Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › rajeshnaik111 ರವರ ಬ್ಲಾಗ್

ಒಂದು ನೈಜ ಜೋಕು

May 22, 2007 - 11:47pm — rajeshnaik111

ಎಲ್.ಎಮ್.ನಾಯ್ಕ ನನ್ನ ಚಡ್ಡಿ ದೋಸ್ತ. 'ನನಗೂ ಇಂಗ್ಲೀಷಿನಲ್ಲಿ ಮಾತನಾಡುವಂತಾಗಬೇಕು ಎಂಬ ಆಸೆ. ಹೇಗೆ ಸಾಧ್ಯ?' ಎಂದು ನನ್ನಲ್ಲಿ ಕೇಳಿದ.

'ಯಾರಲ್ಲೂ ಮಾತನಾಡುವಾಗ, ಮಾತನಾಡಿದ್ದನ್ನು ಮನಸಿನಲ್ಲೇ ಆಂಗ್ಲ ಭಾಷೆಗೆ ಅನುವಾದಿಸುವ ಪ್ರಯತ್ನ ಮಾಡು. ಗೊತ್ತಾಗದ ಪದಗಳನ್ನು ನಂತರ ಶಬ್ದಕೋಶ ನೋಡಿ ತಿಳಿದುಕೋ' ಎಂದು ಸಲಹೆ ನೀಡಿದೆ. 'ಹಾಗಿದ್ದಲ್ಲಿ ಒಂದು ವಾಕ್ಯ ಹೇಳು, ನಾನು ಆಂಗ್ಲ ಭಾಷೆಗೆ ಅನುವಾದಿಸುವೆ' ಎಂದ. 

'ನನ್ನ ಗೆಳೆಯ ಮುಗ (ಮಾತು ಬರದವ)' ಎಂಬ ಸಣ್ಣ ವಾಕ್ಯವನ್ನು ಆತನ ಮುಂದಿರಿಸಿದಾಗ, 'ಮೈ ಫ್ರೆಂಡ್ ಇಸ್ .... ಮೈ ಫ್ರೆಂಡ್ ಇಸ್....' ಎಂದು ತಡವರಿಸಿತೊಡಗಿದ. 'ಮಾತು ಬರದವನಿಗೆ ಕನ್ನಡದಲ್ಲಿ ಮುಗ ಎನ್ನುತ್ತಾರೆ. ಇಂಗ್ಲೀಷಿನಲ್ಲಿ ಏನೆನ್ನುತ್ತಾರೋ ಆ ಶಬ್ದವನ್ನು ಹಾಕಿ ವಾಕ್ಯ ಮುಗಿಸು ಎಂದು ಹುರಿದುಂಬಿಸಿದೆ.'

ಒಂದೆರಡು ನಿಮಿಷ ಯೋಚಿಸಿ ಕಡೆಗೆ ಏನೋ ಸಾಧನೆ ಮಾಡಿದ ಮುಖಭಾವದೊಂದಿಗೆ ಆತ ವಾಕ್ಯವನ್ನು 'ಮೈ ಫ್ರೆಂಡ್ ಇಸ್ ಟಂಗ್ ಲೆಸ್' ಎಂದು ಪೂರ್ಣಗೊಳಿಸಿದಾಗ ನಾನು ಕಕ್ಕಾಬಿಕ್ಕಿ!!

Ornamental seperator
  • rajeshnaik111 ರವರ ಬ್ಲಾಗ್
  • Login or register to post comments
  • 1486 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 22, 2007 - 11:57pm — ASHOKKUMAR

ಉ: ಒಂದು ನೈಜ ಜೋಕು

ASHOKKUMAR's picture

ಏನು ಮುಗ ಅಂತ ತಲೆ ಕೆರೆಯ ಬೇಕಾಯಿತು..ಮೂಗ Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 12:09am — rajeshnaik111

ಉ: ಒಂದು ನೈಜ ಜೋಕು

rajeshnaik111's picture

mooga ಎಂದು ಬರೆಯಲು ಹೊರಟರೆ maaga - ಮೂಗ ಎಂದಾಗುತ್ತದೆ. ಆದ್ದರಿಂದ ಮುಗ ಎಂದು ಬರೆಯುವುದೇ ಲೇಸು ಎಂದು ಹಾಗೆ ಬರೆದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 8:05am — ASHOKKUMAR

ಉ: ಒಂದು ನೈಜ ಜೋಕು

ASHOKKUMAR's picture

font ಸಮಸ್ಯೆಯಿಂದ ನಿಮಗೆ ಹಾಗೆ ಕಾಣಿಸುತ್ತದೆ. ಸರಿಯಾದ font ಅಳವಡಿಸಿದ ಕಂಪ್ಯೂಟರಿನಲ್ಲಿ ಸರಿಯಾಗೆ ಕಾಣಿಸುತ್ತದೆ. Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 11:00am — ಶ್ರೀನಿವಾಸ ವೀ. ಬ೦ಗೋಡಿ

ಉ: ಒಂದು ನೈಜ ಜೋಕು

ಶ್ರೀನಿವಾಸ ವೀ. ಬ೦ಗೋಡಿ's picture

ಸರಿಯಾದ font ಯಾವದು? ಏಕೆ೦ದರೆ ನಾನು Windows XP SP2 ಉಪಯೋಗಿಸುತ್ತಿರುವೆ. ಇದು Default ಆಗಿ Tunga font ಆರಿಸುತ್ತೆ. ಬೇರೆ font ಹೇಗೆ ಆರಿಸೋದು(select)? ಹಾಗೆ ಆ font ಎಲ್ಲಿ೦ದ download ಮಾಡ್ಕೋಬೇಕು?

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 11:18am — Sunil Jayaprakash

ಉ: ಒಂದು ನೈಜ ಜೋಕು

Sunil Jayaprakash's picture

ಶ್ರೀನಿವಾಸ ಬಂಗೋಡಿಯವರೆ, ಈ ಎಳೆಯಲ್ಲಿ ನಿಮಗೆ ಬೇಕಿರುವ ಉತ್ತರ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 3:49pm — hpn

ಉ: ಒಂದು ನೈಜ ಜೋಕು

hpn's picture

ನೋಡಿ: http://dev.sampada.net/wiki/Unicode_Kannada_FAQ

ಮತ್ತು:

(microsoft.com)

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 3:51pm — hpn

ಉ: ಒಂದು ನೈಜ ಜೋಕು

hpn's picture

(ಬರೆಯಲು ಮರೆತೆ) ಮೇಲಿನ ಮೈಕ್ರೊಸಾಫ್ಟ್ ಡಾಟ್ ಕಾಮ್ ಲಿಂಕ್ ನಲ್ಲಿರುವ ಅಪ್ಡೇಟು ಹಾಕಿಕೊಂಡರೆ ಹೊಸ ಫಾಂಟು ಇನ್ಸ್ಟಾಲ್ ಆಗುತ್ತದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 5:21pm — ಶ್ರೀನಿವಾಸ ವೀ. ಬ೦ಗೋಡಿ

ಉ: ಒಂದು ನೈಜ ಜೋಕು

ಶ್ರೀನಿವಾಸ ವೀ. ಬ೦ಗೋಡಿ's picture

ಉತ್ತರಕ್ಕೆ ಎಲ್ಲರಿಗು ಧನ್ಯವಾದಗಳು. ಕೊಟ್ಟಿದ್ದ ಕೊ೦ಡಿಯನ್ನು ಬಳಸಿ ಹೊಸ font install ಮಾಡಿದೆ. ಈಗ ಚೆನ್ನಾಗಿ ಮೂಗ ಎ೦ದು ಬರೆಯಲು ಬರುತ್ತದೆ!
ಆದರೆ ಈಗ ಸ೦ಪದವನ್ನು ಸರಿಯಾಗಿ ನೋಡಲಿಕ್ಕಾಗ್ತ ಇಲ್ಲ. ಅಕ್ಷರಗಳು ತು೦ಡಾಗಿ ಕಾಣಿಸ್ತಿವೆ. ಏನು ಮಾಡಲಿ Sad

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 10:44pm — hpn

ಉ: ಒಂದು ನೈಜ ಜೋಕು

hpn's picture

http://dev.sampada.net/wiki/Kannada-Unicode-on-Windows-XP

ನೋಡಿ.

  • Login or register to post comments
  • link
  • Email this ಪ್ರತಿಕ್ರಿಯೆ
May 24, 2007 - 3:51pm — ಶ್ರೀನಿವಾಸ ವೀ. ಬ೦ಗೋಡಿ

ಉ: ಒಂದು ನೈಜ ಜೋಕು

ಶ್ರೀನಿವಾಸ ವೀ. ಬ೦ಗೋಡಿ's picture

ತಾ೦ತ್ರಿಕ ಕಾರಣಗಳಿ೦ದ ನನಗೆ ಸೂಚನೆಗಳನ್ನು ಪಾಲಿಸಲಿಕ್ಕೆ ಆಗ್ತಿಲ್ಲ. ಈಗ ನಾನು ಹಿ೦ದಕ್ಕೆ ಹೋಗಬಹುದೆ? ಅ೦ದರೆ install ಆದ WindowsXP-KB897338-v3-x86-ENU.exe ಅನ್ನು uninstall ಮಾಡಬಹುದೆ?
ಹಳೆ Tunga font backup ಇದೆ. ಆದರೆ ಅದನ್ನು “new font install” ಮಾಡಿದರೂ ಸಮಸ್ಯೆ ಹಾಗೆ ಇದೆ Sad

