ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

prasca ರವರ ಬ್ಲಾಗ್

ಆಸ್ತ್ರೇಲಿಯಾದಲ್ಲಿನ ಜನಾಂಗೀಯ ದಾಳಿಗಳನ್ನು ವಿರೋಧಿಸುವವರು ಬೀಜೇಪಿಯವರು, ಸಮರ್ಥಿಸುವವರು........?

ಅಲ್ಲಿ ನಡೆಯುತ್ತಿರುವ ದಾಳಿ ಭಾರತೀಯರ ವಿರುದ್ದವಾದದ್ದೆ? ಇದೆಲ್ಲವೂ ಭಾರತದ ಮಾಧ್ಯಮದವರ ಅತಿರೇಕದ ಚಿತ್ರಣ ಅಂತದ್ದೇನೂ ನಡೆದಿಲ್ಲ ಅವೆಲ್ಲವೂ ಒಂದು ಸಾಮಾನ್ಯ ಅಪರಾಧಿ ಪ್ರಕರಣಗಳಷ್ಟೆ ಎಂದು ಆಸ್ತ್ರೇಲಿಯಾದವರ ಅಂಬೋಣ.

ಇಷ್ಟಕ್ಕೂ ನಡೆದಿರುವ ದಾಳಿಗಳಲ್ಲಿ ತಪ್ಪೇನಿದೆ? ಕರ್ನಾಟಕದಲ್ಲಿ ಕನ್ನಡೇತರರಿಗೆ ಉದ್ಯೋಗ ಸಿಗಬಾರ್ದು ಅದು ಕನ್ನಡಿಗರಿಗೆ ಮೀಸಲು ಎಂದಾಗ ಸಮರ್ಥಿಸುವ ನಾವು ಅದೇ ಆಸ್ಟೇಲಿಯದವ್ರು ಮಾಡಿದ್ರೆ ತಪ್ಪು ಎನ್ನುವುದು ಎಷ್ಟರಮಟ್ಟಿಗೆ ಸರಿ?
ಇದನ್ನು ಮುಚ್ಚಿ ಕೊಳ್ಳಲು ಟ್ಯಾಕ್ಸಿ ಚಾಲನ ಪರವಾನಗಿ ಮರಾಠಿಗರಿಗೆ ಮಾತ್ರ ಎಂದು ಹೇಳಿಕೆ ಕೊಡುವ ಮೂಲಕ ಪ್ರಚೋದಿಸಿ ನಂತರ ತಣ್ಣಗೆ ಇಲ್ಲ ಎಂದು ಕೂತು ಕೆರಳಿಸಿ ವಿವಾದ ಹುಟ್ಟು ಹಾಕಿ ದುಬಾರಿಯಾಗಿರುವ ಬೇಳೆ ಬೇಯಿಸಿಕೊಳ್ಳುವ ವಿಧಾನ ಸೂಪರ್

ರಾಜಕೀಯ ಚಾಣಾಕ್ಷತನ

ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಇದರ ಮೇಲೆ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಮತ್ತು ಅನಿಲದ ಬೆಲೆ ದುಬಾರಿಯಾಗಲಿದೆಯೆಂಬ ಮುನ್ಸೂಚನೆ ಕೂಡ ಬರುತ್ತಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗುವುದು ಖಂಡಿತ. ಆದರೆ ನಾವು ಗಮನಿಸಬೇಕಾದ್ದು ಈ ಬೆಲೆ ಏರಿಕೆಯ ಬಿಸಿಯ ಬಿಸಿ ಸರ್ಕಾರಕ್ಕೆ ತಟ್ಟದಂತೆ ಮಾಡಿದ್ದು ಶಾರುಖ್ ಖಾನ್, ರಾಹುಲ್ ಗಾಂಢಿ ಮತ್ತು ರಾಜ್, ಉದ್ಭವ್ ಠಾಖ್ರೆಯ ನಡುವಣ ಸಮರ, ಇವರುಗಳ ನಡುವಿನ ವಾಕ್ಸಮರಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ವಿದ್ಯುನ್ಮಾನ ಸುದ್ದಿವಾಹಿನಿಗಳು, ಮುದ್ರಣ ಮಾಧ್ಯಮಗಳು ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ತಾವೂ ಮರೆತು ಜನರೂ ಮರೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿರುವುದು ಜಾಣತನವಲ್ಲವೆ?
ಸಾಮಾನ್ಯ ವಸ್ತುಗಳ ಬೆಲೆ ಏರಿಕೆಯ ಲಾಭ ಅದನ್ನು ಬೆಳೆದವನಿಗೆ ನ್ಯಾಯವಾಗಿ ದೊರೆತಿದ್ದರೆ ಖಂಡಿತ ನಾವಿಲ್ಲಿ ಹೆಚ್ಚು ಆತಂಕಕ್ಕೊಳಗಾಗಬೇಕಿರಲಿಲ್ಲ. ಆದರೆ ಅದಾಗುತ್ತಿದೆಯೆ?  ಮುಂದೆ ಓದಿ »

