ಈಗಿನಂತೆ 4 ಸದಸ್ಯರು ಮತ್ತು 90 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಮರೆಯಲಾಗದ ವರಕವಿ ದ.ರಾ.ಬೇಂದ್ರೆ
H A Patil's picture
ಹನುಮಂತ ಪಾಟೀಲ
30
Jan
2012
ಬ್ಲಾಗ್ ಬರಹ

ಪ್ರತಿವರ್ಷ ಜನೆವರಿ ತಿಂಗಳ ಮೂವತ್ತೊಂದನೆ ತಾರೀಕು ಬಂತೆಂದರೆ ನನಗೆ ವರಕವಿ ಬೇಂದ್ರೆಯವರ ನೆನಪು ಬರುತ್ತದೆ....

ಪ್ರತಿಕ್ರಿಯೆಗಳು: 24
ಹಿಟ್ಸ್ : 388
ಉಪವಾಸ
ಗಣೇಶ's picture
ಗಣೇಶ
22
Feb
2010
ಬ್ಲಾಗ್ ಬರಹ

ದೇವರ ಧ್ಯಾನದಲ್ಲೇ ಮುಳುಗಿದವನಿಗೆ ಹಸಿವಿನ ಯೋಚನೆಯೇ ಇರುವುದಿಲ್ಲ. ಈ ಉಪವಾಸ ನನ್ನಿಂದ ಸಾಧ್ಯವೇ ಇಲ್ಲ.

ಯಾವಾಗಲೂ "ಅಮ್ಮಾ..ಅಮ್ಮಾ..." ಎಂದು ರಚ್ಚೆ ಮಾಡುವ ಮಕ್ಕಳಿಗೆ...

ಪ್ರತಿಕ್ರಿಯೆಗಳು: 9
ಹಿಟ್ಸ್ : 1,269
ವ್ಯಾಲಂಟೈನ್ಸ್ ಡೇ
ramvani's picture
ವಾಣಿ
14
Feb
2012
ಲೇಖನ

.. ಪ್ರೇಮ ಜ್ವರ, ಯಾವುದೇ ಹಬ್ಬಕ್ಕೆ ಇಲ್ಲದ ಖರೀದಿ ಭರಾಟೆ ವ್ಯಾಲಂಟೈನ್ಸ್ ಡೇ ಗೆ.ಇದು ವಿಶ್ವವ್ಯಾಪಿ. ಓಹ್ ಫೆಬ್ರವರಿ ಈಸ್ "ಮಂತ್ ಆಫ್ ಲವ್" ಅಂದಳು, ನನ್ನ ಕಾಲೇಜಿನ ಓರ್ವ...

ಪ್ರತಿಕ್ರಿಯೆಗಳು: 6
ಹಿಟ್ಸ್ : 427
ಆಟದ ಗಮ್ಮತ್ತು
lnbhatta's picture
ಲಕ್ಷ್ಮೀನಾರಾಯಣ ಭಟ್ಟ ಕೆ ಜಿ
07
Jul
2011
ಲೇಖನ

ನನಗೆ ಆಗಾಗ್ಗೆ ಒಂದೊಂದು ಬಗೆಯ ಖಯಾಲಿ ಶುರುವಾಗುವುದುಂಟು. ಆರಂಭದಲ್ಲಿ ನನ್ನ ಹೆಂಡತಿ ಇದನ್ನು ಭಯಂಕರ ಕಾಯಿಲೆಯೆಂದು ಊಹಿಸಿ ಕಾಣುವ ವೈದ್ಯರಲ್ಲೂ, ಕಾಣದ ದೈವದ ಬಳಿಯೂ ನನ್ನನ್ನು...

ಪ್ರತಿಕ್ರಿಯೆಗಳು: 11
ಹಿಟ್ಸ್ : 638
’ಸಂಸ್ಕೃತದಲಿನ್ನೇನು?’ ಎಂದ ಕವಿ ಮಹಲಿಂಗರಂಗ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
22
Jan
2010
ಪುಟ

  ’ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ, ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ, ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ...

ಪ್ರತಿಕ್ರಿಯೆಗಳು: 0
ಹಿಟ್ಸ್ : 910
ಕಾದಂಬರಿ ಸ್ಪರ್ಧೆ
cherryprem's picture
ಪ್ರೇಮಶೇಖರ
10
Dec
2011
ಲೇಖನ

ಮೈಸೂರಿನ ಪುಸ್ತಕಯಾನ ಪ್ರಕಾಶನ ಸಂಸ್ಥೆಯು ತನ್ನ ಮೊದಲ ಹುಟ್ಟುಹಬ್ಬದ ಪ್ರಯುಕ್ತ ಕಾದಂಬರಿ ಸ್ಪರ್ಧೆಯನ್ನು ಏರ್ಪಡಿಸಿದೆ.  ಆಸಕ್ತ ಕಾರಂಬರಿಕಾರರು ತಮ್ಮ...

ಪ್ರತಿಕ್ರಿಯೆಗಳು: 6
ಹಿಟ್ಸ್ : 135
ಯುಗಯುಗಾದಿ ಕಳೆದರೂ ’ಯುಗಾದಿ’ ಕವಿತೆ ಮೆರೆದಿದೆ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
15
Mar
2010
ಪುಟ

  ಯುಗಾದಿಯೆಂದರೆ ಬೇವುಬೆಲ್ಲ, ಒಬ್ಬಟ್ಟು (ಹೋಳಿಗೆ), ಪಂಚಾಂಗಶ್ರವಣ ಮತ್ತು ಬೇಂದ್ರೆ ಕವನ.
  ಯುಗಾದಿಯಂದು ಸಂಭ್ರಮ ತರುವುದು ಹೊಸ ವರುಷ. ಜೊತೆಗೆ,...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,180
ತೀರ ಸಾಮಾನ್ಯವಾದ ತೆರೆದಿದೆ ಮನೆ ಓ ಬಾ ಅತಿಥಿ ಕವನವನ್ನು ಕುರಿತು
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
22
Jan
2006
ಬ್ಲಾಗ್ ಬರಹ
ಕೆಲವು ದಿನಗಳ ಹಿಂದೆ ಸಂಪದದ ಓದುಗರೊಬ್ಬರು ಕುವೆಂಪು ಅವರ ಈ ಕವಿತೆಯ ಕೆಲವು ಪದಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದರು. ಆಗ ಕವಿತೆ ಕೈಗೆ ಸಿಕ್ಕಿರಲಿಲ್ಲ, ಸಿಕ್ಕ ಮೇಲೆ ನಾನು...
ಪ್ರತಿಕ್ರಿಯೆಗಳು: 2
ಹಿಟ್ಸ್ : 3,748
ಕೂಡ್ಲಿಗಿಯ ಮಿಮಿಕ್ರಿ ಕಲಾವಿದ ಕೋಗಳಿ ಕೊಟ್ರೇಶ್ ಥೈಲ್ಯಾಂಡ್‌ನಲ್ಲಿ
siddharam's picture
ಸಿದ್ಧರಾಮ ಹಿರೇಮಠ
07
Dec
2009
ಪುಟ

ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,143
ಕೆಟ್ಟ ಅಡುಗೆಯ ಮನೆಯನ್ನು ಹೋಟೆಲ್ ಎನ್ನುತ್ತೇವೆ --ಗಾದೆಗೊಂದು ಗುದ್ದು ೬೯
anilkumar's picture
ಎಚ್.ಎ. ಅನಿಲ್ ಕುಮಾರ್
06
Mar
2011
ಬ್ಲಾಗ್ ಬರಹ

 (೩೫೧) ಮೂಗುನತ್ತಿನ ಮೇಲಿನ ಪ್ರತಿಯೊಂದು ಬಿಂದುವೂ ಸಹ ತಾನು ಒಮ್ಮೆಯಾದರೂ ಒದ್ದೆಯಾಗಿಬಿಡುವ ಭಯ ಮತ್ತು ಸಾಧ್ಯತೆಯನ್ನು ಹೊಂದಿರುತ್ತದೆ.

(೩೫೨) ’ಪೇಜ್ ಥ್ರೀ’ಯನ್ನು...

ಪ್ರತಿಕ್ರಿಯೆಗಳು: 0
ಹಿಟ್ಸ್ : 582

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

ಮೈಕ್ರೋಸಾಫ್ಟ್ ವರ್ಡ್ ಹಾಗೂ ಓಪನ್ ಆಫೀಸ್ ರೈಟರ್‌‌ನಲ್ಲಿ ಸುಲಭವಾಗಿ ಟೇಬಲ್ ಡ್ರಾ ಮಾಡಲು ಒಂದು ತಮಾಷೆಯಾದ ಫೀಚರ್‍ ಇದೆ. ಸುಮ್ಮನೆ +-+-+-+-+-+ ಅಂತ ಕೊಟ್ಟು ಎಂಟರ್‍ ಒತ್ತಿದ್ರೆ ಆಯ್ತು ಟೇಬಲ್ ರೆಡಿ.

 

 

ಆಮೇಲೆ ಕೊನೆಯ ಬಾಕ್ಸ್‌ನಲ್ಲಿ ಕರ್ಸರ್‍ ಕ್ಲಿಕ್ ಮಾಡಿ ಟ್ಯಾಬ್ ಒತ್ತುತ್ತಾ ಹೋದ್ರೆ ಎಷ್ಟು ಬೇಕೋ ಅಷ್ಟು rowಗಳು ಬರುತ್ತಾ ಹೋಗುತ್ತದೆ. ಇಲ್ಲಿ ನೀವು ಎಷ್ಟು - ಗಳನ್ನು ಬಳಸುತ್ತೀರೋ ಅಷ್ಟು ಕಾಲಂಗಳನ್ನು ಪಡೆಯಬಹುದು. ಉದಾಹರಣೆಗೆ +--+--+--+ ಎಂದು ಕೊಟ್ಟರೆ ಮೂರು ಕಾಲಂಗಳು ಹಾಗೂ +--+--+--+--+ ಎಂದು ಕೊಟ್ಟರೆ ನಾಲ್ಕು ಕಾಲಂಗಳು ಬರುತ್ತವೆ. ಅಲ್ಲದೇ ಎರಡು + ಗಳ ನಡುವಿನ ಮಧ್ಯದಲ್ಲಿ - ಗಳ ಸಂಖ್ಯೆ ಹೆಚ್ಚಾದಷ್ಟೂ ಕಾಲಂನ ಅಗಲ ಹೆಚ್ಚಾಗುತ್ತದೆ. ಮೊದಲನೆಯ ಕಾಲಂ ಕಡಿಮೆ ಅಗಲ, ಎರಡನೆಯ ಕಾಲಂ ಸ್ವಲ್ಪ ದೊಡ್ಡದು ಹಾಗೂ ಮೂರನೆಯ ಕಾಲಂ ದೊಡ್ಡದಾಗಿ ಬೇಕಿದ್ದರೆ ಹೀಗೆ ಕೊಡಬಹುದು: +--+-----+--------+



-ಪ್ರಸನ್ನ.ಎಸ್.ಪಿ

 

ನನ್ನ ಬ್ಲಾಗ್‌‌ನಲ್ಲಿ ಈ ಬರಹ

Average: 5 (2 votes)
468 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
santhosh_87's picture
22
Jul
2010
10:13

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

<ಕೊನೆಯ ಬಾಕ್ಸ್‌ನಲ್ಲಿ ಕರ್ಸರ್‍ ಕ್ಲಿಕ್ ಮಾಡಿ ಟ್ಯಾಬ್ ಒತ್ತುತ್ತಾ ಹೋದ್ರೆ ಎಷ್ಟು ಬೇಕೋ ಅಷ್ಟು rowಗಳು ಬರುತ್ತಾ ಹೋಗುತ್ತದೆ>
ನಾನು ಹೊಸ row insert ಮಾಡಬೇಕಿದ್ರೆ ಹೀಗೇನೆ ಮಾಡೋದು. :)

ksraghavendranavada's picture
22
Jul
2010
10:25

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

<ಕೊನೆಯ ಬಾಕ್ಸ್‌ನಲ್ಲಿ ಕರ್ಸರ್‍ ಕ್ಲಿಕ್ ಮಾಡಿ ಟ್ಯಾಬ್ ಒತ್ತುತ್ತಾ ಹೋದ್ರೆ ಎಷ್ಟು ಬೇಕೋ ಅಷ್ಟು rowಗಳು ಬರುತ್ತಾ ಹೋಗುತ್ತದೆ>
ನಾನೂ ಅಷ್ಟೇ.
ಆದರೆ + ಮತ್ತು- ಇದರ ಬಳಕೆ ಗೊತ್ತಿರಲಿಲ್ಲ.ತು೦ಬಾ ಅನುಕೂಲವಾಯಿತು. ಪ್ರಸನ್ನರೇ.

ಪ್ರಸನ್ನ ಸುರತ್ಕಲ್'s picture
22
Jul
2010
10:29

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

ತುಂಬಾ ಆಸಕ್ತಿಕರ ಮಾಹಿತಿ (+- ಕುರಿತಾದದ್ದು). ಎಂಎಸ್ ವರ್ಡ್ ಅನ್ನು ಯಾವಾಗಲೂ ಬಳಕೆ ಮಾಡುತ್ತಿದ್ದರೂ ಇದರ ಅರಿವಿರಲಿಲ್ಲ.

prasannasp's picture
22
Jul
2010
10:41

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

ನಾನು ಇದನ್ನು ಆಕಸ್ಮಿಕವಾಗಿಯೇ ಕಂಡುಕೊಂಡಿದ್ದು. ಒಮ್ಮೆ ವರ್ಡ್‌ನಲ್ಲಿ ಏನೋ ಬರೆಯುತ್ತಿರುವಾಗ +-+ ಎಂದು ಕೊಟ್ಟು ಎಂಟರ್‍ ಕೊಟ್ಟಿದ್ದೆ. ಆಗ ಒಂದು ಬಾಕ್ಸ್ ಬಂದಿತ್ತು. ಅದೇಕೆ ಹಾಗಾಯಿತು ಅಂತ ತಲೆಕೆಡಿಸಿಕೊಂಡು +-+-+ ಒತ್ತಿ ಎಂಟರ್‍ ಒತ್ತಿದ್ದೆ. ಆಗ ಒಂದರ ಪಕ್ಕ ಒಂದರಂತೆ ಎರಡು ಬಾಕ್ಸ್‌ಗಳು ಬಂದವು. ನಂತರ ಅದು ಟೇಬಲ್‌‌ ಹಾಕೋಕೆ ಇರೋ ಶಾರ್ಟ್‌ಕಟ್ ವಿಧಾನ ಎಂದು ಗೊತ್ತಾಯಿತು.

-ಪ್ರಸನ್ನ.ಎಸ್.ಪಿ

kavinagaraj's picture
22
Jul
2010
11:06
Shrikantkalkoti's picture
22
Jul
2010
11:32

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

ಇದು ೨೦೦೭ ರಿಲೀಜ್ ನಲ್ಲಿ ಕೆಲ್ಸಾ ಮಾಡುತ್ತಾ..?
ಇಲ್ಲಿ ಆಗ್ತಾ ಇಲ್ಲ :-((

prasannasp's picture
22
Jul
2010
11:40

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

2007 ಬಗ್ಗೆ ಗೊತ್ತಿಲ್ಲ. Office XP, Office 2003 ಹಾಗೂ OpenOffice Writerನಲ್ಲಿ ಪರೀಕ್ಷಿಸಿದ್ದೇನೆ. ಅವುಗಳಲ್ಲಿ ಇದು ಕೆಲಸ ಮಾಡುತ್ತೆ.

-ಪ್ರಸನ್ನ.ಎಸ್.ಪಿ

ಶ್ರೀನಿವಾಸ ವೀ. ಬ೦ಗೋಡಿ's picture
22
Jul
2010
11:57

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

೨೦೦೭ ರಿಲೀಜ್‌ನಲ್ಲೂ ಇದು ಕೆಲಸ ಮಾಡುತ್ತೆ. ಮೊದಲ ಮತ್ತು ಕೊನೆಯ ಕೀಗಳು + ಇರಲೇಬೇಕು!

venkatb83's picture
07
May
2012
9:19

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍:+--+--+--+--+..??

