ಬೆಂಗಳೂರು ಮಳೆಯಲ್ಲಿ…
ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರೋ ಪಂಜಾಬಿ ಮೆಸ್ಗೆ ಹೋಗೋಣ ಅಂದ.ಸರಿ ಅಂತ ಹೊರಟ್ವು.ಬಹುಶ ಅರ್ಧ ದಾರಿ ಹೋಗಿದ್ವು.ಹೊಟ್ಟೆ ಚುರು ಚುರು ಅನ್ನೋಕೆ ಶುರು ಆಗಿತ್ತು.ಶುರುವಾಯ್ತು ಭರ್ಜರಿ ಗಾಳಿ,ಮಳೆ.ಅಲ್ಲೇ ಒಂದು ಕಡೆ ಹೋಗಿ ನಿಂತು ಮಳೆ ಯಾವಾಗ ನಿಲ್ಲುತ್ತೋ ಅಂತ ಕಾಯ್ತಾ ಇದ್ವಿ.೧ ಗಂಟೆ ಕಳೆದರು ಮಳೆ ನಿಲ್ಲೋ ಹಾಗೆ ಕಾಣಲಿಲ್ಲ. ‘ಲೇ,ಇಲ್ಲೇ ನಿಂತ್ರೆ ಊಟ ಸಿಗೋಲ್ಲ,ಬಾ ಮಳೆಲಿ ಹೋಗಿ ಊಟ ಇದ್ರೆ ಪಾರ್ಸೆಲ್ ತಗೊಂಡು ಹೋಗೋಣ’ ಅಂದೇ.ಸರಿ ಅಂತೇಳಿ ನಾವ್ ಅಲ್ಲಿ ಹೋಗೋ ಅಷ್ಟೊತ್ತಿಗೆ ಅವ್ರು ಬಾಗಿಲು ಹಾಕಿದ್ರು. Read more about ಬೆಂಗಳೂರು ಮಳೆಯಲ್ಲಿ…




