22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವೃತ್ತಿ/ಕೆಲಸ/ಕಾರ್ಯ, ಕಾಲೇಜಿಂದ ಕ್ಯೂಬಿಗೆ, ವೃತ್ತಿಯ ಮಹತ್ವದ ಪರಿಚಯ ಮತ್ತಿತರ ವಿಚಾರಗಳು

May 27, 2009 - 12:44am
raghava
ನಾವೆಲ್ರೂ ಕೆಲ್ಸ ಮಾಡ್ತೀವಿ. ಬೆಳ್ಗೆ ಎದ್ದು ರೆಡಿ ಆಗಿ ಆಫೀಸಿಗೆ ಹೋಗ್ತೀವಿ. ಹತ್ಹನ್ನೊಂದ್ಗಂಟೆ ಆಫೀಸಲ್ಲಿ ಕಳೀತೀವಿ. ಎರ್ಡ್ಮೂರ್ಟೀ/ಕಾಫೀ ಬ್ರೇಕು, ಒಂದ್ಲಂಚ್ಬ್ರೇಕು ಅಂತ ಕಳ್ದು ಕೆಲ್ಸ ಮುಗೀತು ಅಂತ ಬರ್ತೀವಿ ವಾಪಸ್ಸು ಮನೆಗೆ. ಆದ್ರೆ ದಿನಾ ಮನೇಗೆ ಬರೋ ಮುಂಚೆ ದಿನ್ವಿಡೀ ದುಡಿದಿದ್ದರ ಪ್ರತಿಫಲ (tangible end result, at least in part) ಕಾಣ್ತೀವಾ? ಒಂದು ರೀತಿಯ surreal ವ್ಯವಸ್ಥೆಯ ಚೌಕಟ್ಟಿನಲ್ಲಿ ಬೆಳೆದ ನಮಗೆ ಈ ವಿಚಾರಗಳು ಅಸ್ಪಷ್ಟ/ರಗ್ಳೆ /ಅಸಮಂಜಸ ಅನ್ನಿಸಬಹುದು. ಇಂದಿನ ಬಿಳೀಕಾಲರ್ ಕೆಲಸದ ದಿನಗಳಲ್ಲಿ ಇದೊಂದು ಯೋಚಿಸುವ ವಿಚಾರ. ಅಮೇರಿಕದಲ್ಲೀಗ ಹೊರಗುತ್ತಿಗೆ ವಿರುದ್ಧ ಇರುವ ಅಲೆಯ ಹಿನ್ನೆಲೆಯಲ್ಲಿ ಬಹಳಷ್ಟು ಜನ ವೃತ್ತಿಯ ಭದ್ರತೆಯ ಬಗ್ಗೆ ಮಾತಾಡುವುದನ್ನು ಎಲ್ರೂ ನೋಡಿರ್ಬೋದು. ಅಲ್ಲಿ ಇಂದಾಗುವುದು ನಾಳೆ ಇಲ್ಲೂ ಆಗುತ್ತೆ. (ಚೀಪಾಗ್ಸಿಗತ್ತೇಂತಾ ಇಲ್ಲಿದನ್ಬಿಟ್ಟು ಚೈನಾ ಸೆಟ್ಟನ್ನ ಜನ ತಗಳಲ್ವೇ, ಅದು ಅಷ್ಟೇ ಸಹಜ. ಇದು ಬಿಡಿ, ಬರ್ಯಕ್ಹೊರ್ಟ್ರೆ ಭಾಳ ದೊಡ್ವಿಚಾರ. ಇದ್ಬಿಟ್ಟು ಮುಕ್ಯವಾದ್ವಿಷ್ಯಕ್ಬರ್ತೀನಿ) ಕೆಲಸದ ಗುಣ (ಹಾಗೂ ಮಹತ್ವದ) ಬಗ್ಗೆ ಚರ್ಚೆ ಅಷ್ಟಾಗಿ ನಡೆದಿರುವುದು ನನಗೆಲ್ಲೂ ಕಂಡು ಬಂದಿಲ್ಲ. (ಇದ್ಬದ್ಕಡೆ ಎಲ್ಲಾ ಕೆಲಸ, ಸಂಬಳ, ರೂಲ್ಸು-ರೆಗ್ಯುಲೇಷನ್ಗಳ ಬಗ್ಗೆ ಆಗತ್ತೇ ಹೊರ್ತು ಇವ್ಗಳ್ಬಗ್ಗೆ ಅಲ್ಲ). ಒಬ್ಬ ವ್ಯಕ್ತಿ ಯಾವುದರಲ್ಲಿ ತನಗೆ ಆಸಕ್ತಿ ಇರತ್ತೋ, ಹಾಗೂ ಆ ಆಸಕ್ತಿಯ ಪ್ರೇರಣೆಯಿಂದ ಆ ವಿಷಯದ ಬಗೆಗಿನ ಅಧ್ಯಯನ ಮಾಡಿ, ಅದರಲ್ಲಿ ಉನ್ನತ ಮಟ್ಟದ ಸ್ವಕ್ಷಮತೆಯನ್ನು ಪಡೆದವನು ಖಂಡಿತವಾಗಿಯೂ ಆ ವೃತ್ತಿಯಲ್ಲಿ ಯಶಸ್ವಿಯಾಗುತ್ತಾನೆ. ಹಾಗೆಯೇ ಯಶಸ್ವಿಯಾಗಲು ಒಬ್ಬ ವ್ಯಕ್ತಿ ತನ್ನ ಕ್ಷಮತೆ/ಆಸಕ್ತಿ ನೋಡಿಯೇ ತಾನೇನು ಕೆಲಸ ಮಾಡಬೇಕು ಎಂಬುದನ್ನು ತೀರ್ಮಾನಿಸಬೇಕು. ಈಗಿನ ಶಿಕ್ಷಣಾ ವಿಧಾನ (ಹಾಗೂ ಮುಖ್ಯವಾಗಿ ನಮ್ಮ ಸಮಾಜ) ಇದಕ್ಕೆ ಖಾತ್ರಿಯನ್ನು ನೀಡುವುದಿಲ್ಲ. ಮ್ಯಾತ್ಯೂ ಕ್ರಾಫೋರ್ಡ್ ಎನ್ನುವ ಒಬ್ಬನು ರಾಜಕೀಯ ಸಿದ್ಧಾಂತದಲ್ಲಿ ಉನ್ನತ ವ್ಯಾಸಂಗ (ನಾವೆಲ್ಲ ಅಂತೀವಲ್ಲ ಡಾಕ್ಟ್ರೇಟು, ಅದೇರಿ ಪೀಎಚ್ಡೀ) ಮಾಡಿ ಸದ್ಯಕ್ಕೆ ತನ್ನದೇ ಬೈಕ್ರಿಪೇರಿ ಅಂಗ್ಡಿ ಇಟ್ಕೊಂಡಿದಾನೆ. 'ಕೈಯಿಂದ ಸಾಧಿಸುವ ಕೆಲಸದ ವಿಚಾರ'ದ ಬಗ್ಗೆ ಇದೇ ಮ್ಯಾತ್ಯೂ ಕ್ರಾಫರ್ಡ್ ನ್ಯೂಯಾರ್ಕ್ ಟೈಂಸ್ನಲ್ಲಿ ಬರೆದ ಬಹಳ ಒಳ್ಳೇ ಲೇಖನದ ವಿಳಾಸವನ್ನ ನಮ್ಮ ಗುರುಗಳೊಬ್ಬರು ಮೊನ್ನೆ ಹಂಚಿಕೊಂಡಿದ್ದರು. ಸಮಯ ಮಾಡಿಕೊಂಡು ದಯವಿಟ್ಟು ನೋಡಿ, ಈಗಿನ ದಿನಗಳಲ್ಲಿ ಅನ್ವಯವಾಗುವ ಬಹಳಷ್ಟು ವಿಷಯಗಳ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ. ತಮಿಚ್ಛೆಯ ವಿರುದ್ಧವಾಗಿಯೂ ಹಲವರು ಮನೆಯಿಂದ ಸ್ಕೂಲಿಗೆ->ಸ್ಕೂಲಿಂದ ಕಾಲೇಜಿಗೆ->ಕಾಲೇಜಿಂದ ಕ್ಯೂಬಿಗೆ ಪ್ರಯಾಣ ಮಾಡುತ್ತಾರೆ; ತಮಗಿಲ್ಲದಿರುವ ಅನುಭವ/ಕ್ಷಮತೆಗಳನ್ನೇ ಅಪೇಕ್ಷಿಸುವ ಕೆಲಸಗಳನ್ನು ಸೇರಿ ಕೊರಗುತ್ತಾರೆ. ಇದರ ವಿಚಾರವಾಗಿಯೂ ಮೇಲೆ ಲಿಂಕಿಸಿರುವ ಲೇಖನದಲ್ಲಿ ಇದೆ. ಒಮ್ಮೆ ನೋಡಿ. /* ಬರೀಬೇಕಂತಿರೋ ವಿಚಾರವೆಲ್ಲಾ ಸರಿಯಾಗಿ ಬರೆಯಲಾಗುತ್ತಿಲ್ಲ, ಸದ್ಯಕ್ಕಿರ್ಲಿ. */ PS: ನಮ್ಗುರುಗಳು ಅಂತ ಹೇಳಿದೆನಲ್ಲ ಮೇಲೆ, ಅವರೂ ಒಬ್ಬ ಗಣಕ ಕಲಾವಿದರು. ಅವರ ಕೃತಿಯೊಂದು ಇದು, ಇಲ್ಲಿದೆ. ಬೇರೆ ಭಾರತೀಯ ಭಾಷೆಗಳ್ನ ಕನ್ನಡದಲ್ಲಿ ಬರೆದು ಓದಬೇಕೆಂದಲ್ಲಿ ಈ ಕೃತಿಯನ್ನು ಬಳಸಬಹುದು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by raghava on
ಸಾರ್ಥಕವಾಯ್ತು! :D :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vinutha.mv on
ರಾಘವ, ನಿಮ್ಮ ಮಾಮೂಲು ಶೈಲಿಯಿ೦ದ ಹೊರಬ೦ದು ಒ೦ದು ವಿಚಾರವ೦ತ ಬರಹ ಮು೦ದಿಟ್ಟಿದ್ದೀರ. ಓದುವುದಕ್ಕೆ ಕಷ್ಟಪಡಬೇಕಾಗಿರಲಿಲ್ಲ :) ನ್ಯೂಯಾರ್ಕ್ ಟೈಮ್ಸ್ ನಲ್ಲಿರುವ ಲೇಖನ ಚೆನ್ನಾಗಿದೆ (ಸ್ವಲ್ಪ ದೊಡ್ಡದಿದ್ದರೂ). ಬಹಳ ಒಳಹುಗಳನ್ನು ತೆರೆದಿಡುತ್ತದೆ. ಆದರೆ ದುರ೦ತವೆ೦ದರೆ, ನಮ್ಮ ಸಮಾಜದ ವ್ಯವಸ್ಥೆ ಇದಕ್ಕೆ ಪೂರಕವಾಗಿಲ್ಲ. ಸರಳ ಉದಾಹರಣೆಯೆ೦ದರೆ, ಒಬ್ಬ ಮೆಕ್ಯಾನಿಕಲ್ ಪ್ರೊಫೆಸರ್ ತನ್ನ ಗಾಡಿಯನ್ನು ತಾನೇ ರಿಪೇರಿ ಮಾಡಿಕೊಳ್ಳಲು ಬರದಿದ್ದರೂ ನಿಜವಾದ ಮೆಕ್ಯಾನಿಕ್ ಗಿ೦ತ ಹೆಚ್ಚಿನ ಹಣ ಹಾಗೂ ಸಾಮಾಜಿಕ ಗೌರವ, ಸ್ಥಾನಮಾನಗಳನ್ನು ಪಡೆದಿರುತ್ತಾನೆ. ಹಾಗಾಗಿ ಆಯ್ಕೆ obvious. ಇನ್ನು ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಪಾಲಕರ ಮನಸ್ಥಿತಿ streamline ಆಗಿದೆ. ಹಾಗಾಗಿ ಅಲ್ಲಿ ವ್ಯಕ್ತಿ ತನ್ನ ಸಾಮರ್ಥ್ಯ / ಆಸಕ್ತಿಗಳನ್ನು ಅರಿಯುವ ಮೊದಲೇ ವ್ಯವಸ್ಥೆಗೆ ಬಲಿಯಾಗಿರುತ್ತಾನೆ. ಕೆಲವೊಮ್ಮೆ ಸಮಾಜವನ್ನು ಧಿಕ್ಕರಿಸಿದರೂ, ಮನೆಯವರ ಭಾವನೆಗಳಿಗೆ ಬಲಿಯಾಗಲೇ ಬೇಕಾಗುತ್ತದೆ. ಕೆಲವೊಮ್ಮೆ ಮನೆಯ ಆರ್ಥಿಕ ಪರಿಸ್ಥಿಯ ಅನಿವಾರ್ಯತೆಯೂ ಇರಬಹುದು. ವೈಟ್ ಕಾಲರ್ ಕೆಲಸಗಳಿಗೆ ತೋರುವ ಮರ್ಯಾದೆಯನ್ನೇ ಮಿಕ್ಕಿದೆಲ್ಲ ಕೆಲಸಗಳಿಗೆ ತೋರಿದಾಗ ಮಾತ್ರ ಬದಲಾವಣೆ ಸಾಧ್ಯ(ಬಾಯಿಮಾತಿನಲ್ಲಿ ನಾವು ಯಾವುದೇ ಕೆಲಸ ಆಗಲಿ ಎಲ್ಲವೂ ಒ೦ದೇ ಅ೦ದರೂ, ನಾವು ಆ ಕೆಲಸ ಮಾಡಲು ತಯಾರಿದ್ದೇವಾ ಎ೦ಬ ಪ್ರಶ್ನೆ ಹಾಕಿಕೊ೦ಡಾಗ ಮಾತ್ರ ನಾವು ಆ ಕೆಲಸವನ್ನು ಎಷ್ಟು ಗೌರವಿಸುತ್ತಿದ್ದೇವೆ ಎ೦ದು ತಿಳಿಯುವುದು).