ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › rajeshnaik111 ರವರ ಬ್ಲಾಗ್

ಕರ್ನಾಟಕ ಕ್ರಿಕೆಟ್ - ೨

January 9, 2007 - 3:31am — rajeshnaik111

ಜಗದೀಶ್ ಅರುಣ್ ಕುಮಾರ್ - ಜೆ ಎ ಕೆ - 'ಜ್ಯಾಕ್' ಎಂದೇ ಕರೆಯಲ್ಪಡುವ ಸಾಹಸಿ ಆರಂಭಿಕ ಆಟಗಾರ ಅರುಣ್ ಕುಮಾರ್. ೧೯೯೩-೯೪ನೇ ಋತುವಿನಲ್ಲಿ ಕೇವಲ ೧೭ ನೇ ವಯಸ್ಸಿನಲ್ಲೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಆಂಧ್ರದ ವಿರುದ್ಧ ತನ್ನ ಪ್ರಥಮ ಪಂದ್ಯದಲ್ಲಿ ೮೪ ಓಟ ಗಳಿಸಿದರು. ನಂತರ ಗೋವಾ ವಿರುದ್ಧ ೧೪೧; ಹೈದರಾಬಾದ್ ವಿರುದ್ಧ ೨೦;೨, ತಮಿಳುನಾಡು ವಿರುದ್ಧ ೬;೬೮, ಪ್ರಿ.ಕ್ವಾ.ಫೈನಲ್ ನಲ್ಲಿ ಅಸ್ಸಾಂ ವಿರುದ್ಧ ೭೫ ಮತ್ತು ಕ್ವಾ.ಫೈನಲ್ ನಲ್ಲಿ ಮುಂಬೈ ವಿರುದ್ಧ ೬೫;೧೦೫. ಪ್ರಥಮ ಋತುವಿನಲ್ಲೇ, ಅರುಣ್ ೬೨.೮೯ ಸರಾಸರಿಯಲ್ಲಿ ೫೬೬ ಓಟಗಳನ್ನು ಗಳಿಸಿ ಮುಂದಿನ ೧೧ ವರ್ಷಗಳವರೆಗೆ ಆರಂಭಿಕನ ಸ್ಥಾನವನ್ನು ತನ್ನದಾಗಿಸಿಕೊಂಡರು.

ಅರುಣ್ ಕುಮಾರ್ ಗೆ ಹಾವುಗಳೆಂದರೆ ತುಂಬಾನೇ ಪ್ರೀತಿ. ಅವರೊಂದಿಗೆ ಹೊಟೇಲ್ ರೂಮ್ ಶೇರ್ ಮಾಡಿಕೊಳ್ಳಲು ಉಳಿದ ಆಟಗಾರರು ಹಿಂಜರಿಯುತ್ತಿದ್ದರು. ಚೇಷ್ಟೆ ಮಾಡುವುದರಲ್ಲಿ ಬಹಳ ಮುಂದಿದ್ದ ಅರುಣ್ ಹಾವುಗಳ ಮೂಲಕ ಸಹ ಆಟಗಾರರನ್ನು ಬಹಳ ಕಾಡಿದ್ದಾರೆ.

ಜ್ಯಾಕ್ ಮುಂದಿನ ವರ್ಷಗಳಲ್ಲಿ ತನ್ನ ಬ್ಯಾಟಿಂಗ್ ನಿಂದ ಕರ್ನಾಟಕಕ್ಕೆ ಹಲವಾರು ಬಾರಿ ಉತ್ತಮ ಆರಂಭವನ್ನು ನೀಡಿದ್ದರು. ಹಲವಾರು ಬಾರಿ ಭಾರತ ತಂಡದ ಸಂಭವನೀಯ ಆಟಗಾರರ ಪಟ್ಟಿಯಲ್ಲಿ ಜ್ಯಾಕ್ ಹೆಸರಿರುತ್ತಿತ್ತು. ನಿರಾಸೆಯ ಸಂಗತಿಯೆಂದರೆ ಜ್ಯಾಕ್ ೬೦-೭೦ ಓಟಗಳನ್ನು ಗಳಿಸಿದ ಬಳಿಕ ಸಂಯಮವನ್ನು ಕಳೆದು ಕೆಟ್ಟ ಹೊಡೆತಗಳಿಗೆ ತನ್ನ ವಿಕೆಟ್ ಒಪ್ಪಿಸುವುದನ್ನು ರೂಢಿಮಾಡಿಕೊಂಡಿದ್ದರು. ತನ್ನ ಕ್ರಿಕೆಟ್-ನ ಈ ನ್ಯೂನತೆಯನ್ನು ಜ್ಯಾಕ್ ಸರಿಪಡಿಸಿಕೊಂಡಿದ್ದರೆ ಭಾರತ ತಂಡದಲ್ಲಿ ಮತ್ತೊಬ್ಬ ಕನ್ನಡಿಗನ ಹೆಸರನ್ನು ನಾವೆಲ್ಲರೂ ಕಾಣಬಹುದಿತ್ತು.

೨೦೦೪-೦೫ ರ ರಣಜಿ ಋತುವಿನಲ್ಲಿ ಅರುಣ್ ಕುಮಾರ್-ಗೆ ಶನಿದೆಸೆ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣಬಂದಿದ್ದವು. ಒಂದು ಕಡೆಯಿಂದ ರಾಬಿನ್ ಉತ್ತಪ್ಪ, ಶ್ಯಾಮ್ ಪೊನ್ನಪ್ಪ ಮತ್ತು ಭರತ್ ಚಿಪ್ಲಿ ಇತ್ಯಾದಿ ಯುವ ಆಟಗಾರರಿಗೆ ಅವಕಾಶ ನೀಡುವ ಆಯ್ಕೆಗಾರರ ತವಕ ಮತ್ತೊಂದು ಕಡೆಯಿಂದ ಬ್ಯಾಟಿಂಗ್ ಬಾರದ, ಬೌಲಿಂಗ್ ಬಾರದ, ಕ್ಷೇತ್ರರಕ್ಷಣೆ ಬಾರದ ಮತ್ತು ಕನ್ನಡ ಮೊದಲೇ ಬಾರದ ಸ್ಟುವರ್ಟ್ ಬಿನ್ನಿಯಂತಹವರನ್ನು 'ಆಡಿಸಲೇಬೇಕಾದ' ಅನಿವಾರ್ಯತೆ. ಈ ಋತುವಿನ ಮೊದಲೆರಡು ಪಂದ್ಯಗಳಲ್ಲಿ ಅರುಣ್ ೨೫;೧೩ ಮತ್ತು ೨೯;೬ ಓಟಗಳನ್ನು ಗಳಿಸಿ ವಿಫಲರಾದರು. ಇದೇ ಕಾರಣವನ್ನು ಮುಂದಿಟ್ಟು ನಂತರದ ೫ ಪಂದ್ಯಗಳಲ್ಲಿ ಅವರನ್ನು ಹೊರಗಿಡಲಾಯಿತು. ಆದರೆ ಈ ೫ ಪಂದ್ಯಗಳನ್ನಾಡಿದ ರಾಬಿನ್ ಮತ್ತು ಶ್ಯಾಮ್ ಅವರಿಬ್ಬರ ಒಟ್ಟಾರೆ ಪ್ರದರ್ಶನ ಸಾಧಾರಣವಾಗಿತ್ತು ಅಷ್ಟೆ.

