ಸಂಪದದಲ್ಲಿ ಐದು ವರ್ಷಗಳು!
ನಾನು ಸಂಪದವನ್ನು ಸೇರಿ ಇಂದಿಗೆ ಐದು ವರ್ಷ ಪೂರ್ತಿಯಾಯಿತು! ನನಗೆ ಗೊತ್ತಿದ್ದಂತೆ ನಾನು ಸಂಪದದ ಸದಸ್ಯನಾಗಿದ್ದು 09/04/2008ರಂದು. ನಾನು ಅದಕ್ಕಿಂತ ಮುಂಚೆಯಿಂದಲೂ ಸಂಪದಕ್ಕೆ ಭೇಟಿ ನೀಡುತ್ತಿದ್ದರೂ ಸದಸ್ಯನಾಗಿದ್ದು ಮಾತ್ರ ಆ ದಿನ.
ಇಷ್ಟು ವರ್ಷ ಸಂಪದದಿಂದ ಸಾಕಷ್ಟು ಕಲಿತಿದ್ದೇನೆ, ಬಹಳಷ್ಟು ಗೆಳೆಯರನ್ನು ಸಂಪಾದಿಸಿದ್ದೇನೆ. ನಾನು ಅಷ್ಟೋ ಇಷ್ಟೋ ಬರೆಯಲು ಕಲಿತಿದ್ದೂ ಕೂಡಾ ಸಂಪದದಿಂದಲೇ. ಇದಕ್ಕೆಲ್ಲಾ ಅವಕಾಶ ಮಾಡಿಕೊಟ್ಟ ಸಂಪದ ತಂಡಕ್ಕೆ ನನ್ನ ವಂದನೆಗಳು.
ಇತ್ತೀಚೆಗೆ ಯಾಕೋ ನಾನು ಕನ್ನಡದಲ್ಲಿ ಬರೆಯುವುದು ಬಹಳ ಕಡಿಮೆಯಾಗಿಬಿಟ್ಟಿದೆ. ಸಂಪದದಲ್ಲಿ ನಾನು ಆರನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಮತ್ತೆ ಕನ್ನಡ ಬ್ಲಾಗ್ ಬರೆಯಬೇಕು ಎಂದು ನಿರ್ಧಾರ ಮಾಡಿದ್ದೇನೆ. ನೋಡೋಣ, ಏನಾಗುತ್ತೆ ಅಂತ!! :-) Read more about ಸಂಪದದಲ್ಲಿ ಐದು ವರ್ಷಗಳು!




