August 2, 2010 - 12:38pm
ನಿಮ್ಮ ಬಳಿ ನೋಕಿಯ ಕಲರ್ ಬೇಸಿಕ್ ಮೊಬೈಲ್ (ಉದಾ: nokia1600, nokia1208) ಇದ್ದರೆ ಇಲ್ಲೊಂದು ತಮಾಷೆ ಇದೆ ನೋಡಿ. ಕೀ ಪ್ಯಾಡ್‌ನಲ್ಲಿ *#5513# ಒತ್ತಿರಿ, ತಕ್ಷಣ ಸ್ಕ್ರೀನ್ ಉಲ್ಟಾ ಆಗುತ್ತದೆ! ಅಂದರೆ ಮೊಬೈಲನ್ನು ತಲೆಕಳಗೆ ಹಿಡಿದು ನೋಡಿದರೆ ಸ್ಕ್ರೀನ್ ಸರಿಯಾಗಿ ಕಾಣುತ್ತದೆ! *#5512# ಒತ್ತಿದರೆ ಸ್ಕ್ರೀನ್ ಎಡಕ್ಕೆ ತಿರುಗುತ್ತದೆ. *#5514# ಒತ್ತಿದರೆ ಸ್ಕ್ರೀನ್ ಬಲಕ್ಕೆ ತಿರುಗುತ್ತದೆ. ಮತ್ತೆ ಸ್ಕ್ರೀನ್ ಸರಿಹೋಗಬೇಕಾದರೆ *#5511# ಒತ್ತಬೇಕು. ಹೈ ಎಂಡ್ ಮಾಡೆಲ್‌ಗಳಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಬೇಸಿಕ್ ಮಾಡೆಲ್‌ಗಳಲ್ಲಿ ಮಾತ್ರ ಇದು ಸಾಧ್ಯ. ಇದರ ಉಪಯೋಗ ಏನೆಂದು ಕೇಳಬೇಡಿ, ಏಕೆಂದರೆ ನನಗೂ ಇದರ ಉಪಯೋಗ ಗೊತ್ತಿಲ್ಲ! :) ಸುಮ್ಮನೇ ತಮಾಷೆಗೆ ಸ್ಕ್ರೀನ್ ಉಲ್ಟಾ ಮಾಡಿ ಆನಂದಿಸಬಹುದು.
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ನನ್ನದು ಎನ್೭೧ ಯಾಕೋ ಇದರಲ್ಲಿ ಆಗ್ತಾ ಇಲ್ಲ.
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
@gopinatha: ಹೈ ಎಂಡ್ ಮಾಡೆಲ್‌ಗಳಲ್ಲಿ ಈ ರೀತಿ ಆಗಲ್ಲ. ಬೇಸಿಕ್ ಮಾಡೆಲ್‌ಗಳು, ಅಂದರೆ ನೊಕಿಯ1600, 1208, 1209, 2310, ಈ ರೀತಿಯ ಇತರ ಮಾಡೆಲ್‌ಗಳಲ್ಲಿ ಸ್ಕ್ರೀನ್ ಉಲ್ಟಾ ಆಗುತ್ತದೆ. ಅಂತಹ ಯಾವುದಾದರೂ ಮಾಡೆಲ್ ಸಿಕ್ಕಿದರೆ ಪ್ರಯತ್ನಿಸಿ ನೋಡಿ. :)
-ಪ್ರಸನ್ನ.ಎಸ್.ಪಿ
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ವಿಂಡೋಸ್ XP ಯಲ್ಲಿ, CTRL+ALT+ ಯಾವುದಾದರೂ arrow key ಒತ್ತಿ ಸ್ಕ್ರೀನನ್ನು ಉಲ್ಟಾ-ಪಲ್ಟಾ ಮಾಡಬಹುದು. ಗ್ರಾಫಿಕ್ಸ ಪ್ರಾಪರ್ಟಿಸ್ ನಲ್ಲಿ ರೊಟೆಶನ್ ಆಪ್ಶನ್ ಸಕ್ರಿಯವಾಗಿರಬೇಕು. ಆಫೀಸ್ನಲ್ಲಿ ನಿಮ್ಮ ಸಹೋದ್ಯೋಗಿ ಡೆಸ್ಕ ಬಿಟ್ಟು ಅಲ್ಲಿ ಇಲ್ಲಿ ಹೋಗಿರುವಾಗ, ಆತನ ಪಿಸಿ ಸ್ಕ್ರಿನನ್ನು ಉಲ್ಟಾ ಮಾಡಿ ಸ್ವಲ್ಪ ತಲೆ ತಿನ್ನಬಹುದು:).
