22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶಬ್ದಗಳಿಗಷ್ಟೇ ಸೀಮಿತವಾಗದಿರಲಿ

June 14, 2010 - 10:00pm
prasannakulkarni

ಶಬ್ದಗಳಿಗಷ್ಟೇ ಸೀಮಿತವಾಗದಿರಲಿ

ಗೆಳೆಯ ನಿನ್ನ ಪ್ರೀತಿ,

ಹಾಳೆಯ ಹೊರಕ್ಕೆ ಪ್ರೀತಿ ಹರಿದಾಗ

ಶಬ್ದ ಹಾಡಾಗುತಿರಲಿ

ನಿನ್ನ ಕಾವ್ಯದ ಉದಯ ರವಿಗೆ

ಅರುಣರಾಗ ನನ್ನದು ಗೆಳೆಯ,

ಕಾವ್ಯದ ಹೊರಕ್ಕೆ, ಬಾಳಿನ ಜ್ಯೋತಿ

ನಿರ೦ತರ ಉರಿಯುತಿರಲಿ.

ನಿನ್ನ ಭಾವಾಗಸದ ಮೇಘಕ್ಕೆ

ತ೦ಪು ಚು೦ಬನವಿರಿಸಿ

ಹನಿಯುವೆನು ಗೆಳೆಯ,

ಅಲ್ಲಿ ಅರಳಿದ ಕವಿತೆ

ನೆರೆಯ ಹೊರೆಯಾಗದಿರಲಿ.

ನಿನ್ನ ಹೃದಯದೊಳಗೆ ಮೆರೆವ

ಕಾವ್ಯರಾಣಿಯು ನಾನು ಗೆಳೆಯ,

ಎದೆಯ ಹೊರಕ್ಕೆ, ಭಾವ ಕಲಹದಿ

ಕವಿತೆ ಸೋಲದಿರಲಿ.

- ಪ್ರಸನ್ನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by asuhegde on

ತಪ್ಪು: ಶಬ್ಧ
ಒಪ್ಪು: ಶಬ್ದ

ತಪ್ಪು: ಹಾಡಗುತಿರಲಿ.
ಒಪ್ಪು: ಹಾಡಾಗುತಿರಲಿ

ಪ್ರೀತಿ ಶಬ್ದಗಳಿಗಷ್ಟೇ ಸೀಮಿತವಾಗದಿರಲಿ,
ಪ್ರೀತಿ ಹಾಡಾಗುತಿರಲಿ.
ಪ್ರೀತಿ ಹಾಡಾಗಿ ನಿಂತುಬಿಡಲೇಕೆ
ಪ್ರೀತಿ ಹೃದಯದಿಂದ ಹೃದಯಕ್ಕೆ ಹರಿಯುತಿರಲಿ.

ಕವಿತೆ ಎಲ್ಲೋ ಸೋತ ಅನುಭವ ಓದುಗನಿಗೂ ಆಗುತ್ತಿದೆಯಲ್ಲಾ...

- ಆಸು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಶಬ್ದವನ್ನು ಸರಿಪಡಿಸಿದ್ದೇನೆ ಗುರುಗಳೇ..
"ಪ್ರೀತಿ ಹಾಡಾಗಿ ನಿಂತುಬಿಡಲೇಕೆ
ಪ್ರೀತಿ ಹೃದಯದಿಂದ ಹೃದಯಕ್ಕೆ ಹರಿಯುತಿರಲಿ." - ಪ್ರೀತಿಯನ್ನು ವಿಶಾಲವಾಗಿಸಿದ್ದಕ್ಕೆ ತಲೆದೂಗಿದ್ದೇನೆ.
ಪ್ರೀತಿಯೆ೦ಬ ಅದ್ಭುತ ಶಕ್ತಿ, ಮನಸ್ಸಿನೊಳಗೆ ಇಳಿದಾಗ ಶಬ್ದವೂ ಹಾಡಾಗುತ್ತದೆ, ಭಾವ ಹೊರಗೆ ಹರಿದು ಮನಸ್ಸು ಹಗುರಾಗುತ್ತದೆ. ಆದರೆ ಇಲ್ಲಿ ಹಾಡಾಗಿದ್ದು ಸೋಲಬಾರದೆ೦ಬ ಕಾಳಜಿ ಇದೆ ಎ೦ಬುದನ್ನು ಕವಿತೆಯಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ..
ತಮ್ಮ ಅಮೂಲ್ಯ ಪ್ರತಿಕ್ರಿಯೆಗೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಪ್ರಸನ್ನರೇ ಉತ್ತಮ ಕವಿತೆ
ಮನದ ಭಾವಕ್ಕೆ ರಂಗು ತುಂಬಿದಿರಿ
ಆದರೆ ನಿಮ್ಮ ಗುರುಗಳ ಮಾತಿನಂತೆ
ನೀವು ತಪ್ಪುಗಳನ್ನು ಪೂರ್ತಿಯಾಗಿ
ಸರಿಪಡಿಸಿಲ್ಲವಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannakulkarni on

ಹಾಡಾಗುತಿರಲಿ ಎ೦ಬುದನ್ನೂ ಸರಿಪಡಿಸಿದ್ದೇನೆ ಗುರುಗಳೇ..

ನನ್ನ ತಪ್ಪನ್ನು ತಿದ್ದಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ತಲೆಬರಹ ಇನ್ನೂ ನೆಟ್ಟಗಾಗಿಲ್ಲ ಅಂತ ಅವರೂ ಅಂತಿದ್ದಾರೆ ಪ್ರಸನ್ನ...

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.