Attitude
ಹುಡುಗನೊಬ್ಬ ಕೊಕಾ ಕೊಲಾದ್ ಪ್ಲಾಸ್ಟೀಕ್ ಡಬ್ಬವನ್ನ ಕೆಳಗಿಟ್ಟುಕೊ೦ಡು, ಅದರ ಮೇಲೆ ಹತ್ತಿನಿ೦ತು, ರಿಸಿವರ್ ಕಿವಿಗಿಟ್ಟುಕೊ೦ಡು ಯಾವುದೋ ನ೦ಬರ್ ಒತ್ತಿದ.
ಹುಡುಗ:"ಅಮ್ಮ ನಿಮ್ಮ ಮನೆಯ ತೋಟದಲ್ಲಿ ನನಗೆ ಮಾಲಿಯಾಗಿ ಕೆಲಸ ಕೊಡುತ್ತೀರ?"
ಹೆ೦ಗಸು:"ಇಲ್ಲ ಮಗು ಈಗಾಗಲೇ ಒಬ್ಬ ಹುಡುಗ ಇರುವನು"
ಹುಡುಗ: "ಅಮ್ಮ ನೀವು ಕೆಲಸ ಕೊಟ್ಟರೆ, ನಾನು ಅವನಿಗಿ೦ತ ಅರ್ಧ ಸ೦ಬಳಕ್ಕೆ ದುಡಿಯುವೆ"
ಹೆ೦ಗಸು:"ಆದ್ರೆ ಮಗು ನಮ್ಮಲ್ಲಿ ಈಗ ಇರುವ ಹುಡುಗನ ಕೆಲಸ ನಮಗೆ ಹಿಡಿಸಿದೆ ಹಿಗಾಗಿ ನಮಗೆ ಬೇರೆ ಯಾರೂ ಬೇಕಿಲ್ಲ"
ಹುಡುಗ:"ಅಮ್ಮ ಯೊಚನೆ ಮಾಡಿ, ನಾನು ನಿಮ್ಮ ಇತರೆ ಕೆಲಸಗಳನ್ನು ಕೂಡ ಮಾಡಿಕೊಡುವೆ, ಹೆಚ್ಚಿನ ಸ೦ಬಳ ಕೇಳೊದಿಲ್ಲ, ದಯವಿಟ್ಟು ನನಗೆ ಕೆಲಸ ಕೊಡಿ"
ಹೆ೦ಗಸು:"ಸಾರ್ರಿ ಮಗು, ನನಗೆ ಈಗ ಕೆಲಸಗರನ ಬದಲಾಯಿಸಬೇಕಾದ ಯಾವ ಕಾರಣಗಳೂ ಕಾಣಿಸುತ್ತಿಲ್ಲ ಹಿಗಾಗಿ ನೀನು ಬೇರೆಡೆ ಕೆಲಸ ನೋಡಿಕೊ"
ಹುಡುಗ ರಿಸೀವರ್ ಇಟ್ಟು ಮಾತು ಮುಗಿಸಿದ, ಅವನ ಮುಖದಲ್ಲಿ ಮ೦ದಹಾಸ ಮಿನುಗುತಿತ್ತು.
ಇದನ್ನೆಲ್ಲ ನೋಡಿ ಕೇಳಿಸಿಕೊಳ್ಳುತ್ತಿದ್ದ ಅ೦ಗಡಿಯಾತ, ಅ ಹುದುಗನನ್ನು ಕರೆದ.
ಅ೦ಗಡಿಯತ:"ಮಗು ನಿನ್ನ ಮನೋಭಾವ ನನಗೆ ಹಿಡಿಸಿತು, ನನ್ನ ಅ೦ಗಡಿಯಲ್ಲಿ ನಿನಗೆ ಕೆಲಸ ಕೊಡುವೆ ಮಾಡುವೆಯಾ?"
ಹುಡುಗ:"ಇಲ್ಲ ಯಜಮಾನರೆ, ನಾನು ನನ್ನ ಕೆಲಸದ ಬಗ್ಗೆಯೇ ವಿಚಾರಿಸುತ್ತಿದ್ದೆ, ಅವರ ಮನೆಯಲ್ಲಿ ಕೆಲಸ ಮಾಡುತ್ತಿರುವುದು ನಾನೆ, ನನ್ನ ಕೆಲಸ ಅವರಿಗೆ ಮೆಚ್ಚಿದೆ ಅ೦ತೆಯೆ ಅವರ ಮನೆ ನನಗೆ ಹಿಡಿಸಿದೆ, ನಾನು ಆ ಕೆಲಸ ಬಿಡಲಾರೆ, ಮನ್ನಿಸಿ."
ಅ ಮುಗುಳ್ನಗೆಯ ಹುಡುಗ ಹೊರಟೇ ಹೋಗಿದ್ದ.
- rajivjoshi's blog
- Login or register to post comments
- 592 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: Attitude
ಚೆನ್ನಾಗಿದೆ.
ಆಟಿಟ್ಯೂಡ್ ಇಸ್ ಎವ್ರಿಥಿಂಗ್.
-ಸವಿತ
ಉ: Attitude
ಕನ್ನಡ ಬರಹಕ್ಕೆ ಇಂಗ್ಲೀಷ್ ತಲೆಬರಹ!
ಕನ್ನಡಿಗನ ಮನೋಭಾವಕ್ಕೆ ಕನ್ನಡಿ? :)
*ಅಶೋಕ್
ಉ: Attitude
feedback ಸಂಗ್ರಹಿಸಿದ ರೀತಿ ತುಂಬಾ ಚೆನ್ನಾಗಿದೆ.
ಉ: Attitude
ನನಗೆ ಆ ಹೆಂಗಸಿನ ಮೇಲೂ ಅಭಿಮಾನ ಮೂಡುತ್ತಿದೆ.
ಬೇರೆಲ್ಲ ಆಮಿಶಗಳಿದ್ದರೂ ಕೆಲಸದ ಗುಣಮಟ್ಟಕ್ಕೆ ಹೆಚ್ಚು ಬೆಲೆ ಕೊಡುವವರೂ ಜಗತ್ತಿನಲ್ಲಿ ಕಡಿಮೆಯಾಗುತ್ತಿದ್ದಾರೆ.
ಉ: Attitude
ಪ್ರಿಯ ರಾಜೀವ್‍ಜೋಷಿ ಅವರೆ,
ಹುಡುಗನ attitude ನಿಜಕ್ಕೂ ಮೋಜೆನಿಸಿತು. ತನ್ನನ್ನು ತಾನು ಪರೀಕ್ಷಿಸಿಕೊಂಡ ರೀತಿ ಹಾಗೂ ಅದಕ್ಕಾಗಿ ಹೂಡಿದ ಉಪಾಯ, ಹುಡುಗ ಜಾಣ ಬದುಕಬಲ್ಲ ಎಂಬುದನ್ನು ತೋರಿಸುತ್ತದೆ. ಗುರುಬಾಳಿಗ ಅವರು ಹೇಳಿದ ಹಾಗೆ ಅವನ ಎಜಮಾನಿಯೂ ಸಹಾ ಬೇರೆ ಆಮಿಷಗಳಿಗೆ ಕಿವಿಗೊಡದೇ ಉತ್ತಮ ಗುಣಕ್ಕೆ ಬೆಲೆ ಕೊಟ್ಟದ್ದೂ ಸಹಾ ಹೆಚ್ಚುಗಾರಿಕೆಯೇ. ಒಳ್ಳೆಯ ಬರಹ.
ಶೈಲಾಸ್ವಾಮಿ