ಈಗ ಕಂಪ್ಯೂಟರ್ ಎಲ್ಲಾ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ. ಆದರೂ ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್ ಅಷ್ಟೊಂದು ಬಳಕೆಯಲ್ಲಿಲ್ಲ. ಅದಕ್ಕೆ ಬಹುಷಃ ಗ್ರಾಮೀಣ ಪ್ರದೇಶಿಗರಿಗೆ ಕಂಪ್ಯೂಟರ್ ಜ್ಞಾನ ಕಡಿಮೆಯಿರುವುದೇ ಕಾರಣವಿರಬಹುದು. ಗ್ರಾಮೀಣ ಪ್ರದೇಶದಲ್ಲಿ ಕಂಪ್ಯೂಟರ್ ಶಿಕ್ಷಣ ನೀಡುವ ಸಂಸ್ಥೆಗಳೂ ಸಾಕಷ್ಟಿಲ್ಲ. ಶಾಲೆಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲು ಕ್ರಮ ಕೈಗೊಂಡಿದ್ದರೂ, ಕೆಲವು ಶಾಲೆಗಳಲ್ಲಿ ಕಂಪ್ಯೂಟರ್ ಇದ್ದರೆ ಕಲಿಸಲು ಶಿಕ್ಷಕರಿರುವುದಿಲ್ಲ, ಶಿಕ್ಷಕರಿದ್ದರೆ ಕಲಿಸಲು ಸಾಕಷ್ಟು ಕಂಪ್ಯೂಟರ್‌ಗಳೇ ಇರುವುದಿಲ್ಲ! ನಾನು ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ಇಡೀ ಶಾಲೆಗೆ ಒಂದೇ ಒಂದು ಕಂಪ್ಯೂಟರ್ ಇತ್ತು. ಅದರಲ್ಲೇ ಎಲ್ಲರೂ ಕಲಿಯಬೇಕಿತ್ತು. ಎಷ್ಟೋ ಮಕ್ಕಳಿಗೆ ಕಲಿಯುವ ಆಸಕ್ತಿ ಇದ್ದರೂ ಕಲಿಯಲು ಅವಕಾಶವೇ ಸಿಗುತ್ತಿರಲಿಲ್ಲ.
ನಾನು ಇಷ್ಟೆಲ್ಲಾ ಏಕೆ ಹೇಳುತ್ತಿದ್ದೇನೆಂದರೆ, ನೀವು ನಿಮ್ಮ ಕಂಪ್ಯೂಟರ್‌ನ್ನು ಬದಲಾಯಿಸುತ್ತಿದ್ದರೆ ಹಳೆಯ ಸುಸ್ಥಿತಿಯಲ್ಲಿರುವ ಕಂಪ್ಯೂಟರ್‍ನ್ನು, ಸಾಧ್ಯವಾದರೆ ಯಾವುದಾದರೂ ಸೂಕ್ತ ಶಿಕ್ಷಕರಿರುವ ಗ್ರಾಮೀಣ ಸರ್ಕಾರಿ ಶಾಲೆಗೆ ಕೊಡುಗೆಯಾಗಿ ನೀಡಿ. ಇದರಿಂದ ಕಂಪ್ಯೂಟರ್ ಕಲಿಯಬೇಕೆನ್ನುವ ಮಕ್ಕಳಿಗೆ ಸಹಾಯವಾಗುತ್ತದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣದ ಅವಶ್ಯಕತೆ ಸಾಕಷ್ಟಿದೆ. ನಮ್ಮ ಒಂದು ಸಣ್ಣ ಕೊಡುಗೆಯಿಂದ ಎಷ್ಟೋ ಮಕ್ಕಳಿಗೆ ಸಹಾಯವಾಗುವುದಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ ಅಲ್ಲವೇ?
ಧನ್ಯವಾದಗಳೊಂದಿಗೆ,









ಪ್ರತಿಕ್ರಿಯೆಗಳು
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಒಳ್ಳೆ ಯೋಚನೆ.
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ಮನು, :)
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಹೌದು.
ಉತ್ತಮ ಸಲಹೆ.
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ಆಸು ಸರ್, :)
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
+೧
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ಶ್ರೀನಿವಾಸ, :)
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಉತ್ತಮ ಸಲಹೆ ಪ್ರಸನ್ನ.
-- ಹರ್ಷ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ಹರ್ಷ, :)
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಒಳ್ಳೆಯ ಪ್ರಯತ್ನ , ಖಂಡಿತ ಮಾಡೋಣ ...........ಆದರೆ ನಿಮ್ಮ ಮುಖ್ಯಮಂತ್ರಿಗಳಿಗೆ ಹೇಳಿ ಹಳ್ಳಿಗೆ ವಿದ್ಯುಚಕ್ತಿ ಕೊಡಿಸಿ.
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಹೌದು! ಕರೆಂಟು ಇದ್ದರೆ ತಾನೇ ಕಂಪ್ಯೂಟರ್ ಕೆಲಸ ಮಾಡೋದು,:) ಸರ್ಕಾರ ಕಂಪ್ಯೂಟರ್ ಕಲಿಸುವ ಮೊದಲು ಕರೆಂಟ್ ಕೊಡುವ ಕೆಲಸ ಮಾಡಬೇಕು. :) ;-)
ಒಳ್ಳೆಯ ಸಲಹೆ. ಧನ್ಯವಾದಗಳು ರಘು, :)
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ನಿಜಕ್ಕೂ ತುಂಬಾ ಉತ್ತಮವಾದ ಸಲಹೆ , ಊರಿನಲ್ಲಿ ಅಟ್ಟದ ಮೇಲೆ ಇಟ್ಟಿರುವ ನನ್ನ ಹಳೆಯ ಕಂಪ್ಯೂಟರ್‍ನ್ನು ಶಾಲೆಗೇ ಕೊಡುವ ಪ್ರಯತ್ನ ಮಾಡುತೇನೆ..
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ವೀರೇಂದ್ರ, :) ನಿಮ್ಮ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು..
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಪ್ರಸನ್ನರೇ ಉತ್ತಮ ಸಲಹೆ
ನಾನೂ ಹಾಗೆಯೇ ನನ್ನ ದ್ವಿ ಚಕ್ರಿಯನ್ನು ಬದಲಾಯಿಸುವಾಗ ಹೀಗೇ ಯಾರಿಗೋ ದಾನ ಮಾಡಿದ್ದೆ , ಆದರೆ ಸುಮಾರು ತಿಂಗಳಾದ ಮೇಲೆ ಗೊತ್ತಾಯ್ತು, ಆ ಬಡಪಾಯಿ ಅದನ್ನೂ ಯಾರಿಗೋ ಮಾರಿ ಬಿಟ್ಟನಂತೆ. ಈ ರೀತಿಯ ದಾನಕ್ಕಿಂತ ಸಂಸ್ಥೆಗೆ ಕೊಡುವುದೇ ಒಳ್ಳೆಯದು.
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ಗೋಪಿನಾಥರೆ, ಜೊತೆಗೆ ಸಂಸ್ಥೆಗಳಿಗೆ ದಾನ ಮಾಡುವಾಗ ಆ ಸಂಸ್ಥೆಯ ಸ್ಟಾಕ್ ರಿಜಿಸ್ಟರಿನಲ್ಲಿ ದಾಖಲಿಸುವುದು ಒಳ್ಳೆಯದು. ಆಗ ಅದರ ದುರುಪಯೋಗ ತಪ್ಪುತ್ತದೆ.
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ದಿನಕ್ಕೊ೦ದು ಹೊಸ ಯೋಚನೆಗಳೊ೦ದಿಗೆ ಬರ್ತೀರಿ! ಅದೇ ನನಗೆ ಇಷ್ಟವಾಗೋದು ನಿಮ್ಮ ಬಗ್ಗೆ.
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ನಾವಡರೆ,
ನಾಳೆಗೂ ಒಂದು ಹೊಸ ಯೋಚನೆ ಇದೆ! :)
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ನಾವಡರೆ,
ನಾಳೆಗೂ ಒಂದು ಹೊಸ ಯೋಚನೆ ಇದೆ! :)
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
++1
ಒಳ್ಳೆಯ ಯೋಚನೆ ಪ್ರಸನ್ನ. ನಾನು ಹಾಗೇ ಮಾಡುವೆ.
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ಸುಧೀಂದ್ರ, :)
-ಪ್ರಸನ್ನ.ಎಸ್.ಪಿ
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
+1. :-)
ಉ: ಶಾಲೆಗಳಿಗೆ ಕಂಪ್ಯೂಟರ್ ಕೊಡುಗೆ ನೀಡಿ
ಧನ್ಯವಾದಗಳು ನಾಗರಾಜ್ ಸರ್,
-ಪ್ರಸನ್ನ.ಎಸ್.ಪಿ