ಈಗಿನಂತೆ 0 ಸದಸ್ಯರು ಮತ್ತು 75 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕೇಡಿಗನ ನಂಜು
hamsanandi's picture
ಹಂಸಾನಂದಿ
09
Feb
2010
ಬ್ಲಾಗ್ ಬರಹ

ಚೇಳಿನ ನಂಜೋ ಬಾಲದ ತುದಿಯಲಿ
ನೊಣಕ್ಕದುವೆ ಬಾಯಲ್ಲೆಲ್ಲಾ!
ಹಾವಿನ ಹಲ್ಲಲಿ ತುಂಬಿರುವುದು ವಿಷ
ಕೇಡಿಗನಿಗೋ ಮೈಯಲ್ಲೆಲ್ಲಾ!

...

ಪ್ರತಿಕ್ರಿಯೆಗಳು: 2
ಹಿಟ್ಸ್ : 844
ಹೀಗೊಂದು ಕಲಿಸುವಿಕೆಯ ಕಥೆ
chaya's picture
ಛಾಯಾ ಭಗವತಿ
11
Nov
2009
ಪುಟ

ಮುಂಜಾನೆ ಏಳುವಾಗಲೇ ಆರಾಗಿಹೋಗಿತ್ತು. ಏಳೂವರೆಗೆ ಸೆಕ್ರೆಟರಿಯವರು ಕಾಫಿ ಕುಡಿಯುತ್ತ ಶಾಲೆಯ ಬಿಲ್ಡಿಂಗಿನೊಳಗೇ ಹೊಂದಿಕೊಂಡಂತಿರುವ ಅವರ ಮನೆಯ ಮೆಲ್ಮಾಳಿಗೆಯಲ್ಲಿ ಕುಂತುಕೊಂಡು...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,203
ಸಹವಾಸ ದೋಷ
hamsanandi's picture
ಹಂಸಾನಂದಿ
05
May
2010
ಬ್ಲಾಗ್ ಬರಹ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,020
ನಾನು ಅಮ್ಮನ ಕಣ.
mahalakshmiharshavardhan's picture
ಮಹಾಲಕ್ಷ್ಮಿ ಹರ್ಷವರ್ಧನ್
18
Dec
2009
ಪುಟ

"ತಾಯಿಯು ದೇವರಿಗಿಂತಲೂ ಮೇಲು, ದೇವರ ಮೊಲೆಯಲ್ಲಿ ದೊರಕುವುದೇ ಹಾಲು?"

ನನ್ನ ಅಮ್ಮ ನೆನಪಾದಾಗಲೆಲ್ಲ ಚುಟುಕು ಬ್ರಹ್ಮ ದಿನಕರ...

ಪ್ರತಿಕ್ರಿಯೆಗಳು: 24
ಹಿಟ್ಸ್ : 1,775
ಪ್ರೊ. ನಿಸಾರ್ ಅವರೊಡನೆ ಕಳೆದ ಹೊತ್ತು-ನೆನಪಿನ ಖಜಾನೆಗೆ ಮತ್ತೊಂದು ಅಣಿಮುತ್ತು
ramvani's picture
ವಾಣಿ
06
Jan
2011
ಲೇಖನ

 

ಈ ನೆನಪಿನ ಖಜಾನೆ ನಮೆಲ್ಲರ ಬಳಿಯೂ ಇದೆ. ಅದರಲ್ಲಿನ ಸ್ವತ್ತು ನೋವು ಹಂಚಿದಾಗ ಕಮ್ಮಿ ಆಗುತ್ತೆ, ಸಂತಸ, ಸ್ವ-ಅನುಭಗಳ, ಮುದ ನೀಡುವ ಅದೆಷ್ಟೋ ವಿಷಯಗಳು ಹಂಚಿದಲ್ಲಿ...

ಪ್ರತಿಕ್ರಿಯೆಗಳು: 7
ಹಿಟ್ಸ್ : 545
ಯಕ್ಷಲೋಕದ ಅನರ್ಘ್ಯ ರತ್ನ
Narayan's picture
22
Jul
2006
ಪುಟ

ಶೇಣಿಯವರು ಕಾಲವಾದಾಗ ಕಡೇಪಕ್ಷ ಮುಖ್ಯಮಂತ್ರಿಗಳ ಕಚೇರಿಯಿಂದ ಒಂದು ಸಂತಾಪ ಸಂದೇಶ ಕೂಡ ಬರಲಿಲ್ಲ....

ಪ್ರತಿಕ್ರಿಯೆಗಳು: 3
ಹಿಟ್ಸ್ : 1,696
ಸಿಲ್ಲಿ ಕನಸುಗಳೆಂಬ ಸಣ್ಣ ಸೇತುವೆಗಳು
Chamaraj's picture
ಚಾಮರಾಜ ಸವಡಿ
15
Dec
2009
ಬ್ಲಾಗ್ ಬರಹ

ಒಮ್ಮೊಮ್ಮೆ ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ: ನಾವೆಲ್ಲ ಎಂತೆಂಥ ಅನಾಹುತಕಾರಿ ಘಟ್ಟಗಳನ್ನು ದಾಟಿ ಬಂದಿರುತ್ತೇವಲ್ವೆ?

ಬಾಲ್ಯದಲ್ಲಿ ಚಿತ್ರವಿಚಿತ್ರ ಆಸೆಗಳಿರುತ್ತವೆ....

ಪ್ರತಿಕ್ರಿಯೆಗಳು: 25
ಹಿಟ್ಸ್ : 1,295
ವಿಸ್ಮಯ ಚಿಂತನ ಮಿಲನ - 4
shashikannada's picture
ಶಶಿಕುಮಾರ್
22
Sep
2011
ಬ್ಲಾಗ್ ಬರಹ

ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನವು ಕಳೆದ ಮೂರು ತಿಂಗಳುಗಳ ಹಿಂದೆ ಅಂದರೆ ಜೂನ್ ನಲ್ಲಿ "ಚಿಂತನ ಮಿಲನ"...

ಪ್ರತಿಕ್ರಿಯೆಗಳು: 1
ಹಿಟ್ಸ್ : 198
ಕ್ಷುಲ್ಲಕ ಕಾರಣ, ಅಮಾಯಕರ ಸಾವು
abdul's picture
ಅಬ್ದುಲ್ ಲತೀಫ್ ಸಯ್ಯದ್
21
Jul
2011
ಲೇಖನ
ಒಬ್ಬಾತ  ತನ್ನ ದಿನದ ಕೆಲಸ ಮುಗಿದ ನಂತರ ತನ್ನ...
ಪ್ರತಿಕ್ರಿಯೆಗಳು: 15
ಹಿಟ್ಸ್ : 737
ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
28
Jan
2006
ಪುಟ
ಈ ತಿಂಗಳು ಪುತ್ತೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಈ ಹಿರಿಯರ ಬಗ್ಗೆ ತಿಳಿಯುವ, ಅವರ ಕೃತಿಯೊಂದನ್ನು ಪಡೆಯುವ ಅವಕಾಶ ಲಭಿಸಿತು. ಪುತ್ತೂರಿನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,342

ಆಯ್ದ ಲೇಖನಗಳು

ರೇಖಾ ಬಿಜೂರ್ ಹೆರೆಂಜಾಲ್
Dr. T.N. Vasudevamurthy
(1 ಪ್ರತಿಕ್ರಿಯೆ)
ಶ್ರೀಕಾಂತ ಮಿಶ್ರಿಕೋಟಿ
(7 ಪ್ರತಿಕ್ರಿಯೆ)
ಅಡ್ಡೂರು ಕೃಷ್ಣ ರಾವ್
(3 ಪ್ರತಿಕ್ರಿಯೆ)
ಶಶಿಧರ ಹೆಬ್ಬಾರ ಹಾಲಾಡಿ
(13 ಪ್ರತಿಕ್ರಿಯೆ)
ಹನುಮಂತ ಪಾಟೀಲ
(24 ಪ್ರತಿಕ್ರಿಯೆ)
ಶಶಿಧರ ಹೆಬ್ಬಾರ ಹಾಲಾಡಿ
(4 ಪ್ರತಿಕ್ರಿಯೆ)

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್ಕೇ ಐ.ಟಿ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿರುವ ಕನ್ನಡಿಗರ ಭಾಷೆ ಮಾತ್ರ ಗೂಗಲ್ ನ್ಯೂಸ್-ನಲ್ಲಿ ಯಾಕಿಲ್ಲ?” ಎಂದು ಮನಸ್ಸು ಯೋಚಿಸತೊಡಗಿತ್ತು.

ಇದೇ ಪ್ರಶ್ನೆಗೆ ಉತ್ತರ ಹುಡುಕಿ ಹೊರಟಾಗ, ಇಂಟರ್ನೆಟ್-ನಲ್ಲಿ ಸಿಕ್ಕ ಮಾಹಿತಿ:

.          ಏನ್-ಗುರು ಬ್ಲಾಗಿನಲ್ಲಿ ಹೇಳಿದಂತೆ, ಕನ್ನಡ ಲಿಪಿಯನ್ನೇ ಬಳಸಿ ಗೂಗಲ್-ನಲ್ಲಿ ನಡೆಯುವ ಸರ್ಚ್-ಗಳು ದಿನಕ್ಕೆ ಅಬ್ಬಬ್ಬಾ ಅಂದರೆ ೧೦೦೦ ದಷ್ಟಿರಬಹುದಂತೆ. ತಮಿಳು, ತೆಲುಗು, ಹಿಂದಿ ಭಾಷೆಗಳ ಲಿಪಿಯಲ್ಲಿ ನಡೆಯುವ ಸರ್ಚ್-ಗಳು ಕನ್ನಡಕ್ಕೆ ಹೋಲಿಸಿದರೆ ಬಹಳ ಜಾಸ್ತಿ ಇವೆಯಂತೆ.

.          ಗೂಗಲ್ ನ್ಯೂಸ್ ತಂತ್ರಜ್ನ್ಯಾನವು “ಕ್ಲಸ್ಟರ್ ಟೆಕ್ನಾಲಜಿ” ಬಳಸುತ್ತಾದ್ದರಿಂದ ಗೂಗಲ್ ನ್ಯೂಸ್-ನಲ್ಲಿ ಕನ್ನಡದ ಆಯ್ಕೆ ಮೂಡಿ ಬಂದರೂ, ಹೆಚ್ಚು ಜನರು ಅದನ್ನು ಬಳಸದೇ ಇದ್ದಲ್ಲಿ, ಕ್ಲಸ್ಟರ್ ಟೆಕ್ನಾಲಜಿಯು ಚೆನ್ನಾಗಿ ಕೆಲಸ ಮಾಡಲಾರದು. ಈಗಿನ ಕನ್ನಡದ ಆನ್-ಲೈನ್ ಪತ್ರಿಕೆಗಳಿಗಿರುವ ಒಳಹರಿವು (hit rate) ಅಳೆದು ನೋಡಿದರೆ, ಕ್ಲಸ್ಟರ್ ಟೆಕ್ನಾಲಜಿಗೆ ಉತ್ತಮವಾಗಿ ಕೆಲಸ ನಿರ್ವಹಿಸುವುದು ಕಷ್ಟ ಸಾಧ್ಯವೇ.

ಈ ಮಾಹಿತಿಯಿಂದ ನಮಗೆ ತಿಳಿಯುವುದೇನೆಂದರೆ, ಹೆಚ್ಚು ಕನ್ನಡಿಗರು ಅಂತರ್ಜಾಲದಲ್ಲಿ (internet) ಕನ್ನಡದ ಬಳಕೆ ಮಾಡುತ್ತಿಲ್ಲ. “ಕನ್ನಡ” ಎಂಬ ಪದವನ್ನು ಸರ್ಚ್ ಮಾಡಲೂ “kannada” ಎಂದು ಇಂಗ್ಲಿಷ್-ನಲ್ಲೇ ಬರೆದು ಸರ್ಚ್ ಮಾಡುವವರು ಹೆಚ್ಚು.

ಎರಡನೆಯದಾಗಿ, ಕನ್ನಡಿಗರು ತಮಗೆ ಬೇಕಾದ ಸುದ್ದಿಯನ್ನು ಪಡೆಯಲು ಇಂಗ್ಲಿಷ್ ತಾಣಗಳನ್ನೇ ಹೆಚ್ಚು ಬಳಸುತ್ತಾರೆ. ಬೆಂಗಳೂರಿನ ಐ.ಟಿ ಕಂಪನಿಗಳಲ್ಲಿ ಕೆಲಸ ಮಾಡಲು ಪರರಾಜ್ಯಗಳಿಂದ ಬಂದಿರುವ ಜನರು, ತಮಗೆ ಬೇಕಾದ ಸುದ್ದಿಯನ್ನು ತಮ್ಮ ಭಾಷೆಯ ಸುದ್ದಿ ತಾಣಗಳಿಂದಲೇ ಪಡೆಯುವ ಅಭ್ಯಾಸ ಬೆಳೆಸಿಕೊಂಡಿರುತ್ತಾರೆ. ಅವರ ಜೊತೆಯೇ ಕೆಲಸ ಮಾಡುವ ಕನ್ನಡಿಗರಿಗೆ ಮಾತ್ರ ಈ ಹವ್ಯಾಸ ಯಾಕೋ ಅಂಟಿಕೊಂಡಂತಿಲ್ಲ.

ಗೂಗಲ್ ನ್ಯೂಸ್-ನಲ್ಲಿ ಕನ್ನಡದ ಅನುಪಸ್ಥಿತಿ ಹೋಗಲಾಡಿಸಲು ನಾವು ಕನ್ನಡಿಗರು ಈ ಕೆಲವು ಕೆಲಸಗಳನ್ನು ಮಾಡಬಹುದಾಗಿದೆ.

.          ಯಾವುದೇ ವಿಷಯಗಳನ್ನು/ಸುದ್ದಿಯನ್ನು ಇಂಟರ್ನೆಟ್-ನಲ್ಲಿ ಹುಡುಕುವಾಗ ಆದಷ್ಟು ಕನ್ನಡ ಲಿಪಿಯನ್ನೇ ಬಳಸಿ ಹುಡುಕೋಣ. ಉದಾಹರಣೆಗೆ, ಅಮೇರಿಕಾ ಅಧ್ಯಕ್ಷ ಒಬಾಮಾ  ಬಗ್ಗೆ ಹುಡುಕುವಾಗ “Obama”ಎಂದು ಸರ್ಚ್ ಎಂಜಿನ್-ನಲ್ಲಿ ಬರೆಯುವ ಬದಲು “ಒಬಾಮಾ” ಎಂದು ಬರೆಯೋಣ.
ಪ್ರತಿಯೊಂದು ಸರ್ಚ್-ಅನ್ನೂ ಕಲೆ ಹಾಕಿ ಅಳೆದು ನೋಡುವ ಗೂಗಲ್ ಕಂಪನಿಗೆ, ಕನ್ನಡ ಸರ್ಚ್-ಗಳು ಜಾಸ್ತಿಯಾದರೆ ಗೂಗಲ್ ನ್ಯೂಸ್-ನಲ್ಲಿ ಕನ್ನಡ ತರಲು ಸ್ಪೂರ್ಥಿ ಖಂಡಿತ ಸಿಗಬಹುದು.