ಪ್ರಸನ್ನ ಅವ್ರೆ-
ನಿಮ್ಮ ಹಿಂದೆ ಬಿದ್ದುದಕ್ಕೆ ಸಾರ್ಥಕ ಆಯ್ತು.. :()))

ಅಬ್ಬೊ...!!
ಎಸ್ಟೆಲಾ ಉಪಯುಕ್ತ ಮಾಹಿತಿಗಳ ಬ್ಲಾಗ್ ಗಳನನ ಒಂದರ ಹಿಂದೆ ಒಂದು ಬರೆದು ಇಕ್ಕಿದೀರಾ..
ಎಲ್ಲವೂ ಅವಶ್ಯ- ಉಪಯುಕ್ತ ಮಾಹಿತಿಯ ಬರಹಗಳು..

ನೀವ್ ಹೇಳಿದ ಈ ಬರಹದ +--+--+--+--+= ನಾ ಪ್ರಯತ್ನಿಸಿದೆ(ಆಫೀಸ್ ೨೦೦೭) ಬಂತು....

೩ ಹೊಸ ಮಾಹಿತಿಯನ್ನ ಈ ದಿನ ಅರಿತುಕೊಂಡೆ..
ಒಂದು ಬರಹದಲ್ಲಿ ಚಿತ್ರ ಸೇರಿಸುವುದು
ಪ್ರತಿಕ್ರಿಯೆಯಲ್ಲಿ ಚಿತ್ರ ಸೇರಿಸುವುದು..(ಈ ಎರಡು ಸಂಪದಿಗರು ತಿಳಿಸಿದ್ದರಿಂದ)
೩ ನೆದು ನಿಮ್ಮ ಈ +--+--+--+ ವಿಧಾನ...

ಸಾಮಾನ್ಯ ಜನಕ್ಕೆ ಈ ತಂತ್ರಜ್ಞಾನ ಸಂಬಂಧಿ ವಿಷ್ಯ ಕಬ್ಬಿಣದ ಕಡಲೆ ಅನ್ನಿಸಿದರೂ ಅದನ್ನು ಬೇಯಿಸೋಕೆ ಈ ತರಹದ ಸರಳ ಭಾಷೆಯ ತಂತ್ರಜ್ಞಾನ ಸಂಬಂಧಿ ಬರಹಗಳ ಅವಶ್ಯಕತೆ ಇದೆ...
ಹಾಗೆಯೇ ನಿಮ್ಮಂತವರ ಅವಶ್ಯಕತೆಯೂ...
ನಿಮ್ಮ ಎಲ್ಲ ಬರಹಗಳನ್ನ ಓದಲಿಕ್ಕಿದೆ..

ನಿಮ್ಮ ಈ ಕಾರ್ಯ ಮುಂದುವರೆಯಲಿ..

ಎಲ್ಲದಕ್ಕೂ ಚಿತ್ರ ಸಮೇತ ವಿವರಣೆ ನೀಡುವ ನಿಮ್ಮ ತಾಳ್ಮೆ ಛಲ ಪರಿಶ್ರಮ- ಆಸಕ್ತಿ ಉತ್ಸಾಹ ಕ್ಕೆ ನನ್ನ ಹ್ಯಾಟ್ಸ್ಆಫ್..

ಶುಭವಾಗಲಿ...

ಗಣೇಶ's picture
07
May
2012
11:51

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

ಪ್ರಸನ್ನರವರೆ,
+-+-+- ಆಟ ಚೆನ್ನಾಗಿದೆ. :)
"ಸುಡೋಕು" ಆಡಲು- ಕಾಲಂ ಮಾಡಲು ಬಹಳ ಸುಲಭವಾಗುವುದು. :)
ಸಪ್ತಗಿರಿವಾಸಿ ಕೊನೆಯಲ್ಲಿ ಹೇಳಿದ್ದಕ್ಕೆ ನನ್ನದೂ +೧
-ಗಣೇಶ.

vinayak.mdesai's picture
08
May
2012
1:29

ಉ: ವರ್ಡ್‌ನಲ್ಲಿ ತಮಾಷೆಯಾದ ಫೀಚರ್‍

ತುಂಬಾ ಉಪಯುಕ್ತ ಮಾಹಿತಿ :‍)
ಧನ್ಯವಾದಗಳು.