August 3, 2010 - 12:18pm
ಎಲ್ಲಿಂದಲೋ ಬಂದವರು,
ಮುಂದಿನೂರಿನ ಪಯಣದವರು
ಜೋಡು ಮರದ ಕೆಳಗಿನವರು
ನೀಲಿ ಆಕಾಶದ ಹೊದಿಕೆಯವರು
ಮುಂದಿನೂರಿನವರು
ಹಿಂದಿನೂರು ಅವರದಲ್ಲ
ಮುಂದಿನೂರು ಅವರದಲ್ಲ
ಅಚ್ಚಡದ ಹೊದಿಕೆಯವರು,
ಮಳೆಯೂರಿನ ನೆಂಟರಿವರು
ಕರೆಯದೆ ಬರುವವರು,
ಹೇಳದೆ ಹೋಗುವವರು
ಎಲ್ಲಿಂದಲೋ ಬಂದವರು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಅಲೆಮಾರಿ
ನಾವೆಲ್ಲರೂ ಅಷ್ಟೇ, ರಘು, ಬದುಕೇ ಒ೦ದು ಪ್ರಯಾಣ.ಚೆನ್ನಾಗಿದೆ.
ಅಚ್ಚಡ ಅ೦ದ್ರೆ ಏನು?
ಉ: ಅಲೆಮಾರಿ
ನಮ್ಮೂರ ಕಡೆ ಕರಿ ಕಂಬಳಿಗೆ ಅಚ್ಚಡ ಅನ್ನುತ್ತಾರೆ
ಉ: ಅಲೆಮಾರಿ
ಸ್ಥಾಯಿ ಆಗಿದ್ದರೂ ನಾವೆಲ್ಲರೂ
ಆಗಿರುವೆವು ಅಲೆಮಾರಿಗಳು
ಏಕೆಂದರೆ ಜಡವಲ್ಲ ಜೀವನ
ಚಲನೆ ಸರ್ವಾಂಗೀಣ!
ಉ: ಅಲೆಮಾರಿ
ಮಾನ್ಯರೆ ಪ್ರತಿಕ್ರಿಯೆಗೆ ಧನ್ಯವಾದಗಳು
ಉ: ಅಲೆಮಾರಿ
ಅರ್ಥ ಗರ್ಭಿತ ಕವನ
ಉ: ಅಲೆಮಾರಿ
ಧನ್ಯವಾದಗಳು ಸ್ವಾಮಿ
ಉ: ಅಲೆಮಾರಿ
ರಘುರವರೆ
ಸುಂದರ ಕವನ. ಇಷ್ಟವಾಯಿತು.
ಉ: ಅಲೆಮಾರಿ
ಧನ್ಯವಾದಗಳು ಸ್ವಾಮಿ
ಉ: ಅಲೆಮಾರಿ
ಚೆನ್ನಾಗಿದೆ, ರಘು. ಆಡುಭಾಷೆಯಲ್ಲಿ ಅಚ್ಚಡ ಸರಿ, ಬರವಣಿಗೆಯಲ್ಲಿ ಹಚ್ಚಡ ಎಂಬುದು ಸೂಕ್ತವಾಗಬಹುದು.
ಉ: ಅಲೆಮಾರಿ
ನಮ್ಮೂರ ಕಡೆ " ಹ " ಹಚ್ಹಡ ಅಂದರೆ , ಕ್ಷೌರದವರು. ಅರ್ಥ ಬೇರೆಯಾಗುವುದರಿಂದ " ಅ " ಬಳಸಿರುವೆ.
ಉ: ಅಲೆಮಾರಿ
ಹಚ್ಚಡ= (ನಾ). ಹೊದಿಕೆ. (ಕನ್ನಡ ರತ್ನ ಕೋಶ - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆ)