24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎಲ್ಲರೂ ಎಷ್ಟು ಕೊಡುತ್ತಿದ್ದಾರೆ?

July 24, 2010 - 1:18pm
prasannasp

ಒಂದು ಕಂಪೆನಿಯ ಎಲ್ಲಾ ಉದ್ಯೋಗಿಗಳು ತುಂಬಾ ಚಿಂತಿತರಾಗಿದ್ದರು. ಕೆಲವರು ಅಲ್ಲಿಂದಿಲ್ಲಿಗೆ ತಿರುಗಾಡುತ್ತಿದ್ದರೆ ಇನ್ನು ಕೆಲವರು ಜೋರುದನಿಯಲ್ಲಿ ಚರ್ಚಿಸುತ್ತಿದ್ದರು. ಇದನ್ನೆಲ್ಲಾ ನೋಡುತ್ತಿದ್ದ ಹೊಸ ಟ್ರೈನಿಗಳು ಒಟ್ಟಾಗಿ ಬರುತ್ತಾರೆ. ಒಬ್ಬ ಟ್ರೈನಿಯು, ಹಿರಿಯ ಸಹೋದ್ಯೋಗಿಯ ಬಳಿ "ಇಲ್ಲಿ ಏನು ನಡೆಯುತ್ತಿದೆ?" ಎಂದು ಕೇಳುತ್ತಾನೆ.

ಆಗ ಆತ ಹೇಳುತ್ತಾನೆ, "ಭಯೋತ್ಪಾದಕರು ನಮ್ಮ ಬಾಸ್‌‌ನ್ನು ಅಪಹರಿಸಿದ್ದಾರೆ. ಅವರು ಒಂದು ಕೋಟಿ ಒತ್ತೆ ಹಣ ಕೇಳುತ್ತಿದ್ದಾರೆ. ಕೊಡದಿದ್ದರೆ ನಮ್ಮ ಬಾಸ್‌ ‌ಮೇಲೆ ಪೆಟ್ರೋಲ್‌‌ ಸುರಿದು ಬೆಂಕಿ ಹಚ್ಚುತ್ತಾರಂತೆ. ಅದಕ್ಕೆ ನಾವು ಸಂಗ್ರಹಣೆಗಾಗಿ ಪ್ರತಿಯೊಬ್ಬರ ಬಳಿ ಹೋಗುತ್ತಿದ್ದೇವೆ."

ಅವರಲ್ಲಿ ಒಬ್ಬ ಟ್ರೈನಿ ಕೇಳುತ್ತಾನೆ, "ನಾವೂ ಕೂಡ ನಿಮ್ಮ ಜೊತೆ ಕೈಜೋಡಿಸುತ್ತೇವೆ. ಅಂದಹಾಗೆ ಪ್ರತಿಯೊಬ್ಬರೂ ಎಷ್ಟು ಕೊಡುತ್ತಿದ್ದಾರೆ? ನಮಗೆ ಸಾಧ್ಯವಾದರೆ ನಾವೂ ಅಷ್ಟೇ ಕೊಡುತ್ತೇವೆ."

ಆಗ ಆ ಹಿರಿಯ ಉದ್ಯೋಗಿ ಹೇಳುತ್ತಾನೆ.........,

.

.

.

.

.

.

.

.

.

.

.

.

                 " ಸುಮಾರು ಒಂದು ಲೀಟರ್‍ "

    :) ;-)  :-)  :D

(ಮಿಂಚಂಚೆಯ ಮೂಲಕ ಬಂದ ಆಂಗ್ಲ ಹಾಸ್ಯವೊಂದರ ಕನ್ನಡ ಅನುವಾದ)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಭಾಗ್ವತ on

ಹಾಸ್ಯ ಚೆನ್ನಾಗಿದೆ ಪ್ರಸನ್ನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಪಾಪ

ಬಾಸ್ ಗತಿ ಗೋವಿಂದಾ ಗೋವಿಂದ
ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಬಾಸ್‌ಗಳು ತಮ್ಮ ಅಧೀನ ಉದ್ಯೋಗಿಗಳನ್ನು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು, ಇಲ್ಲದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಬಹುದು.

