ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಸಂಪದ ಆರ್ಕೈವಿನಿಂದ

ಲೇಖಕರು

raghusp's picture

ಪೂರ್ಣ ಹೆಸರು
Raghu S P

ಪರಿಚಯ

ಮನದಾಳದ ಮೌನ ಕದ ತೆರೆದಾಗ, ಸಂಪದಗಳ ರಾಶಿಗೆ ನಂದೊಂದು ಹನಿ. ತಪ್ಪಿಲ್ಲದೇ ಏನಾದ್ರೂ ಬರೆದಿದ್ರೆ, ಅದು ನನ್ನ ಪ್ರಾಥಮಿಕ ಶಾಲೆಯ ಮೇಷ್ಟ್ರ ಆಶೀರ್ವಾದ.

ಮನಸ್ಸಿನ ರಾಮ

ಎತ್ತೆತ್ತ ಓಡಲೂ ರಾಮ

ನಿನ್ನ ಎತ್ತಾಡಿಕೊಂಡು ರಾಮ

 

ಆತ್ತ ಓಡಿ ನೋಡು ಅಲ್ಲೂ ಜನ

ಇತ್ತ ಓಡಿ ನೋಡು ಅಲ್ಲೂ ಜನ

ಎಲ್ಲಿ ಮುಚಿಡ್ದಲೋ ನಿನ್ನ ರಾಮ

ಜನದಿಂದ ದೂರ ಎಲ್ಲಿಗೆ ಓಯಲ್ಲೋ ನಿನ್ನ ರಾಮ

 

ಎತ್ತೆತ ಓಡಲೂ ರಾಮ

ನಿನ್ನ ಎತ್ತಾಡಿಕೊಂಡು ರಾಮ

 

ಜನ ಕಂಡರೆ ಪ್ರೀತಿಯೋ ನಿನಗೆ ರಾಮ

ನೀನು ಮತ್ತೋಡಿ ಬಿಡುವೆ ಅವರೊಳಗೆ ರಾಮ

ನನ್ನ ಹುಚ್ಚೆಷ್ಟು ನಿನ್ನೆಡೆಗೆ ನೋಡು ರಾಮ

ನಿನ್ನ ಬಿಡಲೊಲ್ಲೆ ಎಂದಿಗೂ ನಾನು ರಾಮ

 

ಎತ್ತೆತ್ತ ಓಡಲೂ ರಾಮ

ನಿನ್ನ ಎತ್ತಾಡಿಕೊಂಡು ರಾಮ

 

ಅಂಧಕಾರದಲ್ಲಿ ಈ ಮನುಜನ ಮನಸ್ಸು ರಾಮ

ನಿನ್ನ ಮನದೊಳಗೆ ಬಚ್ಚಿಡಲು ಆಗದಲ್ಲೋ ರಾಮ

ಹುಚ್ಹೆಂತೋ ನನ್ನದಿ ರಾಮ

ಮುಷ್ಟಿಯೋಳಗಿಡಿಯ ಹೊದೆನಲ್ಲೋ ನಿನ್ನ ರಾಮ

ಕೊಳೆ ಮನಸ್ಸ ಹೊರತು ಎಲ್ಲೆಲ್ಲು ನೀನೆ ರಾಮ

ಮನಸ್ಸ ಕೊಳೆಯ ತೊಳೆಯ ಹೊರಟಿರುವೆ ನಾನೀಗ ರಾಮ

 

ಎತ್ತೆತ್ತ ಓಡಲೂ ರಾಮ ನಿನ್ನ ಎತ್ತಾಡಿಕೊಂಡು ರಾಮ

 

Your rating: None Average: 5 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಮನಸ್ಸಿನ ರಾಮ

gopinatha's picture

ಬನ್ನಿ ರಘು ಅವರೇ
ನಮ್ಮಲ್ಲಿ ಬೇಕಾದಷ್ಟು ಜಾಗವಿದೆ ನಿಮ್ಮರಾಮನಿಗೆ
ಮನದಲ್ಲಿ, ಮನೆಯಲ್ಲಿ
ಚೆನ್ನಾಗಿದೆ ಕವನ

ಉ: ಮನಸ್ಸಿನ ರಾಮ

asuhegde's picture

ರಾಮ ರಾಮ ರಾಮ
ಜಯ ರಾಮ ಶ್ರೀ ರಾಮ
ನಾನಿನ್ನೇನು ಬರೆಯಲಿ ರಾಮ?

ಉ: ಮನಸ್ಸಿನ ರಾಮ

gopaljsr's picture

ತುಂಬಾ ಚೆನ್ನಾಗಿದೆ.

ಉ: ಮನಸ್ಸಿನ ರಾಮ

komal kumar1231's picture

ರಘು ರಾಮನ ಬಗ್ಗೆ ಉತ್ತಮ ಕವನ ಚೆನ್ನಾಗಿದೆ.