22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಲೈಫು ಇಷ್ಟೇನೆ, ಲೈಫು ಹೀಗೇನೆ

August 19, 2010 - 10:05pm
prasannas

ಅಮ್ಮನ ಮಡಿಲಲ್ಲಿ ಊಟ ಮಾಡಿ

ತಾತನ ಹೆಗಲೇರಿ ಆಟ ಆಡಿ

ಅಪ್ಪನ ಜೇಬಲ್ಲಿ ಪಾಠ ಕೇಳು

ಲೈಫು ಇಷ್ಟೇನೆ, ಲೈಫು ಹೀಗೇನೆ

ಸೂರ್ಯೋದಯ ನೋಡಿ ಆಕಳಿಸಿ

ಹುಣ್ಣಿಮೆ ಬೆಳಕಲ್ಲಿ ತುಕಡಿಸಿ

ತಂಗಾಳಿಗೆ ತಲೆಯಾಡಿಸು

ಲೈಫು ಇಷ್ಟೇನೆ, ಲೈಫು ಹೀಗೇನೆ

ನಕ್ಷತ್ರ ಏಣಿಸಿ ನಕ್ಕುಬಿಡು

ನಿನ್ನೆಗೆ ನೆನಪೊಂದನ್ನು ಕಳಿಸಿ

ಕನಸ್ಸಲ್ಲಿ ತೇಲಿಬಿಡು

ಲೈಫು ಇಷ್ಟೇನೆ, ಲೈಫು ಹೀಗೇನೆ

ಕಾಗದದ ದೋಣಿ ಮಾಡಿ ಮುಂಗಾರಲ್ಲಿ ನೆನಸಿಬಿಡು

ಗೆಳೆಯರೊಡಗೂಡಿ ಗಾಳಿಪಟ ಹರಿಬಿಟ್ಟು

ಮನಸಾರೆ ಪ್ರೀತಿ ಮಾಡಿ ಮರೆತು ಬಿಡು

ಲೈಫು ಇಷ್ಟೇನೆ, ಲೈಫು ಹೀಗೇನೆ

ಸರಣಿ: 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by malathi shimoga on

ಲೈಫು ಇಷ್ಟೇನಾ ? ಲೈಫು ಹೀಗೇನಾ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannas on

ಅಷ್ಟೆ ಅಲ್ವ.. ಅಷ್ಟೆ ಸಾಕಲ್ವ.. ಃ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghusp on

<<ಲೈಫು ಇಷ್ಟೇನೆ, ಲೈಫು ಹೀಗೇನೆ>>

ಈ ಮೇಲಿನ ಪದಗಳನ್ನು ಹೊರತು ಪಡಿಸಿದರೆ ಮಕ್ಕಳ ಶಾಲಾ ಪುಸ್ತಕ ಸೇರಲು ಒಳ್ಳೆ ಪದ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannas on

ಧನ್ಯವಾದಗಳು ರಘು.. ಃ)

ಮಕ್ಕಳು ಹೇಗೂ ಖುಷಿಯಾಗಿರ್ತಾರೆ ಬಿಡಿ.. ನಾವು ಮರೆತು ಬಿಟ್ಟಿರೋ ಸಣ್ಣ ಸಣ್ಣ ಸಂಗತಿಗಳು ನಮ್ಮನ್ನ ಕಾಡಿದರೆ ಸಾಕು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sriprasad82 on

Baalyadalli laif ishte aagiratte.... Aadare vayassina jothe laifu complicate agta hogatte.....
----Shree:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಮಕ್ಕಳಿಗೆ ಲೈಫು ಇಷ್ಟೇನೆ ಎಂದು ಅನ್ನಿಸಲಾರದು. ಕುತೂಹಲ ಬತ್ತುವವರೆಗೆ ಲೈಫು ಸುಂದರ. ಬತ್ತಿದ ನಂತರ (ದೊಡ್ಡವರಾದ ಮೇಲೆ) ಲೈಫು ಇಷ್ಟೇನೆ ಮತ್ತು ಹೇಗೇನೇ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannas on

ಸತ್ಯವಾದ ಮಾತು..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nagenagaari on

ಲೈಫು ಇಷ್ಟೇನೆ ಅನ್ನೋಕೆ ಭಟ್ರು ಹತ್ತಿಪ್ಪತ್ತು ಕಗ್ಗಗಳನ್ನು ಹೊಸೆದಿದ್ದಾರೆ. ಲೈಫು ಅಷ್ಟೇ ಆಗಿದ್ದರೆ ಅವರು ಇಷ್ಟೇ ಇಷ್ಟೇ ಎನ್ನಲು ಅಷ್ಟು ಕಷ್ಟ ಪಡಬೇಕಿರಲಿಲ್ಲ.
ನಾವು ಸಹ ಲೈಫ್ ಇಷ್ಟೇನೆ ಎನ್ನುವ ಪುಸ್ತಕವನ್ನು ಬರೆಯುತ್ತಿದ್ದೇವೆ. ಸುಮಾರು ನಾನೂರು ಪುಟಗಳ ಪುಸ್ತಕದಲ್ಲಿ ಇರುವುದು ಒಂದೇ ಸಾಲು... ‘ಲೈಫು ಇಷ್ಟೇನೇ...’

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ನಿಮಗೆ ಮತ್ತು ನಮ್ಮೆಲ್ಲಾ ಓದುಗರಿಗೆ ಜೀವನ ಇಷ್ಟೇನೇ ಮತ್ತು ಜೀವನ ಹೀಗೇನೇ ಎಂದನಿಸಿದರೆ ಆಶ್ಚರ್ಯವೇನೂ ಇಲ್ಲ, ಅಲ್ಲದೆ ಪರವಾಗಿಲ್ಲ ಕೂಡ.

ಆದರೆ, ಹತ್ತಾರು ವರುಷಗಳ ನಂತರ, ಇದೇ ಕವನವನ್ನು, ಇಲ್ಲಿ ಓದುವ ಮುಂದಿನ ಪೀಳಿಗೆಯ ಓದುಗರಿಗೆ, "ಕನ್ನಡ ಅಂದ್ರೆ ಇಷ್ಟೇನೇ ಮತ್ತು ಹೀಗೇನೇ" ಎಂದು ಅನಿಸದಿರಲಿ ಎಂಬ ಆಶಯ ನನ್ನದು.

- ಆಸು ಹೆಗ್ಡೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.