ಮೇಘವೃಷ್ಟಿಯಂತೆ (ಮಳೆಯಂತೆ) ಉಪದೇಶ ಕೊಡು. ಗುರು ಯಾರನ್ನೂ ಶಿಷ್ಯನನ್ನಾಗಿ ಮಾಡಿಕೊಳ್ಳುವುದು ಬೇಡ. ಶಿಷ್ಯನಾದರೆ ಅವನ ಕರ್ಮದ ಅರ್ಧಾಂಶವನ್ನು ಗುರು ಅನುಭವಿಸಬೇಕು.

— ತುಕಾರಾಮ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬಿ.ಎಸ್.ಎನ್.ಎಲ್ ಮ೦ಡೆ ಬೋಳು ಮಾರಾಯ!!

ಏರ್ ಟೆಲ್ ಬೋಲಾಯಣ

ಕರ್ನಾಟಕದ ಹಳ್ಳಿ ಹಳ್ಳಿಯಲ್ಲಿ ನೆಟ್ ವರ್ಕ್ ಇರುವ ಬಿ.ಎಸ್.ಎನ್.ಎಲ್ ಸಹಜವಾಗಿ ಕನ್ನಡಿಗರಿಗೆ ಅರ್ಥ ಆಗೋ ಹಾಗೆ ಜಾಹೀರಾತು ಮಾಡಬೇಕಿತ್ತು.
ಆದ್ರೆ ಅದನ್ನು ಮಾಡದೆ ಬೆಂಗಳೂರಲ್ಲಿ ಎಲ್ಲೆಡೆ ಯಾವ ಯಾವ್ದೋ ಭಾಷೆಯಲ್ಲಿ ಹೋರ್ಡಿಂಗ್-ಗಳನ್ನು ಹಾಕುತ್ತಿದ್ದಾರೆ.
ಈ ಹೋರ್ಡಿಂಗ್-ಗಳು ರೋಮನ್ ಲಿಪಿಯಲ್ಲಿ ಹಿಂದಿಯಲ್ಲಿ ತಮ್ಮ ಪಂಚ್-ಲೈನ್ ಹೊಂದಿವೆ.
ಏರ್-ಟೆಲ್ ಕಂಪನಿ ಕೂಡ ಇದೇ ಮಾದರಿಯನ್ನು ಪಾಲಿಸುತ್ತಿದ್ದಾರೆ.
"ಹಿಂದುಸ್ತಾನ್ ಬೋಲ್ ರಹಾ ಹೆ" ಎಂಬುದು ಬಿಎಸ್ಏನ್ಎಲ್-ನ ಪಂಚ್ ಲೈನ್ ಆದರೆ, "ಗಾನಾ ಬೋಲೋ ಹಲೋ ಟ್ಯೂನ್ ಪಾಓ" ಅನ್ನುವುದು ಏರ್-ಟೆಲ್ ನ ಪಂಚ್-ಲೈನ್.
ಬಹುಷಃ ಇದೇ ಹೋರ್ಡಿಂಗ್-ಗಳನ್ನು ದೇಶದೆಲ್ಲೆಡೆ ಹಾಕಿರಬಹುದು.

ಇವರು ಗ್ರಾಹಕನದ್ದಲ್ಲದ ಎರಡು ಬೇರೆ ಭಾಷೆಗಳನ್ನು ಉಪಯೋಗಿಸಿ "ಕಲಸು ಮೇಲೋಗರ" ಮಾಡಿಕೊಂಡು ತಮ್ಮ ಜಾಹೀರಾತುಗಳನ್ನು ನೀಡುತ್ತಿದ್ದಾರೆ. ಹಿಂದಿಯಲ್ಲೇ ಜಾಹೀರಾತು ನೀಡಬೇಕಾಗಿದ್ದಲ್ಲಿ, ದೇವನಾಗರಿ ಲಿಪಿ ಬಳಸಬಹುದಾಗಿತ್ತು. ಒಂದು ಭಾಷೆಯನ್ನು ಇನ್ನೊಂದು ಲಿಪಿಯಲ್ಲಿ ಮುಚ್ಚಿಟ್ಟು ಜಾಹೀರಾತು ಮಾಡುವ ಆವಶ್ಯಕತೆ ಏನು?
ಇಂಗ್ಲಿಷ್ ಮೂಲಕವಾದರೂ ಹಿಂದಿಯನ್ನು ಹೇರುವ ಹುನ್ನಾರವೇ?
ಕನ್ನಡ ಮತ್ತು ಇಂಗ್ಲಿಷ್ ಬಳಸಿ ಇಡೀ ಕರ್ನಾಟಕದಲ್ಲಿ ಜಾಹೀರಾತು ನೀಡಲು ಸಾಧ್ಯವಿರುವಾಗ, ಈ ಕಂಪನಿಗಳು ರೋಮನ್ ಲಿಪಿಯಲ್ಲಿ ಹಿಂದಿ ಓದುವ ಇದ್ಯಾವ ಕೋದಂಡರಾಮನ ಗುಂಪನ್ನು ಆಕರ್ಷಿಸಲು ಪ್ರಯತ್ನ ಪಡುತ್ತಿದ್ದಾರೋ ಕಾಣೆ.
ಏನಿಲ್ಲದಿದ್ದರೂ ಮಾರುಕಟ್ಟೆಯಲ್ಲಿ ಒಂದು ಗೊಂದಲವನ್ನಂತೂ ಇವರು ಹುಟ್ಟು ಹಾಕಿದ್ದಾರೆ.

ಈ ರೀತಿ ಬೇರೆ ಭಾಷೆಗಳನ್ನು ಜನರ ಮನಸ್ಸಿನಲ್ಲಿ ತುರುಕುವ ಪ್ರಯತ್ನವನ್ನು ಕಂಪನಿಗಳು ನಿಲ್ಲಿಸಬೇಕು. ಕರ್ನಾಟಕದಲ್ಲಿ ಜನರನ್ನು ತಲುಪಲು ಯಾವ ಭಾಷೆ ಉತ್ತಮ ಎಂಬ ತಿಳುವಳಿಕೆ ಉದ್ದಿಮೆದಾರರಲ್ಲಿ ಮೂಡಬೇಕಾಗಿದೆ. ಕನ್ನಡದ ಗ್ರಾಹಕ ಗ್ಲೋಬಲೈಸೇಶನ್-ನ ಈ ಕುತೂಹಲಕಾರಿ ಸಮಯದಲ್ಲಿ ಸ್ವಲ್ಪ ಎಚ್ಚರ ವಹಿಸಬೇಕಾಗಿದೆ. ಇಲ್ಲದಿದ್ದರೆ, ಮುಂದೊಂದು ದಿನ ಜಾಹಿರಾತುಗಳಲ್ಲಿ ಕನ್ನಡ ಮಾಯವಾಗಲು ನಾವೇ ಎಡೆ ಮಾಡಿಕೊಟ್ಟ೦ತಾಗುತ್ತದೆ.

ಬನ್ನಿ, ಏರ್-ಟೆಲ್ ಮತ್ತು ಬಿಎಸ್ಏನ್ಎಲ್ ನವರಿಗೆ ತಿಳಿ ಹೇಳೋಣ. ಕನ್ನಡಿಗರ ಮೇಲೆ ಭಾಷಾಪ್ರಯೋಗ ಮಾಡಿದರೆ, ನಿಮ್ಮ ವ್ಯಾಪಾರಕ್ಕೆ ಕನ್ನಡಿಗರ ಸಹಕಾರ ಸಿಗುವುದಿಲ್ಲ ಎಂದು ಎಚ್ಚರಿಸೋಣ.
ಅವರು ಬದಲಾಗಲು ಕಾರಣಕರ್ತರಾಗೋಣ.

ಏರ್ ಟೆಲ್ - care.karnataka@airtel.in
ಬಿಎಸ್ಏನ್ಎಲ್ : gmmso_ktk@bsnl.co.in, gmmsd_ktk@bsnl.co.in, gmrural@sancharnet.in

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಬಿ.ಎಸ್.ಎನ್.ಎಲ್ ಮ೦ಡೆ ಬೋಳು ಮಾರಾಯ!!

kishoreyc's picture

"ಹಾಡು ಕೇಳಿ ಹೆಲೋ ಟ್ಯೂನ್ ಪಡೆಯಿರಿ, ಅನ್ನೋದು ಸುಲಭ!!!!! ಆದ್ರೆ ನಮ್ಮದು ಭಾರತದಾದ್ಯ೦ತ ಇರೋ ಕ೦ಪನಿ ಸರ್, ಇದು ಎಲ್ಲರಿಗೂ ಅರ್ಥ ಆಗಬೇಕಲ್ವ ಅದಕ್ಕೆ ಹಿ೦ದಿಯಲ್ಲಿ ಹಾಕಿದ್ದೇವೆ" ಎ೦ದು ಏರ್ ಟೆಲ್ ನ ಅಧಿಕಾರಯೊಬ್ಬ ಇವತ್ತು ಹೇಳುತ್ತಿದ್ದರು. ಹಾಗಿದ್ರೆ ಕನ್ನಡಿಗರಿಗೆ ಹಿ೦ದಿ ಅರ್ಥ ಆಗದಿದ್ರೆ ಏನು ಮಾಡಬೇಕು ಎ೦ಬ ಪ್ರಶ್ನೆಗೆ ಅವನಲ್ಲಿ ಏನೂ ಉತ್ತರ ಇರಲಿಲ್ಲ.

ಹಿ೦ದಿ ನಾವೆಲ್ಲರೂ ಕಲಿಯಲಿ ಎನ್ನು ಧ್ಯೇಯವನ್ನು ಮು೦ದಿಟ್ಟುಕೊ೦ಡುಕೊ೦ಡು ಏರ್ ಟೆಲ್ ರವರು ಈ ರೀತಿ ಜಾಹೀರಾತು ಮಾಡಿದಹಾಗಿದೆಯೇ ಹೊರತು ಕನ್ನಡಿಗರ ಮನವೊಲಿಸಿ ವ್ಯಾಪಾರ ಮಾಡುವುದಕ್ಕೆ ಖ೦ಡಿತ ಅಲ್ಲ.