-ಪ್ರಸನ್ನ.ಶಂಕರಪುರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by santhosh_87 on

ಬಾಸ್ ಎಷ್ಟು ಒಳ್ಳೆಯದಿರಲಿ ಎಷ್ಟು ಕೆಟ್ಟರಿರಲಿ, ಅವನ ಕೆಳಗೆ ಇರುವ ಜನರಿಗೆ ಯಾವತ್ತೂ ಅವನನ್ನು ಕಂಡರೆ ಆಗಲ್ಲ. ಅದೇನೋ ಹೇಳ್ತಾರಲ್ಲ, 'Nobody leaves company, they leave their manager/boss' ಹಾಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಎಷ್ಟು ದುಡಿದರೂ ನನಗೆ ಭಡ್ತಿ, ಇಂಕ್ರಿಮೆಂಟು ಕೊಡುತ್ತಿಲ್ಲ ಅನ್ನುವ ಕಾರಣವಿರಬಹುದೇ? ಒಂದು ಕಂಪೆನಿಯಲ್ಲಿ ತುಂಬಾ ಮಂದಿ ಉದ್ಯೋಗಿಗಳಿದ್ದಾಗ ಎಷ್ಟು ಮಂದಿಯನ್ನು ಅಂತ ತಾನೆ ಆ ಬಾಸ್‌ಗೆ ಸಂತೈಸಲು ಆಗುತ್ತದೆ, ಪಾಪ! :) . ನನಗೆ ಇದರ ಬಗ್ಗೆಯೆಲ್ಲ ಇನ್ನೂ ಅನುಭವವಿಲ್ಲ. ಕೆಲಸಕ್ಕೆ ಸೇರಿದ ಮೇಲೆ ಬಹುಷಃ ಗೊತ್ತಾಗಬಹುದು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು ಭಾಗ್ವತ, ಗೋಪಿನಾಥ, ಸಂತೋಷ್, ವಿಕ್ರಮ

-ಪ್ರಸನ್ನ.ಎಸ್.ಪಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by komal kumar1231 on

ನನ್ನ ಕಡೆಯಿಂದ ೊಂದು ಗ್ಲಾಸ್ ಪೆಟ್ರೋಲ್, ಮಳೆ ಬಂದರೆ ಮತ್ತೊಂದು ಗ್ಲಾಸ್. ಹಂಗೇ ಬೆಂಕಿ ಪಟ್ನ ಫ್ರೀ. ಕಡೇ ಪಕ್ಷ ಹೊಸಬರಿಗೆ ಆದ್ರೂ ಕೆಲಸ ಸಿಗತ್ತಲಾ ಬುಡಿ. ಪ್ರಸನ್ನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಕೋಮಲ್, ಮುಂಚೆ ನಾನು ನೂರುಪಾಯಿ ಕೊಡೋಣ ಅಂತಿದ್ದೆ. ಆದ್ರೀಗ ನಿಮ್ಗೆ ಎರಡ್ಲೀಟ್ರು ಪೆಟ್ರೋಲ್ ಕಳುಸ್ತೇನೆ. ನೀವು ಅದಕ್ಕೆ ನಿಮ್ಮ ಒಂದು ಲೋಟ ಸೇರಿಸಿ ಬೆಂಕಿ ಪಟ್ಣನೂ ಇಟ್ಟು ಆ ಕಂಪ್ನಿಗೆ ಪಾರ್ಸೆಲ್ ಮಾಡ್ಬಿಡ್ರಣ್ಣ! :)

-ಪ್ರಸನ್ನ.ಶಂಕರಪುರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಧನ್ಯವಾದಗಳು ನಾಗರಾಜ್,

-ಪ್ರಸನ್ನ.ಶಂಕರಪುರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.