ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › Rajashekhar ರವರ ಬ್ಲಾಗ್

ಅನಂತಮೂರ್ತಿಯವರನ್ನು ಗೆಲ್ಲಿಸಬೇಕು

March 21, 2006 - 3:01pm — Rajashekhar

ರಾಜ್ಯಸಭೆ ಎಂದರೆ ರಾಜಕೀಯ ಪುನರ್ವಸತಿ ಎಂಬ ಮಾತಿಗೆ ಸಾಕ್ಷ್ಯಗಳು ಸಿಗುತ್ತಲೇ ಬಂದಿವೆ. ಸಾರ್ವತ್ರಿಕ ಚುನಾವಣೆಯ ಹೊತ್ತಲ್ಲಿ ಪಕ್ಷಕ್ಕಾಗಿ ದುಡಿದವರು, ಟಿಕೆಟ್‌ ಸಿಗದೇ ಅಸಮಾಧಾನಗೊಂಡವರು, ಮತ ದಾರರಿಂದ ತಿರಸ್ಕೃತಗೊಂಡವರು, ಪಾರ್ಟಿ ಫಂಡ್‌ಗೆ ದೊಡ್ಡ ಮೊತ್ತ ಚೆಲ್ಲಿದವರು, ಮುಂದೆ ಮತ್ತೂ ಕೊಡುವೆನೆಂದು ಭರವಸೆ ಕೊಟ್ಟವರು... ಇಂಥವರಿಗೆಲ್ಲ ರಾಜಕೀಯ ಪುನರ್ವಸತಿ, ಪ್ರವೇಶ ತಾಣಗಳೆಂದರೆ ವಿಧಾನ ಪರಿಷತ್‌, ರಾಜ್ಯಸಭೆಗಳು. ಇದು ಎಲ್ಲರಿಗೂ ಗೊತ್ತಿರುವ ಸತ್ಯ.

ರಾಜ್ಯಸಭೆಗೆ ಈಗ ಚುನಾವಣೆ ಬಂದಿದೆ. ಆಯಾ ಪಕ್ಷಗಳು ತಮ್ಮ ಶಾಸಕರ ಬಲದ ಮೇಲೆ ದೇಶದ ಮೇಲ್ಮನೆಗೆ ಕೆಲವರನ್ನು ಕಳುಹಿಸಲಿದ್ದಾರೆ. ವಾಸ್ತವವಾಗಿ ಈ ಶಾಸಕರು ತಮ್ಮ ಕ್ಷೇತ್ರದ ಎಲ್ಲ ಮತದಾರರ ಪರವಾಗಿ ಮತ ಚಲಾಯಿಸಲಿದ್ದಾರೆ. ಅಂದರೆ ನಮ್ಮ ಪ್ರತಿನಿಧಿ ನಮ್ಮೆಲ್ಲರ ಮನಸ್ಸಾಕ್ಷಿಗೆ ಅನುಗುಣವಾಗಿ ಮತ ಹಾಕಬೇಕು. ಅಥವಾ ಆಯಾ ಶಾಸಕ ಆತನ ಕ್ಷೇತ್ರದ ಬಹುಸಂಖ್ಯಾಕ ಜನತೆ ಏನು ಹೇಳುತ್ತಾರೆ ಎಂದು ಗಮನದಲ್ಲಿಟ್ಟು ಮತ ಚಲಾಯಿಸಬೇಕು. ಅಂದರೆ ರಾಜ್ಯಸಭೆ ಚುನಾವಣೆಯ ಹೊತ್ತಲ್ಲಿ ಕೂಡ ಶಾಸಕ ಮತದಾರರ ಬಳಿ ಹೋಗಬೇಕಾಗುತ್ತದೆ. ಬಹುಸಂಖ್ಯಾತ ಮತದಾರರ ಒಲವು ಯಾರ ಕಡೆಗಿದೆ ಎಂದು ತಿಳಿದುಕೊಳ್ಳ ಬೇಕಾಗುತ್ತದೆ. ಅದಕ್ಕನುಗುಣವಾಗಿ ಮತ ಹಾಕಬೇಕಾಗುತ್ತದೆ. ಹಾಗಾದಾಗ ಮಾತ್ರ ಇದು ಪ್ರಜಾಪ್ರಭುತ್ವ ಎಂಬ ಮಾತಿಗೆ ಅರ್ಥ ಬರುತ್ತದೆ. ಶಾಸಕ ಸ್ಥಾನ ಅಂದರೆ ಏನು ಎಂದು ಗೊತ್ತಿರುವ ಯಾವುದೇ ಶಾಸಕ ಈ ವಿಷಯದಲ್ಲಿ, `ಹಾಗೆ ಮಾಡಬೇಕೆಂದು ಕಾನೂನಲ್ಲಿ ಹೇಳಿಲ್ಲ' ಎಂದು ತಪ್ಪಿಸಿಕೊಳ್ಳುವಂತಿಲ್ಲ. ಏಕೆಂದರೆ ಇಂಥ ಸಮಯದಲ್ಲಿ ತನ್ನ ಕ್ಷೇತ್ರದ ಜನರ ಅಭಿಪ್ರಾಯ ಕೇಳಬಾರದು ಎಂದೂ ಯಾವ ಕಾನೂನೂ ಹೇಳಿಲ್ಲ.

