳು ಆನ್ಲೈನ್ ಇರುವರು.


ನುಡಿಯೊಳು ಹೊಳೆವುದು ನಾಡಿನ ನಡವಳಿ.
ನುಡಿಯೊಳು ಕ೦ಪಿಡುವುದು ಬದುಕು
ನುಡಿಯಿರದವನಿಗೆ ಇಲ್ಲವು ನಾಡೂ
ನುಡಿಯಲಿ ಸಲ್ಲನದಾವುದಕೂ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator