ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
:(
:@
ಕರ್ಮಕಾಂಡ!
ಥೋ ಥೊಥೊಥೊಥೊಥೊ! ಛೇ ಛೆಛೆಛೆಛೆಛೆಛೆ!
- raghava's blog
- Login or register to post comments
- 416 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಅಯ್ಯೋ ಅದರಕಿಂತ ಸ್ವಲ್ಪ ಚನ್ನಾಗಿ ಇರೋ discussion slashdotನಲ್ಲಿ ಇದೆ ನೋಡಿ.
ಇನ್ಫೊಸಿಸ್ಸು, ಟೀಸಿಯೆಸ್ಸು, ಎಚಿಎಲ್ಲು ಎಲ್ಲವನ್ನು ತಾರಾ ಮಾರಾ ಉಗಿದಿದ್ದಾರೆ. ನಾನು ನಮ್ಮ IT ಇಂಡಸ್ಟ್ರಿಯನ್ನು ನೋಡಿರೋ ಪ್ರಕಾರ ಅವರು ಉಗಿದಿದ್ದರಲ್ಲಿ ತಪ್ಪೇನೂ ಇಲ್ಲ ಎಂದೇ ಅನಿಸುತ್ತದೆ.
ಎಲ್ಲರಿಗೂ ಹೆಂಗಾದ್ರು ಮಾಡಿ ಆನ್ ಸೈಟ್ ಹೋದರೆ ಸಾಕು ಅನ್ನೋ ಭಾವನೆ, ತಲೆ ಬುಡ ಗೊತ್ತಿಲ್ಲದೆ ಕೋಡ್ ಕುಟ್ಟೋದು, ೨ ವಾರ ಟ್ರೈನಿಂಗ್ ಮಾಡಿ ಜಾವಾನೋ, ಸೀ ಪ್ಲಸ್-ಪ್ಲಸ್ಸೋ ಪಂಟ ಆಗಿ ಬಿಟ್ಟೆ ಎಂದುಕೊLLಓದು, ಕೆಲಸಕ್ಕೆ ಬೇಕಾಗೋ ಸಮಯದ ಲೆಕ್ಕಾ ನೆ ಇಲ್ಲದೆ ಮುಂದಿನ ವಾರ ಡೆಲಿವರಿ ಕೊಟ್ಟು ಬಿಡ್ತಿವಿ ಅನ್ನೋ ಪ್ರಾಜೆಕ್ಟ್ ಮ್ಯಾನೇಜರ್ ಗಳು. ಒಂದೋ, ಎರಡೋ ಹೇಳೋಕೆ.
ನಮ್ಮ IT ಇಂಡಸ್ಟ್ರಿ ಬಹಳ ಚನ್ನಾಗಿ ಇದೆ ಅನ್ನೋ ಭ್ರಮೆ ಯಾರಿಗಾದರೂ ಇದ್ದರೆ ಹೇಳಿ, ಇಲ್ಲೇ ಜಗಳ ಮಾಡೋಣ. :)
(ವಿ.ಸೂ: ನಾನು IT ಇಂಡಸ್ಟ್ರಿಯಲ್ಲಿ ಇಲ್ಲ)
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಹ್ಮೂ ... ಇದನ್ನೂ ಓದ್ದೆ ಆಗ್ಲೇ ... ಮುಂಚೆ ' ದ ಮಿಥ್ ಕಾಲ್ಡ್ ದಿ ಇಂಡಿಯನ್ ಪ್ರೋಗ್ರಾಮರ್' ಬಂದಾಗ್ಲೇ ಜನ ಸ್ವಲ್ಪ ನೋಡ್ಬೇಕಿತ್ತು. (ಅದಾದ ಹಾಗಿಲ್ಲ). ಈ ಬಗ್ಗೆ ಚರ್ಚೆ ಮಾಡೋಕ್ಕೆ ಹಿಂಜರೀತಾರೆ, ಏನೋ ಸುಳ್ಳು ಹೆಮ್ಮೆಯ ಭ್ರಮೆ ಬಿಟ್ಟು ಬರೋದೇ ಇಲ್ಲ. ಛೆ! :(
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಸರ್ಯಾಗಿ ಹೇಳಿದ್ರಿ.
ನಮ್ಮ ದೇಶದ ಕಂಪನಿಗಳು (ವಿಪ್ರೋ, ಇನ್ಫೋಸಿಸ್, TCS ಅಂತವು) ಒಂದು ೧೦% ಲಾಭನಾದ್ರೂ R&D ಗೆ ಇನ್ವೆಸ್ಟ್ ಮಾಡ್ಬೇಕು. ಸ್ವಂತ ಪ್ರಾಡಕ್ಟ್ ಗಳನ್ನು ಮಾಡೋದು ಅಥ್ವಾ innovation ಗಳ ಕಡೆ ಗಮನ ಹರಿಸೋದೋ ಮಾಡ್ಬೇಕು. ಇಲ್ಲಾಂದ್ರೆ ಈ ಐ.ಟಿ ವೈಭವ ಎಲ್ಲಾ ಇನ್ನೊಂದು ೧೦ ವರ್ಷ ಅಷ್ಟೆ.
ಚೈನಾ ದೋರು ಇಂಗ್ಲಿಷ್ ಕಲಿಯೋ ತನಕ. :)...
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ನನ್ friend ಒಬ್ಬ ಇದೇ ಥರ ಒಂದು ಕಂಪನೀಲಿ ಕೆಲ್ಸ ಮಾಡ್ತಾನೆ. Mainframes ಏನೋ ಇರಬೇಕು. ಅವನ job ಅಲ್ಲಿ ಅರ್ಧ ಟೈಮ್ ಅವನು ಚೈನಾದಲ್ಲಿರೋ ಇಬ್ರನ್ನು train ಮಾಡ್ಬೇಕಂತೆ !!!!...
ತಮ್ಮ ತಲೇ ಮೇಲೇ ತಾವೇ ಕಲ್ಲುಚಪ್ಪಡಿ ಎಳಿಯೋ ಕೆಲ್ಸ :) !!!!...
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
>>ಚೈನಾ ದೋರು ಇಂಗ್ಲಿಷ್ ಕಲಿಯೋ ತನಕ
ಆಗ್ಲೇ ಮೆಕ್ಸಿಕನ್ರು, ಬ್ರಾಸೀಲ್ನೋರು, ವಿಯೆಟ್ನಾಮೀಸು ಇವ್ರುಗಳೂ ಫೀಲ್ಡಿಗಿಳ್ದೂ ಆಯ್ತು. ;)
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಅಶ್ಟೇ ಅಲ್ಲ...
ಶ್ರೀಲಂಕಾ, ಪಿಲಿಪೀನ್ಸು, ಪಾಕಿಸ್ತಾನ, ಬಾಂಗ್ಲಾದೇಶ ಇವರೂ ಇದ್ದಾರೆ.
ಆದ್ರೇ ನಾನ್ ಕೇಳಿರೋ ಹಂಗೆ.. ಇಂಡಿಯದಲ್ಲೂ ಸಾಪ್ಟವೇರ್ ಇರತ್ತೆ.. ಆದ್ರೆ ಸಂಬಳಗಳು ಕಡಮೆಯಾಗಿ ಹೋಗತ್ತೆ. ಚಿಕ್ ಚಿಕ್ ಸಿಟಿಗಳಲ್ಲೂ ದೊಡ್ಡ ದೊಡ್ಡ ಕಂಪೆನಿಗಳು ಸಣ್ ಸಣ್ ಸಂಬಳಕ್ಕೆ ಹೆಚ್ ಹೆಚ್ ಮಂದಿಗೆ ಕೆಲಸ ಕೊಡತ್ತೆ... :)
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಸಾಫ್ಟ್ವೇರೋ ಬೀಪೀಓ-ಕೇಪೀಓ ಕೆಲ್ಸಗ್ಳೋ?! :P
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಮೂರು!
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ನನ್ನ ಕಸಿನ್ ಒಬ್ಬ ನನಗೆ ಹೇಳಿದ್ದ, ಬ್ರೆಸಿಲ್ಲಿನವರು ನಮಗಿಂತ ತುಂಬಾ ಪ್ಯಾಶನೇಟ್ ಆಗಿ ಪ್ರೋಗ್ರಾಮಿಂಗ್ ಮಾಡ್ತಾರಂತೆ. ಹಾಗಾಗಿ ಬಗ್ಗುಗಳು ಕಡ್ಮೆ ಅಂತ. ಗುಣಮಟ್ಟ ಜಾಸ್ತಿ.
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಹಾಗೆ ಪ್ರೋಗ್ರಾಮಿಂಗ್ನ ಗುಣಮಟ್ಟ, ಅದ್ರ ಮೇಲಿನ ಆಸಕ್ತಿ ನೋಡೋದಾದ್ರೇ ರಶ್ಯನ್ರು, ಇಸ್ರೇಲಿಗ್ಳು, ದಕ್ಷಿಣ ಕೊರಿಯಾದೋರು, ಫಿನ್ಲೆಂಡ್ನೋರನ್ನ ಮೀರಿಸೋದು ಭಾಳ ಕಷ್ಟ.
ಆದ್ಮಾತ್ರಕ್ಕೆ ಇಲ್ಲಿ ಆ ಲೆವೆಲ್ನೋರ್ಯಾರೂ ಇಲ್ವೇ ಇಲ್ಲಾನ್ನೋದು ಪೆದ್ಹುಚ್ತನದ್ಮಾತು. ನಮ್ಮಲ್ಲೂ ಇದಾರೆ ರಾಕ್ಸ್ಟಾರ್ ಪ್ರೋಗ್ರಾಮರ್ಗಳು, ಸಂಖ್ಯೆ ಬಹಳ ಕಡ್ಮೆ. :(
ಕೆಲ್ವು ಸ್ವಂತ ಅನುಭವಗಳೂ ಆಗಿವೆ, ಈ ನಿಟ್ನಲ್ಲಿ. ;)
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
<<ನಮ್ಮ IT ಇಂಡಸ್ಟ್ರಿ ಬಹಳ ಚನ್ನಾಗಿ ಇದೆ ಅನ್ನೋ ಭ್ರಮೆ ಯಾರಿಗಾದರೂ ಇದ್ದರೆ ಹೇಳಿ, ಇಲ್ಲೇ ಜಗಳ ಮಾಡೋಣ. >>
ಈ ವಿಷಯದಲ್ಲಿ ನಾವಿಬ್ಬರು ಜಗಳ ಆಡೋ ಪ್ರಮೇಯವೇ ಇಲ್ಲ. :)ನಮ್ಮ>
ವಿ.ಸೂ: ನಾನು ಐ.ಟಿ ಇಂಡಸ್ಟ್ರಿಯಲ್ಲಿ ಇರೋದು!
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಜಗ್ಳ ಬೇಡ. (ಅದ್ರಿಂದ ಏನೂ ಉಪ್ಯೋಗ್ವಿಲ್ಲ)
ಚರ್ಚೆ ಬೇಡ್ವೇ? ಕಾರ್ಣ ಏನು ಇದ್ಕೆ (ಈಗಾಗ್ತಿರೋ ಕರ್ಮಕಾಂಡಕ್ಕೆ)?
ನನ್ಗನ್ಸಿದ್ಕೆಲ್ವನ್ನ ಇಲ್ಲಿ ಬರ್ದಿದ್ದೆ. (ಮತ್ತಿಲ್ಲಿ ಲೈಟಾಗಿ ಮುಟ್ಟಿದ್ದೆ)
ಸಾಧ್ಯವಿದ್ದು, ಆಸಕ್ತಿಯಿದ್ದಲ್ಲಿ ದಯ್ವಿಟ್ಟು ತಮ್ಮನಿಸಿಕೆಗಳನ್ನೂ (ಮುಂದಿಟ್ಟು) ಹಂಚ್ಕೊಳಿ.
ಉ: ರಾಮ್ರಾಮಾ! ಏನಪ್ಪಾ ಜನ ಹೀಗೆಲ್ಲಾ ಜಗ್ಳಾ ಆಡ್ತಿದಾರೇ!
ಈ ಜಗ್ಳ ಆಡಾವ್ರು ಕನ್ನಡದಾಗ್ ಜಗ್ಳಾ ಆಡಿದ್ರ ಛಲೋ ಇತ್ತು ನೋಡ್ರಿ :( ನಾವ್ಲಗೂನS ತಿಳಕೋತಿದ್ವಿ .