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ವಿಜಯ್ ಅವರೇ,
ಗ್ರಾಫಿಕ್ಸ ಪ್ರಾಪರ್ಟಿಸ್ ಎಲ್ಲಿರುತ್ತೆ?
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
@sriram shastri: ಗ್ರಾಫಿಕ್ಸ ಪ್ರಾಪರ್ಟಿಸ್ = (ಕಂಪ್ಯೂಟರ್ ಸ್ಕ್ರೀನ್ ಉಲ್ಟಾ ಮಾಡಲು) ಡೆಸ್ಕ್‌ಟಾಪ್ ಪ್ರಾಪರ್ಟೀಸ್---> ಸೆಟ್ಟಿಂಗ್ಸ್---> ಅಡ್ವಾನ್ಸ್‌ಡ್---> ರೊಟೇಶನ್. (Desktop properties--> settings--> advanced--> rotation) ಅಲ್ಲಿ ಹಾಟ್ ಕೀ ಎಂಬಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಬೇರೆ ಬೇರೆ ಮದರ್ ಬೋರ್ಡ್‌ಗಳಲ್ಲಿ ಅಡ್ವಾನ್ಸ್‌ಡ್ ಸೆಟ್ಟಿಂಗ್ಸ್ ಬೇರೆ ರೀತಿ ಇರುತ್ತದೆ.
-ಪ್ರಸನ್ನ.ಎಸ್.ಪಿ
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ಧನ್ಯವಾದಗಳು ಪ್ರಸನ್ನ ...
ಅಂದ ಹಾಗೆ, ನನ್ನ ಹೆಸರು ಶಿವರಾಮ :-)
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ಕ್ಷಮಿಸಿ, ಕಣ್ತಪ್ಪಿನಿಂದಾದ ಪ್ರಮಾದವದು. :)
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ತಮಾಷೆಗೆ:
ನಾನಂತೂ ಕ್ಷಮಿಸಿದ್ದೇನೆ. 'ಶಿವ'ನನ್ನು ಉಪೇಕ್ಷಿಸಿ 'ಶ್ರೀ'ಯನ್ನು ಉಪಯೋಗಿಸಿದ್ದೀರಿ ... ಆ ಮುಕ್ಕಣ್ಣನಿಗೆ ಏನಾದರೂ ಕೋಪ ಬಂದಿದ್ದರೆ? :-)
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
@vijay pai: ನಾನು ನನ್ನ ಸ್ನೇಹಿತರಿಗೆ ಇದೇ ರೀತಿ ಮಾಡಿ ತಲೆ ತಿಂತಿದ್ದೆ! :)
-ಪ್ರಸನ್ನ.ಎಸ್.ಪಿ
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ಪ್ರಸನ್ನ ಸಕತ್ತಾಗಿದೆ. ಬ್ಲಾಗ್ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು.
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ಧನ್ಯವಾದಗಳು ಕೋಮಲ್, ಯಾವುದಾದರೂ ಮೊಬೈಲ್‌ನ ಸ್ಕ್ರೀನ್ ಉಲ್ಟಾ ಮಾಡಿ ನೋಡಿದ್ರಾ? :)
-ಪ್ರಸನ್ನ.ಎಸ್.ಪಿ
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
:-)
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ಉತ್ತಮ ಮಾಹಿತಿಗೆ ಧನ್ಯವಾದಗಳು.
ಉ: ನೋಕಿಯ ಮೊಬೈಲ್‌ನಲ್ಲೊಂದು ತಮಾಷೆ
ಧನ್ಯವಾದಗಳು ನಾಗರಾಜ್, ಗೋಪಾಲ್
-ಪ್ರಸನ್ನ.ಎಸ್.ಪಿ