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ಮೊದಲಿಂದ (ಬಾಲ್ಯದಿಂದ) ಕೆಲವು(ಒಂದಕ್ಕಿಂತ ಹೆಚ್ಚು) ವಿಶಯ/ಕೆಲಸಗಳಲ್ಲಿ(ಅನ್ನಲೂಬಹುದು) ಆಸಕ್ತಿ ಇರುವುದನ್ನು, ಸ್ಕೂಲು, ಅಪ್ಪ-ಅಮ್ಮ (ಬಹಳಶ್ಟು) ಗುರುತಿಸಲ್ಲ, ಗುರುತಿಸಿದ್ರೂ ಅದು ಬಹಳಶ್ಟು ಸಾರಿ ಕ್ಷುಲ್ಲಕ ಅನಿಸುತ್ತೆ(ವಯಸ್ಸಿನ ಆಧಾರದ ಮೇಲೆ). ಅಲ್ಲಿಗೆ, ಒಂದು ವಯಸ್ಸಿಗೆ ಬರೋ ಅಶ್ಟರಲ್ಲಿ ಹುಡುಗ/ಹುಡುಗಿ ರಗೆ, ತಮ್ಮ ಆಸಕ್ತಿಗಳ ಬಗ್ಗೆ ಯೋಚನೆ ಕಡಿಮೆ ಆಗಿ, (ನಮ್ಮ ಶಿಕ್ಷಣ ವ್ಯವಸ್ಥೆಯಿಂದ) ಬೇರೆ traditional (BE/ MBBS/ MBA) ವಿಶಯಗಳ ಮೇಲೆ ’ಹೇರಿಕೆಯ’ ಆಸಕ್ತಿ ಬರೋದು ಸಹಜವೇ. ಅದು ಕೆಲವು ದಿನಗಳಲ್ಲಿ ಪರಮ-ನಿರಾಸಕ್ತಿಯಾಗುವುದು ಅಶ್ಟೇ ದಿಟ. ಇಲ್ಲಿ ಇನ್ನೊಂದು ಅಂಶ ನನಗೆ ಮುಖ್ಯ ಅನ್ಸುತ್ತೆ. ಮೊದಲಿಂದ ಇರೋ ಆಸಕ್ತಿಗಳು, ವಯಸ್ಸಿನಗುಣವಾಗಿ, ಹೊಸ ವಿಶಯಗಳ ತಿಳುವಳಿಕೆಯಿಂದ, ಬದಲಾಗುವುದು ಸಂಭವವೆ. ಅಲ್ಲಿಗೆ, ತನಗೆ ಆಸಕ್ತಿ ಇರೋ ವೃತ್ತಿ ಗೊತ್ತುಮಾಡಿಕೊಂಡು ಅದರಲ್ಲಿ ಮುಂದುವರೆಯುವ ನಿರ್ಧಾರ ಮಾಡಲು ಬೇಕಿರುವ ’ಪ್ರೌಢತೆ’ಯು, ಆ ವಯಸ್ಸಲ್ಲಿ ಇರಬೇಕು ಅನ್ನುವುದು ನನ್ನ ಅನಿಸಿಕೆ. ಅಲ್ಲಿಗೆ, ’tangible end result is just a thing in your account at the end of each month'. ಆದ್ರೂ ನಮಗಿದು ಆಗಬರೋದಲ್ಲ ಅಂದುಕೊಂಡ, ತಮಗಾಗೋದನ್ನ ಮಾಡೋಕೆ ಹೊರಟೋರು ಎಶ್ಟೋ ಜನ ಇದಾರೆ......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.