ಕಸಬ್ ತಂದೆಯ ಸಂದರ್ಶನ !!!

ರವಿ ಬೆಳಗೆರೆಯವರ ಮುಸ್ಲಿಂ ಪುಸ್ತಕ ಓದಿದ ಮೇಲೆ ನನಗ್ಯಾಕೊ ಒಮ್ಮೆ ಯಾರಾದ್ರೂ ಭಯೋತ್ಪಾದಕನನ್ನು ಸಂದರ್ಶಿಸಲೇಬೇಕೆಂಬ ಆಸೆ ಒಳಗೆ ಕೊರೆಯುತ್ತಿತ್ತು. ಕೊನೆಗೂ ಮನೆಯವರ್ಯಾರಿಗೂ ಹೇಳದೆ ಹೊರಟೇ ಬಿಟ್ಟೆ. ಎಲ್ಲಿಗ್ ಹೋಗೋದು ಎನ್ನುವುದು ಒಂದು ಕ್ಷಣ ಕಾಡಿದರೂ, ಭಯೋತ್ಪಾದಕರು ಅಂದ್ರೆ ಸಿಗೋದೆ ಪಾಕಿಸ್ಥಾನದಲ್ಲಿ. ಹೌದಲ್ವ? ನೇರ manufacturing unit ಗೆ ಹೋದ್ರೆ ಒಳ್ಳೆ ಮಾಲು ಸಿಗೋದು ಖಚಿತೆವೆಂದೆನಿಸಿ ಸರಿ ಅಲ್ಲಿಗೆ ಹೋಗೋಣ ಎಂದು ತೀರ್ಮಾನಿಸಿ ಹೊರಟೇಬಿಟ್ಟೆ.

ಹೋಗೋದ್ ಹೇಗೆ? ಕಳೆದ ಏಪ್ರಿಲ್ ನಲ್ಲಿ ವಾಘಾ ಗಡಿ ಸಂದರ್ಶಿಸಿದ್ದರಿಂದ ಆ ಮೂಲಕವೇ ಯಾವ್ದಾದ್ರೂ ಈರುಳ್ಳಿ ಲಾರಿ ಒಳ್ಗೆ ಸೇರ್ಕೊಂಡು ಹೋದ್ರಾಯ್ತು ಅನ್ಕೊಂಡೆ. ಭಾರತದಿಂದ ಪಾಕಿಸ್ತಾನಕ್ಕೆ ಹೋಗ್ಬೇಕೂಂದ್ರೆ ವೀಸಾ ಬೇಕು, ಹುಹ್ ಏನ್ಮಾಡೋದು ಅದೆ ಅಲ್ಲಿಂದ ಇಲ್ಲಿಗ್ ಬರ್ಲಿಕ್ಕೆ ಒಂದು ಕ್ರಿಕೆಟ್ ಮ್ಯಾಚ್ ಇದ್ರೆ ಸಾಕು. ಇಲ್ವ ಒಂದು ಗನ್ ಸಾಕು ನೋಡಿ.
***  ಮುಂದೆ ಓದಿ »

ಮಲ್ಲಳ್ಳಿ ಮತ್ತು ಮೂಕನಮನೆ ಜಲಪಾತ

ಆಗಸ್ಟ್ ೧೫ ರಂದು ಸ್ವಾತಂತ್ರ ದಿನದ ರಜಾದಲ್ಲಿ ಪ್ರವಾಸ ಹೋಗೋಣವೆಂದು ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಮೂಕನ ಮನೆ ಜಲಪಾತ. ಪಯಣಿಗ ಬ್ಲಾಗಿನ ಪ್ರಶಾಂತ್ (ಪರಿಚಯವಿಲ್ಲ ಆದರೂ) ಅವರಿಂದ ಬಂದ ಮಿಂಚೆ ಅಲ್ಲಿಗೆ ಹೋಗುವ ದಾರಿ ತಿಳಿಸಿತ್ತು. ಮನೆಗೆ ಬಂದಿದ್ದ ಅತಿಥಿ ಸಂಪದದ ಮೂಲಕ ಪರಿಚಯವಾದ ಹಾಸನದಲ್ಲಿ ನೆಲೆಸಿರುವ ಹರಿಹರಪುರ ಶ್ರೀಧರ್ ಅವರಿಂದ ಇನ್ನೂ ಹೆಚ್ಚು ಮಾಹಿತಿ ಕಲೆಹಾಕಲು ಯತ್ನಿಸಿದಾಗ ಅವರಿತ್ತದ್ದು ದಾಸೇಗೌಡರ ದೂರವಾಣಿ ಸಂಖ್ಯೆ.
 ಮುಂದೆ ಓದಿ »

ಏನಾಗಿದೆ ಈ TV9ಗೆ?

ಇಂದು ಈ ವಾಹಿನಿಯು ಸರಿ ಸುಮಾರು ೧೧ ಗಂಟೆಯಿಂದ ಪ್ರಿಯಾಂಕ ಮತ್ತು ಆನಂದ್ ಸಂಭಂದದ ಕತೆಯನ್ನು ನಿರಂತರವಾಗಿ ಪ್ರದರ್ಶಿಸುತ್ತಿತ್ತು. ನಾನು ಮಧ್ಯಾನ್ಹ ೧೨ ಗಂಟೆಗೆ ಊಟಕ್ಕೆ ಬಂದಾಗ ಪರಿತ್ಯಕ್ತ ಪ್ರೇಮಿ ಆಕೆಯ ಅಕ್ಕಂದಿರೊಡನೆ ಸ್ಟುಡಿಯೋಗೆ ಬಂದಾಗ ಕಾರ್ಯಕ್ರಮ ನೋಡಿದ್ದೆ. ಮತ್ತೆ ಸಂಜೆ ಬಂದಾಗ ಈ ವಾಹಿನಿ ಒಂದು ದೃಶ್ಯದ ತುಣುಕನ್ನು ತೋರಿಸುತ್ತಿತ್ತು. ಆಕೆ ಗರ್ಭಿಣಿಯೆನ್ನುವ ಕಾರಣಕ್ಕೆ ಅಳುತ್ತಾ ಕುಳಿತಿದ್ದ ಆ ಹೆಣ್ಣಿನ ಹೊಟ್ಟೆಯನ್ನು ಫೋಕಸ್ ಮಾಡಿ ತೋರಿಸ್ತಾ ಇದ್ದ ಆ ದೃಶ್ಯ ಇವರ ಕೀಳು ಅಭಿರುಚಿಯ ದ್ಯೋತಕವೋ? ಅಥವಾ ಗರ್ಭಿಣಿ ಎಂದಾಕ್ಷಣ ಮುಂದೆ ಬಂದಿರುವ ಹೊಟ್ಟೆಯ ಸಾಕ್ಷ್ಯ ತೋರಿಸಲು ಆ ಕ್ಯಾಮೆರಾದವ ಪ್ರಯತ್ನಿಸುತ್ತಿದ್ನಾ ತಿಳಿಯಲಿಲ್ಲ. ಆಲ್ಲ ಗರ್ಭಿಣಿ ಅಂದಾಕ್ಷಣ ಆ ಹೆಣ್ಣಿನ ಹೊಟ್ಟೆ ತೋರಿಸುವುದು ಅಸಭ್ಯತನ ಎಂದು ಅನ್ನಿಸ್ಲಿಲ್ವ? ನಾನಿಲ್ಲಿ ಮಡಿವಂತಿಕೆಯ ಬಗ್ಗೆ ಯೋಚಿಸ್ತಾ ಇಲ್ಲ.  ಮುಂದೆ ಓದಿ »

Syndicate content