ಆದರೆ ಈಗ ಏನಾಗುತ್ತಿದೆ? ರಾಜ್ಯಸಭೆ ಚುನಾವಣೆ ಅಂದರೆ ಅದು ಶಾಸಕರಿಗೆ ಮಾತ್ರ ಸಂಬಂಧಿಸಿದ್ದು ಎಂಬ ವಾತಾವರಣವಿದೆ. ಶಾಸಕನಿಗೆ ತನ್ನ ಕ್ಷೇತ್ರದ ಜನತೆಯ ಅಭಿಪ್ರಾಯವಿರಲಿ, ಸ್ವತಃ ತನ್ನ ಆತ್ಮಸಾಕ್ಷಿಯ ಮತ ಹಾಕುವುದಕ್ಕೂ ಅವಕಾಶವಿಲ್ಲ. ಈಗಲೇ ನೋಡಿ. ಒಂದೆಡೆ ಆಂಧ್ರಪ್ರದೇಶ ಮೂಲದ, ಈ ನಾಡಿನ ಜನತೆಗೆ ಅಷ್ಟೇನೂ ಪರಿಚಿತರಲ್ಲದ ಉದ್ಯಮಿ ರಾಜೀವ್‌ ಚಂದ್ರಶೇಖರ್‌ ಇದ್ದಾರೆ. ಇನ್ನೊಂದೆಡೆ ನಾಡಿಗೆ ಜ್ಞಾನಪೀಠ ತಂದುಕೊಟ್ಟ, ವಿಚಾರವಾದಿ, ಚಿಂತಕ ಎಂದು ಎಲ್ಲರೂ ಒಪ್ಪುವ, ರಾಜ್ಯಸಭೆಗೆ ರಾಜ್ಯವನ್ನು ಪ್ರತಿನಿಧಿಸಲು ಅತ್ಯಂತ ಸೂಕ್ತ ವ್ಯಕ್ತಿ ಎಂದು ಬಹುತೇಕ ಜನರಿಗೆ ಅನಿಸುವ ಇದೇ ನಾಡಿನ ಸಾಹಿತಿ ಡಾ. ಯು. ಆರ್‌. ಅನಂತಮೂರ್ತಿ ಇದ್ದಾರೆ. ಸೂಕ್ತ ವ್ಯಕ್ತಿಗಳು ಆಡಳಿತಕ್ಕೆ ಬರಬೇಕು ಎಂಬ ಕಳಕಳಿ ರಾಜಕೀಯ ಪಕ್ಷಗಳಿಗಿದ್ದರೆ ಅವರು ಅನಂತಮೂರ್ತಿ ಅವರ ಬೆಂಬಲಕ್ಕೇ ನಿಲ್ಲಬೇಕಾಗುತ್ತದೆ. ಏಕೆಂದರೆ ಸಮರ್ಥರನ್ನು ಚುನಾಯಿಸಿ ಎಂದು ನಾಳೆ ಮತದಾರರಲ್ಲಿ ಕೇಳಲು ಆಗ ಮಾತ್ರ ಅವರಿಗೆ ನೈತಿಕ ಹಕ್ಕಿರುತ್ತದೆ. ಜನತೆಗೆ ಮಾದರಿಯಾಗಬಲ್ಲ ಇಂಥ ಅವಕಾಶವನ್ನು ಶಾಸಕರು ಬಳಸಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ `ನೀವು ಎಂಥವರನ್ನು ಆರಿಸುತ್ತೀರಿ ಎಂದು ನಮಗೆ ಗೊತ್ತಿದೆ' ಎಂದು ಪ್ರಜ್ಞಾವಂತ ಜನ ನಾಳೆ ಇವರ ಮುಖಕ್ಕೆ ಹೊಡೆಯುವಂತೆ ಕೇಳಬಹುದು.

ಆದರೆ ಇಂಥ ಚಿಂತನೆಗಳು ವಾಸ್ತವವಾಗುವ ಕಾಲದ ಹತ್ತಿರವೂ ನಾವಿದ್ದಂತಿಲ್ಲ. ಅನಂತಮೂರ್ತಿ ಅವರ ಸ್ಪರ್ಧೆ ಇಂಥ ಒಂದು ಎಚ್ಚರವನ್ನು, ರಾಜಕೀಯ ಪಕ್ಷಗಳ ಹುಳುಕುಗಳನ್ನು ಜನತೆಯ ಎದುರು ಇಡತೊಡಗಿದೆ. ಅಷ್ಟರಮಟ್ಟಿಗೆ ಅವರ ಸ್ಪರ್ಧೆ ಸಾರ್ಥಕ. ಇಂಥ ಸಂದರ್ಭಗಳು ಎದುರಾದಾಗ ಶಾಸಕರ ಸ್ಥಿತಿ ಮಾತ್ರ ಮರುಕ ಹುಟ್ಟಿಸುತ್ತಿದೆ. ಅನಂತಮೂರ್ತಿಯವರನ್ನು ಆಯ್ಕೆ ಮಾಡಲು ಬೇಕಾದಷ್ಟು ಶಾಸಕರ ಬೆಂಬಲ ಖಂಡಿತ ಸಿಗಬಹುದು. ಆದರೆ ಅದು ಅವರೆಲ್ಲ ಆತ್ಮಸಾಕ್ಷಿಯ ಗೌಪ್ಯ ಮತದಾನ ಮಾಡಲು ಸಾಧ್ಯವಿದ್ದಾಗ ಮಾತ್ರ. ಆದರೆ ಪಕ್ಷವೆಂಬ ಭೂತ ಅವರೆದುರಿಗಿದೆ. ಕೆಲ ಶಾಸಕರನ್ನು ತೀರ ಖಾಸಗಿಯಾಗಿ ಮಾತನಾಡಿಸಿದರೆ ಅನಂತಮೂರ್ತಿ ಅವರ ಬಗ್ಗೆ ಪ್ರೀತಿಯಿಂದ ಮಾತನಾಡಬಹುದು. ನಿಜಕ್ಕೂ ಅಂಥವರು ಈ ನಾಡಿನ ಪ್ರತಿನಿಧಿಯಾಗಿ ರಾಜ್ಯಸಭೆಯಲ್ಲಿ ಇರಬೇಕು ಎನ್ನಬಹುದು. ಅವರಿಗೇ ಮತ ಹಾಕಬೇಕು ಎಂದೂ ಅನಿಸುವುದಾಗಿ ಹೇಳಬಹುದು. ಆದರೆ ಅವರು ಮಾತ್ರ ಅನಂತಮೂರ್ತಿ ವಿರುದ್ಧವೇ ಮತ ಚಲಾಯಿಸಬೇಕಾಗುತ್ತದೆ. `ನಾವೆಲ್ಲ ಪಕ್ಷದ ಶಿಸ್ತಿಗೆ ಬದ್ಧರಾದವರು. ನಮಗೆ ರಾಜಕೀಯದಲ್ಲಿ ಇನ್ನೂ ಬಹುಕಾಲ ಇರಬೇಕೆಂಬ ಆಸೆ ಇದೆ. ಪಕ್ಷದ ಆದೇಶದ ವಿರುದ್ಧ ಮತಹಾಕಿ ಪಕ್ಷದ್ರೋಹಿ ಅನಿಸಿಕೊಳ್ಳುವುದು ನನಗಿಷ್ಟವಿಲ್ಲ. ಹೀಗಾಗಿ ಮನಸ್ಸಿದೆಯೋ, ಇಲ್ಲವೋ ಪಕ್ಷ ಹೇಳಿದಂತೆ ನಡೆಯುತ್ತೇನೆ' ಎನ್ನಬಹುದು. ಹಾಗೆ ನೋಡಿದರೆ ವಾಸ್ತವ ಇದೇ ಅಲ್ಲವೇ?

ಹೌದಾದರೆ ನಮ್ಮ ಶಾಸಕರು, ಸ್ವತಃ ಪ್ರಜಾಪ್ರಭುತ್ವದಂತೆ ಮತದಾನದ ಹಕ್ಕನ್ನು ಸ್ವ ಇಚ್ಛೆಯಿಂದ ಚಲಾಯಿಸಲಾಗದವರು, ಪ್ರಜಾಪ್ರಭುತ್ವವನ್ನು ಕಾಪಾಡುತ್ತಾರೆ ಎಂದರೆ ನಂಬುವುದು ಹೇಗೆ? ಈ ನಾಡಿನ ಒಬ್ಬ ಹಿರಿಯ ಹಾಗೂ ಜನರ ಬಗ್ಗೆ ಪ್ರೀತಿ ಇರುವ ವ್ಯಕ್ತಿಯ ಬದಲು ಬೇರೆ ರಾಜ್ಯದ ದುಡ್ಡಿದ್ದವರೊಬ್ಬರ ಬೆಂಬಲಕ್ಕೆ ನಿಂತವರು ಈ ರಾಜ್ಯದ ಹಿತ ಕಾಪಾಡುತ್ತಾರೆ ಎಂದು ನಂಬುವುದು ಮೂರ್ಖತನವಲ್ಲದೇ ಬೇರೇನಲ್ಲ.
ಅನಂತಮೂರ್ತಿ ಅವರ ಸ್ಪರ್ಧೆಯಿಂದ ರಾಜಕೀಯ ಪಕ್ಷಗಳ ಕೆಲ ಆಂತರಿಕ ಆಸೆಗಳೂ ಬೆತ್ತಲಾಗತೊಡಗಿವೆ. ಆ ಆಸೆಗಳು ಬಯಲಾದವೆಂದೇ ಅನಂತಮೂರ್ತಿ ಅವರ ಕುರಿತು ಟೀಕೆಗಳೂ ಬರತೊಡಗಿವೆ. ಕೊನೆಹಂತದಲ್ಲಿ ಈ ಸ್ಪರ್ಧೆ ಪ್ರಕಟವಾಗಿದ್ದು ಆ ಪಕ್ಷಗಳಿಗೆ ತೀರ ಇರಿಸು ಮುರಿಸು ಉಂಟುಮಾಡಿದೆ. ಅವರು ಕನ್ನಡಕ್ಕೆ ಏನು ಮಾಡಿದ್ದಾರೆ ಎಂದೆಲ್ಲ ಕೇಳತೊಡಗಿದ್ದಾರೆ. ಅಂಥವರನ್ನು ರಾಜ್ಯಸಭೆಗೆ ಕಳಿಸೋದಕ್ಕೆ ಆಗುತ್ತಾ? ಎಂದು ಕೇಳಿದ್ದಾರೆ. ಆದರೆ ರಾಜೀವ ಚಂದ್ರಶೇಖರ್‌ ಕನ್ನಡಕ್ಕೆ ಮಾಡಿರುವ ಸೇವೆಗಿಂತ ಅನಂತಮೂರ್ತಿ ಅವರ ಕೊಡುಗೆ ಖಂಡಿತವಾಗಿಯೂ ಜಾಸ್ತಿಯಿದೆ. ಹೊರ ರಾಜ್ಯದ ಉದ್ಯಮಪತಿಯೊಬ್ಬರನ್ನು ರಾಜ್ಯಸಭೆಗೆ ಕಳಿಸಲು ಸಾಧ್ಯವಾಗುವುದಾದರೆ ಅನಂತಮೂರ್ತಿ ಯಾಕಾಗುವುದಿಲ್ಲ? ಅವರು ನಿಮಗೆ ದುಡ್ಡು ಕೊಡುವುದಿಲ್ಲ ಎಂದೇ? ಅವರು ನಿಮ್ಮ ಪಕ್ಷದ ಸದಸ್ಯ ಅಲ್ಲವೆಂದೇ? ಅಥವಾ ಇನ್ನಾವುದೋ ಪ್ರಬಲ ಕಾರಣವಿದೆಯೇ?

ಶಾಸಕರು ಈಗಲಾದರೂ ಪಕ್ಷಕ್ಕೆ ಮಾರಿಕೊಂಡ ಆತ್ಮಸಾಕ್ಷಿಯನ್ನು ವಾಪಸ್‌ ಪಡೆಯಲು ಪ್ರಯತ್ನಿಸುವುದು ಜಾಣತನ. ಪಕ್ಷಗಳೂ ಕೂಡ ವಿಪ್‌ ಹೆಸರಲ್ಲಿ ಶಾಸಕರ ಆತ್ಮಸಾಕ್ಷಿ ಕಸಿದುಕೊಳ್ಳುವ ಪ್ರಜಾಪ್ರಭುತ್ವ ವಿರೋಧಿ ನಿಲುವಿಂದ ಈ ವಿಷಯದಲ್ಲಾದರೂ ಹೊರನಿಂತು ಮುತ್ಸದ್ದಿತನ ತೋರುವ ಅಗತ್ಯವಿದೆ. ರಾಜ್ಯಸಭೆಗೆ ಅನಂತಮೂರ್ತಿ ಅವರು ಆಯ್ಕೆಯಾಗುವಂತೆ ನೋಡಿಕೊಂಡರೆ ಅದು ಶಾಸಕ ಸ್ಥಾನಕ್ಕೆ ತಂದುಕೊಡುವ ದೊಡ್ಡ ಗೌರವ.
(21-03-2006 ಉದಯವಾಣಿಯಲ್ಲಿಯೂ ಈ ಲೇಖನ ಪ್ರಕಟವಾಗಿದೆ)

ರಾಜಶೇಖರ ಜೋಗಿನ್ಮನೆ

  • ಪ್ರಚಲಿತ
~.~
  • Rajashekhar ರವರ ಬ್ಲಾಗ್
  • Login or register to post comments
  • 689 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 21, 2006 - 4:13pm — beluru

ಎಂಥ ರಾಜಕಾರಣ?

beluru's picture

ಶಾಸಕರು ತಾವು ಪ್ರತಿನಿಧಿಸುವ ಪಕ್ಷದ ನೀತಿ, ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು, ಪಕ್ಷದ ಕಾನೂನುಗಳನ್ನು ಮಾನ್ಯ ಮಾಡುವುದಾಗಿ ಘೋಷಿಸಿರುತ್ತಾರೆ. ಒಂದು ಪಕ್ಷಕ್ಕೆ ತನ್ನ ಶಾಸಕರಿಗೆ ವಿಪ್ ವಿಧಿಸುವ ಅಧಿಕಾರವು ಸರ್ವಾಧಿಕಾರ ಎಂದು ಭಾವಿಸುವುದು ಸರಿಯಲ್ಲ. ಯಾಕೆಂದರೆ ಬಹುಮತ ಅಥವಾ ಪ್ರಮುಖ ಬಣವು ಪಕ್ಷದ ನೀತಿಗೆ ವಿರುದ್ಧವಾಗಿದ್ದರೆ ಅದು ವಿಪ್ ಹಾಕಲೂ ಹಿಂಜರಿಯುತ್ತದೆ. ವಿಪ್‌ನ ಇತಿಹಾಸವನ್ನು ಬಲ್ಲವರು ಹೇಳುವ ಮಾತಿದು.
ಪಕ್ಷವು ವಿಪ್ ಹಾಕುವುದೇ ಶಾಸಕರ ಆತ್ಮಸಾಕ್ಷಿಯನ್ನು ನಿರ್ಬಂಧಿಸುವ ಮಾನವ ಹಕ್ಕು ವಿರೋಧಿ ಕ್ರಮ ಎಂದು ತಿಳಿಯುವುದೇ ತಪ್ಪು. ಪಕ್ಷದ ಚಿಹ್ನೆಯ ಮೂಲಕ ಆರಿಸಿಬಂದವರಿಗೆ ಪಕ್ಷದ ಕುರಿತ ಹೊಣೆಗಾರಿಕೆಗಳೂ ಇರುತ್ತವೆ. ಆದ್ದರಿಂದಲೇ ಪಕ್ಷೇತರರಿಗೆ ಈ ಸಮಸ್ಯೆ ಇಲ್ಲ. ಹೀಗಾಗಿ ವಿಪ್ ವಿರುದ್ಧವೇ ಮಾತಾಡುವುದು, ಆತ್ಮಸಾಕ್ಷಿಗೆ ತಕ್ಕಂತೆ ಮತ ಚಲಾಯಿಸಲು ವಿಪ್ ನೀಡಿ ಎಂಬ ವಾದವನ್ನು ಮಂಡಿಸುವುದು - ಇವುಗಳ ಬದಲಿಗೆ ಒಂದು ಪ್ರಮುಖ ಬಣವೇ ತಮ್ಮ ಪರ ಘೋಷಣೆ ಮಾಡುವಂತೆ ಲಾಬಿ ಮಾಡುವುದರಲ್ಲಿ ಡಾ|| ಅನಂತಮೂರ್ತಿಯವರ ರಾಜಕಾರಣ ಇರಬೇಕು. ಪಾರ್ಲಿಮೆಂಟರಿ ಡೆಮಾಕ್ರಸಿಯನ್ನು ಸರಿ ಮಾಡಬೇಕಾದರೆ ಹೀಗೆ ರಾತ್ರೋರಾತ್ರಿ ಕ್ರಾಂತಿಯ ಘೋಷಣೆಗಳನ್ನು ಬರೆಯುವುದರಿಂದ ಆಗುವುದಿಲ್ಲ. ಅದಕ್ಕೆ ಸಾಕಷ್ಟು ಪೂರ್ವತಯಾರಿ, ಮುಂದಾಲೋಚನೆ - ಎರಡೂ ಬೇಕು.
ಇತ್ತ ಅಂಥ ಪೂರ್ವ ತಯಾರಿಯೂ ಇಲ್ಲದೆ ತಾನು ಶಾಸಕರಿಗೆ ಕಾಗದ ಬರೆಯುತ್ತೇನೆಯೆ ಹೊರತು ಖುದ್ದಾಗಿ ಸಂಚರಿಸಿ ಲಾಬಿ ಮಾಡಲಾರೆ ಎಂದು ಹೇಳುತ್ತ, ಅತ್ತ ಸಾರ್ವಜನಿಕರೆದುರು ಪಕ್ಷಗಳಿಗೆ,ಮುಖ್ಯಮಂತ್ರಿಯಾದಿಯಾಗಿ ಎಲ್ಲರಿಗೂ ಬುದ್ಧಿ ಹೇಳಬೇಕು ಎನ್ನುತ್ತ, ಮಗದೊಂದೆಡೆ ತನಗೂ ಕೋಮುವಾದಿ ಎಂದು ತಾನೇ ಜರೆದ ಪಕ್ಷಕ್ಕೂ ಸಾಮ್ಯವಿದೆ ಎಂದು ಎಮರ್ಜೆನ್ಸಿ ಕಾಲದಿಂದ ಪಟ್ಟಿ ಮಾಡುತ್ತ ಹೋಗುವ ಡಾ|| ಅನಂತಮೂರ್ತಿಯವರದು ಎಂಥ ರಾಜಕಾರಣ?
ತಾನು ಸ್ಪರ್ಧಿಸುವುದಕ್ಕೆ ಕನ್ನಡವೇ ಕಾರಣ ಎಂದು ಅನಂತಮೂರ್ತಿಯವರು ಘೋಷಿಸಿದ್ದರೆ ಅದಕ್ಕೆ ಕನ್ನಡದ ಹೊರತಾಗಿ ಇನ್ನಾವುದೋ ಕಾರಣಗಳಿರಬೇಕು; ಅದಿಲ್ಲವಾದರೆ ಕನ್ನಡಪರ ಕೆಲಸ ಮಾಡುವಾಗ ಹೀಗೆ ಸೂಕ್ತ ರಾಜಕೀಯ, ಸಾಂಸ್ಕೃತಿಕ ತಯಾರಿಯೇ ಇಲ್ಲದೆ ಹೊರಡುವುದು ಕನ್ನಡ ಹೋರಾಟವಾಗುತ್ತದೆಯೆ? ಇಂಥ ಅವ್ಯವಸ್ಥಿತ ಸ್ಪರ್ಧೆಯನ್ನು ಕನ್ನಡಿಗರು ಯಾಕೆ ಭಾವನಾತ್ಮಕವಾಗಿ ತೆಗೆದುಕೊಳ್ಳಬೇಕು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
March 21, 2006 - 9:22pm — ಶ್ರೀಶಕಾರಂತ

ಯಾರಪ್ಪ ಅದು ಅನಂತಮೂರ್ತಿ ಅವರ ಪರ ಪ್ರಚಾರಕರು

ಶ್ರೀಶಕಾರಂತ's picture

ಮೂರ್ತಿಯವರು ಕುದುರೆಮುಖ ಗಣಿಗಾರಿಕೆಯ ವಿರುದ್ಧ ಮಾಡುತ್ತಿದ್ದ ಹೋರಾಟ ಯಾಕೆ ನಿಲ್ಲಿಸಿದರು ಆಗ ಅಂತ ಜನಕ್ಕೆ ಗೊತ್ತಾಗಲಿಲ್ಲ...(ಬಹುಶಹ ಅವರ ಕಾರ್ಯ ಸಾಧನೆಯಾಗಿರಬೇಕು)....ರಾಜ್ಯಸಭೆಗೆ ಆಯ್ಕೆಯಾದರೆ ಕನ್ನಡ ಉದ್ಧಾರ ಮಾಡಿಯೇತೀರುತ್ತಾರೋ...(ಅವರ ಕಾರ್ಯ ಸಾಧನೆಯಾದನಂತರ ನಿಲ್ಲಿಸಬಹುದು)ಬೇಲೂರರು ಸರಿಯಾಗಿ ಹೇಳಿದ್ದಾರೆ...ಸಾಂವಿಧಾನಿಕವಾಗಿ ಮಾಡುವುದನ್ನು ಪ್ರಶ್ನಿಸುವ ಹಕ್ಕು ನಮಗಿಲ್ಲ....ದಯವಿಟ್ಟು ಇಲ್ಲಾದರೂ ರಾಜಕೀಯ ಪ್ರಚಾರವನ್ನು ನಿಲ್ಲಿಸ ಬೆಕಾಗಿ ವಿನಂತಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಶಾಸಕರ ರಾಜೀನಾಮೆ ರಾಜಕೀಯ
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಅಕಶೇರುಕ ಚಂಪಾ ಮತ್ತು ಸರೀಸೃಪ ಅನಂತಮೂರ್ತಿ
  • ವಿಕದಿಂದ ಭೈರಪ್ಪ ಮತ್ತು ಅನಂತಮೂರ್ತಿ ಪಟಾಲಂಗೆ ಅಧ್ಬುತ ಅವಕಾಶ..ಡೆಡ್ ಲೈನ್: ಇವತ್ತು ಸಂಜಿ ೬ ರವಳಗ..
  • ಆವರಣ, ಅನಂತಮೂರ್ತಿ ಮತ್ತು ಪ್ರತಾಪ ಸಿಂಹ
Syndicate content

ಲೇಖಕರು

Rajashekhar's picture

ಪರಿಚಯ

ನಾನು ಯಾರು ಎಂಬುದು ನನಗೆ ತಿಳಿದಿದ್ದರೆ ನಾನಿಲ್ಲಿ ಇರುತ್ತಿದ್ದನೇ?

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 142 ಅತಿಥಿಗಳು ಆನ್ಲೈನ್ ಇರುವರು.


ಕೇಡಿಗನ ಭಕ್ತಿ ನಿಜವೆಂದು ನಂಬದಿರು| ಮಠದೊಳಗಣ ಬೆಕ್ಕು ಸಾತ್ವಿಕ ಜೀವನ ನಡೆಸಿದರೂ ಇಲಿಯ ಕಂಡರೆ ಪುಟನೆಗೆದು ಓಡುತ್ತದೆ

— ದೇವರ ದಾಸಿಮಯ್ಯ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator