ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › rajeshnaik111 ರವರ ಬ್ಲಾಗ್

ಪ್ಯಾರಿಸ್ ಪ್ರಸಂಗ

August 9, 2007 - 11:40pm — rajeshnaik111

ನನ್ನ ಮೊದಲ ನೌಕರಿ ಚೆನ್ನೈನಲ್ಲಿ ಆಗಿತ್ತು. ಈ ಘಟನೆ ನಡೆದದ್ದು ನಾನು ಚೆನ್ನೈಗೆ ಕಾಲಿಟ್ಟ ಮೊದಲ ದಿನವೇ.  ಗೆಳೆಯ ವಿಕ್ರಮ್ ಪಾಟೀಲ ಅದಾಗಲೇ ಅಲ್ಲಿ ನೌಕರಿ ಮಾಡುತ್ತಿದ್ದು, 'ಬ್ಯಾಚೆಲರ್ಸ್ ಪ್ಯಾರಡೈಸ್' ಎಂದು ಕರೆಸಿಕೊಳ್ಳುತ್ತಿದ್ದ ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ. ಮಧ್ಯಾಹ್ನ ಸುಮಾರು ೨ ಗಂಟೆಗೆ ಚೆನ್ನೈ ತಲುಪಿದ ನನ್ನನ್ನು ಸ್ಟೇಷನ್-ನಿಂದ ರೂಮಿಗೆ ತಲುಪಿಸಿ ಮತ್ತೆ ಆಫೀಸಿಗೆ ತೆರಳಿ ಸಂಜೆ ಹಾಜರಾದ. ಬಂದವನೇ,'ಇಲ್ಲೇ ಹೋಗಿ ಬರುತ್ತೇನೆ. ನನ್ನ ಗೆಳೆಯನೊಬ್ಬ ಬರಲಿದ್ದಾನೆ. ಕಾಯಲು ಹೇಳು' ಎಂದು ತಿಳಿಸಿ ಎಲ್ಲೋ ಹೋದ.

ಬೆಂಗಳೂರಿನಲ್ಲಿ 'ಮಜೆಸ್ಟಿಕ್', ಮಂಗಳೂರಿನಲ್ಲಿ 'ಸ್ಟೇಟ್-ಬ್ಯಾಂಕ್' ಇದ್ದಂತೆ ಚೆನ್ನೈನ ನಗರ ಬಸ್ಸು ನಿಲ್ದಾಣಕ್ಕೆ 'ಪ್ಯಾರೀಸ್' ಎನ್ನುತ್ತಾರೆ ಎಂದು ನನಗೆ ಗೊತ್ತೇ ಇರಲಿಲ್ಲ.

ಸ್ವಲ್ಪ ಹೊತ್ತಿನಲ್ಲಿ ಆ ಗೆಳೆಯ ಆಗಮಿಸಿದ. ವಿಕ್ರಮ್ ಈಗ ಬರಲಿದ್ದಾನೆ, ಸ್ವಲ್ಪ ಹೊತ್ತು ಕಾಯುವಿರಂತೆ ಎಂದು ಕೂತುಕೊಳ್ಳಲು ಹೇಳಿದೆ. 'ನೋ ಪ್ರಾಬ್ಲೆಮ್, ಐ ವಿಲ್ ವೈಟ್. ಬೈ ದ ವೇ ಐ ಯಾಮ್ ಪುರುಷೋತ್ತಮ್, ಯು ಕ್ಯಾನ್ ಕಾಲ್ ಮಿ ಪುರುಷ್' ಎಂದು ನನ್ನನ್ನು ದಂಗುಬಡಿಸಿದ! ಕಡೆಗೆ ನಾನು ಕನ್ನಡಿಗನೆಂದು ತಿಳಿದ ಬಳಿಕ ಕನ್ನಡದಲ್ಲಿ ಮಾತನಾಡಲು ಶುರುಮಾಡಿದ.

ನಾನು: ನೀವು ವಿಕ್ಕಿಗೆ ಹೇಗೆ ಪರಿಚಯ

ಪುರುಷ್: ಒಟ್ಟಿಗೆ ಧಾರವಾಡದಲ್ಲಿ ಓದಿದ್ವಿ.

ನಾನು: ಓ. ಈಗ ಏನು ಮಾಡ್ತಾ ಇದ್ದೀರಾ?

ಪುರುಷ್: ಸಿ.ಎ ಮಾಡ್ತಾ ಇದ್ದೀನಿ.

ನಾನು: ಎಲ್ಲಿ?

ಪುರುಷ್: ಪ್ಯಾರೀಸ್-ನಲ್ಲಿ

ನಾನು: ಓ. ಪ್ಯಾರಿಸ್! (ನಾನು ಯೋಚನೆ ಮಾಡ್ತಾ ಇದ್ದಿದ್ದು ಫ್ರಾನ್ಸ್ ರಾಜಧಾನಿ - ಆತ ಪುರುಷ್ ಎಂದು ಪರಿಚಯ ಮಾಡಿಕೊಂಡಿದ್ದು ನಾನು ಈ ತರಹ ಯೋಚಿಸಲು ಇನ್ನಷ್ಟು ಪುಷ್ಟಿ ನೀಡಿತು). ಈಗ 'ಅಲ್ಲಿಂದಾ' ಬಂದ್ರಾ?!

ಪುರುಷ್: ಯಾ.

ನಾನು: ಮತ್ತೆ ಈಗ? ನೈಟ್ ಬಸ್ಸಲ್ಲಿ ಬೆಂಗ್ಳೂರ್ಗಾ?

ಪುರುಷ್: ಬೆಂಗ್ಳೂರಾಆಆಅ?! ಇಲ್ಲಪ್ಪಾ. ವಾಪಸ್ ಪ್ಯಾರೀಸ್-ಗೆ.

ನಾನು: (ಎಲಾ ಇವನಾ. ತಮಾಷೆ ಮಾಡ್ತಿದ್ದಾನೋ ಹೇಗೆ ಎಂದು ಮತ್ತಷ್ಟು ಗೊಂದಲಕ್ಕೊಳಗಾದೆ) ವಾಪಸ್ ಪ್ಯಾರಿಸ್? ಮತ್ತೆ ಅಷ್ಟು ದೂರಾ ಬಂದಿದ್ದು ಬರೀ ವಿಕ್ಕಿನ ಭೇಟಿ ಮಾಡ್ಲಿಕ್ಕೋ?

ಪುರುಷ್: ಇಲ್ಲ. ಸ್ವಲ್ಪ ಝೆರಾಕ್ಸ್ ಮಾಡ್ಲಿಕ್ಕೆ ಇತ್ತು. ಅದ್ಕೆ ಬಂದೆ. ಹಾಗೆ ವಿಕ್ಕಿ ಭೇಟಿ ಮಾಡೋಣ ಎಂದು ಈ ಕಡೆ ಬಂದೆ.

ನಾನು: (ಈಗಂತು ನನಗೆ ಫುಲ್ಲು ತಲೆ ಕೆಟ್ಟೋಗಿತ್ತು. ಬರೀ ಝೆರಾಕ್ಸ್ ಮಾಡ್ಲಿಕ್ಕೆ ಪ್ಯಾರಿಸ್-ನಿಂದ ಇಲ್ಲಿಗೆ ಬರೋದು ಅಂದ್ರೆ... ಎಲ್ಲಿ ವಿಮಾನದಲ್ಲಿ ಫುಲ್ ಲೋಡ್ ತಂದಿದ್ದಾನೋ ಎಂಬ ಎಕ್ಸ್-ಟ್ರೀಮ್ ಯೋಚನೆಗಳೆಲ್ಲಾ ತಲೆಯಲ್ಲಿ ಬರತೊಡಗಿದವು) ಏನು??????????? ಝೆರಾಕ್ಸ್ ಮಾಡ್ಲಿಕ್ಕಾ!!!!!!!!!!

ಪುರುಷ್: ಹೌದು. ಬಲ್ಕ್ ಝೆರಾಕ್ಸ್ ಮಾಡಿದ್ರೆ ಇಲ್ಲಿ ಸ್ವಲ್ಪ ಕಡಿಮೆ.

ನಾನು: ( ಈಗಂತೂ ತಲೆ ಕೂದಲನ್ನು ಹಿಡಿದು ಜಗ್ಗುವಷ್ಟು ತಲೆ ಕೆಟ್ಟಿತ್ತು. ಇಂವ ನನ್ನನ್ನು ಫೂಲ್ ಮಾಡ್ತಿದ್ದಾನೋ ಹೇಗೆ? ಏನ್ರೀ ತಮಾಷೆ ಮಾಡ್ತಿದ್ದೀರಾ ಎಂದು ಗದರಿಸಿಬಿಡೋಣವೆನಿಸಿದರೂ ಸುಮ್ಮನಾದೆ. ಪ್ಯಾರಿಸ್ ದುಬಾರಿ ಊರಾದರೂ ಝೆರಾಕ್ಸ್-ಗೋಸ್ಕರ ಇಷ್ಟು ದೂರ.... ಛೇ ಇರಲಿಕ್ಕಿಲ್ಲ ಎಂದೆನಿಸಿತು.ಅದರೆ ಪುರುಷ್ ಗಂಭೀರನಾಗಿ ಮಾತನಾಡುತ್ತಿದ್ದ. ನನ್ನ ಮನಸ್ಸು ಗೊಂದಲದ ಗೂಡಾಗಿತ್ತು)

ಆಗ ವಿಕ್ರಮ್ ಬಂದು, ಅವರಿಬ್ಬರು ಮತ್ತೆಲ್ಲೋ ಹೋದರು. ನಂತರ ವಿಕ್ರಮ್ ಮರಳಿದ ಬಳಿಕ ನಾನು ಆತನಿಗೆ ನಡೆದದ್ದನ್ನು ತಿಳಿಸಿದಾಗ, ಆತ ಹೊಟ್ಟೆ ಹುಣ್ಣಾಗುವಂತೆ ನಕ್ಕು, 'ಲೇ ಹಾಪ, ಪ್ಯಾರೀಸ್ ಇಲ್ಲೇ ಐತ್-ಲೇ. ಬಸ್-ಸ್ಟ್ಯಾಂಡಿಗೆ ಪ್ಯಾರೀಸ್ ಅಂತಾರೆ' ಅಂದು ಮತ್ತೆ ಮತ್ತೆ ನಕ್ಕ. ಅಷ್ಟಕ್ಕೆ ಸುಮ್ಮನಾಗದೆ, ಟ್ರಿಪ್ಲಿಕೇನ್-ನಲ್ಲಿ ವಾಸವಾಗಿದ್ದ ಎಲ್ಲಾ ಕನ್ನಡಿಗರಿಗೆ ಮುಂದಿನ ನಾಲ್ಕೈದು ದಿನಗಳವರೆಗೆ ಈ 'ಪ್ಯಾರಿಸ್ ಪ್ರಸಂಗ'ವನ್ನು  ವಿವರಿಸಿ ಮತ್ತಷ್ಟು ನಕ್ಕ.

~.~
  • rajeshnaik111 ರವರ ಬ್ಲಾಗ್
  • Login or register to post comments
  • 1064 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 10, 2007 - 12:31pm — shreekant.mishrikoti

ಉ: ಪ್ಯಾರಿಸ್ ಪ್ರಸಂಗ

shreekant.mishrikoti's picture

ತುಂಬ ಚೆನ್ನಗಿ ಬರ್ದಿದ್ದೀರಾ ; ಧನ್ಯವಾದಗಳು

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೪)
  • ಭ್ರಮೆಯೋ, ಕನಸೋ, ನಿಜವೋ ಗೊಂದಲದ ಗೂಡು
  • ನನ್ನ ನೆನಪು ನಿನಗೆ ಬರೋದೇ ಇಲ್ಲವಾ ?
  • ಭಾಗ - ೭
  • ಒಂದು ಶಬ್ದದ ಸುತ್ತ
Syndicate content

ಲೇಖಕರು

rajeshnaik111's picture

ಪರಿಚಯ

ಕನ್ನಡಿಗರೆಲ್ಲರಿಗೂ ನಮಸ್ಕಾರ. ನಾನು ರಾಜೇಶ್ ನಾಯ್ಕ. ಉಡುಪಿ ನಿವಾಸಿ. ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗ. ಕನ್ನಡ ನಾಡು ಸುತ್ತುವ ಹಂಬಲ. ಹವ್ಯಾಸಿ ಚಾರಣಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹಿಂದೂ ಸಂಸ್ಕ್ೃತಿಯಲ್ಲಿ ಮಣ್ಣಿಗಿರುವ ಮಹತ್ವ
  • ಏನಿದೇನಿದು
  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • sudhimail
    ಉ: ಏನಿದೇನಿದು?
    September 8, 2008 - 10:12pm
  • hamsanandi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:41pm
  • kalpana
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:37pm
  • hpn
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:35pm
  • smurthygr
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:32pm
  • hamsanandi
    ಉ: ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
    September 8, 2008 - 9:23pm
  • ಶ್ರೀನಿಧಿ
    ಉ: ಬಾಳ್, ಬಾೞ್
    September 8, 2008 - 8:47pm
  • ASHOKKUMAR
    ಉ: ಏನಿದೇನಿದು
    September 8, 2008 - 8:18pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 8:12pm
  • ASHOKKUMAR
    ಉ: ವಾರಾಂತ್ಯ ಹೇಗಿತ್ತು?
    September 8, 2008 - 8:10pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 127 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator