ನ|ನ|ಗೆ|ಗೊ|ತ್ತಿ|ಲ್ಲ|
ಕೆಲವು ದಿನಗಳ ಹಿಂದೆ ನಮ್ಮೂರ ಅಂಚೆ ಕಛೇರಿಗೆ ಹೋದಾಗ ಅಲ್ಲಿನ ಪೋಸ್ಟ್ ಮಾಸ್ಟರ್ ಯಾರಿಗೋ ಬಂದಿದ್ದ ಒಂದು ಅಂತರ್‍ದೇಶೀಯ ಪತ್ರ ತೋರಿಸಿದರು. ಅದರಲ್ಲಿ ವಿಳಾಸ ಎಲ್ಲವೂ ಸರಿಯಾಗಿತ್ತು, ಆದರೆ ಕೊನೆಗೆ ಪಿನ್ ಕೋಡ್ ಬರೆಯಲು ಇರುವ ಆರು ಬಾಕ್ಸ್ ಗಳಲ್ಲಿ ನ ನ ಗೆ ಗೊ ತ್ತಿ ಲ್ಲ ಎಂದು ಬರೆದಿದ್ದರು! ಅದನ್ನು ನೋಡಿ ಖಾಲಿ ಉಳಿದ ಸ್ಥಳ ತುಂಬಿಸಲು ಜನ ಏನೆಲ್ಲಾ ತಲೆ ಓಡಿಸುತ್ತಾರೆ ಎಂದು ನನಗೆ ಅಚ್ಚರಿಯಾಯಿತು.

- prasannasp ರವರ ಬ್ಲಾಗ್
- Login or register to post comments
- 453 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ನ|ನ|ಗೆ|ಗೊ|ತ್ತಿ|ಲ್ಲ|
|=|ಗು|o|ಡು|ಸೂ|ಜಿ|
ಎಂದು ಬರೆದಿದ್ದ ಕಾರ್ಡ್ ಒಮ್ಮೆ ನನಗೆ ಬಂದಿತ್ತು, ನನ್ನ ಸ್ನೇಹಿತ ಬೆಂಗಳೂರಿನಿಂದ ಕಳಿಸಿದ್ದಾಗಿತ್ತು.