ಜೀವ ದಿಟ ಅನಿಸಲಿಲ್ಲವೇ ನಿನಗೆ?
ದೇವ ಸುಳ್ಳು ಅನಿಸಲಿಲ್ಲವೆ ನಿನಗೆ?
ನಂಬಿಕೆಯೇ ಎಲ್ಲ ಮೀರಿದ ಸತ್ಯ ನಿನಗೆ
ಬುಡವಿಲ್ಲದಿದ್ದರೂ ಅಲ್ಲವೆ?
ಮುಂದೆ ಓದಿ »
ವೈದ್ಯನಾರಾಯಣಕಥೆ
July 6, 2008 - 8:41am — medhadongre’ನಿಮ್ಮನ್ನು ನೋಡಿದ್ರೆ ಇನ್ನೂ ಕಾಲೇಜ್ ವಿದ್ಯಾರ್ಥಿ ಹಾಗೆ ಕಾಣ್ತೀರಿ ’ ಅಂತ ನನ್ನ ಮುಂದೆ ಕೂತ ೨೮ ವರ್ಷದ ಜವಾನ್ತಿ(ಯುವತಿ) ಹೇಳಿದಾಗ ನಾಕನೇ ದಶಕ ಓಡುತ್ತಿರುವ ನನ್ಗೆ (ನಾನೇನೂ ೪೦+ ಅಲ್ಲ ಮಾರಾಯ್ರೇ..ಬರೀ ೩೦+…ಅಷ್ಟೇ ಅಲ್ಲ..೩೦ ರ ನಂತರ ವಯಸ್ಸು ಓಡ್ಲಿಕ್ಕೆ ಶುರು ಆಗ್ತದೆ ಮಾರಾಯ್ರೆ) ಒಂದುಸಲ ಭಯಂಕರ ಖುಷಿ ಆಗಿ ಪುಗ್ಗದ ಹಾಗೆ ಹಿಗ್ಗಿದ ನಾನು ಕೂಡ್ಲೇ ಟುಸ್ಸ್…ಅಂತ ಮುಖ ಸಣ್ಣದು ಮಾಡಿಕೊಂಡೆ. ಯಾಕೆ ಹೀಗೆ ಆಯ್ತು?..ಕಥೆ ಕೇಳಿ..
ಕರ್ಮಸಿದ್ಧಾಂತದ ಪ್ರಕಾರ ಹೇಳ್ಬೇಕಾದ್ರೆ ಘನಘೋರ ಪಾಪ ಮಾಡಿದ ನರಮಾನಿ (ಮನುಷ್ಯ) ಮರುಜನ್ಮದಲ್ಲಿ ಡಾಕ್ಟರಾಗುವುದು ಖಂಡಿತ. ಇಲ್ಲಸಲ್ಲದ ಸಮಯದಲ್ಲಿ ಫೋನ್ ಬರುವುದು, ಊಟಮಾಡುವಾಗಲೇ ಕರೆಗಂಟೆ ಬಾರಿಸುವುದು, ನೆಂಟರು ಬಂದ ದಿನವೇ ಎಮರ್ಜೆನ್ಸಿ ಕೇಸ್ ಬರುವುದು, ಡಯೇರಿಯಾ ಕೇಸ್ ನೋಡಿದ ಮೇಲೆ ಹಲಸಿನಹಣ್ಣಿನ ಪಾಯಸದ ಮೇಲೂ ಗುಮಾನಿ ಬರುವುದು..ಇದೆಲ್ಲ ಎಲ್ರಿಗೂ ಗೊತ್ತುಂಟು. ಆದ್ರೆ ಇಲ್ಲಿ ಕಥೆಯೇ ಬೇರೆ.. ವೈದ್ಯೋನಾರಾಯಣೋ ಹರಿಃ ಅನ್ನುವುದನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ನಾರಾಯಣನೇ ವೈದ್ಯನೆಂದು ಅಥವಾ ವೈದ್ಯನೇ ನಾರಾಯಣನೆಂದೂ ಅರ್ಥಮಾಡಿಕೊಳ್ಳುವ ಚಾಲಾಕ್ ರೋಗಿಗಳು ಇನ್ನು ಕೆಲವು ವಿಷಯಗಳಲ್ಲಿ ಸ್ವಲ್ಪ confused ಇರ್ತಾರೆ. ಮುಖ್ಯವಾಗಿ ಎಲ್ರಿಗೂ ಡಾಕ್ಟರೆಂಬ ಪ್ರಾಣಿಯೂ ತಮ್ಮ ಹಾಗೇ ಮನುಷ್ಯ ಜಾತಿಯಲ್ಲಿ ಬರುತ್ತದೆ, ಅದಕ್ಕೂತಮ್ಮ ಹಾಗೆ ೨ ಕಣ್ಣು , ೨ ಕಿವಿ, ೧ ಮೂಗು (ಹೋಗ್ಲಿ ಬಿಡಿ, ನಿಮಗೆ ಎಷ್ಟು ಮಾಂಸಖಂಡ, ಎಲುಬು, ನರಗಳು ಅಂತ ಹೇಳಲಿಕ್ಕೆ ಇದೇನು ಅನಾಟಮಿ ಕ್ಲಾಸಲ್ಲವಲ್ಲ..)ಮಾತ್ರವಲ್ಲ , ಒಂದು ಮನಸ್ಸೂ ಇರ್ತದೆ ಅಂತ ನೆನಪಿರುವುದಿಲ್ಲ. ಹೀಗಾಗಿ ಈ ವಿಚಿತ್ರ ಪ್ರಾಣಿಯ ಬಗ್ಗೆ ಒಂಥರ ಪೂರ್ವಾಗ್ರಹಪೀಡಿತ ಅಭಿಪ್ರಾಯ ಇಟ್ಟುಕೊಂಡಿರುವುದು ಪಂಜುರ್ಲಿ ,ಗುಳಿಗ ,ರಕ್ತೇಶ್ವರಿಯ ಆಣೆಗೂ ಸತ್ಯ. ಇವು ತಮ್ಮ ಡಾಕ್ಟರ್ ಎಷ್ಟು ಅನುಭವಿಗಳು ಅಂತ ತೀರ್ಮಾನಿಸಲು ಇರುವ ಕ್ರೈಟೀರಿಯ ಅಂತಲೂ ಹೇಳಬಹುದು. ಮುಂದೆ ಓದಿ »

ಗಿರಿಜನರ ನಾಡು ಕೋರಾಪುಟ್
July 5, 2008 - 7:25am — cmariejosephಕೋರಾಪುಟ್ ಎಂಬುದು ಒರಿಸ್ಸಾದ ಪಶ್ಚಿಮದಲ್ಲಿನ ಗುಡ್ಡಗಾಡು ಪರಿಸರದ ಒಂದು ಜಿಲ್ಲೆ. ಬರೀ ಅರಣ್ಯ ಮತ್ತು ಬೆಟ್ಟಗುಡ್ಡಗಳಿಂದ ತುಂಬಿದ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ಸಹಜವಾಗಿ ಗುಡ್ಡಗಾಡು ಜನರು. ಭೂಪಟದಲ್ಲಿನ ಗಡಿರೇಖೆಗಳ ಪರಿವೆ ಇಲ್ಲದ ಇವರು ಜಾರ್ಖಂಡ್, ಛತ್ತೀಸ್ಗಡ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಮತ್ತು ಒರಿಸ್ಸಾಗಳಲ್ಲಿ ವ್ಯಾಪಿಸಿರುವ ಬೃಹತ್ ಅರಣ್ಯದಲ್ಲಿ ಬಾಳುವೆ ಮಾಡುತ್ತಿದ್ದಾರೆ. ಮಳೆ ಬಿಸಿಲು ಚಳಿಗೆ ತಕ್ಕಂತೆ ತಾಣಗಳನ್ನು ಬದಲಿಸುತ್ತಾ ಪ್ರಾಣಿಗಳನ್ನು ಬೇಟೆಯಾಡುತ್ತಾ ಇದ್ದಲ್ಲೇ ಏನಾದರೂ ಬೆಳೆದುಕೊಳ್ಳುತ್ತಾ ಅತಿ ಸ್ವತಂತ್ರರಾಗಿ ಬದುಕುವ ಇವರನ್ನು ನಾಡಿಗರು ಆದಿವಾಸಿಗಳೆನ್ನುತ್ತಾರೆ.
ವಿಶಾಖಪಟ್ಟಣದಿಂದ ರಾಯಗಡದವರೆಗಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೪೩ರಲ್ಲಿ ಸಾಗುವ ಲಾರಿಗಳು ಕೋರಾಪುಟ್ ಜಿಲ್ಲೆಯ ಸಿಮಿಲಿಗುಡ ಎಂಬ ಊರಿನಲ್ಲಿ ನೀರು ನೆರಳಿಗಾಗಿ ನಿಂತು ಸಾಗುವೆಡೆ ಈ ಆದಿವಾಸಿಗಳ ಸಂತೆ ನೆರೆಯುತ್ತದೆ. ರಾಗಿ, ತರಕಾರಿ, ಉಪ್ಪು, ಎಣ್ಣೆ, ಕಾಳುಕಡಿ, ಬಟ್ಟೆ, ಬಳೆ, ಕತ್ತಿ ಕುಡುಗೋಲು, ಆಡುಕುರಿ ಇವೆಲ್ಲ ಬಿಕರಿಯಾಗುವುದು ಪರಸ್ಪರ ವಿನಿಮಯ ಲೆಕ್ಕದಲ್ಲಿ. ಅರ್ಥಾತ್ ಇಲ್ಲಿ ಹಣದ ವಿನಿಮಯ ಅತಿ ಕಡಮೆ. ಗಂಡಸರು ಬರೀ ಲಂಗೋಟಿಯಲ್ಲಿದ್ದರೆ ಹೆಂಗಸರು ಲಂಗೋಟಿ ಜೊತೆಗೆ ಸೀರೆಯನ್ನು ಮಾಮೂಲಾಗಿ ಉಡದೆ ಶಾಲಿನಂತೆ ಹೊದ್ದುಕೊಳ್ಳುತ್ತಾರೆ. ಮುಂದೆ ಓದಿ »

- Login or register to post comments
- 77 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಜಗನ್ನಾಥನ ತಬ್ಬಲಿ ಮಕ್ಕಳು
July 5, 2008 - 6:54am — anivaasi
ನಾವೂ ಓಪನ್ ಆಫೀಸ್ ಉಪಯೋಗಿಸೋಣ. ನೀವೇನಂತೀರಾ?
July 4, 2008 - 10:29pm — omshivaprakash
ತನ್ನ ದೈನಂದಿನ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಕಂಪ್ಯೂಟರ್ ಅನ್ನ ಅವಲಂಬಿಸಿ ಕೊಂಡು ಬರಲಿಕ್ಕೆ ಸರ್ಕಾರಿ ಇಲಾಖೆಗಳು ಪ್ರಾರಂಭಿಸಿ ವರ್ಷಗಳು ಕಳೆದಿರಬಹುದು. ಅಂದಿನಿಂದ ಇಂದಿನವರೆಗೆ ಪತ್ರಗಳನ್ನ, ಇತರೆ ಕಡತಗಳನ್ನ ಸಂಪಾದಿಸಲಿಕ್ಕೆ ಸಮಾನ್ಯವಾಗಿ ಉಪಯೋಗಿಸಿ ಕೊಂಡು ಬಂದಿರುವ ತಂತ್ರಾಂಶ ಮೈಕ್ರೋ ಸಾಫ್ಟ್ ಆಫೀಸ್ ಅಲ್ವೇ? ಇದನ್ನ ಮೈಕ್ರೋಸಾಫ್ಟ್ ನಿಂದ ಕೊಂಡು ಉಪಯೋಗಿಸಿದವರನ್ನ ನಾನು ಕಂಡದ್ದೇ ಇಲ್ಲ. ಸರ್ಕಾರ ಇದನ್ನ ಉಪಯೋಗಿಸಲಿಕ್ಕೆ ಪ್ರತಿಯೊಂದು ಕಂಪ್ಯೂಟರ್ಗೆ ಲೈಸೆನ್ಸ್ ಕೊಂಡುಕೊಳ್ಳ ಬೇಕಾಗುತ್ತದೆ. ಸ್ವಲ್ಪ ಲೆಕ್ಕ ಹಾಕಿ, ಒಂದೊಂದು ಸರ್ಕಾರಿ ಆಫೀಸಿಗೆ ಈ ತಂತ್ರಾಂಶ ಕೊಳ್ಳಬೇಕೆಂದರೆ ಲಕ್ಷಗಟ್ಟಲೆ ಹಣ ಸುರಿಯ ಬೇಕಾಗುತ್ತದೆ. ಹಣ ಎಲ್ಲಿಂದ ಬರತ್ತೆ? ಇದೆಯಲ್ಲ ನಾನು, ನೀವು ಕೊಟ್ಟ ಟ್ಯಾಕ್ಸ್ ಹಣ.
ಈ ರೀತಿ ಹೊರ ದೇಶದ ಒಂದು ಕಂಪೆನಿಗೆ ಹರಿದು ಹೋಗೋ ಹಣವನ್ನ ತಡೆಯೋದ್ ಹ್ಯಾಗೆ? ಟ್ಯಾಕ್ಸ್ ಹಣ ಉಳಿಸಿ ಅದನ್ನ ಅಭಿವೃದ್ದಿ ಕಾರ್ಯಗಳಿಗೆ ಬಳಸೋದ್ ಸಾಧ್ಯಾನಾ? ಕೆಲ ತಿಂಗಳುಗಳ ಹಿಂದೆ ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್ ನೊಂದಿಗೆ ಅದರ ತಂತ್ರಾಂಶಗಳನ್ನ ಉಪಯೋಗಿಸುವುದಕ್ಕೆ ಒಪ್ಪಂದವನ್ನ ಮಾಡಿಕೊಳ್ಳ ಹೊರಟಾಗ ಅದನ್ನ ವಿರೋಧಿಸಿ ಒಂದು ಹೋರಾಟವನ್ನ ಪ್ರಾರಂಭಿಸಿದ್ದೆವು. ವಿದೇಶಿ ತಂತ್ರಾಂಶದಿಂದಾಗ ಎದುರಾಗ ಬಹುದಾದ ತೊಂದರೆಗಳನ್ನ ಎಲ್ಲರ ಮುಂದಿಟ್ಟಿದ್ದೆವು. ಸೆಕ್ಯೂರಿಟಿಯ ಮಟ್ಟಿಗೆ ಕೂಡ ಹಿಂದೆ ನೆಡೆದ ಲಾಜಿಕ್ ಬಾಂಬ್ ಘಟನೆಗಳನ್ನ ವಿವರಿಸಿದ್ದೆವು. ಮುಂದೆ ಓದಿ »

- 9 ಪ್ರತಿಕ್ರಿಯೆಗಳು
- 240 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್
July 4, 2008 - 10:11pm — aprಮೈಸೂರಿನ ೨೫೪೩೭೫೯ ಸಂಕ್ಯೆಗೆ ದೂರವಾಣಿ ಕರೆ ಮಾಡಿದರೆ, ನೀವಿನ್ನು ಎಂದಿನ ಗಂಭೀರ ಧ್ವನಿ "ನಮಸ್ಕಾರ, ಜಿ.ಟಿ.ನಾರಾಯಣರಾವ್" ಎಂದಿಗೂ ಕೆಳದು. ಸರಸ್ವತೀಪುರಂನಲ್ಲಿರುವ "ಅತ್ರೀ" ಮನೆಯ ಗೇಟನ್ನು ಮೆಲ್ಲಗೆ ತೆರೆದರೂ ಸಾಕು, ಮನೆಯೊಳಗಿಂದ ಹೊರ ಬಂದು, ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುತ್ತ "ಸುಖ ಪ್ರಯಾಣವಾಯಿತೇ" ಎಂದು ಕೇಳಿ ಸ್ವಾಗತಿಸುತ್ತಿದ್ದ ಜಿ.ಟಿ.ನಾರಾಯಣ ರಾವ್, ಹೃಸ್ವವಾಗಿ ಜಿಟಿಎನ್ ಇನ್ನಿಲ್ಲ. "ಮುಗಿಯದ ಪಯಣ" ಕೃತಿಯ ಕರ್ತೃ ಇಹದ ಬಾಳಿನ ಪಯಣ ಮುಗಿಸಿ ವಿಶ್ವ ರಹಸ್ಯದಲ್ಲಿ ಲೀನವಾಗಿದ್ದಾರೆ.
ಜಿಟಿಎನ್ ಗುರುವಾರ (೨೬.೬.೨೦೦೮) ಸಂಜೆ ಸ್ನೇಹಿತರ ಮನೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನವನ್ನು ಕಂಪ್ಯೂಟರ್ ಪರದೆ ಮೇಲೆ ಓದುತ್ತ ಇದ್ದಾಗ "ಎಲ್ಲ ಮಂಜಾಗುತ್ತಿದೆ" ಎಂದರಂತೆ. ಮನೆಯವರು ಶರಬತ್ತು ಕೊಟ್ಟರು. ಕುಡಿದು ಮತ್ತೆ ಓದಲು ತೊಡಗುತ್ತಿದ್ದಂತೆ ನಿದ್ದೆಗೆ ಜಾರಿದರು. ಆ ನಿದ್ದೆ ಮಾತ್ರ ದೀರ್ಘ ನಿದ್ರೆಯಾಯಿತು. ಮತ್ತೆಂದೂ ಏಳದ ನಿದ್ರೆಯಾಯಿತು. ಈ ಭುವಿಯ ಯಾವ ಶಕ್ತಿಯೂ ಅವರನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗದ ನಿದ್ದೆಯದು.
ಅವರಿಗೆ ಎಂಬತ್ತಮೂರರ ವಯಸ್ಸು. ವಯಸ್ಸಿಗೆ ಅನುಗುಣವಾಗಿ ದೇಹ ಕೃಷವಾಗಿತ್ತು - ಹಕ್ಕಿಯಂತಾಗಿತ್ತು. ಆದರೆ ಜೀವನೋತ್ಸಾಹ ಅದೇ ಇತ್ತು. ಜಿಟಿಎನ್ ಸ್ಮೃತಿ ಕಳೆದುಕೊಂಡ ಸುದ್ದಿ ಬಂದಾಗ ಅವರು ಮತ್ತೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಏಕೆಂದರೆ ನಾಲ್ಕೈದು ವರ್ಷಗಳ ಹಿಂದೆ ಅವರ ದೇಹ ಸ್ಥಿತಿ ತೀರ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಅವರು ಹೇಳುತ್ತಿದ್ದರು "ಸೋರುತಿಹುದು ಮನೆಯ ಮಾಳಿಗೀ" ಅವರಿಗೆ ತಮಾಷೆ. ನಮಗೆ?ಮ್ಮ "ಮುಗಿಯದ ಪಯಣ" ದಲ್ಲಿ "ಯಮ ಸದನ ನೋಡಿ ಬಂದೆ" ಎಂಬ ಅಧ್ಯಾಯದಲಿ ಈ ಬಗ್ಗೆ ಬರೆದಿದ್ದಾರೆ. ಸಾವು ಬದುಕಿನ ಹೋರಾಟದಲ್ಲಿ ಜಯಶಾಲಿಯಾಗಿ ಮರಳಿದ ಜಿಟಿಎನ್ ಅವರಿಗೆ ನಾನು ಬರೆದೆ "ಜವರಾಯ ಬಂದರೂ ನಿಮ್ಮನ್ನು ಕರೆದೊಯ್ಯಲಿಲ್ಲ, ನಮಗಾಗಿ" ಆದರೆ ಈ ಬಾರಿ ಹಾಗಾಗಲೇ ಇಲ್ಲ. ಜವರಾಯ ತಣ್ಣಗೆ ಬಂದ ಯಾರಿಗೂ ಹೇಳದೇ - ಅವರನ್ನು ಓಯ್ದೇ ಬಿಟ್ಟ.
ಮೈಸೂರಿಗೆ ಧಾವಿಸಿ, ಅತ್ರಿ ಮನೆ ತಲುಪುವಾಗ ನಡು ಮಧ್ಯಾಹ್ನ. ಹೊರಗಡೆ ಜನರೋ ಜನರು. ಒಳಗೆ ಹಜಾರದಲ್ಲಿ ಜಿಟಿಎನ್ ಮಲಗಿದ್ದರು ಹೂವಿನ ರಾಶಿಯನ್ನೇ ಹೊದ್ದು. ಮೂಕದಲ್ಲೊಂದು ನಗುವಿನ ಸೆಳೆ. ಪಕ್ಕದ ಅವರ ಆಧ್ಯಯನ ಕೊಠಡಿಯಲ್ಲಿ ಪುಸ್ತಕಗಳ ರಾಶಿ. ಬಿಳಿ ಹಾಳೆಯ ಮೇಲೆ ಬರೆಡಿಟ್ಟ ಟಿಪ್ಪಣಿ, ಅತ್ರಿಸೂನು ಕವನದ ಸಾಲುಗಳು. ಎಲ್ಲವೂ ಇದ್ದುವು. ಆದರೆ ಇವೆಲ್ಲವುಗಳಿಗೆ ಅರ್ಥ ಕೊಡುವ, ಮಾತು ನೀಡುವ, ಚಿತ್ರವಾಗುವ, ರೂಪಕವಾಗುವ ಆ ಚೇತನ ಮಾತ್ರ ಅಲ್ಲಿರಲಿಲ್ಲ. ಅನಿಕೇತನ ಹುಡುಕುತ್ತ ಹೊರಟಿತ್ತೇ? ಗೊತ್ತಿಲ್ಲ. ಮುಂದೆ ಓದಿ »

- Login or register to post comments
- 77 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: