ಕ್ಲಿಷ್ಟ ಪ್ರಶ್ನೆಗಳು ...
ನಾನು : "ಈಗ Applications->Terminal ತಗೊಂಡ್ರೆ ಒಂದು ಶೆಲ್ಲು ಓಪನ್ ಆಗತ್ತೆ" ...
ಅವರು: ಅದ್ಸರಿ .. ಈ ಶೆಲ್ಲಂದ್ರೇನು ??? (ಕಳಕಳಿಯ ಪ್ರಶ್ನೆ ...)
ತುಂಬಾ ಮಜ ಇದೆ ... ಇದ್ಕೆ ಕನ್ನಡದಲ್ಲಿ ಏನಂತ ಹೆಳೋಣ ? ಶೆಲ್ ಅಂದ್ರೆ ಕನ್ಸೋಲು ಅಂತ ಹೇಳಿದ್ರೆ ಕನ್ಸೋಲಿಗೆ ಅರ್ಥ ಏನಂತ ಹೇಳೋಣ ?
:) ಶೆಲ್ ಅಂದ್ರೆ ಕಂಪ್ಯೂಟ್ರಿಗೆ ಬರೀ ಕೀ-ಬೋರ್ಡ್ ಬಳಸಿ ಕಮಾಂಡ್ಗಳನ್ನು ಕೊಟ್ಟು ಕೆಲ್ಸ ಮಾಡ್ಸೊ ಪ್ರೊಗ್ರಾಮು
ಸರಿಯೇ ?

- raghava ರವರ ಬ್ಲಾಗ್
- Login or register to post comments
- 783 hits
- Email this blog





RSS:
ಪ್ರತಿಕ್ರಿಯೆಗಳು
ಉ: ಕ್ಲಿಷ್ಟ ಪ್ರಶ್ನೆಗಳು ...
ಹೀಗೆ ಹೇಳ್ಬಹುದೇನೋ...
ನಿಮ್ಮ ಕಂಪ್ಯೂಟರಿನ ತಿರುಳಿನ ಜತೆ ಟೈಪು ಮಾಡ್ಕೊಂಡು ಮಾತಾಡೋಕೆ ಇರೋ ಒಂದು ಕಿಂಡಿ...
ಬಣ್ಣಬಣ್ಣದ ಚೌಕಗಳು, ಬೊಂಬೆಗಳ ಮೇಲೆ ಇಲಿನಿಂದ ಮಕ್ಕಳ ತರ ಕುಟುಕೋ ಬದಲು, ದೊಡ್ಡವರು ಮಾತಾಡೋ ತರ ಪದಗಳ ಮೂಲಕ ನೇರವಾಗಿ ಕಂಪ್ಯೂಟರಿನ ಜತೆ ವ್ಯವಹರಿಸೋದಕ್ಕೆ ಇರೋ ಸಾಧನ....
ಹೀಗೆಲ್ಲಾ ಹೇಳೋದರಿಂದ ಅವರಿಗೆ ಅರ್ಥ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನನಗಂತೂ ಬಲೇ ಖುಷಿ ಆಗತ್ತೆ...
ಉ: ಕ್ಲಿಷ್ಟ ಪ್ರಶ್ನೆಗಳು ...
^^^ ಸಕ್ಕತ್.....!!
ಕಱ್ನಲ್ = ತಿಱುಳು
=====================================
ಮಾಯ್ಸ!
ಉ: ಕ್ಲಿಷ್ಟ ಪ್ರಶ್ನೆಗಳು ...
ಅನಿವಾಸಿ ಸರ್, ಸಕತ್ತಾಗಿ ಹೇಳಿದ್ರಿ.
ಸ್ವಲ್ಲ್ಪ ಸಿಂಪಲ್ಲಾಗಿ ಸ್ಕೂಲ್ ನಲ್ಲಿ ಹೇಳಂಗೆ ಹೇಳ್ತೀನ್ ಕೇಳಿ ಕನ್ಸೋಲ್/ಶೆಲ್ಲಿನ ವಿಷಯ :
ಕಂಪ್ಯೂಟರ್ ಏನ್ ಕೆಲಸ ಮಾಡ್ಬೇಕು ಅಂತ ಅದಕ್ಕೆ ನೀವು ಹೇಳಬೇಕ್ ತಾನೆ. ಹೆಂಗ್ ಹೇಳ್ಲಿಕಾಗ್ತದೆ? ಒಂದು ಮೌಸ್ (
ಆಗ್ಲೆ ಇಲಿ ಅಂದ್ರಲ್ಲ ಅದು ನಮ್ಮ ಗಣಪತಿಯ ಮೂಷಕ ವಾಹನ ಅಲ್ಲ) ಉಪಯೋಗಿಸಿ ಕಣ್ಣಿಗೆ ಸಿಕ್ಕಿದ್ದನ್ನ ಕುಟುಕಿ ಕ್ಲಿಕ್ಕಿಸೋದು. ಮಕ್ಳಿಗೆ ಇದು ಬಾಳ ಇಷ್ಟ ಬಿಡಿ.
ಆದ್ರೆ ಕೆಲವು ಸಲ ಮೌಸ್ ಇಲ್ಲದಿದ್ದರೆ, ಜಿ.ಯು.ಐ (ಗ್ರಾಫಿಕಲ್ ಯೂಸರ್ ಇಂಟರ್ ಫೇಸ್ / GUI ) ಅಂದರೆ ದೃಶ್ಯಾವಳಿಯ ಮೂಲಕ ಮಾನೀಟರ್ ಮೂಲಕ ಇದನ್ನೋತ್ತಿದರೆ ಇಂತದೇ ಕೆಲಸ ಆಗತ್ತೆ ಅಂತ ಬಟನ್, ಮೆನು ಮತ್ತಿತರೆಗಳನ್ನ ಉಪಯೋಗಿಸಿ ನಿಮ್ಮ ಕಂಪ್ಯೂಟರ್ ನಲ್ಲಿ ಏನನ್ನ ಮಾಡಬಹುದು ಅಂತ ತಿಳಿಸೋ ಆಪರೇಟಿಂಗ್ ಸಿಸ್ಟಂ ಇಲ್ಲದಿದ್ದರೆ ಕಂಪ್ಯೂಟರಿನ ಮೆದುಳಿಗೆ ಕೈ ಹಾಕ ಬೇಕಾಗ್ತದೆ. ಉದಾಹರಣೆಗೆ, ನಿಮ್ಮಲ್ಲಿ ಮೇಲೆ ಹೇಳಿದ ಹಾಗೆ ಜಿ.ಯು.ಐ ತಂತ್ರಾಂಶ (ಲಿನಕ್ಸ್ / ವಿಂಡೋಸ್) ಇಲ್ಲ ಅಂದು ಕೊಳ್ಳಿ, ಅಥವಾ ನಿಮ್ಮಲ್ಲಿರುವ ಲಿನಕ್ಸ್ ನಲ್ಲಿ ಜಿ.ಯು.ಐ ಇಲ್ಲ ಅಂದಾಗ ನಿಮ್ಮ ಕಂಪ್ಯೂಟರ್ ನಲ್ಲಿ ಕ್ಯಾಲ್ಕುಲೇಟರ್ ಹ್ಯಾಗೆ ಉಪಯೋಗಿಸ್ತೀರಾ? ಕಡತಗಳನ್ನ (files) ಹೇಗೆ ಬರೀತೀರಾ? ಅವನ್ನ ಡಿಲೀಟ್ ಹ್ಯಾಗೆ ಮಾಡ್ತೀರಾ? ಅದಕ್ಕೆ ಪರ್ಯಾಯ ವ್ಯವಸ್ಥೆ ಅಂದ್ರೆ ಕನ್ಸೋಲ್ / ಶೆಲ್.
ಜಿ.ಯು.ಐ ಇರುವ ಮತ್ತು ಇಲ್ಲದಿರುವ ಎಲ್ಲ ಆಪರೇಟಿಂಗ್ ಸಿಸ್ಟಂಗಳಲ್ಲೂ ಕನ್ಸೋಲ್ ಕಂಡು ಬರುತ್ತದೆ. ಇದನ್ನೇ ವಿಂಡೋಸ್ ನಲ್ಲಿ ಕಮ್ಯಾಂಡ್ ಪ್ರಾಂಪ್ಟ್ ಅನ್ನೋದು.Run ನಲ್ಲಿ cmd ಅಂತ ಕೀಲಿಸಿದಾಗ ಬರತ್ತೆ ನೋಡಿ ಅದೇ ವಿಂಡೋಸ್ ನಲ್ಲಿನ ಕನ್ಸೋಲು. ಲಿನಕ್ಸ್ ನಲ್ಲಿ ಮೊದಲೆಲ್ಲಾ ಇದ್ದದ್ದು ಕನ್ಸೋಲೆ. ಇದನ್ನ ಉಪಯೋಗಿಸಿ ನಿಮ್ಮ ಕೀಬೋರ್ಡ್ ಮೂಲಕ ಸಂಖೇತಗಳನ್ನ ನಿಮ್ಮ ಕಂಪ್ಯೂಟರ್ ಗೆ ಅರ್ಥವಾಗೋ ಭಾಷೆಯಲ್ಲಿ ತಿಳಿಸಿದರೆ ನಿಮ್ಮ ಕೆಲಸಗಳು ಸುಲಭವಾಗಿ ಮುಗಿಸ್ಕೋ ಬಹುದು.
ಇದನ್ನ ಉಪಯೋಗಿಸ್ಲಿಕ್ಕೆ ಸ್ವಲ್ಪ ಜ್ನಾಪಕ ಶಕ್ತಿ ಬೇಕು
ಕಮ್ಯಾಂಡ್ಗಳನ್ನ (ಸಂಕೇತಗಳು) ನೆನಪಿಟ್ಟುಕೊಳ್ಳ ಬೇಕಲ್ಲ ಅದಕ್ಕೆ. ಉಪಯೋಗಿಸ್ತಾ ಉಪಯೋಗಿಸ್ತಾ ಅಭ್ಯಾಸ ಆಗತ್ತೆ ಅನ್ನಿ.
ದಿನನಿತ್ಯ ನಿಮ್ಮ ಮನೆಯಲ್ಲಿನ ಅಥವಾ ಕಚೇರಿಯಲ್ಲಿನ ಕಂಪ್ಯೂಟರ್ ನಲ್ಲಿ ನಿಮಗೆ ಮೌಸ್ ಇಟ್ಟು ಕೊಂಡು ಕೆಲಸ ಮಾಡಿ ನಿಮಗೆ ಅಭ್ಯಾಸ ತಾನೆ. ಲಿನಕ್ಸ ಹಾಕಿಕೊಂಡು ಸ್ವಲ್ಪ ಅದೇ ಕೆಲಸಗಳನ್ನ ಕನ್ಸೋಲಿನ ಮೂಲಕ ಮಾಡ್ಲಿಕ್ಕೆ ಪ್ರಯತ್ನ ಪಟ್ಟು ನೋಡಿ. ನಿಮ್ಮ ಕೆಲಸ ಎಷ್ಟೋ ಬೇಗ ಮಾಡಿ ಕೊಳ್ಳ ಬಹುದು.
ಇಂದಿಗೆ ಇಷ್ಟು ಸಾಕು ಮುಂದೆ, ಹೇಗೆ ನಮ್ಮ ಕೆಲಸಗಳೆಲ್ಲ ಕನ್ಸೋಲ್ ಅಥವಾ ಮೌಸ್ ಮೂಲಕ ಕಂಪ್ಯೂಟರನ್ನ ಕುಟುಕಿ, ಕುಟಿಕಿ ಮುಗಿಸ್ಲಿಕ್ಕೆ ಸಾಧ್ಯವಾಗಿದೆ ಅನ್ನೋದನ್ನ ತಿಳಿಯುವ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ಕ್ಲಿಷ್ಟ ಪ್ರಶ್ನೆಗಳು ...
ಶಿವಪ್ರಕಾಶರೆ,
ನಿಮ್ಮ ವಿವರಣೆ ಚೆನ್ನಾಗಿದೆ.. ಆದರೆ ನನ್ನದೊಂದು ತಕರಾರು... ಟೆಕ್ನಿಕಲಿ ಕಾನ್ಸೋಲನ್ನೂ, ಶೆಲ್ಲನ್ನೂ ಸಮಾನವಾಗಿ ಬಳಸೋದು ಸರಿಯಲ್ಲ ಅನ್ನಿಸತ್ತೆ. ಬೇಕೆಂದರೆ ಟರ್ಮಿನಲ್ಲು ಅನ್ನಬಹುದೇನೋ (ಅದೂ ಸರಿಯಲ್ಲ, ಆದರೆ ನಡೆಯುತ್ತದೆ
)
ಕಾನ್ಸೋಲು ಒಂದು ರೀತಿಯ ವಿಶೇಷ ಟರ್ಮಿನಲ್ಲು. ಅದಕ್ಕೆ ಬೇರೆ ಡಿವೈಸ್ ಫೈಲು (/ಡೆವ್/ಕಾನ್ಸೋಲ್) ಮತ್ತು ವಿಶೇಷ ರಕ್ಷಣೆಯನ್ನು ಕಟ್ಟಿಕೊಳ್ಳಬಹುದು.
ಟರ್ಮಿನಲ್ಲು ಕಣ್ಣು/ಬಾಯಿಯಾದರೆ (ಕಿಂಡಿ) ಶೆಲ್ಲು ಅದಕ್ಕೆ ಜೀವ ಕೊಡುವ ನುಡಿ/ಮನಸ್ಸು ಅನ್ನಬಹುದ? ಬೇರೆ ಬೇರೆ ಬಗೆಯ ಟರ್ಮಿನಲ್ಲು ಇರೋ ಹಾಗೆ ಬೇರೆ ಬೇರೆ ಬಗೆಯ ಶೆಲ್ಲುಗಳೂ ಇವೆಯಲ್ಲವ?
ಈ ಬಗೆಯ ಅನುವಾದಗಳೆಲ್ಲಾ ಬಲೇ ತಲೆ ನೋವು. ಆದರೆ ಒಂದು ವಿಷಯ ಗಮನಿಸಿದ್ದೀರ - ತಿಳಿದಿದೆ ಅಂತ ಅನುವಾದಿಸೋವಾಗ, ಅನುವಾದಿಸ್ತಾ ತಿಳಿಯಾಗತ್ತೆ!!!
ಉ: ಕ್ಲಿಷ್ಟ ಪ್ರಶ್ನೆಗಳು ...
ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಈ ರೀತಿಯ ಚರ್ಚೆಗಳಾಗದೆ, ಗೊತ್ತೊ ಗೊತ್ತಿಲ್ಲದೆಯೋ ಹೊತ್ತೊತ್ತಿಗೆ ತಪ್ಪುಗಳಾಗ್ತಾನೆ ಇರ್ತವೆ ಅಲ್ವೇ? ನನಗಂತೂ ಈಗ ಸಂಪದದಲ್ಲೇ ಏಕೆ ಕನ್ಸೋಲಿರ ಬ್ಯಾಡದಿತ್ತು ಅನ್ನಿಸ್ತಿದೆ
ಇದ್ದಿದ್ದರೆ, ಮೇಲಿನ ಕಾಮೆಂಟನ್ನ ಬೇಗ ಸರಿ ಪಡಿಸ ಬಹುದಿತ್ತು. ಹರಿ ನಮಗೆಲ್ಲಾ Restricted ಶೆಲ್ ಹಾಕಿ ಬಿಟ್ಟಿದ್ದಾರೆ. ನಮ್ಮ ಟರ್ಮಿನಲ್ ಗಳಲ್ಲಿ ಬರೇ ಹೊಸ ದಾಖಲೆಗಳನ್ನಾಕಲಿಕ್ಕೆ ಮಾತ್ರ ಅವಕಾಶ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