23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಒಂದು ಸಣ್ಣ ಸುಳ್ಳು ನೀನು

July 25, 2010 - 7:39pm
prasannas

ಬ್ರಹ್ಮ ನನ್ನ ಎದೆಯ ಮೇಲೆ ಬರೆದು 

ಮರೆತ ಒಂದು ಸಣ್ಣ ಸುಳ್ಳು ನೀನು 

ನಿ ಮುಗುಳ್ನಕ್ಕಾಗ ನಿನ್ನ ಕೆನ್ನೆ ಮೇಲೆ ಮೂಡಿ 

ಮರೆಯಾದ ಒಂದು ಸಣ್ಣ ಗುರುತು ನಾನು

ನಿನ್ನ ಕಣ್ಣರೆಪ್ಪೆಯಿಂದ ಜಾರಿ ಹೋದ 

ಒಂದು ಸಣ್ಣ ಎಳೆಯು ನನ್ನ ಪ್ರೀತಿ

ತಂಗಾಳಿಗೆ ನಿನ್ನ ಮುಂಗುರುಳು ಹಾರಿ ನನ್ನ 

ಹೃದಯ ಸೇರಿದ ಒಂದು ಸಣ್ಣ ಗಾಯ ನಿನ್ನ ನೆನಪು

ಬೆಳದಿಂಗಳ ರಾತ್ರಿಯಲಿ ಮೌನದ 

ಮರೆಯಲಿ ಸ್ತಬ್ದ ಅಲೆಗಳ ಮೇಲೆ

ನಿ ಒಮ್ಮೆ ಸುಮ್ಮನೆ ಕುಳಿತು 

ಬಿಡಿಸಿದ ಕಾಮನಬಿಲ್ಲು ಕನಸು

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by manju787 on

ವಾಹ್! ಪ್ರಸನ್ನ, ಲಾಲ್ ಬಾಗಿನ ಗೋಪುರದ ಹತ್ತಿರ ಕುಳಿತಾಗ ಸುಯ್ಯೆ೦ದು ಸುಳಿದ ಸುವಾಸನೆಯ೦ತಿದೆ ಕಣ್ರೀ ನಿಮ್ಮ ಕವನ. ಸಕತ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannas on

ಧನ್ಯವಾದಗಳು ಮಂಜು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಪ್ರಸನ್ನ, ನಿಮ್ಮ ಕವನ ಇಷ್ಟವಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannas on

ಧನ್ಯವಾದಗಳು ಭಾಗ್ವತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by suresh nadig on

ಪ್ರಸನ್ನ ಚೆನ್ನಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by basavarajKM on

ಪ್ರಸನ್ನ ರವರೆ ಬ್ರಹ್ಮ ಕಳೆ ಬರಹ,ಹಣೆ ಬರಹ,ಲವ್ ಬರಹನೆ ಆಗಲಿ ಯಾವುದಾದರು ಸರಿ ಹಣೆಯಲ್ಲೆ ಅಲ್ವ ಬರೆಯೋದು ಅದೆಂಗೆ ಮಿಸ್ ಆಗಿ ನಿಮಗೆ ಎದೆಯ ಮೇಲೆ ಬರೆದ ಅಂತ.ಮಾಡ್ರನ್ ಬ್ರಹ್ಮನೆ ಇರಬೇಕು ಅವನು.ಬ್ರಹ್ಮನು ಫುಲ್ ಫೀಲಿಂಗ್ನಲ್ಲಿ ಇದ್ದ ಅನಿಸುತ್ತೆ ನಿಮ್ಮ ಹಣೆ ಬರಹ ಬರೆಯುವಾಗ ಅದಕ್ಕೆ ನಿಮಗೆ ಎದೆ ಮೇಲೆ ಬರೆದುಬಿಟ್ಟಿದ್ದಾನೆ.

ಅದಕ್ಕೆ ಅಲ್ವ ದೊಡ್ಡ ದೊಡ್ಡ ಕವಿಗಳೆ ಹೇಳಿರುವುದು ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ ಅಂತ.

ಕವನ ಸೊಗಸಾಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

[[ಬೆಳದಿಂಗಳ ರಾತ್ರಿಯಲಿ ಮೌನದ

ಮರೆಯಲಿ ಸ್ತಬ್ದ ಅಲೆಗಳ ಮೇಲೆ

ನಿ ಒಮ್ಮೆ ಸುಮ್ಮನೆ ಕುಳಿತು

ಬಿಡಿಸಿದ ಕಾಮನಬಿಲ್ಲು ಈ ಕನಸು]]
ಬೆಳದಿಂಗಳ ರಾತ್ರಿಯಲಿ ಕಾಮನಬಿಲ್ಲು ಬಿಡಿಸಿದ ಕುರಿತು ಮನಸ್ಸು ಹೇಗೆ ಚಿಂತಿಸಿತು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by santhosh_87 on

ಕವನ ಇಷ್ಟವಾಯಿತು. ಕೊನೆಯ ಪ್ಯಾರಾದಲ್ಲಿ ಅವಳು ಸುಳ್ಳು ಅಂತ ಸ್ಪಷ್ಟವಾಗಿ ನಿರೂಪಿಸಿದ್ದೀರಾ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ranaasa on

ಪ್ರಸನ್ನ,
ಒಂದೇ ಶಬ್ದದಲ್ಲಿ ಹೇಳಬೇಕೆಂದರೆ ಕವನ "ಬೊಂಬಾಟ್"! ಮನಸಿನ ಕದ ತಟ್ಟಿದ ಕವನವಿದು.. ಹೀಗೆ ಬರೆಯುತ್ತಿರಿ. ಥ್ಯಾಂಕ್ಸ್ ಫಾರ್ ಎ ಗುಡ್ ಥಾಟ್!
*ರವೀ*

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by raghusp on

ಸೊಗಸಾಗಿದೆ , ಈ ಆಷಾಡದ ಗಾಳಿಗೆ ಬೆಚ್ಚಗಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannas on

ಪ್ರತಿಕ್ರಿಯೆಗಳಿಂದ ಬಾರಿ ಪುಳಕವಾಯಿತು, ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು..

ಹಿಂದೆ ನಾನು ಬರೆದ ಮತ್ತೊಂದು ಕವನವನ್ನು ಪೋಸ್ಟ್ ಮಾಡಿರುವೆ ಇಲ್ಲಿ: http://sampada.net/b...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.