19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?

November 28, 2008 - 10:15am
Rakesh Shetty
"ಸಾಮಾನ್ಯವಾಗಿ ಎಲ್ಲರೂ ಬದುಕಿ ಸಾಯುತ್ತಾರೆ, ಆದರೆ ಇವರು ಸತ್ತು ಬದುಕಿದ್ದಾರೆ" ಈ ಮಾತನ್ನು ನಾನು ಹೇಳಿದ್ದು, ನಿನ್ನೆ ಭಾರತವನ್ನು ಬೆಚ್ಚಿ ಬೀಳಿಸಿದ ಮುಂಬೈನ ಮಾರಣ ಹೋಮದಲ್ಲಿ ವೀರ ಮರಣವನ್ನಪ್ಪಿದ, ನಮ್ಮ ನಾಳೆಗಳಿಗೆ ಅವರ ಅಮೂಲ್ಯ ಜೀವವನ್ನು ಮುಡಿಪಿಟ್ಟು ಹುತಾತ್ಮರಾದ 'ಹೇಮಂತ್ ಕರ್ಕರೆ, ವಿಜಯ್ ಸಾಲಸ್ಕರ್, ಅಶೋಕ್ ಕಾಮ್ಟೆ,ಸಂದೀಪ್ ಉನ್ನಿ ಕೃಷ್ಣನ್, ಜಯವಂತ್ ಪಾಟೀಲ್,ಯೋಗೇಶ್ ಪಾಟೀಲ್ ,ಅಮ್ಬದಾಸ್ ಪವಾರ್, ಎ .ಆರ್ ಚಿಟ್ಟೆ ,ವಿಜಯ್ ಖಂಡೇಕರ್,ಎಂ.ಸಿ .ಚೌದರಿ, ಗಜೆಂದರ್ ಸಿಂಗ್,ಶಶಾಂಕ್ ಶಿಂದೆ, ವಿ.ಒಬಲೇ, ಪ್ರಕಾಶ್ ಮೊರೆ, ಬಾಬುಸಾಹೇಬ್ ದುರ್ಗುಡೆ,ನಾನಸಹೇಬ್ ಭೋಸ್ಲೆ ,ತುಕಾರಾಂ ಓಂಭ್ಲೆ.'ರ ಬಗ್ಗೆ. ಮುಂಬೈ ಮಾರಣ ಹೋಮದ ವಿಷಯ ತಿಳಿದು ಒಂದು ಕ್ಷಣ ಬೆಚ್ಚಿ ಬಿದ್ದೆ, ಎಲ್ಲೆಲ್ಲೂ ಕೇಳಿ ಬಂದ ಸುದ್ದಿ ಮುಂಬೈನ ಬಗ್ಗೆಯೇ. ಆದರೆ ಅದಕ್ಕಿಂತ ಹಿಂಸೆ ಎನಿಸಿದ್ದು ಅಲ್ಲೂ ಧರ್ಮದ ವಿಷಯ ಇಣುಕಿ ಬಂತು ನೋಡಿ ಆವಾಗ. ಉಗ್ರರು ಅಷ್ಟು ರಾಜರೋಷವಾಗಿ ಮುಂಬೈಗೆ ಬಂದಿದ್ದಾರು ಹೇಗೆ ಅಂತ ನೋಡಿದರೆ ಅವರು ಬಂದಿದ್ದು ಜಲ ಮಾರ್ಗದಲ್ಲಿ ಅಂತ ಪೋಲಿಸ್ ಮೂಲಗಳು ಹೇಳಿದ್ದು, ಅದಕ್ಕೆ ಬರುತಿದ್ದ ಪ್ರತಿಕ್ರಿಯೆಗಳನ್ನೂ ನೋಡಬೇಕು, ಅಬ್ಬಾ!! ಒಂದು ಕಡೆ ಎ.ಟಿ.ಎಸ್ ನವರು ಕೈ ತೊಳೆದುಕೊಂಡು ಕೇವಲ ಮಾಲೆಗಾವ್ ಸ್ಪೋಟದ ಆರೋಪಿಗಳ ಹಿಂದೆಯೇ ಬಿದ್ದಿದ್ದರು, ಅದಕ್ಕೆ ಅವರಿಗೆ ಉಗ್ರರ ಜಾಡು ತಿಳಿಯಲಿಲ್ಲ ಎಂಬ ರೀತಿಯ ಮಾತುಗಳು ಬಂದರೆ, ಮತ್ತೊಂದು ಕಡೆ ಕೆಲವು ಮಾಧ್ಯಮಗಳಲ್ಲಿ ಉಗ್ರರ ಫೋಟೋ ತೆಗೆದಿದ್ದರಲ್ಲಾ ಅದರ ಆಧಾರದಲ್ಲಿ ಉಗ್ರರ ಮೂಲ ಪತ್ತೆ ಮಾಡುವ ಬದಲು, ಉಗ್ರರ ಧರ್ಮವನ್ನು ಪತ್ತೆ ಹಚ್ಚುವಂತ ಕೆಲಸ ನಡೆಯ್ತುತಿತ್ತು. ಅಲ್ಲ ಸ್ವಾಮಿ, ಇಂತ ಸಂದಿಗ್ದ ಸಮಯದಲ್ಲೂ ಈ ಧರ್ಮವನ್ನು ಮದ್ಯೆ ಎಳೆದು ತರುವ ರಾಜಕಾರಣಿಗಳು,ವಿಚಾರವಾದಿಗಳು,ಬುದ್ದಿಜೀವಿಗಳು,ಕೋಮುವಾದಿಗಳಿಗೆ ಮನುಷ್ಯತ್ವ ಅನ್ನುವುದು ಇದೆಯಾ ಅಥವಾ ಅವರುಗಳಿಗೆ ಆ ಪದದ ಅರ್ಥವಾದರೂ ತಿಳಿದಿದೆಯಾ ಅನ್ನಿಸುತ್ತೆ. ಸತ್ತವನ ರಕ್ತದಲ್ಲಿ ಅವನ ಧರ್ಮ ಕಾಣುತ್ತಾ? ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ? ಭಾವನಾತ್ಮಕ ವಿಷಯಗಳಲ್ಲಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಇಂತ ಜನರನ್ನು ದೂರವಿಡದಿದ್ದರೆ, ಭಾರತ ಭಾರತವಾಗಿ ಉಳಿಯುವುದೇ ಇಲ್ಲ. ಸಂಸತ್ ದಾಳಿಯ ಸೂತ್ರಧಾರನನ್ನು ಹಿಡಿದು ತಂದರೆ , ಚಿಲ್ಲರೆ ವೋಟುಗಳಿಗಾಗಿ ಆಫ್ಜ್ಯಲ್ ಅನ್ನು ಇನ್ನೂ ಜೀವಂತವಾಗಿಟ್ಟಿದ್ದಾರೆ. ಇಂತವರಿಗೆ ಯಾವುದರಲ್ಲಿ ಹೊಡೆಯಬೇಕು? ಮೊನ್ನೆ ಮೊನ್ನೆ ತಾನೆ ಗುಜರಾತಿನಲ್ಲಿ ನಡೆದ ಸ್ಪೋಟದ ತನಿಖೆ ವೇಳೆ ಪೋಲಿಸ್ ಎನ್ ಕೌಂಟರ್ನಲ್ಲಿ ಉಗ್ರರ ಹತ್ಯೆಮಾಡಲಾಗಿತ್ತು. ಆಗ ಅದೆಲ್ಲಿಂದ ಎದ್ದು ಬಂದನೋ ಈ ಅಮರ್ ಸಿಂಗ್ , ಅವನಿಗೆ ಅಲ್ಲಿ ಹುತಾತ್ಮರಾದ ಪೋಲಿಸ್ ಅಧಿಕಾರಿಯ ಬಗ್ಗೆ ಏನು ಅನ್ನಿಸುವುದಿಲ್ಲ, ಆದರೆ ಹತರಾದ ಉಗ್ರರ ಬಗ್ಗೆ ಸಿಂಪತಿ ತೋರಿಸುತ್ತಾನೆ? ಶಂಕಿತ ಉಗ್ರರನ್ನು ಪೊಲೀಸರು ಸೆರೆ ಹಿಡಿದು ತಂದರೆ ಅಲ್ಲೂ ಧರ್ಮವನ್ನು ಎಳೆದು ತಂದವರು ಲಾಲೂ, ಪಾಸ್ವಾನ್ ತರದ ಕೆಟ್ಟ ಜನ . ಬ್ರೂಕರ್ ವಿಜೇತೆ ಅರುನ್ದತಿಗೂ ಪೊಲೀಸರ ಮೇಲೆಯೇ ಸಂಶಯ ಬರುತ್ತೆ. ಇನ್ನು ಮಾಲೆಗಾವ್ ಆರೋಪಿಗಳು ಸಿಕ್ಕಿದಾಗಲಂತೂ ಇವರಿಗೆಲ್ಲ ಹಬ್ಬವೇ, ಯಾವನೋ ತಲೆ ಮಾಸಿದವ ಮಾಡಿದ ತಪ್ಪಿಗೆ ಒಂದಿಡಿ ಧರ್ಮವನ್ನು ತಂದುಬಿಡುವುದೇ? ಅಡ್ವಾಣಿ ಹಾಗೂ ಕೆಲವರಂತೂ ಎ.ಟಿ.ಎಸ್ ನವರ ಕಮಿಟ್ಮೆಂಟ್ ಬಗ್ಗೆಯೇ ಮಾತನಾಡುತ್ತಾರೆ? ಕಮಿಟ್ಮೆಂಟ್ ಇಲ್ಲದ ಅಧಿಕಾರಿಯಾಗಿದ್ದರೆ ಹೇಮಂತ್ ಅವರಂತಹ ಹಿರಿಯ ಅಧಿಕಾರಿ ಬಲಿಯಾಗುತಿದ್ದರೆ? " ನನ್ನನ್ನು 'ಚಕಮಕಿ ಚತುರ' ಅನ್ನಬೇಡಿ ಹಾಗೆ ಹೇಳಿದರೆ, ಇವನಿಗೆ ಎನ್ಕೌಂಟರ್ ಮಾಡುವುದೇ ಹವ್ಯಾಸ ಅಂತ ಮಾನವ ಹಕ್ಕು ಆಯೋಗದವರು ನನ್ನ ಹಿಂದೆ ಬೀಳುತ್ತಾರೆ" ಅಂತ ಹೇಳಿದ್ದು , ಮೊನ್ನೆ ಹುತಾತ್ಮರಾದ ವಿಜಯ್ ಸಾಲಸ್ಕರ್ ಅವರು, ಅವರ ಹೇಳಿಕೆಯನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಇಂತ ಅಧಿಕಾರಿಗಳು ಎಷ್ಟು ಒತ್ತಡದ ನಡುವೆ ಕೆಲಸ ಮಾಡುತ್ತಾರೆ ತಿಳಿಯುತ್ತದೆ. 'ಇನ್ನು ಮುಂದೆ ಎಚ್ಚರ ವಹಿಸಲಾಗುತ್ತದೆ, ಇಂತ ವಿದ್ವಂಸಕ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ ' ಅಂತ ಶಿವರಾಜ್ ಪಾಟೀಲರು ಭಾಷಣ ಮಾಡಿದ್ದೆ ಬಂತು, ಇಂಟೆಲಿಜೆನ್ಸ್ ಅನ್ನು ದೇಶದ ವೈರಿಗಳ ಚಲನ ವಲನದ ಮೇಲೆ ಕಣ್ಣಿಡಲು ಬಳಸುವುದನ್ನು ಬಿಟ್ಟು ವೀರೋಧ ಪಕ್ಷದ ನಾಯಕರ ಹಿಂದೆ ಬಿಟ್ಟರೆ, ಇಂಟೆಲಿಜೆನ್ಸ್ ಫೈಲ್ ಆಗದೆ ಇರುತ್ತಾ? ಉರಿವ ಚಿತೆಯಲ್ಲೂ ಚಳಿ ಕಾಯಿಸಿ ಕೊಳ್ಳುವ ಜನ ಇವರು. ತಮ್ಮ ಪ್ರಾಣವನ್ನು ಪಣಕಿಟ್ಟು ಉಗ್ರರೊಡನೆ ಹೋರಾಡುವ ಯೋಧರ ಬಗ್ಗೆ ಯೋಚಿಸುವುದು ಬೇಡವೇ, ಅವರಿಗೂ ನಮ್ಮಂತೆಯೇ ತಂದೆ,ತಾಯಿ,ಹೆಂಡತಿ,ಮಕ್ಕಳು ,ಅಕ್ಕ ತಂಗಿ,ತಮ್ಮ,ಅಣ್ಣ ಎಲ್ಲ ಇರುತ್ತಾರೆ, ಅವರು ಮನುಷ್ಯರೇ ಅಲ್ಲವೇ? ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಮುಗ್ದ ಜೀವಗಳಿಗೆ ಹಾಗೂ ಮಹಾನ್ ಅಧಿಕಾರಿಗಳಿಗೆ, ಯೋಧರಿಗೆ ನನ್ನ ನುಡಿ ನಮನ.
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by prapancha on
ಉಗ್ರರಿ೦ದ ಬ೦ದ ಬುಲ್ಲೆಟ್ ದರ್ಮವನ್ನ ಕೇಳಿತ್ತೋ ಇಲ್ಲವೋ, ಆದರೆ ಈ ಉಗ್ರರು ಒತ್ತೆಯಾಳುಗಳ ಧರ್ಮವನ್ನ ಕೇಳಿ ಮುಸ್ಲಿಮ್ ಧರ್ಮದವರಾಗಿದ್ದರೆ ಅವರಿಗೆ ಜೀವದಾನ ಮಾಡಿದ್ದಾರೆ ಮತ್ತು ಉಳಿದ ಧರ್ಮದವರನ್ನ ಕೊ೦ದಿದ್ದಾರೆ!!! ಮಾಹಿತಿಗೆ ಈ ಕೊ೦ಡಿಯನ್ನ ಕ್ಲಿಕ್ಕಿಸಿ http://timesofindia.... ---------------------------------------------------> http://sharavathi.bl... http://kuchodya.blog...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಓಹ್, ಕ್ರಿಶ್ಚಿಯನ್ನರಾಗಿ ಮತಾಂತರಿಸಿದರೆ ಈ ನೆರವು ಸಿಗದಲ್ಲ!!! :) ಮೈಕೆಲ್ ಜಾಕ್ಸನ್ ಮುಸ್ಲಿಂನಾಗಿ ಜಾಣನಾದ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prapancha on
ಹೌದು, ಜಿಹಾದಿಗಳ ಪ್ರಕಾರ 'ಮುಸ್ಲಿಮ್'' ಮತದವರಿಗೆ ಮಾತ್ರ ಈ ಭೂಮಿಯಲ್ಲಿ ಬದುಕಲು ಅವಕಾಶವಿದೆ ! :) ---------------------------------------------------> http://sharavathi.bl... http://kuchodya.blog...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಪ್ರಪಂಚ, ಶ್ರೀನಿವಾಸ್ ಮತ್ತೆ ಧರ್ಮವನ್ನು ಎಳೆದು ತಂದೆ ಬಿಟ್ಟಿರಲ್ಲ :( ಇವೆಲ್ಲ ಈ ಸಂಧರ್ಭದಲ್ಲಿ ಬೇಕಾ? ಅದು ಅವರ ಕೃತ್ಯವೇ ಇರಬಹುದು, ಯಾವನೋ ತಲೆ ಮಾಸಿದವ ಮಾಡುವ ಕೆಲ್ಸಕ್ಕೆ ಇಡಿ ಧರ್ಮದ ಹೆಸರು ತರ ಬೇಡಿ ಅಂತ ಹೇಳಿದ್ದು ನಾನು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prapancha on
ಛೆ ಛೆ ಇಡೀ ಮುಸ್ಲಿಮ್ ಧರ್ಮದ ಬಗ್ಗೆ ಮಾತನಾಡುತ್ತಿಲ್ಲ ರಾಕೆಶ್ ಅವರೆ. ನಾವು ಮಾತನಾಡುತ್ತಿರುವುದು ಜಿಹಾದಿ ಮುಸ್ಲಿಮ್ ಬಗ್ಗೆ. ಮತ್ತು ಈ ಜಿಹಾದಿಗಳು ಹೇಗೆ ಮತಾ೦ದರಾಗಿ ವರ್ತಿಸಿದ್ದಾರೆ ಎ೦ದು ಉಲ್ಲೀಖಿಸಿದೆ ಅಷ್ಟೆ. ಇಡೀ ಮುಸ್ಲಿಮ್ ಸಮುದಾಯವನ್ನ ದೂಷಿಸುವುದು ಅಕ್ಷಮ್ಯ ಅಪರಾದ. ಹಿ೦ಸೆ ಕ್ರೌರ್ಯ ಯಾವ ಇ೦ದು ಮತಕ್ಕೂ ಸೀಮಿತವಾಗಿಲ್ಲ ---------------------------------------------------> http://sharavathi.bl... http://kuchodya.blog...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಹಾಗಿದ್ದರೆ ಆ ಶಬ್ದವನ್ನು ಹೀಗೆ ಉಪಯೋಗಿಸಬಹುದು 'ಜಿಹಾದಿಮುಸ್ಲಿಂ - ಮುಸ್ಲಿಂ= ಜಿಹಾದಿ' ಹಾಗೆ 'ಹಿಂದೂ ಉಗ್ರ - ಹಿಂದೂ = ಉಗ್ರ' , ಅವರನ್ನು ಬರಿ ಜಿಹಾದಿಗಳು ,ಉಗ್ರರು, ಇಲ್ಲ ರಾಕ್ಷಸರು ಎಂದರೆ ಸಾಕಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prapancha on
ಪದಗಳನ್ನ ಸೃಷ್ಟಿಸಬಹುದು ಅದಕ್ಕೇನು ತೊ೦ದರೆಯಿಲ್ಲ. ಆದರೆ ಈ ಜಿಹಾದಿಗಳು ಮಾಡುತ್ತಿರುವುದು ಧರ್ಮದ ಹೆಸರನ್ನ ಹೇಳಿಕೊ೦ಡು ಹಾಗಾಗಿ ಉಲ್ಲೇಖಿಸಬೇಕಾಯ್ಥಷ್ಟೆ. ---------------------------------------------------> http://sharavathi.bl... http://kuchodya.blog...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ನೀವು ಹೇಳ್ತಾ ಇರೋದು ಸರಿ ಸರ್, ಆದರೆ ಧರ್ಮದ ಹೆಸರಲ್ಲಿ ರಾಜಕೀಯ ಮಾಡುವವರಿಗೆ ಇವೆಲ್ಲ ಅರ್ಥ ಆಗೋದೇ ಇಲ್ಲ ಬಿಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vijendra on
ತಪ್ಪು ರಾಕೇಶ್... ಇದು ಧರ್ಮಾಧಾರಿತ ಭಯೋತ್ಪಾದನೆ... ಈ ಭಯೋತ್ಪಾದನೆಗೆ ಕಾರಣ ಕಾಫಿರರಿಗೆ ಈ ಭೂಮಿ ಮೇಲೆ ಬದುಕುವ ಹಕ್ಕು ಇಲ್ಲ .. ಮತ್ತು ನಾವು ನಂಬುವ ಧರ್ಮ ನಂಬದವರೆಲ್ಲ ಕಾಫಿರರು ಅಷ್ಟೇ.. ಇನ್ನಾದರೂ ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗೆ ಅಲ್ಪ ಸಂಖ್ಯಾತರು, ಯಾವುದೇ ಧರ್ಮ ಇಲ್ಲದವರು ಅಂತೆಲ್ಲಾ ಬರೆಯೋ ಬದಲು ಸರಿಯಾಗಿ 'ಇಸ್ಲಾಮಿಕ್ ಭಯೋತ್ಪಾದಕರು' ಅಂತ ಬರೆಯಿರಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ವಿಜೇಂದ್ರ ನಾನೆಲ್ಲೂ ಅಲ್ಪಸಂಖ್ಯಾತರು ಅಂತ ಪದ ಬಳಸೇ ಇಲ್ಲ, ಅಡ್ಡ ಗೋಡೆಯ ಮೇಲೆ ದೀಪ ಇಡುವ ಅರ್ಥದಲ್ಲಿ ಮಾತನಾಡಿಯೂ ಇಲ್ಲ , ನಾನು ಇಲ್ಲಿ ಹೇಳಿರೋದು ರಾಜಕಿಯದಾಟಕ್ಕೆ ನಾವುಗಳು ಬಲಿಯಾಗುತಿದ್ದೇವೆ ಅಂತಾ. ಅಷ್ಟಕ್ಕೂ ಈ ದೇಶದಲ್ಲಿ ಅಲ್ಪಸಂಖ್ಯಾತರು ಅಂತಾ ಇದ್ದಾರಾ? ನನ್ಗೊತ್ತಿಲ ನಿಮಗೆ ಗೊತ್ತಿದ್ರೆ ಹೇಳಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ರಾಕೇಶ್, ನಿಮ್ಮನೆ ನಾಯಿ ಅಕ್ಕ-ಪಕ್ಕದ ಮನೆಯವರ್ನ ಕಚ್ಚುತ್ತಿದ್ರೆ, ಏನ್ ಮಾಡ್ತಿರಾ..? ಅಥವಾ ನಿಮ್ಮ ಪಕ್ಕದ್ಮನೆ ನಾಯಿ ನಿಮ್ನ ಕಚ್ಹಾಕ್ ಬಂದ್ರೆ ಏನ್ ಮಾಡ್ತೀರಾ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ರಾಕೇಶರ ಮನೆಯ ಇಲ್ಲವೇ ಅವರ ಪಕ್ಕದ ಮನೆಯ ನಾಯಿ ಕಟ್ಟಿಕೊಂಡು ಹರ್ಷಂಗೆ ಏನಾಗಬೇಕು ಎಂದು ಮಹೇಶ ಕೇಳೋದು ಅಧಿಕಪ್ರಸಂಗವಲ್ಲವೇ :) ಹೆ ಹೆ ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಹರ್ಷ ಈ ಉಗ್ರರನ್ನು ನಾಯಿಗೆ ಹೋಲಿಸಿ, ನಾಯಿಯ ಮರ್ಯಾದೆ ಕಳಿಬೇಡ್ರಿ. ನೀವಾಗಿದ್ರೆ ನಾಯಿಗೆ ಹೊದಿತಿದ್ರಿ ತಾನೆ , ನಾನು ಅದನ್ನೇ ಮಾಡ್ತಿದ್ದೆ ಸ್ವಾಮಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ನಾಯಿಗೆ ಭಯ ಉತ್ಪಾದನೆ ಮಾಡೋದು ಘೋರ ಅಪರಾಧ ಕಣ್ರೀ...ಅಪ್ಪಿ ತಪ್ಪಿ ಕೂಡ ಹಾಗೆ ಮಾಡ್ಬೇಡಿ :) --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಸದ್ಯ ನಾಯಿ ನಾಸ್ತಿಕ.. ಅದಕ್ಕೆ ದೇವರಲ್ಲಿ ನಂಬಿಕೆ ಇರುವ ಹಾಗೆ ಕಾಣಿಸಲ್ಲ.. ಇಲ್ಲವೇ ಅದು Agnostic ದೇವರು ಇದೆಯೋ ಇಲ್ಲವೋ ಬೇಕಾಗಿಲ್ಲ.. :) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
:) ನಿಮಗೆ ಹೇಗೆ ಗೊತ್ತು? :D ಅದರಲ್ಲೂ ಏನೇನು ನಂಬಿಕೆಗಳಿವೆಯೋ ನಮಗೆ ಗೊತ್ತಿಲ್ಲ... ಒಂದು ರೀತಿ, ಪೇಟೆ ಜನಕ್ಕೆ ಬುಡಕಟ್ಟು ಜನರ ದೇವರುಗಳ ಬಗ್ಗೆ ಎಷ್ಟು ತಿಳುವಳಿಕೆ ಇದೆಯೋ ಹಾಗೆ...ಅಲ್ವಾ? :D --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಕರೆಕ್ಟಲ್ವ... ನಾಯಿಗಳು ಈಗ ನನ್ನ ಮೇಲೆ ಕೇಸ್ ಹಾಕಬಹುದು. ಇಲ್ಲವೇ.. ಭಯೋತ್ಪಾದನೆ ಎಂದು ಕಚ್ಚಬಹುದು.. :) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಒಂದು ವೇಳೇ ನೀವು ಹೇಳಿದ್ದು ಸುಳ್ಳಾಗಿದ್ದರೆ..ನಿಮಗೂ ಕಚ್ಚಬಹುದು... ಒಟ್ಟಿನಲ್ಲಿ ಸುಮ್ಮನೆ ಇರದಿದ್ದಕ್ಕೆ ನಮ್ಮಿಬ್ಬರಲ್ಲಿ ಒಬ್ಬರಿಗೆ ಏನೂ ಕಾದಿದೆ. ಅದಕ್ಕೆ ನಮಗೆ ಯಾಕೆ ಬೇಕಿತ್ತಪ್ಪ ಈ ನಾಯಿ-ಉಸಾಬರಿ ಎಂದು ಯೋಚಿಸುತ್ತಿದ್ದೀನಿ.. :) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
:) ಒಟ್ನಲ್ಲಿ ಹುಷಾರಾಗಿರಿ ಎಲ್ಲ..!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ಯಾರಾದ್ರೂ ಕಚ್ಚಿಸ್ಕಳ್ಳಿ.., but ಕಚ್ಚಿಸ್-ಕೊಂಡಾದ ಮೇಲೆ... "ಕಚ್ಹುವ ನಾಯಿಗೆ ಗ್ಯಾರಂಟಿ ಗೊತ್ತಿತ್ತು.., ನಾ ಪಕ್ಕದ ಮನೆಯವನೆಂದು" ಅಂತ ಟೈಟಲ್ ಹಾಕಿ ಬ್ಲಾಗ್ ಬರೀಬ್ಯಾಡಿ.. ಪ್ಲೀಸ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಅಯ್ಯೋ ಕಚ್ಚಿದ ಮೇಲೆ ಅದಕ್ಕೆ ಕಿರುಚದೇ ಇರಲು ಆಗತ್ಯೇ? ಕಚ್ಚುವುದು ನಾಯಿಯ ಧರ್ಮ ಕಿರುಚೋದು ನಮ್ಮ ಧರ್ಮ ಮತ್ತು ಖರ್ಮ :) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಹರ್ಷ ನಿಮ್ಮ PJ ಗಳು ಈ ಬರಹಕ್ಕೆ ಸರಿ ಹೊಂದೋಲ್ಲ, ಅದು ಸರಿ ನಿಮ್ಮ ಪ್ರಶ್ನೆಯನ್ನು ಸ್ವಲ್ಪ ಸರಿಯಾಗಿ ಕೇಳ್ತಿರಾ? ಅಷ್ಟಕ್ಕೂ ನಿಮಗೆ ಈ ಬರಹದಲ್ಲಿ ವಿರೋಧಿಸುವಂತಹ ಅಂಶವೆನಾದರು ಇದೆಯಾ? ಇದ್ದರೆ ಅದನ್ನು ನೇರವಾಗಿ ಹೇಳಿ, ನಿಮ್ಮ ಪಕ್ಕದ ಮನೆ ನಾಯಿಯನ್ನು ಅದರ ಪಾಡಿಗೆ ಬಿಟ್ಟು ಬಿಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಹರ್ಷ ಅವರಿಗೊಂದು Kernel ಪ್ರೋಗ್ರಾಮ್ ಬರೆದು ತಿಳಿಸಪ್ಪ.. ಚನ್ನಾಗಿ ಅರ್ಥವಾಗಬಹುದು :) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ಸರೀ ಸರ್, ನಮಗೆ ಆ ಥರದ "ನಿಜ-ಅನುಭವಗಳಾಗದೇ", ನೀವು ಮೇಲೆ ಬರೇದಿರೋ ತರಹ ಬರೀಬಹುದು, ೧. ನೀವೇ ಅಲ್ಲಿದ್ದಿದ್ರೆ, ಮೇಲಿನ ಮಾತು ಹೇಳ್ತಿದ್ದ್ರಾ..? ೨. ನಿಮ್ಮ ಬ್ಲಾಗಿನ ಟೈಟಲ್, ಯಾವ ಆಧಾರದ ಮೇಲೆ ಕೊಟ್ರಿ..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ೧. ನೀವೇ ಅಲ್ಲಿದ್ದಿದ್ರೆ, ಮೇಲಿನ ಮಾತು ಹೇಳ್ತಿದ್ದ್ರಾ..? ನಾನು ಅಲ್ಲಿಂದ ಬದುಕಿ ಬಂದಿದ್ರೆ, ಹೀಗೆ ಹೇಳ್ತಾ ಇದ್ದೆ. ಇಲ್ಲಿ ನಾನು ಯಾವುದೇ ಧರ್ಮದ ವಿರೋಧವಾಗಿಯೂ , ಅಥವಾ ಪರವಾಗಿಯೂ ಮಾತನಾಡುತ್ತಿಲ್ಲ. ನನ್ನ ಸಿಟ್ಟೆಲ್ಲ ಈ ಡೋಂಗಿರಾಜಕಾರಣಿಗಳು,ಜಾತ್ಯತೀತವಾದಿಗಳು,ಕೋಮುವಾದಿಗಳು,ಸೆಕ್ಯುಲರ್,ವಿಚಾರವಾದಿಗಳು ಹಾಗೂ ಬುದ್ದಿ (?) ಜೀವಿಗಳು ಅಂತ ಹೇಳಿಕೊಳ್ಳುವವರ ಮೇಲೆ ಹಾಗೂ ಪೊಲೀಸರ ಹಾಗೂ ಯೋಧರ ನೈತಿಕ ಸ್ಥೈರ್ಯವವನ್ನು ಕುಗ್ಗಿಸುವವರ ಮೇಲೆ. ೨. ನಿಮ್ಮ ಬ್ಲಾಗಿನ ಟೈಟಲ್, ಯಾವ ಆಧಾರದ ಮೇಲೆ ಕೊಟ್ರಿ..? ಸರ್ , ನಾ ಮೊದಲೇ ಹೇಳಿದ ಹಾಗೆ ಈ ಭಯೋತ್ಪದಕರೆನ್ನುವವರಿಗೆ ಯಾವುದೇ ಧರ್ಮ ಇರುವುದಿಲ್ಲ. ನಿನ್ನೆ ನಡೆಯುತಿದ್ದ ಚರ್ಚೆಗಳನ್ನು ಕೇಳಿದ್ದೀರಾ, ಭಯೋತ್ಪಾದಕರ ಫೋಟೋ ನೋಡಿದರಂತೆ, ಅದರಲ್ಲಿ ಅವನು ಕೆಂಪು ದಾರ ಕೈ ಕಟ್ಟಿದ್ದನಂತೆ ಅದಕ್ಕೆ ಹಿಂದೂ ಉಗ್ರ ಇರಬಹುದು ಅಂದು ಕೊಂಡರಂತೆ, ಆಮೇಲೆ ತಿಳಿಯಿತಂತೆ ಅವನು ಮುಸ್ಲಿಂ ಉಗ್ರ ಅಂತಾ. ಈ ರೀತಿ ಧರ್ಮವನ್ನು ಎಳೆದು ತರುವುದು ಎಷ್ಟು ಸರಿ? ಅದಕ್ಕೆ ಈ ಶೀರ್ಷಿಕೆ ಕೊಟ್ಟೆ ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಶಬಾಶ್ ರಾಕೇಶ ಮತ್ತು ಹರ್ಷ ಈ ಕಾಲದಲ್ಲಿ ಒಪ್ಪುವುದು ಒಪ್ಪಿಸುವುದು ಎರಡೂ ಕಷ್ಟ.. @_@ ;) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ಹೌದು.., ಈ ಕಾಲದಲ್ಲಿ, "ಮೌನಮ್ ಸಮ್ಮತಿ.. ಲಕ್ಶಣಮ್" ಕೂಡ ಅಲ್ಲ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಹುಂರಿ... ಅದಕ್ಕೆ ಸಮ್ಮತ್ಯಮ್ಮತಿಯ ಗೊಡವೆಯೇ ಬೇಡ.. ಮೌನವಾಗಿರೋಣ :) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಎಷ್ಟು ಹುಶಾರಾಗಿ ಇರೋದು.. ಮನೆಗೊಂದು ಕೋಟೆ ಕಟ್ಟಿ ಕಾವಲು ನೇರ್ಪಡಿಸಬೇಕಷ್ಟೇ! ನಮ್ಮನ್ನಾಳುವವರನ್ನು ಕಾಯುವವರನ್ನು ನಂಬಲಾದೀತೇ! ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harshab on
ಹೌದು, ಪಕ್ಕದ್ಮನೆ ನಾಯಿಗೆ ನೀವು ಹೋಡುದು, ""ಪಕ್ಕದ್ಮ್ನನೆ"" ನಾಯಿ ನನ್ನ ಕಚ್ಚಾಕ್ ಬಂದಿತ್ತು ಕಣ್ರೀ...." ಅಂತ ಮಹೆಶರಿಗೆ ಫೋನ್ ಮಾಡ್ತಿದ್ರೇನೋ ಅನ್ಕೋಂದ್ದಿದ್ದೆ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on
ಇಲ್ಲ, ಇನ್ನೂ ಗಣೇಶರ ಹಾಸ್ಯ ಲೇಖನದ ಗುಂಗಲ್ಲಿದ್ದೆ... --ಶ್ರೀ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
’ಬುದ್ಧಿಜೀವಿ’ ’ಜಾತ್ಯಾತೀತವಾದಿ’ ’ಸೆಕ್ಯುಲರ್‍’ ರಾಕೇಶ :) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಮಾಯ್ಸ ನಾನು " '’ಬುದ್ಧಿಜೀವಿ’ ’ಜಾತ್ಯಾತೀತವಾದಿ’ ’ಸೆಕ್ಯುಲರ್‍’ " ಅಲ್ಲ, ನನ್ನದು ಎಡ ಪಂಥವು ಅಲ್ಲ , ಬಲ ಪಂಥವು ಅಲ್ಲ. ನನ್ನದು 'ಮಾನವ ಪಂಥ'
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಅಯ್ಯೋ ನಾನು ರಾಕೇಶರ ನಿಘಂಟಿನ ಅರ್ಥಗಳನ್ನಲ್ಲ ಹೇಳಿದ್ದು.. ಪ್ರಿಸಂ ನಿಘಂಟಿನ ಅರ್ಥಗಳನ್ನು :) ಒಮ್ಮೆ ನೋಡಿರಿ.. :) ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಯಾವ ಅರ್ಥ ನೋಡಿದ್ರು, ನಮ್ಮ ಇಂದಿನ ಪರಿಸ್ಥಿತಿಗೆ ಆ ಪದ ಪುಂಜವನ್ನು ಬಳಸಿಕೊಂಡ ಮಹನೀಯರ (?) ಕೊಡುಗೆ ಅಪಾರ. ಅದಕ್ಕೆ ನಾನು ಅದ್ಯಾವ್ದು ಅಲ್ಲ ಅಂದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಸರಿ.. ಶಾಂತಿ ~_O ಸಿಗಲಿ ನಿನಗೆ! ನನ್ನಿ -ಮಹೇಶ ನನ್ನ ಕವನಗಳು http://maaysa.wordpr...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ಈಗ ಆಗಿರುವುದಕ್ಕೆಲ್ಲ ರಾಜಕಾರಣಿಗಳ (ಲಾಲು (ಹೇಲು?!), ಅಮರ್ ಸಿಂಗ್, ಮುಲಾಯಮ್,ಕರುಣಾನಿಧಿ , ಇಂತ ಗೂಬೆ ಧರ್ಮಾಧಾರಿತ ರಾಜಕಾರಣ ವಿಜ್ರಮ್ಭಿಸಿ,ಅಮಾಯಕ , ದೇಶದ ಸಾಹಸಿ ಪೊಲೀಸರೂ ,ಸೇನೆಯಾ ಜನ ಹತಾವಗುತ್ತಿದ್ದರೆ. ಈಗಿನ ಅವಶ್ಯಕತೆ ನಾವೆಲ್ಲ ಪೊಲೀಸರ ಹೆಗಲಿಗೆ ಈ ವಿಸ್ಯ(ದೇಶದ ರಕ್ಷಣೆ) ಬಿಟ್ಟು ನಾವು ಮಾತ್ರ ಅರಮವಗಿದ್ದರೆ ಸಾಲದು. ನಾವೂ ನಮ್ಮ ಕೈಲಾದ ಸಹಾಯ/ ರಕ್ಷಣೆ ಮಾಡಬೇಕು. ಎಲ್ಲರೂ ಒಂದಾಗೋಣ, ಭಯೋತ್ಪಾದನೆ ನಿರ್ಮೂಲನೆ ಮಾಡೋಣ. ವೆಂಕಟೇಶ ರಾಯಚೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ವೆಂಕಟೇಶ್ ಅವರೇ ನೀವು ಹೇಳಿದ್ದು ಖಂಡಿತ ಸತ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasca on
ಉಗ್ರರಿಂದ ಬರುವ ಗುಂಡು ಧರ್ಮವನ್ನು ಕೇಳಲ್ಲ ಸ್ವಾಮಿ, ಆದ್ರೆ ಉಗ್ರರು ಕೇಳುತ್ತಿದ್ದಾರಲ್ಲ. ಅದಕ್ಕೆ ಈಗಾಗಲೆ ಸಂಪದದ ಓದುಗರೊಬ್ಬರು ರೀಡಿಫ್.ಕಾಂ ನ ಆಕರವಾಗಿ ಒದಗಿಸಿದ್ದಾರೆ. ಉಗ್ರ ಗುಂಡಿಗೇನು ಗೊತ್ತು. ಅದೊಂದು ಆಯುಧ ಅಷ್ಟೆ. ಇದೆ ಉಗ್ರರು ಯಾಕೆ ಸೌದಿ ಅರೇಬಿಯದಲ್ಲಿ ತಮ್ಮ ಚಟುವಟಿಕೆಗಳನ್ನು ನಡೆಸುವುದಿಲ್ಲ? ಯಾಕೆ ಮುಸಲ್ಮಾನರನ್ನು ಮಾತ್ರ ಬಿಟ್ಟು ಬಿಟ್ರು. be good to all ಅನ್ನುವ ರೀತಿಯಲ್ಲಿ ಲೇಖನ ಎಲ್ಲರೂ ಇಲ್ಲಿ ಬರೆಯುತ್ತಿದ್ದಾರೆ ಹೊರತು ಹೌದು ಇದು ಆಗುತ್ತಿರುವುದು ಇಸ್ಲಾಮಿನ ಉಗ್ರ ಮನೋಭಾವದಿಂದಲೆ ಎಂದು ಹೇಳುವ ಎದೆಗಾರಿಕೆಯನ್ನು ಯಾರೊಬ್ಬ ಲೇಖಕನು ತೋರಿಸುತ್ತಿಲ್ಲವೇಕೆ. ಇದೆಲ್ಲ ನಮ್ಮ ಬೌದ್ದಿಕ ಷಂಡತನದ ಪರಮಾವಧಿಯಲ್ಲವೆ. ನಿಜ ಎಲ್ಲೊ ಕೆಲವರು ಲಕ್ಷಕ್ಕೊ ದಶ ಲಕ್ಷಕ್ಕೊ ಒಬ್ಬ ಮುಸಲ್ಮಾನ ಧರ್ಮಕ್ಕಿಂತ ದೇಶವೆ ದೊಡ್ಡದು ಎನ್ನುವವರಿರಬಹುದು. ಆದರೆ ಬಹುತೇಕ ಮುಸಲ್ಮಾನರೆಲ್ಲ ಉಗ್ರರಲ್ಲದಿದ್ದರೂ ಉಗ್ರರ ಬಗ್ಗೆ ಮೃದು ಭಾವನೆ ಹೊಂದಿರುವವರೆ. ನಿದಕ್ಕೆ ಉದಾಹರಣೆಯಾಗಿ ನನ್ನ ನೆರೆ ಮನೆಯ ನಿವಾಸಿ ಕಾಶ್ಮೀರದ ಪಂಡಿತನ ಮಾತು ಕೇಳಿ, ಸ್ವಂತ ತಮ್ಮನಿಗಿಂತ ಹೆಚ್ಚಾಗಿ ಮುಸ್ಲ್ಮಾನನೊಡನೆ ಸುಮಾರು ೩೫ ವರ್ಷಗಳ ಕಾಲ ಜೊತೆಗಿದ್ದು ಅವನ ಎಲ್ಲ ಕಷ್ಟ ಸುಖಕ್ಕೂ ಭಾಗಿಯಾಗಿ ಸಂಭಂದ ಬೆಳೆಸುವ ಮಟ್ಟಿಗೆ ಆತ್ಮೀಯತೆಯಿದ್ದವನೊಬ್ಬ ಕೇವಲ ೭ ವರ್ಷಗಳ ಹಿಂದೆ ಇವರ ಮನೆಗೆ ನುಗ್ಗಿ ಅವ್ರನ್ನು ಅಲ್ಲಿಂದ ಖಾಲಿ ಮಾಡಿಸಿ ಇಡೀ ಮನೆಯನ್ನು ತನ್ನದಾಗಿಸಿಕೊಂಡನಲ್ಲ ಇದಕ್ಕೇನು ಹೇಳುತ್ತೀರಿ? ನೆನಪಿರಲಿ ಇದಕ್ಕೆ ಅಲ್ಲಿಯ ಯಾವ ಉಗ್ರರ ಒತ್ತಡವೂ ಇರಲಿಲ್ಲ ಹಾಗೆ ಬಿಟ್ಟು ಹೋಗದಿದ್ದರೆ ಉಗ್ರರಿಗೆ ತಿಳಿಸುವುದಾಗಿ ಬೆದರಿಸಿ ವಶಪಡಿಸಿಕೊಂಡವನನ್ನು ಸ್ವಯಂಘೋಷಿತ ಬುದ್ದಿ ಜೀವಿಗಳು ಇದು ಕೇವಲ ವಯಕ್ತಿಕ ಮನೋಭಾವನೆ ಎಂದು ಉಡಾಫೆಯ ಮಾತನಾಡಿದರೆ ಅದು ಅವರ ಪಾಷಂಡಿತನದ ಪ್ರತೀಕವಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ರಾಕೇಶ್ ಶೆಟ್ಟಿ ಸರ್ ನಾನು ಬುದ್ದಿ ಜೀವಿಯು ಅಲ್ಲ , ಎಡ , ಬಲ ಪಂಥಿಯನು ಅಲ್ಲ, ಮುಸ್ಲಿಂ ಭಯೋತ್ಪಾದನೆ ಬಗ್ಗೆ ಬರೆಯಲು ನನಗೆ ಯಾವ ಅಂಜಿಕೆಯೂ ಇಲ್ಲ. ನಾನು ನನ್ನ ಲೇಖನದಲ್ಲಿ ವೀರ ಯೋಧರ ತ್ಯಾಗ ಬಲಿದಾನ ಹಾಗೂ ಅವರ ಕಷ್ಟಗಳ ಬಗ್ಗೆ ಮತ್ತು ನಮ್ಮ (ಅ)ರಾಜಕೀಯ ನಾಯಕರ ಮುಖೆಡಿತನವನ್ನ ಟೀಕಿಸಿದ್ದೇನೆ ಅಷ್ಟೆ. ಮೊದಲು ಬರೆದಿರುವುದನ್ನು ಅರ್ಥ ಮಾಡಿಕೊಳ್ಳಿ, ನಂತರ ಪ್ರತಿಕ್ರಿಯಿಸಿದರೆ ಬಹಳ ಒಳ್ಳೆಯದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasca on
"be good to all ಅನ್ನುವ ರೀತಿಯಲ್ಲಿ ಲೇಖನ ಎಲ್ಲರೂ ಇಲ್ಲಿ ಬರೆಯುತ್ತಿದ್ದಾರೆ ಹೊರತು ಹೌದು ಇದು ಆಗುತ್ತಿರುವುದು ಇಸ್ಲಾಮಿನ ಉಗ್ರ ಮನೋಭಾವದಿಂದಲೆ ಎಂದು ಹೇಳುವ ಎದೆಗಾರಿಕೆಯನ್ನು ಯಾರೊಬ್ಬ ಲೇಖಕನು ತೋರಿಸುತ್ತಿಲ್ಲವೇಕೆ." ಇದನ್ನು ನೀವು ಅರ್ಥ ಮಾಡಿಕೊಳ್ಳಲೇ ಇಲ್ಲ ಹೋಗಲಿ ಬಿಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Rakesh Shetty on
ಸರ್ "be good to all ಅನ್ನುವ ರೀತಿಯಲ್ಲಿ ಲೇಖನ ಎಲ್ಲರೂ ಇಲ್ಲಿ ಬರೆಯುತ್ತಿದ್ದಾರೆ" ಎಲ್ಲರ ಬಗ್ಗೆ ನಂಗೆ ಗೊತ್ತಿಲ್ಲ , ಆದರೆ ನಂಗೆ ಎಲ್ಲರಿಗೂ ಹಿಡಿಸುವ ಹಾಗೆ ಬರೆಯುವ ಆಸೆ ಖಂಡಿತ ಇಲ್ಲ , ನಾನು ಮೊದಲೇ ಹೇಳಿದ ಹಾಗೆ ನಾನು ಇಲ್ಲಿ ಬರೆದ ವಿಷಯ ನೀವು ಸರಿಯಾಗಿ ಅರ್ಥ ಮಾಡಿಕೊಂಡಂತಿಲ್ಲ, ನನ್ನ ಲೇಖನ ವೀರ ಯೋಧರ ಸ್ಥಿತಿ ಗತಿ , ಹಾಗೂ ರಾಜಕಾರಣಿಗಳ ಕುತತಂತ್ರದ ಬಗ್ಗೆ ಹೊರತು ಧರ್ಮದ ಬಗ್ಗೆ ಅಲ್ಲವೇ ಅಲ್ಲ. ಇಸ್ಲಾಂ ಉಗ್ರರ ಬಗ್ಗೆ ಮಾತಾಡಲು ನನಗೇನು ಹೆದರಿಕೆಯಿಲ್ಲ , ಅಷ್ಟಕ್ಕೂ ನಾನೇನು ಪುಡಿ ವೊಟಿಗೋಸ್ಕರ ದೇಶ ಹೊಡೆಯುವ ರಾಜಕಾರಣಿಯಲ್ಲ. ನನ್ನ ಉದ್ದೇಶ ಅರ್ಥ ಮಾಡಿಕೊಳ್ಳಿ. ರಾಕೇಶ್ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by prasca on
ಸರಿ ಸಾರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.