18
June
2013

ಬಿಸೀ ಬಿಸೀ ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ) ಹಾಗೂ ಸೌತೇಕಾಯಿ( ಮುಳ್ಳು ಸೌತೆ) ಕಡುಬು

October 23, 2010 - 9:32am
ragosha


ಬಿಸೀ ಬಿಸೀ  ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ)

 

ಬಿಸೀ ಬಿಸೀ  ಕರುಮ್ ಕುರುಮ್ ಈರುಳ್ಳೀ ಬಜೆ( ಪಕೋಡಾ)  ( ೫ ಜನರಿರುವ ಸಂಸಾರಕ್ಕೆ)
ನಾಲ್ಕು ಈರುಳ್ಳೀ ( ಉದ್ದಕ್ಕೆ ಕೊಚ್ಚಿ)    ನಾಲ್ಕು ಹಸಿಮೆಣ್ಸು( ಉದ್ದಕ್ಕೆ ಕೊಚ್ಚಿ) ರುಚಿಗೆ  ತಕ್ಕಷ್ಟು ಉಪ್ಪು ಒಂದು ಚಮಚ ಬಿಸಿ ಬಿಸಿ ತುಪ್ಪ ಹಾಕಿ ಕಲಸಿಕೊಳ್ಳಿ.
ಒಂದು ತಟ್ಟೆ ಕಡಲೆ ಹಿಟ್ಟು( ಬೇಸನ್) ಮತ್ತು ನಾಲ್ಕೇ ಚಮಚ ನೀರು  ( ಚಾ ಚಮಚ) ಅದಕ್ಕೆಸೇರಿಸಿ ಚೆನ್ನಾಗಿ ಕಲಸಿ.
ಸರಿಯಾಗಿ ಕಾದ ಎಣ್ಣೆಗೆ ಸ್ವಲ್ಪ ಸ್ವಲ್ಪವೇ ಬಿಡಿ ಬಿಡಿಯಾಗಿ ಬಿಡಿ, ಕಂದು ಬಣ್ಣಕ್ಕೆ ಬರುವಷ್ಟು ಕಾಸಿ  ಹೊರ ತೆಗೆಯಿರಿ.
ಬಿಸಿ ಬಿಸಿಯಾಗಿ ತಿನ್ನಲು ಬಲು ರುಚಿ

ಇಲ್ಲಿ ಸ್ವಲ್ಪ ಕಾದ ಎಣ್ಣೇ ಅಥವಾ ತುಪ್ಪವನ್ನು ಹಿಟ್ಟಿಗೆ ಸೇರಿಸುವುದರಿಂದ ಈ ಈರುಳ್ಳಿ ಬಜೆ ತುಂಬಾ ಪರಿಮಳವಾಗಿ ಗರಿ ಗರಿಯಾಗಿಯೂ ಇರುತ್ತದೆ. ಮತ್ತು ಬಿಡಿ ಬಿಡಿಯಾಗಿ ಎಣ್ಣೆಯಲ್ಲಿ ಬಿಡುವುದರಿಂದ ಈರುಳ್ಳಿ ಉದ್ದಕ್ಕೆ ಹೆಚ್ಚಿದ ಗಾತ್ರವೂ ( ಆಕಾರ) ಹಾಗೆಯೇ ಉಳಿದು ಗರಿಗರಿಯಾಗಿ ಇರಲು ಸಹಕಾರಿ.


ಸೌತೇಕಾಯಿ( ಮುಳ್ಳು ಸೌತೆ) ಕಡುಬು

 

 

 

ನಾಲ್ಕು ಚಿಗುರು ಮುಳ್ಳು ಸೌತೆಕಾಯಿ, ಒಂದೂವರೆ ಗ್ಲಾಸ್ (೬೦೦ ಮಿ ಲಿ) ಬೆಳ್ತಿಗೆ ಅಕ್ಕಿ ಹುಡಿ  ( ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ಸರಿಯಾಗಿ ಒಣಗಿಸಿ ಅದನ್ನು ಎಣ್ಣೆ ಹಾಕದೇ ಪರಿಮಳ ಬರಿವಷ್ಟು  ಹುರಿದು ರವೆಯ ಹದಕ್ಕೆ ಹುಡಿಮಾಡಿಟ್ಟುಕೊಳ್ಳಬೇಕು.

ಸೌತೆ ಕಾಯಿಯನ್ನು ತುರಿಮಣೆಯಲ್ಲಿ ತುರಿದು ಒಂದು ತಟ್ಟೆ ಹಸೀ ತೆಂಗಿನ ಕಾಯಿಯನ್ನು ಹೆರೆದು( ತುರಿದು) ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲಾ ವಸ್ತುಗಳನ್ನೂ ಸೇರಿಸಿ ಕಲಸಿ ಅರಶಿನದೆಲೆ ಅಥವಾ ಬಾಳೆಯೆಲೆಯಲ್ಲಿ ಇಟ್ಟು ಮಡಿಸಿ ಇಡ್ಲಿ ಕುಕರ್ ( ಅಥವಾ ಅಟ್ಟ) ದಲ್ಲಿ  ಮುಕ್ಕಾಲು ಗಂಟೆ ಬೇಯಿಸಿದರೆ ನಿಮ್ಮ ಬಿಸಿ ಬಿಸಿ ಸೌತೇ ಕಾಯಿ ಕಡುಬು ರೆಡಿ. ಹಿಟ್ಟು ಆದಷ್ಟು ನೀರೂರುವಂತೆಯೇ ಇರಲಿ, ಜಾಸ್ತಿ ಗಟ್ಟಿಯಾದರೆ ಕಡಬೂ ತುಂಬಾನೇ ಗಟ್ಟಿಯಾಗಿರುತ್ತದೆ. ( ಬೇಯದಿದ್ದರೆ ಸ್ವಲ್ಪ ನೀರು ಹನಿಸಿ ಪುನಹ ಬೇಯಿಸಿ)

ತೆಂಗಿನಕಾಯಿ + ಈರುಳ್ಳಿ ಚಟ್ನಿಯೊಂದಿಗೆ ಬಿಸಿ ಬಿಸಿಯಾಗಿ ತಿನ್ನಲು ಬಲು ರುಚಿ

ಎರಡೂ ತಿಂಡಿಗಳೂ ದಿಢೀರ್ ಮಾಡಲು ಯೋಗ್ಯ.

 

ಇವತ್ತಿನ ಸಲಹೆ: 
ರವೆಯನ್ನು ಹುರಿದು ಬಾಟಲಿಯಲ್ಲಿ ಹಾಕಿ ಇಟ್ಟರೆ ಹುಳು ತಗಲದೇ ಜಾಸ್ತಿ ಸಮಯ ಇಡಬಹುದು, ಮತ್ತು ಉಪ್ಪಿಟ್ಟು , ಪಾಯಸ, ಇಡ್ಲಿ  ದಿಢೀರ್  ಮಾಡ ಬೇಕಾದರೆ ಸಹಾಯವಾಗುವುದು.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by prasannasp on

[quote]ಒಂದು ತಟ್ಟೆ ಕಡಲೆ ಹಿಟ್ಟು[/quote]

ತಟ್ಟೆ ಯಾವ ಅಳತೆಯದಿರಬೇಕು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ragosha on

ಪ್ರಸನ್ನ ಅವರೇ ಪ್ರತಿಕ್ರೀಯೆಗೆ ಧನ್ಯವಾದಗಳು
ಹೋಟೆಲ್ ನಲ್ಲಿ ಸಾಂಬಾರ್ ತಟ್ಟೆಯಿರುತ್ತದಲ್ಲಾ ಅದರ ಎರಡು ಪಟ್ಟು ಅಳತೆಯಿರಲಿ, ಆದರೆ ನೀವು ಇಲ್ಲಿ ನೋಡಬೇಕಾದದ್ದು ಅದರ ಮಿಶ್ರಣದ ಸಾಂದ್ರತೆ. ಜಾಸ್ತಿ ನೀರಾಗಿಯೂ ಅಲ್ಲ ಜಾಸ್ತಿ ಗಟ್ಟಿಯಾಗಿಯೂ ಇರಬಾರದು. ಒಂದೆರಡು ಬಾರಿ ಮಾಡಿ ನೋಡುವಾಗ ನಿಮಗೆ ಅರ್ಥವಾಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasannasp on

ಸರಿ, ಪ್ರಯತ್ನಿಸಿ ನೋಡುವೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Tejaswi_ac on

ರಾಗೋಶಾ ರವರೇ ಚಿತ್ರ ನೋಡಿಯೇ ಬಾಯಲ್ಲಿ ನೀರು ಬಂತು. ಸಂಪದದಲ್ಲಿ ಅಡುಗೆ ಮಾಡುವ ಲೇಖನ ಬರುತ್ತಿರುವುದು ನೋಡಿ ಸಂತೋಷವಾಯ್ತು. ಅಡುಗೆಯ ಲೇಖನ ಸಂಪದಕ್ಕೆ ಹೊಸತನ ತಂದಿದೆ. ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ragosha on

ತೇಜಸ್ವೀಯವರೇ ನಿಮ್ಮ ಮೆಚ್ಚುಗೆಯ ಪ್ರತಿಕ್ರೀಯೆಗೆ ವಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sunilkgb on

ಬಿಸೀ ಬಿಸೀ ಕರುಮ್ ಕುರುಮ್ ಅದರೊಡನೆ ಚಿತ್ರಗಳು ಬೇರೆ ಮೇಡಂ , ಬೆಂಗಳೂರಲ್ಲಿರುವ ನನ್ನಂತ ಬ್ಯಾಚುಲರ್ ಗಳಿಗೆ ನಿಮ್ಮ ಲೇಖನ ಓದಿ ತುಂಬಾ ಕಷ್ಟ ಆಗುತ್ತೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ragosha on

ಸುನಿಲ್ ಇದನ್ನೆಲ್ಲ ಶೇಖರಿಸಿಟ್ಟುಕೊಳ್ಳಿ
ಮುಂದೆ ಇದರ ಅವಶ್ಯಕತೆ ಬರ ಬಹುದು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by komal kumar1231 on

ಮೇಡಂ ತಿನ್ನಬೇಕು ಅನ್ನಿಸ್ತಾ ಇದೆ. ನನ್ನ ಹೆಂಡರಿಗೆ ಮಾಡಕ್ಕೆ ಹೇಳ್ತೀನಿ. ಈರುಳ್ಳಿ ಬಜಿ ಆಗುತ್ತೋ ಇಲ್ಲಾ ವಡೆ ಆಗುತ್ತೋ ಗೊತ್ತಿಲ್ಲ. ಅಂತೂ ಮಾಡಿದ ಮೇಲೆ ಏನಾದರೂ ಆಗುತ್ತೆ. ಸಿಹಿಕಹಿ ಚಂದ್ರು ಅಂತಾರಲ್ಲಾ ಹೂಂ, ಹೂಹೂಹೂ ಬೊಂಬಾಟ್. ಹಂಗಾದ್ರೆ. ನಿಮಗೆ ಸಾನೇ ಥ್ಯಾಂಕ್ಸ್. ಅಂತೂ ಸಂಪದದಲ್ಲಿ ಅಡುಗೆ ಬಗ್ಗೆ ಹೇಳಲು ಬಂದಿದ್ದೀರಾ ಎನ್ನುವುದೇ ಸಂತೋಷ. ಇನ್ನೂ ಹೊಸ ನಮೂನೆಯ ಅಡುಗೆಗಳು ಬರಲಿ. ನಿಮಗೆ ಶುಭವಾಗಲಿ
ಕೋಮಲ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ragosha on

ಕೋಮಲ್ ಅವರೇ ನಿಮ್ಮ ಹಾಸ್ಯ ಲೇಖನ ತುಂಬಾನೇ ಚೆನ್ನಾಗಿರುತ್ತವೆ ನಾವು ಮನೆಯವರೆಲ್ಲಾ ಓದಿ ನಗುತ್ತಿರುತ್ತೇವೆ.
ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಲೇಖನದೊಡನೆ ಕೊಟ್ಟ ಸಲಹೆಯೂ ಅತ್ಯುಪಯುಕ್ತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ragosha on

ಮೆಚ್ಚುಗೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.