ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸೇಡು ತೀರಿಸಿದ ಕರ್ನಾಟಕ

ಧರ್ಮಶಾಲಾದಲ್ಲಿ ಇಂದು ನಡೆದ ರಣಜಿ ಏಕದಿನ ಟ್ರೋಫಿಯ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಬಂಗಾಲವನ್ನು ೩೨ ಓಟಗಳಿಂದ ಸೋಲಿಸಿ ಕರ್ನಾಟಕ ಕ್ವಾರ್ಟರ್ ಫೈನಲ್ ತಲುಪಿದೆ. ಈ ವಿಜಯದೊಂದಿಗೆ, ರಣಜಿ ಟ್ರೋಫಿ ಸೂಪರ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ಬಂಗಾಲದ ಕೈಯಲ್ಲಿ ಅನುಭವಿಸಿದ ಸೋಲಿಗೆ ಸ್ವಲ್ಪ ಮಟ್ಟಿಗಾದರೂ ಪ್ರತೀಕಾರ ತೀರಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಕರ್ನಾಟಕ ೩೬ ಓಟಗಳಾಗುವಷ್ಟರಲ್ಲಿ ೫ ಹುದ್ದರಿಗಳನ್ನು ಕಳಕೊಂಡಿತ್ತು. ಆಗ ಜತೆಗೂಡಿದ ನಾಯಕ ಯೆರೆ ಗೌಡ ಮತ್ತು ತಿಲಕ್ ನಾಯ್ಡು ೭೭ ಓಟಗಳ ಜತೆಯಾಟ ನಡೆಸಿ ಸ್ವಲ್ಪ ಮಟ್ಟಿಗೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಗೌಡರು ಮತ್ತೆ ತನ್ನ ಸ್ಕಿಲ್ ತೋರ್ಪಡಿಸಿ ನೆಲಕಚ್ಚಿ ನಿಂತು ಆಡಿ ಅಮೂಲ್ಯ ೬೬ ಓಟಗಳನ್ನು ಗಳಿಸಿ ಒಂಬತ್ತೆನೆಯವರಾಗಿ ತಂಡದ ಮೊತ್ತ ೧೯೬ ಆದಾಗ ಔಟಾದರು. ೫೦ ಓವರುಗಳಲ್ಲಿ ಕರ್ನಾಟಕ ಗಳಿಸಿದ್ದು ೯ ಹುದ್ದರಿಗಳನ್ನು ಕಳಕೊಂಡು ೨೧೬ ಓಟಗಳನ್ನು.ಇದಕ್ಕುತ್ತರವಾಗಿ ಬಂಗಾಲ ೪೮ ಓವರುಗಳಲ್ಲಿ ಎಲ್ಲಾ ಹುದ್ದರಿಗಳನ್ನು ಕಳಕೊಂಡು ಗಳಿಸಿದ್ದು ೧೮೪ ಓಟಗಳನ್ನು. ಉತ್ತಮ ಬೌಲಿಂಗ್ ನಡೆಸಿದ ಜೋಶಿ ಮತ್ತು ಅಖಿಲ್ ಕ್ರಮವಾಗಿ ೪ ಮತ್ತು ೩ ಹುದ್ದರಿಗಳನ್ನು ಕೆಡವಿದರು.

ಮಾರ್ಚ್ ೨೧ರಂದು ದೆಹಲಿಯಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಎದುರಾಳಿ ರಾಜಸ್ಥಾನ.

ಬಂಗಾಲ ವಿರುದ್ಧದ ಪಂದ್ಯದ ಕ್ರಿಕ್ ಇನ್ಫೊ ವರದಿಯನ್ನು ಇಲ್ಲಿ ಓದಬಹುದು ಮತ್ತು ಸ್ಕೋರು ಪಟ್ಟಿಯನ್ನು ಇಲ್ಲಿ ನೋಡಬಹುದು.

ಕನ್ನಡಿಗ ಅರುಣ್ ಕುಮಾರ್ ನೇತೃತ್ವದ ಅಸ್ಸಾಮ್ ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ೪ ಹುದ್ದರಿಗಳಿಂದ ಸೋಲನ್ನು ಅನುಭವಿಸಿದೆ. ಅರುಣ್ ಕೇವಲ ೮ ಓಟಗಳನ್ನು ಗಳಿಸಿ ವಿಫಲರಾದರು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ದನಿಗೂಡು: ಸೇಡು ತೀರಿಸಿದ ಕರ್ನಾಟಕ

Sunil Jayaprakash's picture

ತುಂಬಾ ತುಂಬಾ ಸಂತೋಷ. ಬಂಗಾಳದ ವಿರುದ್ಧ ಮೊದಲ ಇನ್ನಿಂಗ್ಸಿನ ಹಿನ್ನಡೆಯನ್ನು ಹಿಮ್ಮೆಟ್ಟಿಸುವ ಹಾಗೆ ಈ ಬಾರಿ ಗೆದ್ದಿದ್ದಾರೆ. ಫೈನಲ್ ಪಂದ್ಯಕ್ಕಾಗಿ ನಮ್ಮ ತಂಡಕ್ಕೆ ಸವಿಹಾರೈಕೆಗಳು.

ಎಂದಿನ ಹಾಗೆ, ಕೊನೆ ಮಾತು. ಫೈನಲ್ ತಲುಪಿರುವ ನಮ್ಮವರ ಮೇಲೆ ಯಾವ ಕಾಗೆ, ಗೂಗೆ(ಬೆ), ಮಾರಿ, .... ಕಣ್ಣು ಬೀಳದಿರಲಿ.

ದನಿಗೂಡು: ಸೇಡು ತೀರಿಸಿದ ಕರ್ನಾಟಕ

rajeshnaik111's picture

ಫೈನಲ್ ?! ನಾಳೆ ನಡೆಯಲಿರುವುದು ಕ್ವಾರ್ಟರ್ ಫೈನಲ್! ಗೆದ್ದರೆ ತಾನೆ ಮುಂದಿನ ಮಾತು.

ಕರ್ನಾಟಕಕ್ಕೆ ಸೋಲು

rajeshnaik111's picture

ರಾಜಸ್ಥಾನದಂತಹ ಸಾಧಾರಣ ತಂಡದೆದುರು ಮುಗ್ಗರಿಸಿ ಕರ್ನಾಟಕ ರಣಜಿ ಏಕದಿನ ಟ್ರೋಫಿಯಿಂದ ಹೊರಬಿದ್ದಿದೆ. ಎಂದಿನಂತೆ ಮತ್ತೆ ಬ್ಯಾಟಿಂಗ್ ವೈಫಲ್ಯ. ೫೧ಕ್ಕೆ ೫ ಹುದ್ದರಿ ಕಳಕೊಂಡ ಬಳಿಕ ಅಖಿಲ್ ಗಳಿಸಿದ ಬಿರುಸಿನ ೮೬ ಓಟಗಳ ಸಹಾಯದಿಂದ ಕರ್ನಾಟಕ ೨೦೦ ಓಟ ಗಳಿಸಲು ಶಕ್ತವಾಯಿತು. ರಾಜಸ್ಥಾನ ಸುಲಭವಾಗಿ ಇನ್ನೂ ೨೮ ಎಸೆತಗಳು ಬಾಕಿ ಇರುವಂತೆ ಜಯಗಳಿಸಿ ಸೆಮಿ ಫೈನಲ್ ಗೆ ತೇರ್ಗಡೆ ಹೊಂದಿತು. ಸ್ಕೋರು ಪಟ್ಟಿಯನ್ನು ಇಲ್ಲಿ ನೋಡಬಹುದು.

ಟಿ: ಕರ್ನಾಟಕಕ್ಕೆ ಸೋಲು

Sunil Jayaprakash's picture

ಈ ದಿನ ಬೆಳಗ್ಗೆ "ಕರ್ನಾಟಕವು ಗೆದ್ದ ಪಂದ್ಯಗಳ ವಿವರಗಳನ್ನು ಹಾಕದೆ, ಸೋತ ಪಂದ್ಯಗಳ ವಿವರಗಳನ್ನು ಖಂಡಿತವಾಗಿಯೂ ಹಾಕಿಯೇ ಹಾಕುವ" ಟೈಮ್ಸ್ ಆಫ್ ಇಂಡಿಯಾ ನೋಡಿದಾಗ ತಿಳಿಯಿತು. ನಾನು ಕರ್ನಾಟಕದವರು ಫೈನಲ್ ತಲುಪಿಬಿಟ್ಟಿರುವ ಕನಸು ಕಂಡಿದ್ದೆ. ಕ್ವಾಟರ್ಫೈನಲ್ಲಿನಲ್ಲಿಯೇ ಟುಸ್ಸಾದರು ನಮ್ಮವರು.