ಆಯ್ಕೆಗಾರರು ನೀಡಿದ ಸುಳಿವುಗಳನ್ನು ಅರ್ಥೈಸಿಕೊಂಡ ಅರುಣ್, ಮುಂದಿನ ಋತುವಿನ ರಣಜಿ ತಂಡಕ್ಕೆ ತನ್ನನ್ನು ಪರಿಗಣಿಸಲಾರರು ಎಂಬುದನ್ನು ಮನಗಂಡು, ಹೊರ ರಾಜ್ಯದ ಅನುಭವಿ ಆಟಗಾರರಿಗಾಗಿ ಹುಡುಕಾಡುತ್ತಿದ್ದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ನ್ನು ಸಂಪರ್ಕಿಸಿದರು. ಅರುಣ್ ಕುಮಾರ್ ರಂತಹ ಆಟಗಾರ ಸಿಕ್ಕಿದ್ದು ಅಸ್ಸಾಮ್ ಕ್ರಿಕೆಟ್ ನ ಭಾಗ್ಯ. ಅವರನ್ನು ಕಳೆದುಕೊಂಡು ಸ್ಟುವರ್ಟ್ ಬಿನ್ನಿಯಂತವರ ಆಟ ನೋಡುತ್ತಿರುವುದು ನಮ್ಮ ದೌರ್ಭಾಗ್ಯ.

ಹೀಗೆ ೨೦೦೫-೦೬ ನೇ ಋತುವಿನಲ್ಲಿ ನಮ್ಮ ಅರುಣ್ ಕುಮಾರ್, ಆಸ್ಸಾಮ್ ಪರವಾಗಿ ಆಡಿ ೪ ಪಂದ್ಯಗಳಲ್ಲಿ ೨ ಶತಕಗಳ ಸಹಿತ ೫೭.೬೬ ಸರಾಸರಿಯಲ್ಲಿ ೩೪೬ ಓಟಗಳನ್ನು ಗಳಿಸಿದರು. ಅರುಣ್ ಕುಮಾರ್ ರಿಂದ ಬಹಳ ಆಕರ್ಷಿತವಾದ ಅಸ್ಸಾಮ್ ಕ್ರಿಕೆಟ್ ಬೋರ್ಡ್ ಈ ಪ್ರಸಕ್ತ ಋತುವಿನಲ್ಲಿ (೨೦೦೬-೦೭) ಅವರಿಗೆ ದೊಡ್ಡ ಜವಾಬ್ದಾರಿಯೊಂದನ್ನು ನೀಡಿತು. ಅದೇನೆಂದರೆ ಅಸ್ಸಾಮ್ ತಂಡದ ನಾಯಕತ್ವ! ಇದರೊಂದಿಗೆ ಬಂದ ಇನ್ನೂ ದೊಡ್ಡ ಜವಾಬ್ದಾರಿಯೆಂದರೆ ಅಸ್ಸಾಮ್ ತಂಡವನ್ನು ಪ್ಲೇಟ್ ಲೀಗ್ ನ ಫೈನಲ್ ತಲುಪುವಂತೆ ಮಾಡಿ ಮುಂದಿನ ಋತುವಿನಲ್ಲಿ ಎಲೀಟ್ ಲೀಗ್ ನಲ್ಲಿ ಆಡಲು ಅರ್ಹತೆ ಗಳಿಸುವುದು.

ಅರುಣ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಅಸ್ಸಾಮ್ ಈಗ ಪ್ಲೇಟ್ ಲೀಗ್ ನ ಸೆಮಿ ಫೈನಲ್ ತಲುಪಿದೆ. ಭರ್ಜರಿ ಆಟ ಪ್ರದರ್ಶಿಸಿರುವ ಅರುಣ್, ೫ ಪಂದ್ಯಗಳಲ್ಲಿ ೨ ಶತಕಗಳೊಂದಿಗೆ ೯೦.೩೩ ಸರಾಸರಿಯಲ್ಲಿ ೫೪೨ ಓಟ ಗಳಿಸಿದ್ದಾರೆ. 'ಕರ್ನಾಟಕಾಸ್ ಲಾಸ್ ಇಸ್ ಅಸ್ಸಾಮ್-ಸ್ ಗೈನ್'. ರಣಜಿಗೆ ಪಾದಾರ್ಪಣ ಮಾಡಿದ ಋತುವಿನಲ್ಲೇ ಆಸ್ಸಾಮ್ ವಿರುದ್ಧ ೭೫ ಓಟ ಗಳಿಸಿದ್ದ ಅರುಣ್ ಗೆ, ೧೩ ವರ್ಷಗಳ ಬಳಿಕ ತಾನು ಇದೇ ತಂಡದ ನಾಯಕನಾಗಿ ಆಡಲಿದ್ದೇನೆ ಎಂಬುದೆಲ್ಲಿ ಗೊತ್ತಿತ್ತು? ಲೈಫ್ ಇಸ್ ಒನ್ ಫುಲ್ ಸರ್ಕಲ್.

ನಾಳೆ ಜನವರಿ ೧೦ ರಂದು ಕಟಕ್ ನಲ್ಲಿ ಆರಂಭವಾಗುವ ಪ್ಲೇಟ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ಅಸ್ಸಾಮ್, ಒರಿಸ್ಸಾ ತಂಡವನ್ನು ಎದುರಿಸಲಿದೆ. ಅಸ್ಸಾಮ್ ತಂಡವನ್ನು ಫೈನಲ್ ತಲುಪಿಸುವಲ್ಲಿ ಯಶಸ್ವಿಯಾಗಲೆಂದು ನಮ್ಮ ಕನ್ನಡದ ಹುಡುಗ ಜ್ಯಾಕ್ ಗೆ ಶುಭ ಹಾರೈಕೆಗಳು. ಅಸ್ಸಾಮ್ ಪರವಾಗಿ ಕರ್ನಾಟಕದ ಮತ್ತೊಬ್ಬ ಕ್ರಿಕೆಟಿಗ ಸ್ಪಿನ್ನರ್ ಆನಂದ್ ಕಟ್ಟಿ ಕೂಡಾ ಆಡುತ್ತಿದ್ದು, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಕನ್ನಡದ ಈ ಹುಡುಗನಿಗೂ ನಾಳಿನ ಪಂದ್ಯಕ್ಕೆ ಶುಭಹಾರೈಕೆಗಳು.

~.~
  • rajeshnaik111 ರವರ ಬ್ಲಾಗ್
  • Login or register to post comments
  • 1044 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 9, 2007 - 4:10am — Shyam Kishore

ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ)

Shyam Kishore's picture

ರಾಜೇಶ್ ನಾಯ್ಕರೇ,

ಒಳ್ಳೆಯ ಮಾಹಿತಿಗಾಗಿ ಧನ್ಯವಾದಗಳು. ರಣಜಿಯನ್ನು ನಾನು ಅಷ್ಟಾಗಿ ಅನುಸರಿಸುವುದಿಲ್ಲ. ಹಾಗಾಗಿ ನೀವು ಬರೆದಿರುವ ಆಟಗಾರರಲ್ಲಿ ಅನೇಕರ ಹೆಸರುಗಳನ್ನೂ ನಾನು ಕೇಳಿಯೇ ಇರಲಿಲ್ಲ! ಕೆಲವೊಂದು ಮಾಹಿತಿಗಳು ಚೆನ್ನಾಗಿವೆ (ಉದಾ:ಅರುಣ್‌ಕುಮಾರ್ ಬಗ್ಗೆ).

ಪ್ರದೇಶ ಸಮಾಚಾರ ಅಂದ ತಕ್ಷಣ ನೆನಪಾಯಿತು. ನಾನೂ ಆಕಾಶವಾಣಿ ಭದ್ರಾವತಿಯ ಪ್ರದೇಶ ಸಮಾಚಾರವನ್ನು ಬಿಡದೆ ಕೇಳುತ್ತಿದ್ದೆ. ಈಗಲೂ ನಿನ್ನೆ ಮೊನ್ನೆಯದೇನೋ ಅನ್ನುವಂತೆ ನೆನಪಿದೆ: "ಪ್ರದೇಶ ಸಮಾಚಾರ, ಓದುತ್ತಿರುವವರು ಸದಾನಂದ ಹೆಗಡೆ...." Smile

- ಶ್ಯಾಮ್ ಕಿಶೋರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2007 - 3:10pm — rajeshnaik111

Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ)

rajeshnaik111's picture

ಶ್ಯಾಮ್ ಕಿಶೋರ್ ರವರೆ,

ನೀವು ಭದ್ರಾವತಿ ಅಂದ ಕೂಡಲೇ ನೆನಪಾಯಿತು. ಭದ್ರಾವತಿ ಆಕಾಶವಾಣಿ ಕೇಂದ್ರ ಕೂಡಾ ಕರ್ನಾಟಕದಲ್ಲಿ ನಡೆಯುತ್ತಿದ್ದ ಎಲ್ಲಾ ರಣಜಿ ಪಂದ್ಯಗಳ ವೀಕ್ಷಕ ವಿವರಣೆಯನ್ನು ಪ್ರಸಾರ ಮಾಡುತ್ತಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2007 - 5:46pm — srivathsajoshi

Re: ಅನಿಸಿಕೆ: ಕರ್ನಾಟಕ ಕ್ರಿಕೆಟ್ - ೨ (ಮತ್ತು ಭಾಗ ೧ ರ ಬಗ್ಗೆ ಕೂಡಾ)

srivathsajoshi's picture

Shyam Kishore wrote:
ಪ್ರದೇಶ ಸಮಾಚಾರ ಅಂದ ತಕ್ಷಣ ನೆನಪಾಯಿತು. ನಾನೂ ಆಕಾಶವಾಣಿ ಭದ್ರಾವತಿಯ ಪ್ರದೇಶ ಸಮಾಚಾರವನ್ನು ಬಿಡದೆ ಕೇಳುತ್ತಿದ್ದೆ. ಈಗಲೂ ನಿನ್ನೆ ಮೊನ್ನೆಯದೇನೋ ಅನ್ನುವಂತೆ ನೆನಪಿದೆ: "ಪ್ರದೇಶ ಸಮಾಚಾರ, ಓದುತ್ತಿರುವವರು ಸದಾನಂದ ಹೆಗಡೆ...."

ರೇಡಿಯೊದಲ್ಲಿ ವಾರ್ತೆ/ಪ್ರದೇಶಸಮಾಚಾರಗಳನ್ನೋದುತ್ತಿರುವವರ ಬಗೆಗಿನ ನೆನಪುಗಳು ಮಧುರ. ಈಬಗ್ಗೆ ನಾನು ಒಂದು ವಿಚಿತ್ರಾನ್ನ ಸಂಚಿಕೆಯಲ್ಲಿ ಬರೆದಿದ್ದೆ. ಆಸಕ್ತಿಯಿರುವವರು ಇಲ್ಲಿ ನೋಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 9, 2007 - 10:51am — Sunil Jayaprakash

ಜೆ.ಅರುಣ್ ಕುಮಾರ್

Sunil Jayaprakash's picture

ರೊಲಾಂಡ್ ಬ್ಯಾರಿಂಗ್ಟನ್ ಸೇರಿದ ಮೇಲೆ, ಇವರಿಬ್ಬರು ಇನ್ನಿಂಗ್ಸ್ ಆರಂಭಿಸಲು ಬರುತ್ತಿದ್ದರಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 9, 2007 - 2:41pm — rajeshnaik111

Re: ಜೆ.ಅರುಣ್ ಕುಮಾರ್

rajeshnaik111's picture

ಹೌದು, ಬ್ಯಾರಿಂಗ್ಟನ್ ಮತ್ತು ಅರುಣ್ ೧೯೯೯-೨೦೦೦ ಋತುವಿನಲ್ಲಿ ಒಂದೆರಡು ಪಂದ್ಯಗಳಲ್ಲಿ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆಗ ಅರುಣ್ ಜತೆಯಾಗಿ ಮಿಥುನ್ ಬೀರಾಲ ಇದ್ದರು. ಒಂದೆರಡು ಪಂದ್ಯಗಳ ಬಳಿಕ ಬ್ಯಾರಿಂಗ್ಟನ್ ೩ನೇ ಕ್ರಮಾಂಕದಲ್ಲಿ ಆಡುತ್ತಿದರು. ಆದರೆ ೨೦೦೨-೦೩ ಮತ್ತು ೨೦೦೩-೦೪ ಈ ಎರಡು ಋತುಗಳಲ್ಲಿ ಎಲ್ಲಾ ಪಂದ್ಯಗಳಲ್ಲಿ ಅರುಣ್ ಮತ್ತು ಬ್ಯಾರಿಂಗ್ಟನ್ ಇನ್ನಿಂಗ್ಸ್ ಆರಭಿಸಿದ್ದರು. ಅರುಣ್ ಕರ್ನಾಟಕದ ಪರವಾಗಿ ಆಡಿದ ತನ್ನ ಕೊನೆಯ ೨ ಪಂದ್ಯಗಳಲ್ಲಿ ಕೂಡಾ (೨೦೦೪-೦೫) ಬ್ಯಾರಿಂಗ್ಟನ್ ಜತೆ ಇನ್ನಿಂಗ್ಸ್ ಆರಂಭಿಸಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 12, 2007 - 3:13pm — rajeshnaik111

Re: ಕರ್ನಾಟಕ ಕ್ರಿಕೆಟ್ - ೨

rajeshnaik111's picture

ರಣಜಿ ಏಕದಿನ ಟ್ರೋಫಿಯ ಪೂರ್ವ ವಲಯದ ಲೀಗ್ ಪಂದ್ಯಗಳಲ್ಲಿ ತನ್ನ ನಾಯಕ ಅರುಣ್ ಕುಮಾರ್ ರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದಿಂದ ಅಸ್ಸಾಮ್, ಒರಿಸ್ಸಾ ವಿರುದ್ಧ ಜಯ ದಾಖಲಿಸಿ, ರಣಜಿ ಟ್ರೋಫಿ ಪ್ಲೇಟ್ ಲೀಗ್ ಸೆಮಿ ಫೈನಲ್ ಪಂದ್ಯದಲ್ಲಿ ತನ್ನ ವಿರುದ್ಧ ಮೋಸದಲ್ಲಿ ಗೆಲುವು ಸಾಧಿಸಿದ ಒರಿಸ್ಸ ಮೇಲೆ ಸ್ವಲ್ಪ ಮಟ್ಟಿಗಾದರೂ ಸೇಡು ತೀರಿಸಿಕೊಂಡಿದೆ. ಗೆಲುವಿಗೆ ೨೫೪ ಓಟಗಳ ಬೆಂಬತ್ತಿ ಹೊರಟ ಅಸ್ಸಾಮ್, ೫ ಓಟಗಳಿಗೆ ೩ ಹುದ್ದರಿಗಳನ್ನು ಕಳಕೊಂಡು ಸಂಕಷ್ಟದಲ್ಲಿದ್ದಾಗ ಆಡಲು ಬಂದ ಅರುಣ್ ಕುಮಾರ್ ರ ಭರ್ಜರಿ ೧೫೪ ಓಟಗಳ ನೆರವಿನಿಂದ ೫ ಹುದ್ದರಿಗಳಿಂದ ವಿಜಯ ದಾಖಲಿಸಿದೆ. ಆನಂದ್ ಕಟ್ಟಿ ಯಾವುದೇ ಹುದ್ದರಿ ಗಳಿಸಲಿಲ್ಲವಾದರೂ ೧೦ ಓವರ್ ಗಳಲ್ಲಿ ಕೇವಲ ೪೧ ಓಟಗಳನ್ನು ನೀಡಿದರು. 

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 12, 2007 - 3:49pm — hpn

ರಣಜಿ ಸುದ್ದಿ

hpn's picture

ರಾಜೇಶ್ ರವರೆ,

ತಪ್ಪದೆ ರಣಜಿಯ ಬಗ್ಗೆ ಸುದ್ದಿ ನೀಡುತ್ತಿರುವ ನಿಮಗೆ ಧನ್ಯವಾದಗಳು. ಭಾರತದ ತಂಡ ಕಳಪೆಯಾಟ ಆಡುತ್ತಿರುವ ಸಮಯದಲ್ಲಿ ಕರ್ನಾಟಕ ತಂಡದ ಗೆಲುವು ಕೇಳಿ ಸಂತೋಷವಾಯಿತು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2007 - 10:19am — ASHOKKUMAR

Re: ರಣಜಿ ಸುದ್ದಿ

ASHOKKUMAR's picture

ನಾಡಿಗ್ >>ಕರ್ನಾಟಕ ತಂಡದ ಗೆಲುವು ಕೇಳಿ ಸಂತೋಷವಾಯಿತು..

ಕರ್ನಾಟಕ ರಣಜಿಯ ಉಪಾಂತ್ಯ ಪಂದ್ಯದಲ್ಲಿ ಬಂಗಾಳದ ವಿರುದ್ಧ ಸೋತಿತಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2007 - 6:06pm — hpn

ಉ: ರಣಜಿ ಸುದ್ದಿ

hpn's picture

ರಾಜೇಶರ ಕಾಮೆಂಟು ತಪ್ಪಾಗಿ ಓದಿಕೊಂಡೆ ಅನ್ಸತ್ತೆ Sticking out tongue

ಕ್ಷಮೆ.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 13, 2007 - 7:09pm — rajeshnaik111

Re: ಉ: ರಣಜಿ ಸುದ್ದಿ

rajeshnaik111's picture

ನಾಡಿಗ್,

ನೀವು ಓದಿದ್ದು ಸರಿಯಾಗೇ ಇದೆ. ರಣಜಿ ಟ್ರೋಫಿಯಲ್ಲಿ (೪ ದಿನಗಳ ಪಂದ್ಯ. ಫೈನಲ್ ಮತ್ತು ಸೆಮಿಫೈನಲ್  ೫ ದಿನದ್ದಾಗಿರುತ್ತವೆ) ಕರ್ನಾಟಕ ಸೆಮಿ ಫೈನಲ್ ನಲ್ಲಿ ಬಂಗಾಲ್ ವಿರುದ್ಧ ಸೋತಿದೆ. ಮತ್ತು ಮುಂಬೈ ರಣಜಿ ಟ್ರೋಫಿಯನ್ನು ಗೆದ್ದು ಕೂಡಾ ಆಗಿದೆ.

ಈಗ ನಡೆಯುತ್ತಿರುವುದು ಮತ್ತು ನಾನು ಮಾತಾಡುತ್ತಿರುವುದು ರಣಜಿ ಏಕದಿನ ಪಂದ್ಯಾಟಗಳ ಬಗ್ಗೆ. ರಣಜಿ ಏಕದಿನ ಟ್ರೋಫಿಗಾಗಿ ಫೆಬ್ರವರಿ ೧೦ರಿಂದ ರಾಷ್ಟ್ರದ ಎಲ್ಲಾ ೫ ವಲಯಗಳಲ್ಲಿ (ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಮತ್ತು ಮಧ್ಯ) ಲೀಗ್ ಪಂದ್ಯಗಳು ಆಯಾ ವಲಯದ ತಂಡಗಳ ನಡುವೆ ಪ್ರಾರಂಭವಾಗಿವೆ. ಪ್ರತಿ ವಲಯದ ಪ್ರಥಮ ೨ ತಂಡಗಳು ನಾಕ್ ಔಟ್ ಹಂತಕ್ಕೆ ತೇರ್ಗಡೆಗೊಳ್ಳುತ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
February 20, 2007 - 12:03am — rajeshnaik111

ಅರುಣ್ ನೇತೃತ್ವದಲ್ಲಿ ಅಸ್ಸಾಮ್ ನಾಕ್ ಔಟ್ ಹಂತಕ್ಕೆ

rajeshnaik111's picture

ತ್ರಿಪುರ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ೮ ಹುದ್ದರಿಗಳಿಂದ ಜಯಿಸಿ ಕನ್ನಡಿಗ ಅರುಣ್ ಕುಮಾರ್ ನೇತೃತ್ವದಲ್ಲಿ ಅಸ್ಸಾಮ್ ರಣಜಿ ಏಕದಿನ ಟ್ರೋಫಿಯಲ್ಲಿ ಪೂರ್ವ ವಲಯದ ಅಗ್ರಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದೆ. ಒರಿಸ್ಸ, ಝಾರ್ಖಂಡ್ ಮತ್ತು ತ್ರಿಪುರ ವಿರುದ್ಧದ ಪಂದ್ಯಗಳಲ್ಲಿ ಗೆಲುವು ಕಂಡರೆ ಬಂಗಾಲ ವಿರುದ್ಧದ ಪಂದ್ಯ ಮಳೆಯ ಕಾರಣ ರದ್ದುಗೊಳಿಸಲಾಗಿತ್ತು. ಬಂಗಾಲ ದ್ವಿತೀಯ ಸ್ಥಾನಿಯಾಗಿ ಪೂರ್ವ ವಲಯದಿಂದ ನಾಕ್ ಔಟ್ ಹಂತ ಪ್ರವೇಶಿಸಿದೆ. ಕನ್ನಡಿಗ ಅರುಣ್ ೪ ಪಂದ್ಯಗಳಲ್ಲಿ ಒಂದು ಶತಕದ ಬಾರಿಯೊಂದಿಗೆ ೧೨೮.೫ ಸರಾಸರಿಯಲ್ಲಿ ೨೫೭ ಓಟಗಳನ್ನು ಗಳಿಸಿದ್ದಾರೆ. ಕರ್ನಾಟಕವೂ ತನ್ನ ವಲಯದ ಅಗ್ರಸ್ಥಾನಿಯಾಗಿ ನಾಕ್ ಔಟ್ ಹಂತ ಪ್ರವೇಶಿಸಿದೆ. ಮಧ್ಯ ಮತ್ತು ಉತ್ತರ ವಲಯಗಳ ಪಂದ್ಯಗಳನ್ನು ಮಳೆಯ ಕಾರಣದಿಂದ ಒಂದು ವಾರ ಮುಂದೂಡಲಾದ ಕಾರಣ ಆ ಪಂದ್ಯಗಳು ಮುಗಿದ ಬಳಿಕ ನಾಕ್ ಔಟ್ ಹಂತದಲ್ಲಿ ಕರ್ನಾಟಕದ ಎದುರಾಳಿ ಯಾರೆಂದು ಸ್ಪಷ್ಟವಾಗುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕರ್ನಾಟಕ ಕ್ರಿಕೆಟ್ - ೫
  • ೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ
  • ಸೇಡು ತೀರಿಸಿದ ಕರ್ನಾಟಕ
  • ಕರ್ನಾಟಕ ಕ್ರಿಕೆಟ್ - ೮
  • ಕರ್ನಾಟಕ ಕ್ರಿಕೆಟ್ - ೭
Syndicate content

ಲೇಖಕರು

rajeshnaik111's picture

ಪರಿಚಯ

ಕನ್ನಡಿಗರೆಲ್ಲರಿಗೂ ನಮಸ್ಕಾರ. ನಾನು ರಾಜೇಶ್ ನಾಯ್ಕ. ಉಡುಪಿ ನಿವಾಸಿ. ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗ. ಕನ್ನಡ ನಾಡು ಸುತ್ತುವ ಹಂಬಲ. ಹವ್ಯಾಸಿ ಚಾರಣಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator