ಈಗಿನಂತೆ 5 ಸದಸ್ಯರು ಮತ್ತು 89 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕುವೆಂಪು ಹುಟ್ಟಿದ ಊರಿಗೆ, ಮೂವತ್ತು ವರ್ಷಗಳಾದ ಮೇಲೆ ಮತ್ತೆ ಹೋದಾಗ
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
23
Dec
2006
ಬ್ಲಾಗ್ ಬರಹ
...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,510
ಜೋಗ ನೋಡಿರಿ ಈಗ
rajeshnaik111's picture
14
Aug
2006
ಬ್ಲಾಗ್ ಬರಹ

ಮೊನ್ನೆ ಶನಿವಾರ ವಿಪರೀತ ಕೆಲಸವಿದ್ದುದರಿಂದ ರಾತ್ರಿ ಮನೆಗೆ ಬಂದಾಗ ಮಧ್ಯರಾತ್ರಿ ದಾಟಿತ್ತು. ನಿನ್ನೆ ಬೆಳಗ್ಗೆ ತಡವಾಗಿ ಎದ್ದು ಸುಮಾರು ೯.೩೦ಕ್ಕೆ ಉದಯವಾಣಿ ಓದಲು ಕುಳಿತರೆ,...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,482
'ಸಂಪದ'ದ ಆಯ್ದ ಪುಟಗಳು
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
30
Mar
2010
ಪುಟ

ಕಳೆದ ಕೆಲವು ದಿನಗಳಿಂದ ಹಲವರಿಗೆ 'ಸಂಪದ'ದಿಂದ 'ನಿಮ್ಮ ಬರಹವು ವಿಶೇಷ ಲೇಖನವಾಗಿ ಆಯ್ಕೆಯಾಗಿದೆ' ಎಂಬ ಇ-ಮೈಲ್ ಬರುತ್ತಿರಬಹುದು. ಸಂಪದದಲ್ಲಿ ಹೊಸ ಬದಲಾವಣೆಗಳನ್ನು ತರುತ್ತಿರುವ ಈ...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,202
ನೀತಿವಂತರು ದೇವರ ವಿವರಕ್ಕಾಗಿ ಕಾಯುವುದು ಮಿಸ್ ಕಾಲನ್ನು ನಿರೀಕ್ಷಿಸಿದಂತೆ:ಗಾದೆಗೊಂದು ಗುದ್ದು ಭಾಗ ೬
anilkumar's picture
ಎಚ್.ಎ. ಅನಿಲ್ ಕುಮಾರ್
22
May
2010
ಪುಟ

(೨೭) ಕಾಯುವುದೆಂದರೆ ಇರುವುದರ ಬಗೆಗೊಂದು ಅಸಮಾಧಾನವೇ ಹೌದು. ಈ ತಪ್ಪನ್ನು ತಿದ್ದಿಕೊಂಡ ಕೂಡಲೆ ನಿರೀಕ್ಷೆ ಮುಗಿದುಹೋಗುತ್ತದೆ.

(೨೮) ನೀತಿವಂತರಾಗಬೇಕೆಂದು ತೀರ್ಮಾನಿಸಿದ...

ಪ್ರತಿಕ್ರಿಯೆಗಳು: 2
ಹಿಟ್ಸ್ : 868
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
ismail's picture
ismail
03
Mar
2006
ಬ್ಲಾಗ್ ಬರಹ
ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು ಈ ಗಾದೆ ಕನ್ನಡಿಗರಿಗೆಲ್ಲಾ ಪರಿಚಿತ. ರೈತರಂತೂ ಇದನ್ನು ಅಕ್ಷರಾರ್ಥದಲ್ಲೇ ಕಲ್ಪಿಸಿಕೊಂಡು ಸ್ವಾರಸ್ಯವನ್ನು ಗ್ರಹಿಸಿಯಾರು. ಒಂದು...
ಪ್ರತಿಕ್ರಿಯೆಗಳು: 1
ಹಿಟ್ಸ್ : 3,373
ಪಾಚಿ ಕಟ್ಟಿದ ಪಾಗಾರ : ಒಂದು ಅನಿಸಿಕೆ
Narayana's picture
Narayana
02
Mar
2011
ಬ್ಲಾಗ್ ಬರಹ

 

ಪಾಚಿ ಕಟ್ಟಿದ ಪಾಗಾರ: ...
ಪ್ರತಿಕ್ರಿಯೆಗಳು: 6
ಹಿಟ್ಸ್ : 652
ಚಿಂದೋಡಿ ಲೀಲಾ : ದಶಕಗಳ ಹಿಂದಿನ ಒಂದು ನೆನಪು
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
23
Jan
2010
ಪುಟ

  ಐದು ದಶಕಗಳಿಗೂ ಹಿಂದಿನ ಹಿಂದಿನ ಮಾತು. ನಾನಾಗ ಶಾಲಾ ಬಾಲಕ. ನನ್ನ ತಂದೆ ಭುಜಂಗರಾಯರು ದಾವಣಗೆರೆಯ ಚೌಕಿಪೇಟೆಯಲ್ಲಿ ಫೋಟೊ ಸ್ಟುಡಿಯೋ ನಡೆಸುತ್ತಿದ್ದರು. ’ಫೈನ್ ಆರ್ಟ್...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,011
ಮೊಬೈಲೇ ಪ್ರವೇಶ ಪತ್ರ!
ASHOKKUMAR's picture
03
Dec
2006
ಪುಟ
ಮೊಬೈಲೇ ಪ್ರವೇಶ ಪತ್ರ! ಮೊಬೈಲ್‌ನ ಬಳಕೆಯನ್ನು ದೂರವಾಣಿ ಕರೆಗೇ ಸೀಮಿತಗೊಳಿಸದೆ, ಅದರ ಉಪಯುಕ್ತತೆಯನ್ನು ವಿಸ್ತರಿಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮೊಬೈಲ್ ಸೇವೆ ಒದಗಿಸುವ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,639
'ಕೃಷಿ ಸಂಪದ' ಐದನೇ ಸಂಚಿಕೆ: ಫೆಬ್ರವರಿ ೨೦೧೦
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
08
Feb
2010
ಪುಟ

ಈ ಸಂಚಿಕೆಯಲ್ಲಿ:

...

ಪ್ರತಿಕ್ರಿಯೆಗಳು: 0
ಹಿಟ್ಸ್ : 894
'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
10
Jul
2006
ಬ್ಲಾಗ್ ಬರಹ
ಪುಣ್ಯಕೋಟಿ ಗೋವಿನ ಕಥೆ ನಮಗೆಲ್ಲ ಮಕ್ಕಳ ಕಥೆಯಾಗಿ ಗೊತ್ತು. ನಮ್ಮೆಲ್ಲರ ಮೆಚ್ಚಿನದೂ ಆಗಿದೆ. ಆದರೆ ಅದಕೆ ಹೆಚ್ಚಿನ ಅರ್ಥಗಳು ಇವೆಯೇ ? ಶ್ರೀ ಪಿ. ಲಂಕೇಶರು ತಮ್ಮ ಗದ್ಯ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,381

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

rajeshnaik111 ರವರ ಬ್ಲಾಗ್

ರಾಹುಲ್ ದ್ರಾವಿಡ್ - ಶ್ರೇಷ್ಠತೆಯ ಪ್ರತೀಕ (೧)

 

ರಾಹುಲ್ ದ್ರಾವಿಡ್. ಹೆಸರು ಕೇಳಿದ ಕೂಡಲೇ ಮನಸಿಗೆ ಬರುವ ಚಿತ್ರಣವೇನು? ಶಿಸ್ತು, ಸಂಯಮ, ತಾಳ್ಮೆ, ಏಕಾಗ್ರತೆ, ಬುದ್ಧಿವಂತಿಕೆ, ಇತ್ಯಾದಿ. ಶ್ರೇಷ್ಠತೆಯ ಪರಾಕಾಷ್ಠೆಯನ್ನು ತಲುಪಿಯೂ ಇನ್ನೂ ಮುಂದಕ್ಕೆ ಹೋಗಬೇಕು ಎಂದು ಸದಾ ಹಂಬಲಿಸುತ್ತಿರುವ, ತಾನಿನ್ನೂ ಕ್ರೀಡೆಯ ವಿದ್ಯಾರ್ಥಿ ಎಂದು ತನ್ನನ್ನು ತಾನು ಪರಿಗಣಿಸುವ ಅಪರೂಪದ ಕ್ರೀಡಾಳು. ಯಾವುದರಲ್ಲಿ ನಾವು ಪರಿಪಕ್ವವಾಗಿಲ್ಲವೋ ಅದನ್ನು ಪ್ರಯತ್ನಿಸಲೂಬಾರದು ಎಂಬ ಧೋರಣೆಯೊಂದಿಗೆ ತನ್ನ ಕ್ರೀಡಾ ಜೀವನದ ಅತ್ಯುನ್ನತ ಮಟ್ಟ ತಲುಪಿರುವ ವ್ಯಕ್ತಿ ದ್ರಾವಿಡ್.

ದ್ರಾವಿಡ್ ಯಶಸ್ಸಿಗೆ ಮುಖ್ಯ ಕಾರಣ ಅವರು ಜೀವನದಲ್ಲಿ ಅಳವಡಿಸಿಕೊಂಡಿರುವ ಶಿಸ್ತು. ಏನೇ ಮಾಡಲಿ ಅದರಲ್ಲೊಂದು ಶಿಸ್ತು ಇದ್ದೇ ಇದೆ. ಒಂದು ನಿಯಮ ಇದ್ದೇ ಇದೆ. ಆ ಶಿಸ್ತು ಮತ್ತು ನಿಯಮ ದಾಟಿ ಒಂದು ಹೆಜ್ಜೆ ಆಚೀಚೆ ದ್ರಾವಿಡ್ ಇಡುವುದೇ ಇಲ್ಲ. ಆ ಕೆಲಸ ಬ್ಯಾಟಿಂಗ್ ಮಾಡುವುದಿರಲಿ, ಪಂದ್ಯದ ಮುಂಚಿನ ತಯಾರಿ ಇರಲಿ, ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವುದಿರಲಿ, ವೈಯುಕ್ತಿಕ ಸಂದರ್ಶನ ಕೊಡುವುದಿರಲಿ, ಹೀಗೆ ಎಲ್ಲೆಲ್ಲೂ ಆ ಶಿಸ್ತು ಮತ್ತು ತನಗೆ ತಾನೇ ವಿಧಿಸಿದ ನಿಯಮದ ಪ್ರಕಾರ ದ್ರಾವಿಡ್ ನಡೆದುಕೊಳ್ಳುತ್ತಾರೆ. ಕೆಲವೊಂದು ಪ್ರಶ್ನೆಗಳಿಗೆ ತಾನು ಉತ್ತರ ನೀಡಲೇಬಾರದು ಎಂದು ದ್ರಾವಿಡ್ ಮುಂಚಿತವಾಗಿಯೇ ನಿರ್ಧರಿಸಿರುತ್ತಾರೆ. ಆಗ, ಜಪ್ಪಯ್ಯ ಎಂದರೂ ವರದಿಗಾರರಿಗೆ ದ್ರಾವಿಡ್-ನಿಂದ ಆ ಪ್ರಶ್ನೆಗಳಿಗೆ ಎಷ್ಟೇ ತಿರುಚಿ ಕೇಳಿದರೂ ಉತ್ತರ ಸಿಗುವುದಿಲ್ಲ. ಗಾಸಿಪ್ ಮಾಡಲು ಯಾವುದೆ ’ಸೌಂಡ್ ಬೈಟ್’ ದ್ರಾವಿಡ್ ನಿಂದ ಹೊರಬರುವುದಿಲ್ಲ. ಅವರದ್ದೇನಿದ್ದರೂ ನೇರ ಸರಳ ಸುಲಭ ಮಾತು. ಆಡುವ ಪ್ರತಿ ಮಾತಿನ ಹಿಂದೆ ಟನ್ನುಗಟ್ಟಲೆ ಬುದ್ಧಿವಂತಿಕೆಯಿರುತ್ತದೆ. ಆದ್ದರಿಂದಲೇ ದ್ರಾವಿಡ್ ರಾಷ್ಟ್ರೀಯ ತಂಡಕ್ಕೆ ಆಡಲು ಒಂದುವರೆ ದಶಕಗಳಾದರೂ ಇದುವರೆಗೆ ಒಂದೇ ಒಂದು ವಿವಾದವಾಗಲಿ, ತಪ್ಪು ಹೇಳಿಕೆಯಾಗಲಿ ಅವರ ಸುತ್ತ ಸುಳಿದಿಲ್ಲ.  ಮುಂದೆ ಓದಿ »

1239 ಹಿಟ್ಸ್

ಕೊನೆಯಲ್ಲಿ ಎಡವಿದ ಕರ್ನಾಟಕ - ೨

ಈ ಋತುವಿನ (೨೦೦೯-೧೦) ಆರಂಭದಲ್ಲಿ ಕರ್ನಾಟಕ ರಣಜಿ ತಂಡದ ಆಯ್ಕೆಗಾರರು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡರು. ಯಾವುದೇ ಶಿಫಾರಸುಗಳಿಗೆ ಕಿವಿಗೊಡದಿರುವುದು (ಆದರೂ ಅಖಿಲ್ ಬದಲು ಸ್ಟುವರ್ಟ್ ಬಿನ್ನಿ ಮತ್ತು ಉದಿತ್ ಪಟೇಲ್ ಆಯ್ಕೆಗೊಂಡದ್ದು ಆಶ್ಚರ್ಯ), ತಳವಾಗಿ ಬೇರೂರಿದ ಕೆಲವು ಆಟಗಾರರನ್ನು ಕೈಬಿಡುವುದು, ಯುವಕರಿಗೆ ಮನ್ನಣೆ ನೀಡುವುದು, ಹೊಸ ಕೋಚ್ ಮತ್ತು ಸಹಾಯಕ ಕೋಚ್ ನೇಮಿಸುವುದು ಮತ್ತು ರಾಜ್ಯ ತಂಡದ ಚುಕ್ಕಾಣಿಯನ್ನು ರಾಹುಲ್ ದ್ರಾವಿಡ್-ಗೆ ನೀಡುವುದು.

ಅಶೋಕಾನಂದ್, ಸಯ್ಯದ್ ಕಿರ್ಮಾನಿ, ರಘುರಾಮ್ ಭಟ್ ಮತ್ತು ರಂಗರಾವ್ ಅನಂತ್ ಇವರೇ ನಾಲ್ಕು ಆಯ್ಕೆಗಾರರು. ನಾಲ್ವರೂ ಕರ್ನಾಟಕಕ್ಕೆ ಆಡಿ ಅನುಭವವುಳ್ಳವರು. ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯ ತಂಡದಲ್ಲಿ ಹೆಚ್ಚೇನು ಬದಲಾವಣೆಯಿರಲಿಲ್ಲ. ಒಂದೆರಡು ಆಟಗಾರರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಮೊದಲಿದ್ದವರೇ. ಹೀಗಾಗಿ ಕರ್ನಾಟಕ ಆರಕ್ಕೇರದೆ ಮೂರಕ್ಕಿಳಿಯದೇ ಅಲ್ಲೇ ನಡುವಿನಲ್ಲಿ ತೂಗುಯ್ಯಾಲೆ ಆಡುತ್ತಾ ಉಳಿದುಬಿಟ್ಟಿತು. ಇದನ್ನು ಬದಲಾಯಿಸಲು ಸ್ವಲ್ಪ ಹೆಚ್ಚೇ ರಿಸ್ಕ್ ತಗೊಂಡ ಆಯ್ಕೆಗಾರರು ಕೆಲವರನ್ನು ಕೈಬಿಟ್ಟು ಯುವಕರಿಂದಲೇ ತಂಡವನ್ನು ತುಂಬಿಬಿಟ್ಟರು. ಇದೊಂದು ಮಾಸ್ಟರ್ ಸ್ಟ್ರೋಕ್ ನಿರ್ಣಯವಾಗುತ್ತೆಂದು ಯಾರಿಗೂ ಅರಿವಿರಲಿಲ್ಲ. ಆದರೆ ಆಯ್ಕೆಗಾರರು ರಿಸ್ಕ್ ತಗೊಂಡದ್ದನ್ನು ಮೆಚ್ಚಬೇಕು. ಏನಾದರೂ ಅದ್ಭುತ ಘಟಿಸಬೆಕಾದರೆ ಅಷ್ಟೇ ಮಹತ್ವದ ನಿರ್ಣಯ ಆ ಅದ್ಭುತದ ಹಿಂದೆ ಇರುತ್ತೆ. ಕರ್ನಾಟಕ ಫೈನಲ್ ತನಕ ಧಾವಿಸಿ ಬಂದುದರ ಹಿಂದೆ ಇರುವ ಪ್ರಮುಖ ಕಾರಣವೂ ಇದೇ - ಯುವಕರಿಗೆ ಮನ್ನಣೆ.  ಮುಂದೆ ಓದಿ »

1047 ಹಿಟ್ಸ್

Syndicate content