.          ಯಾವ ಕನ್ನಡ ಪತ್ರಿಕೆಗಳನ್ನು ಮನೆಗೆ ತರಿಸುವುದಿಲ್ಲವೋ, ಅವನ್ನು ಪ್ರತಿದಿನ ಆನ್-ಲೈನ್ ಓದುವ ಹವ್ಯಾಸ ಬೆಳೆಸಿಕೊಳ್ಳೋಣ ಮತ್ತು ನಮ್ಮ ಪರಿಚಯದವರಿಗೂ ಈ ರೀತಿಯ ಹವ್ಯಾಸ ಬೆಳೆಸಿಕೊಳ್ಳುವಂತೆ ಹುರಿದುಂಬಿಸೋಣ.

ನೆನಪಿರಲಿ, ಕನ್ನಡದ ಬಗ್ಗೆ ಕಾಳಜಿ ಇರುವ, ಇಂಟರ್ನೆಟ್ ಸೌಲಭ್ಯ ಹೊಂದಿರುವ ನಾವು ಮಾತ್ರ ಈ ಕೆಲಸ ಮಾಡಬಲ್ಲೆವು. ನಾವೇ ಮಾಡಬೇಕು.

ನಾವು ಈಗಲಾದರೂ ಎಚ್ಚೆತ್ತುಕೊಂಡು ಈ ಕೆಲಸ ಮಾಡದೇ ಇದ್ದಲ್ಲಿ, ಈಗಸದ್ಯಕ್ಕೆ ಕನ್ನಡದಲ್ಲಿ ಸುದ್ದಿ ತಾಣ ಹೊಂದಿರುವ ಯಾಹೂ ಮತ್ತು ಎಮ್.ಎಸ್.ಎನ್ ಕೂಡ ಗೂಗಲ್ ನ್ಯೂಸ್ ದಾರಿಯನ್ನೇ ಹಿಡಿಯಬಹುದು.
ಇಂಟರ್ನೆಟ್-ನಲ್ಲಿ ತಮಿಳು ತೆಲುಗು ಭಾಷೆಗಳು ಮೆರೆಯುತ್ತಿರುವಾಗ, ಕನ್ನಡಕ್ಕೆ ಜಾಗವೇ ಇಲ್ಲ ಎಂದಾಗುವುದು ಬೇಡ ಅಲ್ವಾ?

 

--

ಪ್ರಿಯಾಂಕ್

Average: 4.9 (7 votes)
1366 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
happysaiprasad's picture
26
Jan
2010
9:49

ಉ: ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ನೀವು ಹೇಳುತ್ತಾ ಇರುವುದು ನಿಜ ... ಕನ್ನಡದ ಅನುಪಸ್ಥಿತಿ ಹೋಗಲಾಡಿಸಲು ನಾವು ಕನ್ನಡಿಗರು ಈ ಕೆಲವು ಕೆಲಸಗಳನ್ನು ಮಾಡಲೇಬೆಕಾಗಿದೆ!!

jnaneshwara's picture
27
Jan
2010
10:18

ಉ: ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಒಳ್ಳೆ ಮಾಹಿತಿ ಅಭಿನಂದನೆಗಳು ಮತ್ತು ಧನ್ಯವಾದಗಳು

sudhichadaga's picture
27
Jan
2010
11:28

ಉ: ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

<<ಪ್ರತಿಯೊಂದು ಸರ್ಚ್-ಅನ್ನೂ ಕಲೆ ಹಾಕಿ ಅಳೆದು ನೋಡುವ ಗೂಗಲ್ ಕಂಪನಿಗೆ, ಕನ್ನಡ ಸರ್ಚ್-ಗಳು ಜಾಸ್ತಿಯಾದರೆ ಗೂಗಲ್ ನ್ಯೂಸ್-ನಲ್ಲಿ ಕನ್ನಡ ತರಲು ಸ್ಪೂರ್ಥಿ ಖಂಡಿತ ಸಿಗಬಹುದು.>>

ಈ ಕೆಲಸವನ್ನು ನಾವುಗಳು ಮಾಡೊದಲ್ಲದೇ. ನಮ್ಮ ಬ೦ದುಗಳಿಗೆ, ಗೆಳೆಯರಿಗೂ, ನಮ್ಮ ಕನ್ನಡಿಗ ಸಹೋದ್ಯೋಗಿಗಳಿಗೂ ತಿಳಿಸಬೇಕು. ಈ ಮಾಹಿತಿ ಪ್ರಚಾರವಾದಷ್ಟೂ ನಾವು ಗೆಲುವಿಗೆ ಹತ್ತಿರವಾಗ್ತೀವಿ.

vikashegde's picture
27
Jan
2010
12:52

ಉ: ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಹೌದು. ಹೀಗೆ ಎಲ್ಲಾ ಕಡೆಯೂ ಕನ್ನಡಕ್ಕೆ ಸ್ಥಾನ ದೊರೆಯುತ್ತಾ ಹೋದರೆ ಅದು ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನೂ ಹುಟ್ಟುಹಾಕುತ್ತದೆ.
ಈ ರೀತಿ ಮಾಡುವುದು ನಮ್ಮ ಕೈಯಲ್ಲೇ ಇದೆ.

yasu_srk's picture
29
Jan
2010
7:35

ಉ: ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

posting a message from friend.

ನಾನು ನನ್ನ ಬ್ರೌಸೆರ್ನಲ್ಲಿ ಕನ್ನಡವನ್ನು ಮೊದಲ ಪ್ರಾಶಸ್ತ್ಯವನ್ನಾಗಿ ಮಾಡಿಕೊಂಡಿದ್ದೇನೆ ಮತ್ತು ದಿನದಲ್ಲಿ ಅರ್ದ ಘಂಟೆ ಕನ್ನಡದ ಬಗ್ಗೆ ಹುಡುಕಾಟ ನಡೆಸುತ್ತೇನೆ. ಹುಡುಕಾಟದಲ್ಲಿ ಫಲಿತಾಂಶಗಳು ಬಹಳ ಕಡಿಮೆ ಇರುತ್ತವೆ. ಆಗ "ಅತೃಪ್ತಿಯೇ? ಅಭಿವೃದ್ದಿಗಾಗಿ ನಮಗೆ ಸಹಾಯಮಾಡಿ" ಇಲ್ಲಿಗೆ ಹೋಗಿ ನಾನು ನಿರೀಕ್ಷಿಸಿದ ವಿಷಯಗಳ ಬಗ್ಗೆ ಬರೆಯುತ್ತೇನೆ. ಮುಂದೊಂದು ದಿನ ಗೂಗಲ್ ಹೆಚ್ಚು ಫಲಿತಾಂಶ ನೀಡಬಹುದೆಂಬ ನಿರೀಕ್ಷೆಯಲ್ಲಿ.
ಇದನ್ನು ಓದುತಿರುವ ಕನ್ನಡಿಗರಲ್ಲಿ ಶೇ ೧೦ ರಷ್ಟು ಜನ ದಿನವೂ ಈ ರೀತಿ ಮಾಡಿದರೆ ಗೂಗಲ್ ನ್ಯೂಸ್ ಕನ್ನಡದಲ್ಲೂ ಬರಬಹುದು. ಎಲ್ಲಾ ನಮ್ಮ (ಅಂತರ್ಜಾಲ ಉಪಯೋಗಿಸುವ ಕನ್ನಡಿಗರ) ಕೈನಲ್ಲಿದೆ.

ಇಂತಿ,
ಚಂದ್ರು