  • Login or register to post comments
  • link
  • Email this ಪ್ರತಿಕ್ರಿಯೆ
May 24, 2007 - 5:23pm — ASHOKKUMAR

ಉ: ಒಂದು ನೈಜ ಜೋಕು

ASHOKKUMAR's picture

win-xp osನಲ್ಲಿ start->programs->accessories-system tools->system restore ಗೆ ಹೋಗಿ checkpoint ನೀವು ತಂತ್ರಾಂಶ ಅನುಸ್ಥಾಪಿಸಿದ ಹಿಂದಿನ ತಾರೀಕು ಆಯ್ಕೆ ಮಾಡಿ. ಕಂಪ್ಯೂಟರ್ ಹಳೆಯ ಸ್ಥಿತಿಗೆ ಹೋಗುತ್ತದೆ.
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 24, 2007 - 5:55pm — Sunil Jayaprakash

ಉ: ಒಂದು ನೈಜ ಜೋಕು

Sunil Jayaprakash's picture

ಶ್ರೀನಿವಾಸರೆ, ಎರಡು ವಿಷಯ

೧.೧ ನಿಜವಾದ ತೊಂದರೆ ಎಲ್ಲಿ ಆಗುತ್ತಿದೆ. ಸಂಪದ ಓದುವಾಗಲೇ, ಅಥವಾ ಎಲ್ಲಿಯೂ ಕನ್ನಡ ಸರಿಯಾಗಿ ಮೂಡುತ್ತಿಲ್ಲವೇ ?
೧.೨ ಈ ಸಮಸ್ಯೆ ಇಂಟರ್ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಆಗುತ್ತಿದೆಯೇ ಅಥವಾ ಫೈರ್ಫಾಕ್ಸಿನಲ್ಲಿಯೇ ಅಥವಾ ಎಲ್ಲಾ ಅಪ್ಲಿಕೇಶನ್ನುಗಳಲ್ಲಿಯೂ ಹೀಗೆ ಆಗುತ್ತಿದೆಯೇ ?

೨. ನೀವು ಈಗ ಇನ್ಸ್‌ಟಾಲ್ ಮಾಡಿರುವುದನ್ನು Control Panel->Add/Remove Programs-> Hotfix for Windows XP (KB897338) ಎಂಬುದನ್ನು ಆರಿಸಿ ಅನ್‌ಇನ್ಸ್‌ಟಾಲ್ ಮಾಡಬಹುದು.

  • Login or register to post comments
  • link
  • Email this ಪ್ರತಿಕ್ರಿಯೆ
May 25, 2007 - 10:57am — ಶ್ರೀನಿವಾಸ ವೀ. ಬ೦ಗೋಡಿ

ಉ: ಒಂದು ನೈಜ ಜೋಕು

ಶ್ರೀನಿವಾಸ ವೀ. ಬ೦ಗೋಡಿ's picture

ಅಶೋಕ ಮತ್ತು ಸುನೀಲ,
ತು೦ಬ ಧನ್ಯವಾದಗಳು. ಸಮಸ್ಯೆ ಬಗೆಹರಿದಿದೆ.
ಸುನೀಲ, ಈ ಸಮಸ್ಯೆ IE ನಲ್ಲಿ ಸ೦ಪದದಲ್ಲಿ ಕಾಣಿಸಿತ್ತು. ಆದರೆ MS Word ನಲ್ಲಿ ಯಾವದೆ ಸಮಸ್ಯೆ ಇರಲಿಲ್ಲ. ನನ್ನ systemನಲ್ಲಿ Firefox ದಲ್ಲ೦ತೂ ಸ೦ಪದ (ಮತ್ತು ಪ್ರಜಾವಾಣಿ) ಸರಿಯಾಗಿ ಬರೋದೆ ಇಲ್ಲ.

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 11:25am — Sunil Jayaprakash

ಉ: ಒಂದು ನೈಜ ಜೋಕು

Sunil Jayaprakash's picture

ಬಹುಶಃ ನಾನಾಗಿದ್ದರೆ, ಮೂಗ್-ಲೆಸ್ ಅಂತಿದ್ನೋ ಏನೋ Laughing out loud

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 1:57pm — mahesha

ಉ: ಒಂದು ನೈಜ ಜೋಕು

mahesha's picture

ಇಂಗ್ಲೀಸಲ್ಲಿ ಏನು ಮೂಗಂಗೆ?
dumb or mute?

ಓಟ್ ಹಾಕಿ.
- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 7:37pm — ASHOKKUMAR

ಉ: ಒಂದು ನೈಜ ಜೋಕು

ASHOKKUMAR's picture

dumb ಸರಿ ಅಲ್ವೇ?
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 25, 2007 - 2:39pm — mahesha

ಉ: ಒಂದು ನೈಜ ಜೋಕು

mahesha's picture

ಈಗ dumb person ಅಂದ್ರೆ ಹೆಚ್ಚಾಗಿ ದಡ್ಡ ಅಂತ ಆಗಿಬಿಟ್ಟಿದೇ ಅಲ್ವಾ?

- ಮಾಯ್ಸ Smiling

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 7:37pm — kishorpatwardhan

ಉ: ಒಂದು ನೈಜ ಜೋಕು

kishorpatwardhan's picture

ರಾಜೇಶರೇ,
ಇಂಗ್ಲಿಷ್ನಲ್ಲಿ ಟಂಗ್ ಲೆಸ್ ಅಂದರೆ ಮೂಗ ಎಂಬ ಅರ್ಥವೂ ಇದೆ.

ಈ ಕೊಂಡಿಯನ್ನು ನೋಡಿ:
http://www.thefreedictionary.com/tongueless

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 7:47pm — ASHOKKUMAR

ಉ: ಒಂದು ನೈಜ ಜೋಕು

ASHOKKUMAR's picture

tongueless=Lacking the faculty of speech; mute.
mute ಅನ್ನುವುದೂ ಸರಿ ಅಂತೆನ್ನಿಸುತ್ತೆ ಮಹೇಶ್.
ಒಟ್ಟಿನಲ್ಲಿ ಜೋಕಿನಲ್ಲಿ ಜೋಕಿಲ್ಲ Smiling
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 8:04pm — kishorpatwardhan

ಉ: ಒಂದು ನೈಜ ಜೋಕು

kishorpatwardhan's picture

mute ಎಂಬ ಶಬ್ದವನ್ನು ಉಪಯೋಗ ಮಾಡುವುದು ಒಳ್ಳೆಯದಲ್ಲ

http://www.thefreedictionary.com/mute ಹೀಗೆ ಹೇಳುತ್ತದೆ:

In reference to people who are unable to speak, mute and deaf-mute are now often considered objectionable. The offense is due not only to the bluntness of these terms but also to the implication that a person who is incapable of oral speech is necessarily deprived of the use of language. In fact, many deaf people today communicate naturally and fully through the use of a sign language such as ASL, and no one who has witnessed such a conversation would ever think to call the participants mute.

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 8:08pm — ASHOKKUMAR

ಉ: ಒಂದು ನೈಜ ಜೋಕು

ASHOKKUMAR's picture

orally challenged ಅನ್ನುವುದೂ ಅಕ್ಷೇಪವೇ? ಜೋಕು ಈಗ ಗಂಭೀರ ಚರ್ಚೆಯತ್ತ ತಿರುಗುತ್ತಿದೆ!
*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 8:30pm — kishorpatwardhan

ಉ: ಒಂದು ನೈಜ ಜೋಕು

kishorpatwardhan's picture

ಅಶೋಕರೇ,

ನನಗೆ ಗೊತ್ತಿರುವಂತೆ, orally challenged ಎಂಬುದೇ ಸದ್ಯಕ್ಕೆ ಚಾಲ್ತಿಯಲ್ಲಿರುವ ಆಕ್ಷೇಪಣೆ ಇಲ್ಲದ usage.
ಜೋಕನ್ನು ಗಂಭೀರ ಚರ್ಚೆಯಾಗಿ ಬದಲಾಯಿಸಿದ್ದಕ್ಕೆ ಕ್ಷಮೆ ಇರಲಿ.

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 8:16pm — kishorpatwardhan

ಉ: ಒಂದು ನೈಜ ಜೋಕು

kishorpatwardhan's picture

dumb ಶಬ್ದದ ಉಪಯೋಗ ಹೆಚ್ಚಾಗಿ ಆಗುವುದು ಪೆದ್ದ / ದಡ್ಡ ಎಂಬರ್ಥದಲ್ಲಿ.

ಸಾಮಾನ್ಯವಾಗಿ ’He is dumb' ಎಂಬುದನ್ನು upayOgisuvudu ’ಅವನೊಬ್ಬ ಶುದ್ಧ ದಡ್ಡ/ ಮೂರ್ಖ’ ಎಂಬರ್ಥದಲ್ಲಿ.
ನಿಜವಾದ ಅರ್ಥ ’ಅವನು ಮೂಗ’ ಎಂದೇ ಆಗಿದ್ದರೂ ಉಪಯೋಗವಾಗುವ ಭಾಷೆಯಲ್ಲಿ ಅದರ ಅರ್ಥ ಬದಲಾಗಿದೆ.
ಬಹುಶಃ ಇದಕ್ಕೆ ಜರ್ಮನ್ ಭಾಷೆಯಲ್ಲಿರುವ dumm ಎಂಬ ಶಬ್ದ ಕಾರಣವಾಗಿರಬೇಕು.
ಇದರ ಅರ್ಥ ಮೂರ್ಖ ಅಂತೆ.

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 8:18pm — kishorpatwardhan

ಉ: ಒಂದು ನೈಜ ಜೋಕು

kishorpatwardhan's picture

upayOgisuvudu = ಉಪಯೋಗಿಸುವುದು

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 8:35pm — rajeshnaik111

ಉ: ಒಂದು ನೈಜ ಜೋಕು

rajeshnaik111's picture

ಕಿಶೋರ್,

ನೀವು ಹೇಳಿದ್ದು toungeless = dumb ಸರಿಯಾಗೇ ಇದೆ. ಕನ್ನಡದಲ್ಲಿ ಮಾತನಾಡುವಾಗ 'ಮೂಗ' ಅನ್ನುವುದಕ್ಕಿಂತ, ಹೆಚ್ಚಾಗಿ 'ಅವನಿಗೆ ಮಾತು ಬರುವುದಿಲ್ಲ' ಎಂದೇ ಹೇಳಲಾಗುತ್ತದೆ. ಆದರೆ ಆಂಗ್ಲ ಭಾಷೆಯಲ್ಲಿ dumb ಎಂದೇ ಬಳಸುವುದರಿಂದ tongueless ಎಂದಾಗ ನಗು ಬಂತು. ಮತ್ತೆ dumb = ಮೂರ್ಖ ಅದೂ ಸರೀನೆ. ಒಂದೇ ಪದಕ್ಕೆ ೨ ಅರ್ಥಗಳಿರುವುದು ಆಂಗ್ಲ ಭಾಷೆಯಲ್ಲಿ ಸಾಮಾನ್ಯ. ಯಾವ ಸನ್ನಿವೇಶದಲ್ಲಿ ಆ ಪದಗಳನ್ನು ಬಳಸಲಾಗುತ್ತದೆಯೋ ಅದಕ್ಕೆ ತಕ್ಕುದಾಗಿ ಅದಕ್ಕಿರುವ ಅರ್ಥವನ್ನು ಅರಿಯಲಾಗುತ್ತದೆ.

ಏನೋ ಜೋಕು ಸ್ವಲ್ಪ ಸಿರಿಯಸ್ ಆಗ್ತಾ ಇದೆ.

  • Login or register to post comments
  • link
  • Email this ಪ್ರತಿಕ್ರಿಯೆ
May 23, 2007 - 8:51pm — ASHOKKUMAR

ಉ: ಒಂದು ನೈಜ ಜೋಕು

ASHOKKUMAR's picture

ಜೋಕಿನಿಂದ ಹೆಚ್ಚು ವಿಷಯ ತಿಳೀತು..ಕೆಲವರ font ಸಮಸ್ಯೆ ಬಗೆಹರಿಯಿತು. thanks ರಾಜೇಶ್, ಕಿಶೋರ್.

*ಅಶೋಕ್

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಶಬ್ದದ ಸುತ್ತ
  • ಅಡಿಗೆಯವರ ಪುರಾಣ - ಭಾಗ -೨
  • ಮುಂದೇನು ...?
  • ಮೊಬೈಲ್ ಮೌನಿಗಳು
  • ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?
Syndicate content

ಲೇಖಕರು

rajeshnaik111's picture

ಪರಿಚಯ

ಕನ್ನಡಿಗರೆಲ್ಲರಿಗೂ ನಮಸ್ಕಾರ. ನಾನು ರಾಜೇಶ್ ನಾಯ್ಕ. ಉಡುಪಿ ನಿವಾಸಿ. ಮಂಗಳೂರಿನಲ್ಲಿ ಜಾಹೀರಾತು ಸಂಸ್ಥೆಯೊಂದರಲ್ಲಿ ಉದ್ಯೋಗ. ಕನ್ನಡ ನಾಡು ಸುತ್ತುವ ಹಂಬಲ. ಹವ್ಯಾಸಿ ಚಾರಣಿಗ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator